Bank Holidays in October: ಬ್ಯಾಂಕ್ ರಜಾದಿನ 2021: ಈ ವಾರ 5 ದಿನ ಬ್ಯಾಂಕ್‌ಗಳಿಗೆ ರಜಾದಿನ

Bank holidays this week: ನೀವು ಈ ವಾರ ಯಾವುದೇ ಸಮಯದಲ್ಲಿ ಬ್ಯಾಂಕ್ ಶಾಖೆಗಳನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೆ, ಈ ರಜಾದಿನಗಳನ್ನು ಗಮನಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಶಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಈ ವಾರದ ಏಳು ದಿನಗಳಲ್ಲಿ ಐದು ದಿನಗಳ ಕಾಲ ಮುಚ್ಚಲ್ಪಡುತ್ತವೆ. ದುರ್ಗಾ ಪೂಜೆ, ನವರಾತ್ರಿ ಮತ್ತು ದಸರಾ ಸೇರಿದಂತೆ ವಿವಿಧ ಹಬ್ಬಗಳನ್ನು ಆಚರಿಸಲು, ಸಾಲ ನೀಡುವವರು ಅಕ್ಟೋಬರ್‍ನಲ್ಲಿ ಕನಿಷ್ಠ 21 ದಿನಗಳ ಕಾಲ ಮುಚ್ಚಿರುತ್ತಾರೆ. ನೀವು ಈ ವಾರ ಯಾವುದೇ ಸಮಯದಲ್ಲಿ ಬ್ಯಾಂಕ್ ಶಾಖೆಗಳನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೆ, ಈ ರಜಾದಿನಗಳನ್ನು ಗಮನಿಸಬೇಕು.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂರು ಬ್ರಾಕೆಟ್ಗಳ ಅಡಿಯಲ್ಲಿ ಸಾಲ ನೀಡುವವರಿಗೆ ರಜಾದಿನಗಳನ್ನು ಸೂಚಿಸಿದೆ. ಅದರಲ್ಲಿ ಒಂದು ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ (Negotiable Instruments Act), ಹಾಲಿಡೇ, ಎರಡನೇಯದು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ (Real time Gross Settlement Holiday) ಮತ್ತು ಮೂರನೇಯದು ಬ್ಯಾಂಕುಗಳ ಅಕೌಂಟ್ಸ್ ಕ್ಲೋಸಿಂಗ್ (Bank Accounts Closing). ದೇಶಾದ್ಯಂತ ಸಾರ್ವಜನಿಕ ವಲಯ (Public Sector Banks), ಖಾಸಗಿ ವಲಯ (Private Sector Banks), ವಿದೇಶಿ ಬ್ಯಾಂಕುಗಳು (Foreign Banks), ಸಹಕಾರಿ ಬ್ಯಾಂಕುಗಳು (Cooperative Banks) ಮತ್ತು ಪ್ರಾದೇಶಿಕ ಬ್ಯಾಂಕುಗಳು (Regional Banks) ಸೇರಿದಂತೆ ಎಲ್ಲಾ ಬ್ಯಾಂಕುಗಳು ಈ ಅಧಿಸೂಚಿತ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಪಟ್ಟಿಯ ಪ್ರಕಾರ, ಎಲ್ಲಾ ಬ್ಯಾಂಕ್‍ಗಳು ಗಣರಾಜ್ಯ ದಿನ (Republic Day) (ಜನವರಿ 26), ಸ್ವಾತಂತ್ರ್ಯ ದಿನ (Independence Day) (ಆಗಸ್ಟ್ 15) ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್‍ಮಸ್ ದಿನ (ಡಿಸೆಂಬರ್ 25) ಮುಚ್ಚಿರುತ್ತವೆ. ದೀಪಾವಳಿ, ಕ್ರಿಸ್ಮಸ್, ಈದ್, ಗುರುನಾನಕ್ ಜಯಂತಿ, ಶುಭ ಶುಕ್ರವಾರ ಸೇರಿದಂತೆ ಹಬ್ಬಗಳಲ್ಲಿ ಬ್ಯಾಂಕ್‍ಗಳು ಮುಚ್ಚಿರುತ್ತವೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು, ದೇಶಾದ್ಯಂತ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಮುಚ್ಚಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಕೂಡ ಭಾನುವಾರ ಬ್ಯಾಂಕ್‍ಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಿದೆ.

    ಆದಾಗ್ಯೂ, ಬ್ಯಾಂಕ್ ರಜಾದಿನಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತವೆ. ಬ್ಯಾಂಕ್ ರಜಾದಿನಗಳು ನಿಮ್ಮ ರಾಜ್ಯದ ಎಲ್ಲಾ ದಿನಗಳಲ್ಲಿ ಅನ್ವಯಿಸುವುದಿಲ್ಲ. ಆದ್ದರಿಂದ, ಬ್ಯಾಂಕ್ ಗ್ರಾಹಕರಿಗೆ ಸಾಮಾನ್ಯವಾಗಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯ ಬಗ್ಗೆ ತಿಳಿಯಲು ಹತ್ತಿರದ ಶಾಖೆಗೆ ಭೇಟಿ ನೀಡುವಂತೆ ಸೂಚಿಸಲಾಗುತ್ತದೆ.

    ಅಕ್ಟೋಬರ್ 11, 2021 ರಿಂದ ಪ್ರಾರಂಭವಾಗುವ ಅಕ್ಟೋಬರ್‍ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

    1. ಅಕ್ಟೋಬರ್ 19-Id-E-Milad/Eid-e-Miladunnabi/Milad-i-Sherif ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ/ಬರವಫತ್/(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ , ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‍ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ)

    2. ಅಕ್ಟೋಬರ್ 20-ಮಹರ್ಷಿ ವಾಲ್ಮೀಕಿ ಜನ್ಮದಿನ/ಲಕ್ಷ್ಮಿ ಪೂಜೆ/ಐಡಿ-ಇ-ಮಿಲಾದ್ (ಅಗರ್ತಲಾ, ಬೆಂಗಳೂರು, ಚಂಡೀಗರ್, ಕೋಲ್ಕತಾ, ಶಿಮ್ಲಾ)

    3. ಅಕ್ಟೋಬರ್ 22-ಶುಕ್ರವಾರ ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)

    4. ಅಕ್ಟೋಬರ್ 23 - 4ನೇ ಶನಿವಾರ

    5. ಅಕ್ಟೋಬರ್ 24 - ಭಾನುವಾರ

    6. ಅಕ್ಟೋಬರ್ 26 - ಪ್ರವೇಶ ದಿನ (ಜಮ್ಮು, ಶ್ರೀನಗರ)

    7. ಅಕ್ಟೋಬರ್ 31 - ಭಾನುವಾರ


    ಹಾಗಾಗಿ, ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸ ಬಾಕಿಯಿದ್ದರೆ ಅಥವಾ ಹಬ್ಬ ಪ್ರಾರಂಭವಾಗುವ ಮೊದಲು ನೀವು ನಗದು ಹಿಂಪಡೆಯಲು ಬಯಸಿದರೆ ಮೊದಲೇ ಪಡೆದುಕೊಳ್ಳಬೇಕು. ಏಕೆಂದರೆ ಅಕ್ಟೋಬರ್ 19 ರಿಂದ 24ರವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಆದಾಗ್ಯೂ, ಮೇಲೆ ತಿಳಿಸಿದ ಬ್ಯಾಂಕ್ ರಜಾದಿನಗಳಲ್ಲಿ ಎಟಿಎಂಗಳು ಯಾವುದೇ ಅಡಚಣೆಯಿಲ್ಲದೆ ಕೆಲಸ ಮಾಡುತ್ತವೆ.
    Published by:Sharath Sharma Kalagaru
    First published: