ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (Public Sector Bank) ಹರಾಜು ಪ್ರಕ್ರಿಯೆಯನ್ನು (Auction) ನಡೆಸುತ್ತವೆ ಮತ್ತು ಈ ಹರಾಜು ಪ್ರಕ್ರಿಯೆಯಲ್ಲಿ ಅತೀ ಕಡಿಮೆ ದರಕ್ಕೆ ಅಥವಾ ರಿಯಾಯಿತಿ ದರದಲ್ಲಿ ಆಸ್ತಿ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ಜನ ಕೂಡ ಈ ಹರಾಜನ್ನು ಎದುರು ನೋಡುತ್ತಿರುತ್ತಾರೆ. ಆಸ್ತಿಯ ಮೇಲೆ ಸಾಲ ಪಡೆದು ಸಾಲವನ್ನು ಮರುಪಾವತಿ ಮಾಡದಿದ್ದರೆ ಸಾಮಾನ್ಯವಾಗಿ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವಾಹನದ ಮೇಲೆ, ಚಿನ್ನದ ಸಾಲ ಹೀಗೆ ಇವುಗಳ ಮೇಲೆ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡದಿದ್ದರೆ, ಅಂತಹವರ ಆಸ್ತಿ (Property), ವಾಹನವನ್ನು ಬ್ಯಾಂಕ್ ಸಂಪೂರ್ಣ ತನ್ನ ಸುಪರ್ದಿಗೆ ತೆಗೆದುಕೊಂಡು ಅವುಗಳನ್ನು ಸಾರ್ವಜನಿಕರಿಗೆ ಸ್ವಲ್ಪ ಕಡಿಮೆ ಬೆಲೆಯಲ್ಲಿ ಹರಾಜು ಮಾಡುತ್ತದೆ.
5 ಲಕ್ಷ ಮನೆಗಳ ಹರಾಜಿಗೆ ಬ್ಯಾಂಕ್‌ಗಳು ಸಜ್ಜು
ಪ್ರಸ್ತುತ ಭಾರತದಲ್ಲಿನ ಸಾರ್ವಜನಿಕ ವಲಯದ ಬ್ಯಾಂಕುಗಳು ಇ-ಹರಾಜು ಆ್ಯಪ್ ಅನ್ನು ಆರಂಭ ಮಾಡಲು ಸಜ್ಜಾಗಿದೆ. ಇ-ಹರಾಜು ಆ್ಯಪ್ನಲ್ಲಿ ಸುಮಾರು 5 ಲಕ್ಷ ಮನೆಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ನೀವು ಈ ಆ್ಯಪ್ನಲ್ಲಿ ಆಸ್ತಿ ಇರುವ ಸ್ಥಳ, ಆರಂಭಿಕ ಹರಾಜು ಮೊತ್ತದ ವಿವರ, ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಖರೀದಿದಾರರು ಏಕಕಾಲದಲ್ಲಿಯೇ ಈ ಆ್ಯಪ್ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಈ ಕ್ರಮವು ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಂದರ್ಭದಲ್ಲಿ ಆಸ್ತಿ ವಂಚನೆಯಂತಹ ಪ್ರಕರಣಗಳನ್ನು ತಪ್ಪಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಪ್ರತಿ ಮನೆಯಲ್ಲೂ ಇದು ಇರಲೇಬೇಕು, ಈ ಬ್ಯುಸಿನೆಸ್ ಆರಂಭಿಸಿದ್ರೆ ಕೈ ತುಂಬಾ ಕಾಸು!
ಏನಿದು ಬ್ಯಾಂಕ್‌ಗಳ ಹರಾಜು ಪ್ರಕ್ರಿಯೆ?
ಈ ಆ್ಯಪ್, ಮೇಲೆ ಹೇಳಿದಂತೆ ಹರಾಜಿಗೆ ಲಭ್ಯವಿರುವ ಐದು ಲಕ್ಷದವರೆಗಿನ ಆಸ್ತಿಗಳನ್ನು ಒಳಗೊಂಡಿರುತ್ತದೆ. ಗೃಹ ಸಾಲ ಅಥವಾ ಮನೆಯನ್ನು ಅಡಮಾನ ಇಟ್ಟು ಸಾಲ ಪಡೆದು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದವರಿಂದ ವಶಕ್ಕೆ ಪಡೆದಿರುವ ಮನೆಗಳು, ಆಸ್ತಿಗಳು ಇದಾಗಿರುತ್ತದೆ.
ಇ-ಹರಾಜು ಆ್ಯಪ್ನಲ್ಲಿ ಆಸ್ತಿಗಳನ್ನು ಹರಾಜು ಮಾಡುವ ಮೂಲಕ ಈ ಸಾಲದ ಮೊತ್ತವನ್ನು ಮರುಪಡೆಯಲು ಸರ್ಕಾರಿ ಬ್ಯಾಂಕುಗಳು ಯೋಜನೆ ಹಾಕಿಕೊಂಡಿವೆ.
ಅಪ್ಲಿಕೇಶನ್ ಲಾಗಿನ್ ಮಾಡಿದರೆ ಮಾಹಿತಿ ಲಭ್ಯ
ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಹರಾಜು ಸೇರಿದಂತೆ 6 ಲಕ್ಷ ವಹಿವಾಟು ನಡೆಯಬಹುದು ಎಂದು ಹಿರಿಯ ಬ್ಯಾಂಕ್ ಅಧಿಕಾರಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ.
ಅಪ್ಲಿಕೇಶನ್ ಅಥವಾ ವೆಬ್ ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ, ಬಳಕೆದಾರರು ಆಸ್ತಿ-ಸಂಬಂಧಿತ ಡೇಟಾ, ಡಾಕ್ಯುಮೆಂಟ್‌ಗಳು ಮತ್ತು ಮಾಹಿತಿಯನ್ನು ಪ್ರವೇಶಿಸಬಹುದು. ಆಪ್ ಆರಂಭವಾದ ಬಳಿಕ ಹರಾಜಿಗೆ ಇರುವ ಮನೆಯ ವಿವರವನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ತಿಳಿಯಬಹುದಾಗಿದೆ.
ವಂಚನೆ ತಪ್ಪಿಸಬಹುದು ಮತ್ತು ಕಡಿಮೆ ದರದಲ್ಲಿ ಆಸ್ತಿ ಲಭ್ಯ
ಬ್ಯಾಂಕ್ ಹರಾಜಿನಲ್ಲಿ ಆಸ್ತಿ ಖರೀದಿ ಮಾಡುವುದರಿಂದ ನಮಗೆ ಅತೀ ಕಡಿಮೆ ದರದಲ್ಲಿ ಆಸ್ತಿಯು ಲಭ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಹರಾಜನ್ನು ಪ್ರತಿವರ್ಷ ನಿರೀಕ್ಷಿಸುತ್ತಾರೆ.
ಮತ್ತೊಂದು ಎಂದರೆ ವಂಚನೆಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇಲ್ಲಿ ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಆಸ್ತಿ ಮೇಲೆ ಸಾಲವನ್ನು ನೀಡುವಾಗ ಆಸ್ತಿಯ ಸಂಪೂರ್ಣ ಪರಿಶೀಲನೆ ನಡೆಸಿರುತ್ತದೆ. ಆದ್ದರಿಂದಾಗಿ ಆ ಆಸ್ತಿಯನ್ನು ಹರಾಜಿನಲ್ಲಿ ಖರೀದಿ ಮಾಡುವಾಗ ಹೆಚ್ಚಿನ ಆತಂಕ ಇರುವುದಿಲ್ಲ. ಮೋಸ ಆಗಬಹುದು ಎಂಬ ಗೊಂದಲಗಳು ಗ್ರಾಹಕರಿಗೆ ಕಡಿಮೆ ಆಗಿರುತ್ತದೆ.
ಖರೀದಿದಾರರು ಮತ್ತು ಮಾರಾಟಗಾರರಿಗೆ ರಿಯಲ್ ಎಸ್ಟೇಟ್ ವಹಿವಾಟಿನ ದಕ್ಷತೆಯನ್ನು ಸುಧಾರಿಸುತ್ತದೆ. ಒಟ್ಟಾರೆ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಅಪ್ಲಿಕೇಶನ್ ಕೊಡುಗೆ ನೀಡುತ್ತದೆ.
ಭಾರತದಲ್ಲಿ ಆಸ್ತಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ತಂತ್ರಜ್ಞಾನವನ್ನು ಬಳಸುವ ವಿಷಯದಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳ ಅಗ್ರಗಣ್ಯ ಸ್ಥಾನದಲ್ಲಿವೆ. ನೀವು ಕೂಡ ಈ ಆಸ್ತಿಯನ್ನು ಖರೀದಿ ಮಾಡಲು ಬಯಸಿದರೆ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ