Bank Holidays in January: ಜನವರಿ ತಿಂಗಳಲ್ಲಿ ಬರೋಬ್ಬರಿ 16 ದಿನ ರಜೆ

ಜನವರಿ 2022 ರಲ್ಲಿ ದೇಶಾದ್ಯಂತ ಬ್ಯಾಂಕುಗಳು (Banks holiday) 16 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಈ ರಜೆಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರ (Saturday And Sunday)ಗಳನ್ನು ಒಳಗೊಂಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನವರಿ 2022 ರಲ್ಲಿ ದೇಶಾದ್ಯಂತ ಬ್ಯಾಂಕುಗಳು (Banks holiday) 16 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಈ ರಜೆಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರ (Saturday And Sunday)ಗಳನ್ನು ಒಳಗೊಂಡಿವೆ. ವಾರದ ರಜೆಗಳ ಹೊರತಾಗಿ, ಇತರ ರಜಾದಿನಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳು (Banks) ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank Of India) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಅಗರ್ತಲಾ, ಭೋಪಾಲ್, ಭುವನೇಶ್ವರ್, ಚಂಡೀಗಢ, ಗುವಾಹಟಿ, ಕೊಚ್ಚಿ ಮತ್ತು ಶ್ರೀನಗರದ ಬ್ಯಾಂಕ್‌ಗಳು ಗಣರಾಜ್ಯೋತ್ಸವದಂದು (January 26 Republic Day) ತೆರೆದಿರುತ್ತವೆ.

RBI ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ: ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿ ಡೇ, ಮತ್ತು ಬ್ಯಾಂಕ್ಗಳ ಖಾತೆಗಳನ್ನು ಮುಚ್ಚುವುದು. RBI ಈ ಕೆಳಗಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ:  Business Idea: ಕೇವಲ 15 ಸಾವಿರ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 1 ಲಕ್ಷಕ್ಕೂ ಅಧಿಕ

ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳು

01 ಜನವರಿ 2022: ಹೊಸ ವರ್ಷದ ದಿನ

03 ಜನವರಿ 2022: ಹೊಸ ವರ್ಷದ ಆಚರಣೆ/ಲೋಸೂಂಗ್

04 ಜನವರಿ 2022: ಲೋಸೂಂಗ್

11 ಜನವರಿ 2022: ಮಿಷನರಿ ದಿನ

12 ಜನವರಿ 2022: ಸ್ವಾಮಿ ವಿವೇಕಾನಂದರ ಜನ್ಮದಿನ

14 ಜನವರಿ 2022: ಮಕರ ಸಂಕ್ರಾಂತಿ/ಪೊಂಗಲ್

15 ಜನವರಿ 2022: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ ಮಾಘೆ ಸಂಕ್ರಾಂತಿ/ ಸಂಕ್ರಾಂತಿ/ ಪೊಂಗಲ್/ ತಿರುವಳ್ಳುವರ್ ದಿನ

18 ಜನವರಿ 2022: ಥಾಯ್ ಪೂಸಂ

26 ಜನವರಿ 2022: ಗಣರಾಜ್ಯೋತ್ಸವ

ಜನವರಿ 1, 2022 ರಂದು ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹೊಸ ವರ್ಷದ ಹಬ್ಬ ಅಥವಾ ಲೊಸೂಂಗ್ ಸಂದರ್ಭದಲ್ಲಿ, ಜನವರಿ 3, 2022 ರಂದು ಐಜ್ವಾಲ್ ಮತ್ತು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಸೋಮವಾರ ಮುಚ್ಚಲಾಗುತ್ತದೆ.

ಇದನ್ನೂ ಓದಿ:  ಮಗಳ ಮದುವೆಗೆ 7 ವರ್ಷಗಳಲ್ಲಿ 50 ಲಕ್ಷ ರೂಪಾಯಿ ಸಿದ್ಧಪಡಿಸಿಕೊಳ್ಳಿ: ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಲೋಸೂಂಗ್ ಅನ್ನು ಗುರುತಿಸಲು ಗ್ಯಾಂಗ್‌ಟಾಕ್‌ನಲ್ಲಿನ ಬ್ಯಾಂಕ್‌ಗಳನ್ನು ಜನವರಿ 4, 2022 ರಂದು ಮುಚ್ಚಲಾಗುತ್ತದೆ. ಜನವರಿ 11, 2022 ರಂದು, ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಸಂದರ್ಭದಲ್ಲಿ ಕೋಲ್ಕತ್ತಾದ ಬ್ಯಾಂಕ್‌ಗಳು ಜನವರಿ 12 ರಂದು ಮುಚ್ಚಲ್ಪಡುತ್ತವೆ.

ಜನವರಿ 2022 ರಲ್ಲಿ ವಾರಾಂತ್ಯದ ರಜಾದಿನಗಳು

02 ಜನವರಿ 2022: ಸಾಪ್ತಾಹಿಕ ರಜೆ (ಭಾನುವಾರ)

08 ಜನವರಿ 2022: ಎರಡನೇ ಶನಿವಾರ

09 ಜನವರಿ 2022: ಸಾಪ್ತಾಹಿಕ ರಜೆ (ಭಾನುವಾರ)

16 ಜನವರಿ 2022: ಸಾಪ್ತಾಹಿಕ ರಜೆ (ಭಾನುವಾರ)

22 ಜನವರಿ 2022: ನಾಲ್ಕನೇ ಶನಿವಾರ

23 ಜನವರಿ 2022: ಸಾಪ್ತಾಹಿಕ ರಜೆ (ಭಾನುವಾರ)

30 ಜನವರಿ 2022: ಸಾಪ್ತಾಹಿಕ ರಜೆ (ಭಾನುವಾರ)

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.

ಒಂದು ವೇಳೆ ನೀವು ಬ್ಯಾಂಕ್ ಸಂಬಂಧಿಸಿದ ಕೆಲಸಗಳಿಗೆ ಮುಂದಿನ ವಾರ ಬ್ಯಾಂಕ್‍ಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರೆ, ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ನಿಮ್ಮ ರಾಜ್ಯದ ಬ್ಯಾಂಕ್ ರಜಾ ದಿನಗಳ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ. ಈ ಎಲ್ಲಾ ರಜೆಗಳ ಹೊರತಾಗಿ, ಎಟಿಎಂಗಳು ಎಲ್ಲಾ ದಿನಗಳಲ್ಲಿ ಕಾರ್ಯ ನಿರ್ವಹಿಸಲಿವೆ.
Published by:Mahmadrafik K
First published: