• Home
  • »
  • News
  • »
  • business
  • »
  • Caucasian Shepherd: ಈ ನಾಯಿ ಖರೀದಿಸಿದ ಹಣಕ್ಕೆ ಬೆಂಗಳೂರಿನಲ್ಲಿ ಡ್ಯೂಪ್ಲೆಕ್ಸ್​ ಮನೆನೇ ಕಟ್ಟಿಸಬಹುದಿತ್ತಲ್ಲ ಗುರೂ!

Caucasian Shepherd: ಈ ನಾಯಿ ಖರೀದಿಸಿದ ಹಣಕ್ಕೆ ಬೆಂಗಳೂರಿನಲ್ಲಿ ಡ್ಯೂಪ್ಲೆಕ್ಸ್​ ಮನೆನೇ ಕಟ್ಟಿಸಬಹುದಿತ್ತಲ್ಲ ಗುರೂ!

20 ಕೋಟಿ ಬೆಲೆಯ ನಾಯಿ

20 ಕೋಟಿ ಬೆಲೆಯ ನಾಯಿ

ಬೆಂಗಳೂರಿನ ಜನಪ್ರಿಯ ಸೆಲೆಬ್ರಿಟಿ ಶ್ವಾನ ಸಾಕಣೆದಾರರಲ್ಲಿ ಒಬ್ಬರಾದ ಕ್ಯಾಡಬಮ್ಸ್ ಕೆನೆಲ್ ಸಂಸ್ಥೆಯ ಮಾಲಿಕರಾದ ಸತೀಶ್ ಅವರು ಹೈದರಾಬಾದ್ ಮೂಲದ ಬ್ರೀಡರ್ ನಿಂದ 20 ಕೋಟಿ ರೂಪಾಯಿಗಳ ಬೆಲೆಬಾಳುವ ನಾಯಿಯನ್ನು ಖರೀದಿಸಿದ್ದಾರೆ.

  • Trending Desk
  • Last Updated :
  • Bangalore [Bangalore], India
  • Share this:

ನಾವು ಆಗಾಗ್ಗೆ ಸಾಮಾಜಿಕ ಮಾಧ್ಯಮ (Social Media) ಗಳಲ್ಲಿ ಜನರು ಅಪರೂಪದ ತಳಿಯ ನಾಯಿ (Dog) ಯನ್ನು ಯಾರಾದರೂ ಖರೀದಿಸುತ್ತೀರಾ ಅಂತ ಮಾಹಿತಿ ಹಾಕಿರುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಹೌದ. ಅಪರೂಪದ ತಳಿಗಳ (Rare Species) ನಾಯಿಯನ್ನು ತುಂಬಾನೇ ಅಧಿಕ ಬೆಲೆಗೆ ಮಾರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಇಲ್ಲೊಬ್ಬ ಹೈದರಾಬಾದ್ (Hyderabad) ವ್ಯಕ್ತಿ ಸಹ ಒಂದು ಅಪರೂಪದ ತಳಿಯ ನಾಯಿಯನ್ನು ಬೆಂಗಳೂರಿನ ವ್ಯಕ್ತಿಗೆ ಮಾರಿದ್ದಾನೆ ನೋಡಿ. ಇದರಲ್ಲೇನಿದೆ ವಿಶೇಷತೆ ಅಂತ ನೀವು ನಮ್ಮನ್ನು ಕೇಳಬಹುದು.


ಈ ಅಪರೂಪದ ತಳಿಯ ನಾಯಿಯ ಬೆಲೆ ಕೇಳಿದರೆ ಶಾಕ್ ಆಗ್ತೀರಾ!


ಬೆಂಗಳೂರಿನ ಜನಪ್ರಿಯ ಸೆಲೆಬ್ರಿಟಿ ಶ್ವಾನ ಸಾಕಣೆದಾರರಲ್ಲಿ ಒಬ್ಬರಾದ ಕ್ಯಾಡಬಮ್ಸ್ ಕೆನೆಲ್ ಸಂಸ್ಥೆಯ ಮಾಲಿಕರಾದ ಸತೀಶ್ ಅವರು ಹೈದರಾಬಾದ್ ಮೂಲದ ಬ್ರೀಡರ್ ನಿಂದ 20 ಕೋಟಿ ರೂಪಾಯಿಗಳ ಬೆಲೆಬಾಳುವ ನಾಯಿಯನ್ನು ಖರೀದಿಸಿದ್ದಾರೆ.


ಉತ್ತಮ ಗುಣಮಟ್ಟದ ಮತ್ತು ದುಬಾರಿ ನಾಯಿ ತಳಿಗಳನ್ನು ಸಾಕಲು ಹೆಸರುವಾಸಿಯಾಗಿರುವ ಸತೀಶ್, ಸುಮಾರು ಆರು ತಿಂಗಳ ಹಿಂದೆ ಈ ಅಪರೂಪದ ಕಕೇಸಿಯನ್ ಶೆಫರ್ಡ್ ತಳಿಯ ನಾಯಿಯನ್ನು ಖರೀದಿಸಿ ತಂದಿದ್ದಾರೆ ಎಂದು ಸುದ್ದಿ ಮಾಧ್ಯಮದ ವರದಿಯೊಂದು ತಿಳಿಸಿದೆ. ಕಕೇಶಿಯನ್ ಶೆಫರ್ಡ್ ತಳಿಯ ನಾಯಿ ಹೆಚ್ಚಾಗಿ ಅರ್ಮೇನಿಯಾ, ಸಿರ್ಕಾಸಿಯಾ, ಟರ್ಕಿ, ಅಜೆರ್ಬೈಜಾನ್, ಡಾಗೆಸ್ತಾನ್ ಮತ್ತು ಜಾರ್ಜಿಯಾದಂತಹ ಸ್ಥಳಗಳಲ್ಲಿ ಕಂಡು ಬರುತ್ತದೆ.


ವರದಿಯ ಪ್ರಕಾರ, ಹೈದರಾಬಾದಿ ಬ್ರೀಡರ್ ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಕ್ಯಾಡಬಮ್ಸ್ ಕೆನೆಲ್ ನ ಮಾಲೀಕರನ್ನು ಸಂಪರ್ಕಿಸಿ ತಮ್ಮಲ್ಲಿರುವ ಈ ಅಪರೂಪದ ತಳಿಯ ನಾಯಿಯ ಬಗ್ಗೆ ಮಾಹಿತಿ ನೀಡಿದರು.


ಈ ನಾಯಿಯನ್ನ 20 ಕೋಟಿ ರೂಪಾಯಿಗೆ ಖರೀದಿಸಿದ್ರಂತೆ!


ಸತೀಶ್ ಅವರು ಈ ನಾಯಿಯನ್ನು ಖರೀದಿಸಲು ಆಸಕ್ತಿ ತೋರಿಸಿದ ನಂತರ, ಹೈದರಾಬಾದಿನ ವ್ಯಕ್ತಿ ಅದನ್ನು ಶಾಕ್ ಆಗುವಂತಹ 20 ಕೋಟಿ ರೂಪಾಯಿಗಳ ಬೆಲೆಗೆ ಮಾರಾಟ ಮಾಡಿದರು. ಸತೀಶ್ ಈ ನಾಯಿಗೆ "ಕ್ಯಾಡಬಮ್ ಹೇಡರ್" ಎಂದು ಹೆಸರಿಸಿದ್ದಾರೆ. ಈ ನಾಯಿಗೆ ಸುಮಾರು 1.5 ವರ್ಷ ವಯಸ್ಸಾಗಿದೆ.


ಕಾಕಸಸ್ ಪ್ರದೇಶದ ಸ್ಥಳೀಯವಾದ ಕಕೇಶಿಯನ್ ಶೆಫರ್ಡ್ ತಳಿಯನ್ನು ಅತ್ಯುತ್ತಮ ನಾಯಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ಜಾನುವಾರು ರಕ್ಷಕ ನಾಯಿಯು ತೋಳಗಳ ಮೇಲೆ ದಾಳಿ ಮಾಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಈ ತಳಿಯ ನಾಯಿಗಳು ಮುಖ್ಯವಾಗಿ ಕಾವಲು ನಾಯಿಗಳಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ರಷ್ಯಾದಲ್ಲಿ ಅವು ಸೆರೆಮನೆಗಳನ್ನು ಕಾವಲು ಕಾಯುವುದನ್ನು ಸಹ ಕಾಣಬಹುದು.









View this post on Instagram






A post shared by S Sathish (@satishcadaboms)





ಇದನ್ನೂ ಓದಿ: Pizza Hut, Dominos ಪಿಜ್ಜಾಗಳ ಬೆಲೆ ಯಾವ ದೇಶದಲ್ಲಿ ಎಷ್ಟಿದೆ? ಇವುಗಳ ಟೇಸ್ಟ್ ಸಹ ಡಿಫ್ರೆಂಟ್‌ ಇರುತ್ತಾ?


ಇಪ್ಪತ್ತನೇ ಶತಮಾನದಲ್ಲಿ ಸೋವಿಯತ್ ತಳಿಗಾರರು ಕಕೇಶಿಯನ್ ಪ್ರದೇಶದ ಕೆಲವು ತಳಿಗಳನ್ನು ಆರಿಸಿದ ನಂತರ ಈ ತಳಿಯನ್ನು ರಚಿಸಿದರು. ಪ್ರಬುದ್ಧ ಕಾಕಸಸ್ ಶೆಫರ್ಡ್ ಸುಮಾರು 45 ರಿಂದ 70 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಈ ತಳಿಯ ಜೀವಿತಾವಧಿ 10 ರಿಂದ 12 ವರ್ಷಗಳ ನಡುವೆ ಇರುತ್ತದೆ.


ಅಪರೂಪದ ತಳಿಯ ನಾಯಿ ಕಂಡ್ರೆ ಸತೀಶ್​​ಗೆ ಆಸಕ್ತಿ!


ಈ ಹಿಂದೆ ಅಪರೂಪದ ತಳಿಯ ನಾಯಿಗಳನ್ನು ಖರೀದಿಸಲು ಸತೀಶ್ ತೀವ್ರ ಆಸಕ್ತಿ ತೋರಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಅವರು ಕೊರಿಯನ್ ಡೋಸ ಮಾಸ್ಟಿಫ್ ನ ಮಾಲೀಕರಾಗಿದ್ದಾರೆ. ಇದನ್ನು ಅವರು 1 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದ್ದಾರೆ. ಅವರು ಈ ಹಿಂದೆ ಟಿಬೆಟಿಯನ್ ಮಾಸ್ಟಿಫ್ ಅನ್ನು 10 ಕೋಟಿ ರೂಪಾಯಿಗೆ ಮತ್ತು ಅಲಾಸ್ಕನ್ ಮಲಮುಟ್ ಅನ್ನು 8 ಕೋಟಿ ರೂಪಾಯಿಗೆ ಖರೀದಿಸಿದ್ದರು.


ಇದನ್ನೂ ಓದಿ: ವಾಹನ ಸವಾರರೇ ಅಲರ್ಟ್, ಈ ಹಿಂದಿನಂತಲ್ಲ ಟ್ರಾಫಿಕ್​ ರೂಲ್ಸ್​! ಬ್ರೇಕ್​ ಮಾಡಿದ್ರೆ 25 ಸಾವಿರ ದಂಡ


ಕಾಡಮಮ್ ಹೇಡರ್ ಇತ್ತೀಚೆಗೆ ತಿರುವನಂತಪುರಂ ಕೆನೆಲ್ ಕ್ಲಬ್ ಮತ್ತು ಕ್ರೌನ್ ಕ್ಲಾಸಿಕ್ ಡಾಗ್ ಶೋ ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. 20 ಕೋಟಿ ರೂಪಾಯಿಗಳ ಬೆಲೆಯ ಈ ನಾಯಿ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 32 ಪದಕಗಳನ್ನು ಗೆದ್ದಿದೆ. ವರದಿಗಳ ಪ್ರಕಾರ, ಸತೀಶ್ ಒಂದೇ ತಳಿಯ ಎರಡು ಮರಿಗಳನ್ನು ಹೊಂದಿದ್ದು, ಅದನ್ನು ಅವರು 5 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

Published by:ವಾಸುದೇವ್ ಎಂ
First published: