Healthy Snacks: ಈ ಸ್ನಾಕ್ಸ್ ತಿಂದ್ರೆ ಆರೋಗ್ಯ ಇನ್ನೂ ಚೆನ್ನಾಗಿ ಆಗುತ್ತಂತೆ, ಬಾಯಿರುಚಿಗೆ ಇದು ಬೆಸ್ಟ್ ನೋಡಿ!

Startup Company:ಸಾಗರ್ ಭಲೋಟಿಯಾ ಬಾಂಬೆ ಐಐಟಿಯ ಪದವೀಧರರಾಗಿದ್ದು, ನವೋದ್ಯಮಗಳಾದ ಜೋವಿ.ಕಾಮ್, ಫ್ರೆಶ್‍ಮೆನು, ಹೆಲ್ತಿಫೈಮೀ, ಓಯೊ ಮತ್ತು ಕ್ವಿಕರ್‌ನಲ್ಲಿ ಏಳು ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಈ ಉತ್ಪನ್ನದ ಚಿಂತಕರಾಗಿದ್ದು, ಸಂಸ್ಥೆಯ ತಂಡದ ಪಾಲಿಗೆ ವಿನ್ಯಾಸಕ ಹಾಗೂ ಸೃಜನಶೀಲ ಆಸ್ತಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2019ರಲ್ಲಿ ಸ್ಥಾಪನೆಯಾದ ಬೆಂಗಳೂರು (Bengaluru) ಮೂಲದ ಹೊಸ ಉದ್ಯಮವಾದ  ಟ್ಯಾಗ್ಸ್ ಫುಡ್ಸ್  (TagZ Foods) ಆರೋಗ್ಯಕರ ಆಲೂಗಡ್ಡೆ ಚಿಪ್ಸ್ (Health potato Chips)  ತಯಾರಿಸುವ ಆಶ್ವಾಸನೆ ನೀಡಿದೆ. ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆ ಚಿಪ್ಸ್ ವಲಯದಲ್ಲಿ ಪ್ರಿಂಗಲ್ಸ್ ಮತ್ತು ಕೆಟಲ್ ಸಂಸ್ಥೆಯೊಂದಿಗೆ ಸ್ಪರ್ಧಿಸುತ್ತಿರುವ ಈ ನವೋದ್ಯಮ, ಇದೀಗ ಸಾಗರೋತ್ತರ ಮಾರುಕಟ್ಟೆಯ ಮೇಲೆ ಕಣ್ಣು ನೆಟ್ಟಿದೆ. ಬೆಂಗಳೂರು ಮೂಲದ ಟ್ಯಾಗ್ಸ್‌ ಫುಡ್ಸ್ ಅನ್ನು ಅನೀಶ್ ಬಸು (Anish Basu Roy) ಹಾಗೂ ಸಾಗರ್ ಭಲೋಟಿಯಾ (Sagar Bhalotia)  2019ರಲ್ಲಿ ಶುರು ಮಾಡಿದರು. ನಗರ ಪ್ರದೇಶದ ತಲೆಮಾರಿನ ಗ್ರಾಹಕರು ಆರೋಗ್ಯಕರ ತಿನಿಸುಗಳನ್ನು ತಿಂದು, ಹೆಚ್ಚು ಕ್ರಿಯಾಶೀಲ ಜೀವನ ಶೈಲಿಯನ್ನು ನಡೆಸಲಿ ಎಂಬುದು ಅವರ ಆಶಯವಾಗಿತ್ತು. ಈ ಬ್ರ್ಯಾಂಡ್‍ನ ಮುಖ್ಯ ಕಾರ್ಯಸೂಚಿ ತಾಳಿಕೆಯಾಗಿತ್ತು.

“ಇದೇ ಸಮಯದಲ್ಲಿ ನಾವು ಪ್ಲಾಸ್ಟಿಕ್ ತಾಟಸ್ಥ್ಯ ಬ್ರ್ಯಾಂಡ್ ಆಗಿದ್ದೇವೆ. ನಾವು ಎಷ್ಟು ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತೇವೊ ಅಷ್ಟೇ ಪ್ಲಾಸ್ಟಿಕ್ ಉತ್ಪನ್ನವನ್ನು ಪುನರ್ಬಳಕೆ ಮಾಡುತ್ತೇವೆ. ನಾವು ಭೂಮಿಗೆ ಏನನ್ನು ಮರಳಿಸುತ್ತಿದ್ದೆವೆಯೋ ಅದಕ್ಕಿಂತ ಉತ್ತಮ ರೀತಿಯಲ್ಲಿ ಈ ಗ್ರಹವನ್ನು ಉಳಿಸಬೇಕು ಎಂಬ ಬಗ್ಗೆ ಜೆನ್‍ಜೆಡ್ ಬ್ರ್ಯಾಂಡ್‌ ಆಗಿ ನಾವು ಖಾತರಿ ಪಡಿಸಲು ಬಯಸುತ್ತೇವೆ” ಎಂದೂ ಅನೀಶ್ ಹೇಳುತ್ತಾರೆ.

ಟ್ಯಾಗ್ಸ್ ವೈವಿಧ್ಯಮಯ ಹುರಿದ ಆಲೂಗಡ್ಡೆ ಚಿಪ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಚಿಪ್ಸ್‌ಗಳು ಕರಿದ ಆಲೂಗಡ್ಡೆ ಚಿಪ್ಸ್‌ಗಳಿಗೆ ಹೋಲಿಸಿದರೆ ಕೇವಲ ಶೇ. 50ರಷ್ಟು ಕಡಿಮೆ ಕೊಬ್ಬಿನಾಂಶ ಹೊಂದಿದೆ ಎಂದು ಹೇಳಲಾಗಿದೆ. ಸಂಸ್ಥೆಯ ಸಹ ಸಂಸ್ಥಾಪಕ ಸಾಗರ್ ಭಲೋಟಿಯಾ ಪ್ರಕಾರ, ಹುರಿಯುವುದು ನೂತನ ತಂತ್ರಜ್ಞಾನವಾಗಿದ್ದು, ಅತ್ಯುತ್ತಮ ಆಲೂಗಡ್ಡೆಗಳ ಮೇಲೆ ಹೆಚ್ಚು ಉಷ್ಣಾಂಶ ಹಾಗೂ ಒತ್ತಡವನ್ನು ಬಳಸಲಾಗುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ತಾಯಿಯಾದ ನಂತರ ಉಂಟಾಗುವ ಖಿನ್ನತೆಯನ್ನು ದೂರ ಮಾಡಲು ಹೀಗೆ ಮಾಡಿ…

“ನಮ್ಮ ಎಲ್ಲ ಹುರಿದ ಆಲೂಗಡ್ಡೆ ಚಿಪ್ಸ್‌ಗಳಲ್ಲಿ ಯಾವುದೇ ಕೊಬ್ಬಿನಾಂಶ, ಪರಿವರ್ತಿತ ಕೊಬ್ಬು, ಕೃತಕ ಬಣ್ಣ ಅಥವಾ ಸಂರಕ್ಷಕಗಳು, ಪಾಮೊಲಿನ್ ಎಣ್ಣೆ ಮತ್ತು ಗ್ಲುಟೆನ್ ಅನ್ನು ಬಳಸಲಾಗಿಲ್ಲ” ಎಂದೂ ಅವರು ತಿಳಿಸುತ್ತಾರೆ.

ಈ ನವೋದ್ಯಮವು ಕಿರು ವಾಹಿನಿ ಮಾದರಿಯ ಮೂಲಕ ಕಾರ್ಯಾಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಗ್ರಾಹಕರು ತಮ್ಮದೇ ಅಂತರ್ಜಾಲ ತಾಣ, ಇ-ಕಾಮರ್ಸ್/ಅತಿಯಾದ ಪ್ರಾದೇಶಿಕ ವಾಹಿನಿಗಳಾದ ಸ್ವಿಗ್ಗಿ ಇನ್ಸ್ಟಾಮಾರ್ಟ್, ಅಮೆಜಾನ್, ಬಿಗ್‍ಬ್ಯಾಸ್ಕೆಟ್, ಬ್ಲಿಂಕಿಟ್ (ಈ ಮೊದಲು ಗ್ರೋಫರ್ಸ್) ಇತ್ಯಾದಿಗಳ ಮೂಲಕ ಹಾಗೂ ಹಲವಾರು ಪ್ರತಿಷ್ಠಿತ ಅಂಗಡಿಗಳ ಮೂಲಕ ಖರೀದಿಸುವಂತೆ ಮಾಡುವತ್ತಲೂ ಗಮನ ಕೇಂದ್ರೀಕರಿಸಿದೆ.

“ನಾವು ನಮ್ಮ ಅಂತರ್ಜಾಲ ವೇದಿಕೆಯನ್ನೂ ಒಳಗೊಂಡಂತೆ 30ಕ್ಕಿಂತಲೂ ಹೆಚ್ಚು ಆನ್‍ಲೈನ್ ವೇದಿಕೆಗಳಲ್ಲಿ ಲಭ್ಯವಿದ್ದೇವೆ. ಅಲ್ಲದೆ, ದೇಶಾದ್ಯಂತ ಇರುವ ನೇಚರ್ಸ್ ಬ್ಯಾಸ್ಕೆಟ್, ಶೆಲ್ ಸೆಲೆಕ್ಟ್, ವೆಲ್‍ನೆಸ್ ಫಾರ್ ಎವರ್, ರತ್ನದೀಪ್‍ನಂತಹ ಪ್ರತಿಷ್ಠಿತ ಅಂಗಡಿಗಳಲ್ಲಿಯೂ ದೊರೆಯುತ್ತಿದ್ದೇವೆ” ಎಂದು ಅನೀಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಹಾಗೂ ಬೆಂಗಳೂರಿನೊಂದಿಗೆ ಪ್ರೀತಿ ಹೊಂದಿರುವರಾಗಿರುವ ಅನೀಶ್, ನೋಕಿಯಾ ಮತ್ತು ಕೋಕಾ ಕೋಲಾ ಸಂಸ್ಥೆಗಳಲ್ಲಿ ಏಷ್ಯಾದ್ಯಂತ ಹಲವಾರು ಮಾರಾಟ ಹಾಗೂ ಮಾರುಕಟ್ಟೆ ನಾಯಕತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಟ್ಯಾಗ್ಸ್ ಸಂಸ್ಥೆಯ ಸ್ಥಾಪನೆಗೂ ಮುನ್ನ ಅವರು ತಾಂತ್ರಿಕ ಚಾಲಿತವಾದ ಚಿಲ್ಲರೆ ವಿತರಣೆ ವೇದಿಕೆ ಶಾಟ್‍ನಾಗ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದರು. ಅಲ್ಲದೆ ಇವರು ಕೋವರ್ಕ್ಸ್ ಫೌಂಡ್ರಿ ಹಾಗೂ ಟೈ ಯೆ ಕಾರ್ಯಕ್ರಮಗಳ ಕ್ರಿಯಾಶೀಲ ಮುಖ್ಯಸ್ಥರೂ ಆಗಿದ್ದರು.

ಸಾಗರ್ ಭಲೋಟಿಯಾ ಬಾಂಬೆ ಐಐಟಿಯ ಪದವೀಧರರಾಗಿದ್ದು, ನವೋದ್ಯಮಗಳಾದ ಜೋವಿ.ಕಾಮ್, ಫ್ರೆಶ್‍ಮೆನು, ಹೆಲ್ತಿಫೈಮೀ, ಓಯೊ ಮತ್ತು ಕ್ವಿಕರ್‌ನಲ್ಲಿ ಏಳು ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಈ ಉತ್ಪನ್ನದ ಚಿಂತಕರಾಗಿದ್ದು, ಸಂಸ್ಥೆಯ ತಂಡದ ಪಾಲಿಗೆ ವಿನ್ಯಾಸಕ ಹಾಗೂ ಸೃಜನಶೀಲ ಆಸ್ತಿಯಾಗಿದ್ದಾರೆ.

ಇದನ್ನೂ ಓದಿ: ಮೂಲವ್ಯಾಧಿ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ರೆ ಇಲ್ಲಿದೆ ಪರಿಹಾರ

ಟ್ಯಾಗ್ಸ್‌ ಭಾರತದ 12 ಜಿಲ್ಲೆಗಳಲ್ಲಿ ಸ್ಥಾಪನೆಯಾಗಿದ್ದು, ಇತ್ತೀಚೆಗೆ ಸಂಯುಕ್ತ ಅರಬ್‍ ಸಂಸ್ಥಾನಗಳಿಗೆ ರಫ್ತು ಮಾಡಲು ಪ್ರಾರಂಭಿಸಿದೆ.
Published by:Sandhya M
First published: