Lottery Ticket: ಲಾಟರಿ ಟಿಕೆಟ್​​ನಲ್ಲಿ 44 ಕೋಟಿ ಗೆದ್ದು ಕೋಟ್ಯಾಧಿಪತಿಯಾದ ಬೆಂಗಳೂರಿನ ವ್ಯಕ್ತಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೆಂಗಳೂರಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ಸರಣಿ 250 ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಗ್ರ್ಯಾಂಡ್ ಪ್ರೈಸ್ ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಬರೋಬ್ಬರಿ 20 ಮಿಲಿಯನ್ ದಿರ್ಹಂ ತನ್ನದಾಗಿಸಿಕೊಂಡಿದ್ದಾರೆ.

  • Share this:

ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರಿಗೆ ಭರ್ಜರಿ ಲಾಟರಿ ಹೊಡೆದಿದೆ. ಅಬುಧಾಬಿಯ (Abu Dhabi) ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಮ್ ಗ್ರ್ಯಾಂಡ್ ಬಹುಮಾನವನ್ನು ಗೆದ್ದ ನಂತರ ಭಾರತೀಯ ಪ್ರಜೆಯೊಬ್ಬರು ರಾತ್ರೋರಾತ್ರಿ 'ಕೋಟ್ಯಾಧಿಪತಿ'ಯಾಗಿದ್ದಾರೆ. ಬೆಂಗಳೂರಿನ ಅರುಣ್ ಕುಮಾರ್ ವಟಕ್ಕೆ ಕೋರೋತ್ ಅವರು ಇತ್ತೀಚೆಗೆ ಸರಣಿ 250 ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಗ್ರ್ಯಾಂಡ್ ಪ್ರೈಸ್ ಗೆದ್ದಿದ್ದಾರೆ. ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಶೋನಲ್ಲಿ 44 ಕೋಟಿ ಮೊತ್ತದ ಬಹುಮಾನ ಗೆದ್ದಿದ್ದಾರೆ. ಅಂದಹಾಗೆ ಈ ಲಾಟರಿ ಟಿಕೆಟ್‌ಗಳನ್ನು (Lottary Ticket) ಪ್ರಪಂಚದಾದ್ಯಂತದ ಜನರು ಖರೀದಿಸಬಹುದಾಗಿದ್ದು, ಲೈವ್ ಟೆಲಿಕಾಸ್ಟ್ (Live Telecast) ಸಮಯದಲ್ಲಿ ಅವರ ಸಂಖ್ಯೆಯನ್ನು ಘೋಷಿಸುತ್ತಾರೆ.


ವಿಜೇತರು ನಿರ್ದಿಷ್ಟ ಮೊತ್ತದ ಹಣವನ್ನು ಅಥವಾ ಐಷಾರಾಮಿ ಕಾರನ್ನು ಗೆಲ್ಲುತ್ತಾರೆ. ಸದ್ಯ ಅರುಣ್ ಕುಮಾರ್ 20 ಮಿಲಿಯನ್ ದಿರ್ಹಂ ಅಂದರೆ ಅಂದಾಜು. 44,75,00,000ರೂಗಳನ್ನು ಗೆದ್ದಿದ್ದಾರೆ.


ಆನ್‌ಲೈನ್‌ನಲ್ಲಿ ಲಾಟರಿ ಖರೀಸಿದ್ದ ಅರುಣ್‌ ಕುಮಾರ್!‌


ಅಲ್ಲಿನ ಮಾಧ್ಯಮದ ವರದಿಯ ಪ್ರಕಾರ, ಅರುಣ್ ತನ್ನ ಸ್ನೇಹಿತರಿಂದ ಬಿಗ್ ಟಿಕೆಟ್ ಲೈವ್ ಡ್ರಾಗಳ ಬಗ್ಗೆ ತಿಳಿದಾಗ, ಅವರು ಬಿಗ್ ಟಿಕೆಟ್ ರಾಫೆಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದರು. ಕುಮಾರ್ ಅವರು ಮಾರ್ಚ್ 22 ರಂದು ಬಿಗ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದರು. ಅವರು ಲಾಟರಿಗಾಗಿ ಟಿಕೆಟ್‌ಗಳನ್ನು ಖರೀದಿಸಿದ್ದು ಇದು ಎರಡನೇ ಬಾರಿ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.


ಇದನ್ನೂ ಓದಿ: ಇದು 20 ವರ್ಷಗಳ ಹಿಂದೆ ಬೇಯಿಸಿಟ್ಟ ಮೊಟ್ಟೆಗಳು, ಆದ್ರೂ ಹಾಳಾಗಿಲ್ಲ ಗೊತ್ತಾ?


ನಿನ್ನೆ ಪ್ರಸಾರವಾದ ಬಿಗ್ ಟಿಕೆಟ್ ಲೈವ್ ಶೋನಲ್ಲಿ ಲಾಟರಿ ಗೆದ್ದ ಅರುಣ್ ಹೆಸರನ್ನು ಘೋಷಿಸಲಾಗಿದೆ. ವೇದಿಕೆಯ ಮೇಲೆ ಕುಳಿತಿದ್ದ ಜನರ ಸಮಿತಿಯು ಅವರ ಟಿಕೆಟ್ ಅನ್ನು ಪರಿಶೀಲಿಸಿದೆ. ಅದೆಲ್ಲ ಮುಗಿದ ನಂತರ, ಕಾರ್ಯಕ್ರಮದ ನಿರೂಪಕರು ಅರುಣ್‌ಗೆ ಕರೆ ಮಾಡಿ ಅವರು 20 ಮಿಲಿಯನ್ ದಿರ್ಹಮ್ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.


ನಕಲಿ ಕಾಲ್‌ ಎಂದು ಭಾವಿಸಿದ್ದರಂತೆ


ಇನ್ನು, ಲಾಟರಿ ಬಹುಮಾನ ಸಿಕ್ಕ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಅರುಣ್‌ ಕುಮಾರ್‌, “ಬಿಗ್ ಟಿಕೆಟ್‌ನಿಂದ ಕರೆ ಸ್ವೀಕರಿಸಿದ ನಂತರ, ಇದು ನಕಲಿ, ತಮಾಷೆಯ ಕಾಲ್‌ ಎಂದು ನಾನು ಭಾವಿಸಿದ್ದೆ. ನಾನು ಕಾಲ್​​ ಕಟ್​​ ಮಾಡಿದೆ ಮತ್ತು ಆ ಸಂಖ್ಯೆಯನ್ನು ಬ್ಲಾಕ್‌ ಮಾಡಿದೆ. ಸ್ವಲ್ಪ ಸಮಯದ ನಂತರ, ನನಗೆ ಬೇರೆ ಸಂಖ್ಯೆಯಿಂದ ಕರೆ ಬಂದಿತು. ಅಂತಿಮವಾಗಿ ಲಾಟರಿ ಅಧಿಕಾರಿಗಳು ನನ್ನನ್ನು ಸಂಪರ್ಕಿಸಲು ಸಾಧ್ಯವಾಯ್ತು” ಎಂದು ಹೇಳಿದ್ದಾರೆ.


ಸಾಂಕೇತಿಕ ಚಿತ್ರ


"ನಾನು ಈ ಟಿಕೆಟ್ ಅನ್ನು 'ಬೈ ಟು ಗೆಟ್‌ ಒನ್‌' ಆಯ್ಕೆಯ ಮೂಲಕ ಖರೀದಿಸಿದೆ. ನಾನು ಗೆದ್ದ ಟಿಕೆಟ್ ಮೂರನೆಯದು” ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.


ಬ್ಯುಸಿನೆಸ್​ ಪ್ರಾರಂಭಿಸುವ ಪ್ಲ್ಯಾನ್​


“ನಾನು ಪ್ರಥಮ ಬಹುಮಾನವನ್ನು ಗೆದ್ದಿದ್ದೇನೆ ಎಂದು ನನಗೆ ನಂಬಲಾಗಲಿಲ್ಲ. ಇನ್ನೂ ಕೂಡ ನಾನು ಅಪನಂಬಿಕೆಯಲ್ಲಿದ್ದೇನೆ” ಎಂದು ಅವರು ಹೇಳಿದ್ದಾರೆ. ಇನ್ನು, ಅರುಣ್‌ ಕುಮಾರ್‌ ಲಾಟರಿ ದುಡ್ಡಿನಲ್ಲಿ ಹೊಸದೊಂದು ವ್ಯಾಪಾರ ಆರಂಭಿಸಲು ಬಯಸಿದ್ದಾರೆ ಎನ್ನಲಾಗಿದೆ.


ಅಂದಹಾಗೆ ಈ ಲೈವ್ ಕಾಸ್ಟ್ ಕಳೆದ ಒಂದು ದಿನದ ಹಿಂದಷ್ಟೇ ನಡೆದಿದ್ದರಿಂದ ಅದನ್ನು ಅನೇಕ ಜನರು ಇಂಟರ್‌ನೆಟ್‌ನಲ್ಲಿ ವೀಕ್ಷಿಸಿದ್ದಾರೆ. ಸಾಕಷ್ಟು ಜನರು ವಿಡಿಯೋವನ್ನು ಲೈಕ್‌ ಮಾಡಿದ್ದು ಕಾಮೆಂಟ್‌ ಸಹ ಮಾಡಿದ್ದಾರೆ.


ಒಬ್ಬರು "ಅಭಿನಂದನೆಗಳು ಅರುಣ್. ನಾನು ನಿಮ್ಮ ಬಗ್ಗೆ ಸಂತೋಷ ಪಟ್ಟಿದ್ದೇನೆ. ನಿಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಬೇಕೆಂದು ನಾನು ವಿನಂತಿಸುತ್ತೇನೆ. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ." ಎಂದು ಕಾಮೆಂಟ್‌ ಮಾಡಿದ್ದಾರೆ.




ಇನ್ನೊಬ್ಬರು "ದೇವರು ನಿನ್ನನ್ನು ಆಶೀರ್ವದಿಸಿದ್ದಾನೆ, ಅರುಣ್ ಕುಮಾರ್" ಎಂದು ಹೇಳಿದ್ದಾರೆ. ಮತ್ತೊಬ್ಬರು"ಎಲ್ಲಾ ವಿಜೇತರಿಗೆ ಅಭಿನಂದನೆಗಳು" ಎಂದು ಪೋಸ್ಟ್ ಮಾಡಿದ್ದಾರೆ.


ಈ ಮಧ್ಯೆ, ಲಾಟರಿಯಲ್ಲಿ ಎರಡನೇ ಬಹುಮಾನವು ಭಾರತೀಯರಿಗೆ ಬಂದಿದೆ ಎನ್ನಲಾಗಿದ್ದು, ಬಹ್ರೇನ್‌ನಲ್ಲಿ ವಾಸಿಸುವ ಸುರೇಶ್ ಮಥನ್ ಎಂಬುವವರು 1 ಲಕ್ಷ ದಿರ್ಹಮ್ ಅಂದರೆ ಸುಮಾರು 22 ಲಕ್ಷ ಹಣವನ್ನು ಗೆದ್ದಿದ್ದಾರೆ.

First published: