Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI, ನಿಮ್ಮ ಆಧಾರ್ ದುರ್ಬಳಕೆ ಆಗುತ್ತಿದೆಯೇ ಎಂದು ಹೀಗೆ ಕಂಡುಹಿಡಿಯಿರಿ

ನಿಮ್ಮ ಇ-ಆಧಾರ್ ಕಾರ್ಡ್ ಅನ್ನು ಇಂಟರ್ನೆಟ್ ಕೆಫೆಯಿಂದ ಡೌನ್‌ಲೋಡ್ ಮಾಡಬೇಕಾದರೆ ಜಾಗರೂಕರಾಗಿರಿ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಎಚ್ಚರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಗಳಲ್ಲಿ ಇಂಟರ್ ನೆಟ್ (Internet) ಲಭ್ಯವಿದ್ದರೂ ಕೆಲವೊಮ್ಮೆ ನೆಟ್ ವರ್ಕ್ (Network) ಅಥವಾ ಇತರೆ ಸಮಸ್ಯೆಗಳಿಂದ ಇಂಟರ್ ನೆಟ್ ಕೆಫೆಗಳ ಮೊರೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ನಾವು ಕೆಫೆಯಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ಡೌನ್‌ಲೋಡ್ (Download) ಮಾಡುತ್ತೇವೆ. ಈ ಸಮಯದಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ವಿಶೇಷವಾಗಿ ನಿಮ್ಮ ಇ-ಆಧಾರ್ ಕಾರ್ಡ್ ಅನ್ನು ಇಂಟರ್ನೆಟ್ ಕೆಫೆಯಿಂದ ಡೌನ್‌ಲೋಡ್ ಮಾಡಬೇಕಾದರೆ ಜಾಗರೂಕರಾಗಿರಿ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಎಚ್ಚರಿಸಿದೆ. ಹೌದು, UIDAI ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಎಲ್ಲಾ ಆಧಾರ್ ಕಾರ್ಡ್ (Aadhar Card) ಹೊಂದಿರುವವರಿಗೆ ಈ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಸಾರ್ವಜನಿಕ ಕಂಪ್ಯೂಟರ್‌ನಿಂದ ಇ-ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ ಎಂದು ತಿಳಿಸಿದೆ.

ಈ ವಿಷಯದಲ್ಲಿ ಎಚ್ಚರದಿಂದಿರಿ:

ಈ ರೀತಿ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಯಾವುದೇ ಸಾರ್ವಜನಿಕ ಗ್ಯಾಜೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅದನ್ನು ಕದಿಯಲು ಮತ್ತು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಈ ರೀತಿ ಇ- ಆಧಾರ್ ಡೌನ್​ಲೌಡ್ ಮಾಡುವುದು ತುಂಬಾ ಅಪಾಯಕಾರಿ. ಸಾರ್ವಜನಿಕ ಕಂಪ್ಯೂಟರ್‌ನಿಂದ ಇ-ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಯಾವುದೇ ಆಯ್ಕೆ ಇಲ್ಲದಿದ್ದರೆ, ಡೌನ್‌ಲೋಡ್ ಮಾಡಿದ ಎಲ್ಲಾ ಪ್ರತಿಗಳನ್ನು ಅಳಿಸಲು ಸಹ ಸಲಹೆ ನೀಡಲಾಗುತ್ತದೆ. ಆಧಾರ್ ಕಾರ್ಡ್ ಕಾರ್ಡ್‌ದಾರರ ಹೆಸರು, ಗಂಡ ಅಥವಾ ತಂದೆಯ ಹೆಸರು ಮತ್ತು ಬೆರಳಚ್ಚುಗಳನ್ನು ಒಳಗೊಂಡಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ ಯುಐಡಿಎಐ ಮಹತ್ವದ ಟ್ವೀಟ್ ಮಾಡಿದೆ.





ವಂಚಕರ ಬಗ್ಗೆ ಎಚ್ಚರ:

ಈ ಕುರಿತು ಯುಐಡಿಎಐ ಟ್ವೀಟ್‌ ಮಾಡಿದ್ದು, ‘ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ದಯವಿಟ್ಟು ಸಾರ್ವಜನಿಕ ಕಂಪ್ಯೂಟರ್, ಇಂಟರ್ನೆಟ್ ಕೆಫೆ ಅಥವಾ ಕಿಯೋಸ್ಕ್‌ ಗಳನ್ನು ಬಳಸಬೇಡಿ. ಆದಾಗ್ಯೂ, ಸಾರ್ವಜನಿಕ ಕಂಪ್ಯೂಟರ್ ಬಳಸುವ ಸಮಯವಿದ್ದರೆ, ದಯವಿಟ್ಟು ಡೌನ್‌ಲೋಡ್ ಮಾಡಿದ ಎಲ್ಲಾ ಪ್ರತಿಗಳನ್ನು ಅಳಿಸಿ‘ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: PAN ಮತ್ತು Aadhaar Card ಲಿಂಕ್ ಮಾಡಲು ಸಮಸ್ಯೆ ಆಗ್ತಿದೆಯಾ? ಕಾರಣ ತಿಳಿದುಕೊಳ್ಳಿ

ಆಧಾರ್ ದುರ್ಬಳಕೆ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ?:

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೇ ಎಂಬುದನ್ನು ನೀವು ಕಂಡುಹಿಡಿಯಬಹುದು. ಹೌದು, ಆಧಾರ್ ದುರ್ಬಳಕೆಯನ್ನು ಹೀಗಿ ಕಂಡುಹಿಡಿಯಬಹುದು. ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಮೊದಲು UIDAI ವೆಬ್‌ಸೈಟ್ https://uidai.gov.in/ ಗೆ ಹೋಗಿ
2. ಈಗ ಕೆಳಭಾಗದಲ್ಲಿರುವ ಆಧಾರ್ ಸೇವೆಗಳ ಮೇಲೆ ಕ್ಲಿಕ್ ಮಾಡಿ
3. ನಂತರ ನಿಮ್ಮ ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ
4. ಹೊಸ ಪುಟದ ಕೆಳಭಾಗದಲ್ಲಿ ದೃಢೀಕರಣ ಇತಿಹಾಸ ಆಯ್ಕೆಯು ಗೋಚರಿಸುತ್ತದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿ
5. ನೀವು ದೃಢೀಕರಣ ಇತಿಹಾಸ ಪುಟಕ್ಕೆ ಬಂದಾಗ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ
6. ಈಗ Send OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈಗ 6 ಅಂಕೆಗಳ OTP ಅನ್ನು ಸ್ವೀಕರಿಸುತ್ತಿರಿ
7. ಈ 6 ಅಂಕಿಯ OTP ಅನ್ನು ನಮೂದಿಸಿದ ನಂತರ, ಸಬ್​ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ನಿಮ್ಮ Aadhar Card ಅಸಲಿಯೋ? ನಕಲಿಯೋ? ಮನೆಯಲ್ಲಿ ಕುಳಿತು ಹೀಗೆ ಚೆಕ್ ಮಾಡ್ಕೊಳ್ಳಿ

ಈಗ ನೀವು ವೀಕ್ಷಿಸಲು ಬಯಸುವ ದಿನಗಳ ಇತಿಹಾಸದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ವೆರಿಫೈ OTP ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಆಧಾರ್ ಕಾರ್ಡ್‌ನ ಹಿಂದಿನ ದೃಢೀಕರಣ ಇತಿಹಾಸವನ್ನು ನಿಮ್ಮ ಪರದೆಯ ಮೇಲೆ ತರುತ್ತದೆ. ಕಳೆದ ಆರು ತಿಂಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲಿ ಮತ್ತು ಯಾವಾಗ ಬಳಸಲಾಗಿದೆ ಎಂಬುದನ್ನು ಈ ಮಾಹಿತಿಯು ನಿಮಗೆ ತಿಳಿಸುತ್ತದೆ.

ನಿಮ್ಮನ್ನು ಗುರುತಿಸಲು ನೀಡಿದ ಪ್ರಮುಖ ದಾಖಲೆಗಳಲ್ಲಿ ಒಂದು:

ನಿಮ್ಮ ಗುರುತನ್ನು ಸಾಬೀತುಪಡಿಸುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಇದು ಎಲ್ಲಾ ಭಾರತೀಯ ನಾಗರಿಕರಿಗೆ UIDAI ನೀಡಿದ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಆಧಾರ್ ಕಾಯಿದೆಯಡಿಯಲ್ಲಿ, ಇ-ಆಧಾರ್ ಅನ್ನು ಆಧಾರ್ ಕಾರ್ಡ್‌ನ ನೇರ ಪ್ರತಿ ಎಂದು ಗುರುತಿಸಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ.
Published by:shrikrishna bhat
First published: