Viral Video: ಇದು ಹಣ ಕೊಡುವ ಎಟಿಎಂ ಅಲ್ಲ, ಇಡ್ಲಿ ಕೊಡುವ ಎಟಿಎಂ!

ಇಡ್ಲಿ ಎಟಿಎಂ

ಇಡ್ಲಿ ಎಟಿಎಂ

ಎಟಿಎಂ ಮೂಲಕಇಡ್ಲಿಗಳು ಸರಬರಾಜು ಮಾಡುತ್ತಿದೆ ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಇಡ್ಲಿ ಬಾಟ್ ಅಥವಾ ಇಡ್ಲಿ ಎಟಿಎಂ ಎಂದು ಕರೆಯಲಾಗುತ್ತದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಎಟಿಎಂ (ATM) ನಲ್ಲಿ ಹಣ (Money) ಬರುತ್ತದೆ ಅಂತ ಇದು ಎಲ್ಲರಿಗೂ ತಿಳಿದಿದೆ. ಕೆಲವೊಂದು ದೇಶಗಳಲ್ಲಿ ಎಟಿಎಂ ರೀತಿ ಇರುವ ಬಾಕ್ಸ್ (Box) ​ನಲ್ಲಿ ಹಣ ಹಾಕಿದ್ದರೆ ಕೂಲ್​ ಡ್ರಿಂಕ್ಸ್ (Cool Drinks)​ ಅಥವಾ ಫ್ರೈಡ್​ ಫುಡ್ (Fried Food)​ ಬರುವುದನ್ನು ನಾವು ನೋಡಿದ್ದೇವೆ. ಇನ್ನೂ ನಮ್ಮ ದೇಶದಲ್ಲೂ ಎಟಿಎಂನಂತಿರುವ  ಬಾಕ್ಸ್​ನಲ್ಲಿ ದುಡ್ಡು ಹಾಕಿದರೆ ನೀರು (Water) ಬರುವುದನ್ನು ನಾವು ನೋಡಿದ್ದೇವೆ. ನಾಣ್ಯಗಳನ್ನು ಹಾಕಿ ಬಾಟಲಿಯಲ್ಲಿ ನೀರು ತುಂಬಿಸಬಹುದು. ಎಟಿಎಂ  ಅನ್ನು ವಿವಿಧ ಸೇವೆಗಳಿಗೆ ಬಳಸಲಾಗುತ್ತದೆ. ಆದರೆ, ಇತ್ತೀಚೆಗೆ ಸೋಷಿಯಲ್​ ಮೀಡಿಯಾ (Social Media) ದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದು ಬೆಂಗಳೂರು (Bengaluru) ಮೂಲದ  ಸ್ಟಾರ್ಟ್​ಅಪ್​ (Startup) ವೊಂದು ಈ ಸೂಪರ್​ ಐಡಿಯಾ ಮಾಡಿದೆ. ಅದುವೆ ಇಡ್ಲಿ ಎಟಿಎಂ  (Idly ATM).


ಇದು ಹಣದ ಎಟಿಎಂ ಅಲ್ಲ, ಇಡ್ಲಿ ಎಟಿಎಂ!


ಎಟಿಎಂ ಮೂಲಕಇಡ್ಲಿಗಳು ಸರಬರಾಜು ಮಾಡುತ್ತಿದೆ ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಇಡ್ಲಿ ಬಾಟ್ ಅಥವಾ ಇಡ್ಲಿ ಎಟಿಎಂ ಎಂದು ಕರೆಯಲಾಗುತ್ತದೆ. ಇಡ್ಲಿ, ಪ್ಯಾಕೇಜಿಂಗ್ ಮತ್ತು ಸರಬರಾಜು ಮಾಡುವ ಸಂಪೂರ್ಣ ಪ್ರಕ್ರಿಯೆಯು ತಕ್ಷಣವೇ ಮಾಡಲಾಗುತ್ತದೆ. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹೀರಾಮತ್ ಮತ್ತು ಸುರೇಶ್ ಚಂದ್ರಶೇಖರನ್ ಫ್ರೆಶ್‌ಶಾಟ್ ರೊಬೊಟಿಕ್ಸ್ ಎಂಬ ಸ್ಟಾರ್ಟಪ್ ಆರಂಭಿಸಿದ್ದಾರೆ. ಈ ಸ್ಟಾರ್ಟಪ್ ಇಡ್ಲಿ ಎಟಿಎಂ ಮಾಡಿದೆ.


ಇಡ್ಲಿ ಎಟಿಎಂ ಹೇಗೆ ಕೆಲಸ ಮಾಡುತ್ತೆ?


ಈ ಸ್ಟಾರ್ಟಪ್ ಬೆಂಗಳೂರಿನಲ್ಲಿ ಮೊದಲ ಇಡ್ಲಿ ಮಳಿಗೆಯನ್ನು ಸ್ಥಾಪಿಸಿದೆ. ಸಂಪೂರ್ಣ ಪ್ರಕ್ರಿಯೆಯು ಸ್ವಯಂಚಾಲಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ಆರ್ಡರ್​ ಮಾಡಿದ ಕೂಡಲೇ ಬಿಸಿ ಬಿಸಿ ಇಡ್ಲಿ, ಸಾಂಬಾರ್​​, ಚಟ್ನಿ ಸೇರಿ ಎಲ್ಲವೂ ಪ್ಯಾಕಿಂಗ್​ ಆಗಿ ಆಚೆ ಬರುತ್ತದೆ. ಈ ಪಾರ್ಸೆಲ್​ ಅನ್ನು ನೀವು ಕೇವಲ 30 ರಿಂದ 1 ನಿಮಿಷಗಳೊಳಗೆ ನಿಮ್ಮ ಕೈ ಸೇರುತ್ತೆ. ಇಡ್ಲಿ ಎಟಿಎಂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿಡಿಯೋ ನೋಡಿ.ಇದನ್ನೂ ಓದಿ: ಆರ್​ಡಿ ಅಥವಾ ಎಫ್​ಡಿ, ಎರಡರಲ್ಲಿ ಯಾವುದು ಉತ್ತಮ? ಉಳಿತಾಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ನೋಡಿ


ಇಡ್ಲಿ ಎಟಿಎಂ ಐಡಿಯಾ ಹಿಂದಿದೆ ರೋಚಕ ಸ್ಟೋರಿ!


ಶರಣ್ ಹೀರಾಮತ್ ಅವರ ಅನುಭವವೇ ಈ ಅದ್ಭುತ ಕಲ್ಪನೆಗೆ ಕಾರಣ. 2016ರಲ್ಲಿ ಮಗಳು ಅಸ್ವಸ್ಥರಾಗಿದ್ದಾಗ ಮಧ್ಯರಾತ್ರಿ ಇಡ್ಲಿ ಖರೀದಿಸಲು ಹೋಗಿದ್ದರು. ಆದರೆ ರೆಸ್ಟೋರೆಂಟ್‌ಗಳು ಎಲ್ಲಿಯೂ ಓಪನ್​ ಇರಲಿಲ್ಲ. ಎರಡು ಇಡ್ಲಿಗಾಗಿ ಸಾಕಷ್ಟು ಹುಡುಕಿದ್ರಂತೆ. ಎಲ್ಲೇ ಹುಡುಕಿದರೂ ಇಡ್ಲಿ ಮಾತ್ರ ಸಿಗಲಿಲ್ಲ. ಹಣ ತೆಗೆಯಲು ಎಟಿಎಂಗಳಿವೆ, ಇಡ್ಲಿ ಕೊಳ್ಳಲು ಎಟಿಎಂ ಏಕೆ ಇಲ್ಲ ಎಂದು ಅವರು ಯೋಚಿಸಿದರು. ಅಷ್ಟೇ ಅಲ್ಲ, ಒಮ್ಮೆ ಹೀರಾಮತ್ ಮತ್ತು ಚಂದ್ರಶೇಖರನ್ ರೋಡ್ ಟ್ರಿಪ್ ಹೋದಾಗ ಹೋಟೆಲ್‌ನಲ್ಲಿ ಹಾಳಾದ ಇಡ್ಲಿಗಳನ್ನು ನೀಡಿದ್ದರಂತೆ.


ಆ ಇಡ್ಲಿಗಳನ್ನು  ತಿಂದು ಇವರ ಹೊಟ್ಟೆಯೂ ಹಾಳಾಗಿತ್ತು. ಆಗ ಇವರು ಒಂದು ನಿರ್ಧಾರಕ್ಕೆ ಬರ್ತಾರೆ.  ಫ್ರೆಶ್‌ಶಾಟ್ ರೊಬೊಟಿಕ್ಸ್ ಯಾವುದೇ ಸಮಯದಲ್ಲಿ ತಾಜಾ ಇಡ್ಲಿಯನ್ನು ಪೂರೈಸಲು ಇಡ್ಲಿ ಎಟಿಎಂ ಮಾಡುವ ಆಲೋಚನೆಯೊಂದಿಗೆ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದರು. ಸ್ವಯಂಚಾಲಿತ ಯಂತ್ರದ ಸಹಾಯದಿಂದ ಯಾವುದೇ ಸಮಯದಲ್ಲಿ ಇಡ್ಲಿ ಖರೀದಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಈ ಸ್ಟಾರ್ಟ್​ಅಪ್​ ಶುರುಮಾಡಿದ್ದಾರೆ.


ಇದನ್ನೂ ಓದಿ: ಹೊಸ ಕಾರು ಖರೀದಿಸಬೇಕೆಂದರೆ ಈಗಲೇ ಖರೀದಿಸಬೇಕು, ಸದ್ಯದಲ್ಲೇ ಬೆಲೆ ಏರಿಕೆಯಾಗಲಿದೆ!


ಫುಡ್​ಬಾಟ್​​ ಸಂಪೂರ್ಣ ಸ್ವಯಂಚಾಲಿತ!


ಫುಡ್‌ಬಾಟ್ ಮೊದಲ ಸಂಪೂರ್ಣ ಸ್ವಯಂಚಾಲಿತ ಅಡುಗೆ ಮತ್ತು ಮಾರಾಟ ಯಂತ್ರ ಎಂದು ಹೇಳಲಾಗುತ್ತದೆ ಇದು ಇಡ್ಲಿಗಳನ್ನು ಮಾತ್ರವಲ್ಲದೆ ದಕ್ಷಿಣ ಭಾರತದ ಭಕ್ಷ್ಯಗಳನ್ನು ಸಹ ನೀಡುತ್ತದೆ. ಪ್ರಸ್ತುತ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಅವುಗಳನ್ನು ಕಾಣಬಹುದು. ಶೀಘ್ರದಲ್ಲೇ ಕಚೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲು ಅವರು ಯೋಜಿಸುತ್ತಿದ್ದಾರೆ. ಕೇವಲ ಇಡ್ಲಿ ಬೋಟ್ ಹೊರತುಪಡಿಸಿ, ದೋಸೆ ಬೋಟ್, ರೈಸ್ ಬೋಟ್ ಮತ್ತು ಜ್ಯೂಸ್ ಬೋಟ್ ಅನ್ನು ಪರಿಚಯಿಸಲಾಗುವುದು.

First published: