Startup Success Story: ಪೂಜೆಗೆ ಹೂ ಬೇಕೇ? ಬೆಂಗಳೂರಿನ ಈ ಸ್ಟಾರ್ಟ್​ಅಪ್ ವಾರ್ಷಿಕ 8 ಕೋಟಿ ಗಳಿಸುತ್ತೆ!

ತಮ್ಮ ತಾಯಿಯ ಬಾಯಿಂದ ಹಾಗೆಯೇ ಬಿದ್ದ ಒಂದು ದೂರನ್ನು ಗಂಭೀರವಾಗಿ ತೆಗೆದುಕೊಂಡು ಹೇಗೆ ಅದನ್ನೇ ಜೀವನದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ ನೋಡಿ ಈ ಬೆಂಗಳೂರು ಮೂಲದ ಸಹೋದರಿಯರು.

ಯಶಸ್ಸು ಕಂಡ ಸಹೋದರಿಯರು

ಯಶಸ್ಸು ಕಂಡ ಸಹೋದರಿಯರು

  • Share this:
ಕೆಲವರು ಜೀವನದಲ್ಲಿ (Life) ಏನು ಮಾಡಬೇಕು ಎಂದು ಅನೇಕರನ್ನು ಕೇಳಿ ತಿಳಿದುಕೊಳ್ಳುತ್ತಾರೆ, ಆದರೆ ಇನ್ನೂ ಕೆಲವರು ಬೇರೆಯವರು ಏನು ಮಾತಾಡುತ್ತಿದ್ದಾರೆ ಎನ್ನುವುದನ್ನು ತುಂಬಾನೇ ಚೆನ್ನಾಗಿ ಆಲಿಸಿ, ಅದರಿಂದ ಒಂದು ಉಪಾಯವನ್ನು (Idea) ತೆಗೆದುಕೊಂಡು ಜೀವನದಲ್ಲಿ ಏನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಆಲೋಚಿಸಿ ಅದರೆಡೆಗೆ ತಡ ಮಾಡದೆ ಕೆಲಸ (Work) ಮಾಡಲು ಶುರು ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಇಂತಹದೇ ಒಂದು ಘಟನೆ ಈ ಸಹೋದರಿಯರ ಜೀವನದ ಹಾದಿಯನ್ನೇ ಬದಲಾಯಿಸಿ ಕೈ ತುಂಬಾ ಸಂಪಾದನೆ (Money Earn) ಮಾಡುವಂತೆ ಸಹಾಯ ಮಾಡಿದೆ ಎಂದು ಹೇಳಬಹುದು. ತಮ್ಮ ತಾಯಿಯ ಬಾಯಿಂದ ಹಾಗೆಯೇ ಬಿದ್ದ ಒಂದು ದೂರನ್ನು ಗಂಭೀರವಾಗಿ ತೆಗೆದುಕೊಂಡು ಹೇಗೆ ಅದನ್ನೇ ಜೀವನದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ ನೋಡಿ ಈ ಬೆಂಗಳೂರು (Bengaluru) ಮೂಲದ ಸಹೋದರಿಯರು.

ಸಹೋದರಿಯರ ಹೂವಿನ ಸ್ಟಾರ್ಟ್ಅಪ್
ಅವರ ತಾಯಿಯು ಒಂದು ದಿನ ಹಾಗೆಯೇ ಮನೆಯಲ್ಲಿ ಕುಳಿತು ತಮ್ಮ ಇಬ್ಬರು ಹೆಣ್ಣುಮಕ್ಕಳ ಮುಂದೆ ‘ಈ ಪ್ರದೇಶದಲ್ಲಿ ಪೂಜಾ ಹೂವುಗಳ ಕೊರತೆ ತುಂಬಾನೇ ಇದೆ’ ಎಂದು ಹೇಳಿದರಂತೆ. ಎಲ್ಲಾ ಮಕ್ಕಳಂತೆ ಇವರು ಸಹ ತಮ್ಮ ತಾಯಿ ಏನೋ ಒಂದು ದೂರು ಹೇಳುತ್ತಿದ್ದಾರೆ ಅಂತ ಸುಮ್ಮನೆ ಅದನ್ನು ಅಷ್ಟಕ್ಕೆ ಬಿಡಲಿಲ್ಲ. ಬೆಂಗಳೂರಿನ ನಿವಾಸಿಯಾದ ಯಶೋಧಾ ಕರುತುರಿ ಅವರು ‘ಹೂವು’ ಎಂಬ ಹೆಸರಿನ ಹೂವಿನ ಚಂದಾದಾರಿಕೆಯನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುವಂತೆ ಮಾಡಿತು.

ಮನೆಮನೆಗೆ ಹೂವು!
ಯಶೋಧಾ ಅವರಿಗೆ ಬಂದಂತಹ ಈ ಯೋಚನೆಯನ್ನು ತನ್ನ ಸಹೋದರಿ ರಿಯಾ ಅವರೊಂದಿಗೆ ಕುಳಿತು ಚರ್ಚಿಸಿದರು. 27 ವರ್ಷದ ಮಹಿಳೆ ಹೂವಿನ ಉದ್ಯಮದಲ್ಲಿರುವ ಈ ದೊಡ್ಡ ಅವಕಾಶವನ್ನು ಅರಿತುಕೊಂಡು ಗುಲಾಬಿಗಳಿಂದ ಹಿಡಿದು ಕ್ರೈಸಾಂಥೆಮಮ್ ಮತ್ತು ಕಮಲದವರೆಗೆ ತಾಜಾ ಹೂವುಗಳನ್ನು ಪ್ರತಿದಿನ ಮನೆಗಳಿಗೆ ಬೆಳಿಗ್ಗೆ ಹಾಲಿನ ಪ್ಯಾಕೆಟ್ ಅಥವಾ ವೃತ್ತಪತ್ರಿಕೆಯಂತೆ ಒಬ್ಬರ ಮನೆ ಬಾಗಿಲಿಗೆ ತಲುಪಿಸುವ ಮಾದರಿಯನ್ನು ನಿರ್ಮಿಸಿದರು.

10 ಲಕ್ಷ ಹೂಡಿಕೆ, 8 ಕೋಟಿ ಆದಾಯ!
ಅಂದು ಶುರು ಮಾಡಿದ ಆ ಚಿಕ್ಕ ಯೋಚನೆ ಇಂದು, ಏಂಜೆಲ್ ಹೂಡಿಕೆದಾರರಿಂದ 10 ಲಕ್ಷ ಆರಂಭಿಕ ಹೂಡಿಕೆಯೊಂದಿಗೆ ಪ್ರಾರಂಭಿಸಲಾದ ಬೆಂಗಳೂರು ಮೂಲದ ಈ ಹೂವಿನ ಸ್ಟಾರ್ಟ್ಅಪ್, ವಾರ್ಷಿಕವಾಗಿ 8 ಕೋಟಿ ರೂ ಆದಾಯವನ್ನು ಗಳಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಚಂದಾದಾರರೂ ಆಗಬಹುದು!
ಈ ಇಬ್ಬರು ಸಹೋದರಿಯರು ಸೇರಿ 2019 ರಲ್ಲಿ ಪ್ರಾರಂಭ ಮಾಡಿದ ಚಂದಾದಾರಿಕೆ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ದಶಕಗಳಷ್ಟು ಹಳೆಯದಾದ ಸಾಂಪ್ರದಾಯಿಕ ಹೂವಿನ ಮಾರುಕಟ್ಟೆಗೆ ಆಧುನಿಕವಾದ ಒಂದು ಹೊಸ ತಿರುವನ್ನು ನೀಡಲು ನಿರ್ಧರಿಸಿದ್ದರು. ಹೂವಿನ ವ್ಯಾಪಾರವನ್ನು ಹೊಂದಿದ್ದ ಕುಟುಂಬದಲ್ಲಿ ಬೆಳೆದ ಈ ಸಹೋದರಿಯರಿಗೆ ಈ ಕ್ಷೇತ್ರ ಅವರಿಗೆ ಹೊಸತಾಗಿರಲಿಲ್ಲ ಎಂದು ಹೇಳಬಹುದು.

ಹೂವಿನ ಮಾರುಕಟ್ಟೆಯ ಬಗ್ಗೆ ರಿಯಾ ಹೇಳುವುದೇನು ನೋಡಿ
"ನಮ್ಮ ತಂದೆ ರಾಮ್ ಕರುತುರಿ ಕೀನ್ಯಾ, ಇಥಿಯೋಪಿಯಾ ಮತ್ತು ಭಾರತದಲ್ಲಿ ಗುಲಾಬಿ ತೋಟಗಳನ್ನು ಹೊಂದಿದ್ದರು. ವಾಸ್ತವವಾಗಿ 90ರ ದಶಕದಲ್ಲಿ, ಅವರ ಕೀನ್ಯಾದ ಫಾರ್ಮ್ ಅನ್ನು ವಿಶ್ವದ ಅತಿದೊಡ್ಡ ಗುಲಾಬಿ ಫಾರ್ಮ್ ಎಂದು ಗುರುತಿಸಲಾಯಿತು. ಆದ್ದರಿಂದ, ನಾವು ಈ ಹೂವಿನ ಉದ್ಯಮವು ವರ್ಷಗಳಲ್ಲಿ ಹೇಗೆ ಬದಲಾಗಿದೆ ಎಂಬುದನ್ನು ನೋಡಿಕೊಂಡೆ ನಾವು ಬೆಳೆದಿದ್ದೇವೆ"ಎಂದು ರಿಯಾ ಅವರು ಹೇಳುತ್ತಾರೆ.

ಇದನ್ನೂ ಓದಿ:  BMRCL Recruitment: ಎಂಜಿನಿಯರಿಂಗ್​​ ಪದವೀಧರರಿಗೆ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆ ಇಲ್ಲ

ಈ ಹೂವಿನ ವ್ಯವಹಾರದಲ್ಲಿ ಕೆಲಸ ಮಾಡುವಾಗ, ಹೂಗುಚ್ಛ ಹೂವಿನ ಮಾರುಕಟ್ಟೆಯ ಸಾಮರ್ಥ್ಯವು ಪ್ರಪಂಚದಾದ್ಯಂತ ಅಗಾಧವಾಗಿದೆ ಎಂದು ಅವರು ಅರಿತು ಕೊಂಡರು. "ಆದರೆ ನಂತರ, ನಾವು ನಮ್ಮ ಗಮನವನ್ನು ಬದಲಾಯಿಸಿದಾಗ, ನಾವು ಭಾರತೀಯರು ನಿಜವಾಗಿಯೂ ಹೂವುಗಳನ್ನು ಇದಕ್ಕೆ ಹೆಚ್ಚಾಗಿ ಬಳಸುವುದಿಲ್ಲ ಎಂದು ಕಂಡು ಕೊಂಡಿದ್ದೇವೆ. ಹೂವುಗಳು ಪ್ರತಿ ಭಾರತೀಯ ಕುಟುಂಬದಲ್ಲಿ ವಿಭಿನ್ನ ಅಗತ್ಯವನ್ನು ಪೂರೈಸುತ್ತವೆ" ಎಂದು ರಿಯಾ ಹೇಳುತ್ತಾರೆ, ಇಬ್ಬರೂ ಸಹೋದರಿಯರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಮತ್ತು ನಂತರ ಇಥಿಯೋಪಿಯಾದ ಶಾಲೆಗಳಿಗೆ ಹೋದರು.

ಹೂವಿನ ಮಾರುಕಟ್ಟೆಯ ಬಗ್ಗೆ ಯಶೋಧಾ ಹೇಳುವುದೇನು?
ಸೇಂಟ್ ಲೂಯಿಸ್ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಯಶೋಧಾ, "ದಶಕಗಳಿಂದ ಭಾರತದ ಹೂವಿನ ಉದ್ಯಮದಲ್ಲಿನ ಆ ಭಾರಿ ಮಾರುಕಟ್ಟೆ ಅಂತರವನ್ನು ಯಾರು ತುಂಬಲು ಪ್ರಯತ್ನಿಸಿಲ್ಲ. ಹೂಗುಚ್ಛ ಮಾರುಕಟ್ಟೆಯು ಸಾಕಷ್ಟು ಸಂಘಟಿತವಾಗಿದ್ದರೂ, ಸಾಂಪ್ರದಾಯಿಕ ಪೂಜಾ ಹೂವಿನ ಮಾರುಕಟ್ಟೆಯು ಅದರ ಬೆಳವಣಿಗೆಯಲ್ಲಿ ಬಹಳ ಹಿಂದುಳಿದಿದೆ" ಎಂದು ಹೇಳಿದರು.

ನಮ್ಮಲ್ಲಿ ಮಲ್ಲಿಗೆ, ಚೆಂಡು ಹೂವು, ಕ್ರೈಸಾಂಥೆಮಮ್ ಮತ್ತು ಮೊಗ್ಗು ಗುಲಾಬಿಗಳಂತಹ ಸಾಂಪ್ರದಾಯಿಕ ಹೂವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತಾರೆ ಎಂದು ಅವರು ಹೇಳುತ್ತಾರೆ. "ಅವುಗಳನ್ನು ಪೂಜೆಗೆ ಬಳಸುವುದರ ಜೊತೆಗೆ, ಜನರು ಅವುಗಳನ್ನು ತಮ್ಮ ಕೂದಲಿನ ಮೇಲೆ ಇರಿಸಿಕೊಳ್ಳಲು ಅಥವಾ ತಮ್ಮ ಆಟೋಗಳು, ಕಾರುಗಳು, ಅಂಗಡಿಗಳು ಮತ್ತು ಕಚೇರಿಗಳಲ್ಲಿ ನೇತು ಹಾಕಲು ಇಷ್ಟಪಡುತ್ತಾರೆ" ಎಂದು ಹೇಳುತ್ತಾರೆ.

ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಗೆ ತಾತ್ಕಾಲಿಕ ತಡೆಯೊಡ್ಡಿದ ಎಲಾನ್ ಮಸ್ಕ್! ಕಾರಣ ಇಲ್ಲಿದೆ ನೋಡಿ 

"ಆದರೆ ಭಾರತದ ಸಾಂಪ್ರದಾಯಿಕ ಹೂವಿನ ಮಾರುಕಟ್ಟೆಯ ವಿಷಯಕ್ಕೆ ಬಂದಾಗ, ಪೂರೈಕೆ ಸರಪಳಿ ಇನ್ನೂ ನಂಬಲಾಗದಷ್ಟು ಅಸಂಘಟಿತವಾಗಿದೆ. ಈ ಹೂವುಗಳನ್ನು ಕೊಯ್ಲಿನ ನಂತರ ಅನೇಕ ಹಂತಗಳ ನಿರ್ವಹಣೆಯ ಮೂಲಕ ಪೂರೈಸಲಾಗುತ್ತದೆ ಮತ್ತು ಅವು ಗ್ರಾಹಕರನ್ನು ತಲುಪುವ ಹೊತ್ತಿಗೆ ಅವು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ" ಎಂದು ಅವರು ಹೇಳುತ್ತಾರೆ.

ಸಣ್ಣ ರೈತರಿಗೆ ಅನುವು ಮಾಡಿಕೊಡುವುದು
ಏತನ್ಮಧ್ಯೆ, ಈ ಹೂವಿನ ವ್ಯವಹಾರದ ಕಲ್ಪನೆಯು ಯಶೋಧಾ ತಲೆಯಲ್ಲಿ ಮೂಡಿದಾಗ ಅವಳ ಸಹೋದರಿ ಇನ್ನೂ ಕಾಲೇಜಿನಲ್ಲಿದ್ದಳು, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಓದುತ್ತಿದ್ದಳು. ಇಬ್ಬರೂ ವ್ಯವಹಾರವನ್ನು ನಡೆಸುವಲ್ಲಿ ಸಮಾನ ಆಸಕ್ತಿಯನ್ನು ಹಂಚಿ ಕೊಂಡಿದ್ದರಿಂದ, ರಿಯಾ ತಮ್ಮ ಉದ್ಯಮವನ್ನು ಪ್ರಾರಂಭಿಸಲು ತನ್ನ ಸಹೋದರಿಯೊಂದಿಗೆ ಸೇರಲು ನಿರ್ಧರಿಸಿದರು.

ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಸಂಶೋಧನೆಯ ನಂತರ, 2019 ರಲ್ಲಿ ಅವರು ಬೇಡಿಕೆ ಮತ್ತು ಪೂರೈಕೆ ಕಡೆಯಿಂದ ಸಮಸ್ಯೆಯನ್ನು ಪರಿಹರಿಸುವ ವೇದಿಕೆಯನ್ನು ಸ್ಥಾಪಿಸಲು ನಿರ್ಧರಿಸಿದರು. ಆಗಲೇ ಈ ‘ಹೂವು’ ಅರಳಿತು ಎಂದು ಹೇಳಬಹುದು.

ಮಾತೃಭಾಷೆಯಲ್ಲಿ ‘ಹೂವು’ ಎಂದು ಹೆಸರು
"ಈ ‘ಹೂವು’ ಎಂಬ ಹೆಸರು ನಮ್ಮ ಮಾತೃಭಾಷೆಯಲ್ಲಿ ಇರಬೇಕೆಂದು ನಾವು ಬಯಸಿದ್ದೇವು, ಏಕೆಂದರೆ ಪೂಜಾ ಹೂವುಗಳ ವಿಷಯಕ್ಕೆ ಬಂದಾಗ, ಜನರು ತಮ್ಮ ಸ್ಥಳೀಯ ಭಾಷೆಯಲ್ಲಿದ್ದರೆ ಆ ಹೆಸರನ್ನು ಸುಲಭವಾಗಿ ಸಂಪರ್ಕಿಸಬಹುದು ಎಂದು ನಾವು ಭಾವಿಸಿದ್ದೇವು" ಎಂದು ರಿಯಾ ಹೇಳುತ್ತಾರೆ.

ರೈತರ ಜೊತೆ ನೇರ ಒಪ್ಪಂದ
"ಇಲ್ಲಿ ನಾವು ನೇರವಾಗಿ ಹೊಲಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಸಾಮಾನ್ಯವಾಗಿ, ರೈತರು ತಮ್ಮ ಹೂವುಗಳನ್ನು ಮಾರಾಟ ಮಾಡಲು ಸ್ಥಳೀಯ ಮಂಡಿಗೆ ತರುತ್ತಾರೆ. ಆದರೆ ನಾವು ನೇರವಾಗಿ ರೈತರೊಂದಿಗೆ ಒಪ್ಪಂದ ಮಾಡಿ ಕೊಂಡಿದ್ದೇವೆ, ಇದು ಮಾರಾಟ ಪ್ರಕ್ರಿಯೆಯ ಸಮಯದಲ್ಲಿ ತೆಗೆದುಕೊಂಡ ಸಮಯವನ್ನು ಕಡಿತಗೊಳಿಸುತ್ತದೆ" ಎಂದು 25 ವರ್ಷದ ರಿಯಾ ಅವರು ಹೇಳುತ್ತಾರೆ. ಅವರು ಪ್ರಸ್ತುತ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ 50ಕ್ಕೂ ಹೆಚ್ಚು ರೈತರೊಂದಿಗೆ ಸಹಯೋಗವನ್ನು ಹೊಂದಿದ್ದಾರೆ ಎಂದು ಹೇಳಿದರು.

"ಹೂಗಳನ್ನು ಸಂಗ್ರಹಿಸಿದ ನಂತರ, ಅವುಗಳನ್ನು ಬ್ಯಾಕ್ಟೀರಿಯಾ ಮತ್ತು ತೇವಾಂಶ ಮುಕ್ತವಾಗಿಸಲು ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲಾಗಿದೆ ಎಂದು ನಾವು ಖಚಿತ ಪಡಿಸಿಕೊಳ್ಳುತ್ತೇವೆ. ನಾವು ಗುಣಮಟ್ಟದ ಪ್ಯಾಕಿಂಗ್ ಪ್ರಕ್ರಿಯೆಯನ್ನು ಹೊಂದಿದ್ದೇವೆ, ಅದು ಹೂವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ, ಅದರ ಶೆಲ್ಫ್ ಲೈಫ್ ಅನ್ನು ಎರಡರಿಂದ ಮೂರು ದಿನಗಳಿಂದ ಸುಮಾರು 15 ದಿನಗಳವರೆಗೆ ವಿಸ್ತರಿಸುತ್ತದೆ" ಎಂದು ಅವರು ವಿವರಿಸುತ್ತಾರೆ.

ಇದನ್ನೂ ಓದಿ:  China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?

ಬೆಂಗಳೂರು ಮೂಲದ ದಂತವೈದ್ಯ ಮತ್ತು ಹೂವಿನ ಕೃಷಿಕ ಡಾ.ಕೆ.ರಾಜಶೇಖರ್ ಅವರು "ನಾನು ಒಂದು ವರ್ಷದಿಂದ ಕನಕಪುರದ ನನ್ನ ತೋಟದಿಂದ ಹೂವಿಗೆ ಕ್ರೈಸಾಂಥೆಮಮ್ ಗಳನ್ನು ಪೂರೈಸುತ್ತಿದ್ದೇನೆ. ಸಾಮಾನ್ಯವಾಗಿ, ನಾನು ಹೂವುಗಳನ್ನು ಸ್ಥಳೀಯ ಮಾರುಕಟ್ಟೆಗೆ ಕಳುಹಿಸಬೇಕು, ಹರಾಜು ನಡೆಯುವವರೆಗೆ ಕಾಯಬೇಕು ಮತ್ತು ನಂತರ ಹಣವನ್ನು ಸಂಗ್ರಹಿಸಬೇಕು. ಇದು ಸಮಯ ತೆಗೆದುಕೊಳ್ಳುವ ಮತ್ತು ಆಯಾಸಗೊಳಿಸುವ ಪ್ರಕ್ರಿಯೆಯಾಗಿತ್ತು. ಆದರೆ ಇಲ್ಲಿ, ನಾವು ಅದನ್ನು ನೇರವಾಗಿ ಅವರಿಗೆ ಪೂರೈಸುತ್ತೇವೆ ಮತ್ತು ಹೂವುಗಳ ಗುಣಮಟ್ಟದ ಆಧಾರದ ಮೇಲೆ, ಅವರು ನಮಗೆ ಪಾವತಿಸುತ್ತಾರೆ" ಎಂದು ಹೇಳಿದರು.

"ಈ ರೀತಿಯಾಗಿ, ಅವರು ತಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕೆಂದು ತಿಳಿದಿಲ್ಲದ ಹಲವಾರು ಸಣ್ಣ ರೈತರಿಗೆ ಸಹಾಯ ಮಾಡುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ.

1,50,000ಕ್ಕೂ ಹೆಚ್ಚು ಆರ್ಡರ್​ಗಳು
ಸಡಿಲವಾದ ಹೂವುಗಳಿಂದ ಹಿಡಿದು ಹೂಮಾಲೆಗಳವರೆಗೆ ಮತ್ತು ತುಳಸಿ ಮತ್ತು ದರ್ಭಾ ಹುಲ್ಲಿನಂತಹ ವಿಭಿನ್ನ ಸೊಪ್ಪುಗಳವರೆಗೆ, ಹೂವು ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತದೆ. "ನಾವು ಬಿಗ್ ಬಾಸ್ಕೆಟ್, ಗ್ರೋಫರ್ಸ್, ಸುಪರ್ ಡೈಲಿ, ಜೊಮ್ಯಾಟೊ, ಮಿಲ್ಕ್ ಬಾಸ್ಕೆಟ್, ಎಫ್ ಟಿ ಎಚ್ ಡೈಲಿ ಮತ್ತು ಜೆಪ್ಟೋದಂತಹ ವಿಭಿನ್ನ ಆನ್ಲೈನ್ ಪ್ಲಾಟ್‌ಫಾರ್ಮ್ ಗಳನ್ನು ಅವಲಂಬಿಸಿದ್ದೇವೆ" ಎಂದು ಯಶೋಧಾ ಹೇಳುತ್ತಾರೆ.

ಇದನ್ನೂ ಓದಿ:   25X25 Work Model: ಏನಿದು 25X25 ಕೆಲಸದ ಮಾದರಿ? ಉದ್ಯೋಗಿಗಳಿಗೆ ಲಾಭವೇ ನಷ್ಟವೇ?

"ನಾವು ಬೆಂಗಳೂರು, ಹೈದರಾಬಾದ್, ಚೆನ್ನೈ, ಮೈಸೂರು, ಪುಣೆ, ಮುಂಬೈ, ಗುರುಗ್ರಾಮ್ ಮತ್ತು ನೋಯ್ಡಾದಿಂದ ತಿಂಗಳಿಗೆ 1,50,000ಕ್ಕೂ ಹೆಚ್ಚು ಆರ್ಡರ್ ಗಳನ್ನು ಸ್ವೀಕರಿಸುತ್ತೇವೆ" ಎಂದು ಅವರು ಹೇಳುತ್ತಾರೆ. "ಕಳೆದ ವರ್ಷ, ನಾವು ನಮ್ಮ ಅಗರಬತ್ತಿಗಳನ್ನು ಪರಿಚಯಿಸಿದ್ದೇವೆ, ಮತ್ತು ಅವು ಸಹ ಯಶಸ್ವಿಯಾಗಿದ್ದಕ್ಕೆ ಸಂತೋಷವಾಗಿದೆ" ಎಂದು ಯಶೋಧಾ ಹೇಳುತ್ತಾರೆ.
Published by:Ashwini Prabhu
First published: