Brahmin Cookies: ಬ್ರಾಹ್ಮಣರ ರೂಪದಲ್ಲಿ ಬಂತು ಬಿಸ್ಕೆಟ್​, ಭುಗಿಲೆದ್ದ ವಿವಾದ!

ವಿವಾದಕ್ಕೆ ಕಾರಣವಾದ ಬಿಸ್ಕೆಟ್​

ವಿವಾದಕ್ಕೆ ಕಾರಣವಾದ ಬಿಸ್ಕೆಟ್​

ಇದೀಗ ಯಾಕಪ್ಪ ಮತ್ತೆ ಬ್ರಾಹ್ಮಣ್ಯ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ಕನ್ಫೂಸ್ ಆಗಬೇಡಿ. ಅದಕ್ಕೂ ಒಂದು ಕಾರಣವಿದೆ. ಈ ಮೇಲೆ ಕಾಣಿಸುತ್ತಿರುವ ಬಿಸ್ಕೆಟ್ (Biscuit)​ ಚಿತ್ರವನ್ನು ನೋಡಿ.

  • Share this:

ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣರ (Brahmin)  ವಿರುದ್ಧ ಅನಾವಶ್ಯಕವಾಗಿ ಕೆಲವರು ಕೆಲವೊಂದು ವಿವಾದಾತ್ಮಕ (Controversy) ಹೇಳಿಕೆ ನೀಡುತ್ತಿದ್ದಾರೆ ಅಂತ ಹಲವರು ಆರೋಪಿಸುತ್ತಿದ್ದಾರೆ. ಸಿನಿಮಾ (Movie) ಗಳಲ್ಲಂತೂ ಬ್ರಾಹ್ಮಣರು ಅಂದರೆ ಕೇವಲ ಪೂಜೆ (Pooja) ಮಾಡುವುದಷ್ಟೇ ಎಂದು ಬಿಂಬಿಸಿದ್ದಾರಂತೆ. ಧ್ರುವ ಸರ್ಜಾ (Dhruva Sarja) ಅಭಿನಯದ ಪೊಗರು (Pogaru) ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಅಂತ ಕೆಲವೊಂದಿಷ್ಟು ಜನ ಪ್ರತಿಭಟನೆ ಕೂಡ ಮಾಡಿದ್ದರು. ಕೊನೆಗೆ ಬ್ರಾಹ್ಮಣರ ಸಂಘದವರು ಸಿನಿಮಾ ತಂಡದವರಿಗೆ 18 ಸೀನ್​ಗಳನ್ನು ಕಟ್​ ಮಾಡಿದರೆ ಮಾತ್ರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದನ್ನು ಎಲ್ಲರೂ ಕೇಳಿದ್ದೇವೆ. ಇದೀಗ ಯಾಕಪ್ಪ ಮತ್ತೆ ಬ್ರಾಹ್ಮಣ್ಯ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ಕನ್ಫೂಸ್ ಆಗಬೇಡಿ. ಅದಕ್ಕೂ ಒಂದು ಕಾರಣವಿದೆ. ಈ ಮೇಲೆ ಕಾಣಿಸುತ್ತಿರುವ ಬಿಸ್ಕೆಟ್ (Biscuit)​ ಚಿತ್ರವನ್ನು ನೋಡಿ.


ವಿವಾದ ಸೃಷ್ಟಿಸಿ 'ಬ್ರಾಹ್ಮಣರ ಬಿಸ್ಕೆಟ್'!


ನಮ್ಮ ದೇಶ ಅಭಿವೃದ್ಧಿ ಕಾಣುತ್ತಿದೆ. ಆದರೆ ಬಡವರು ಬಡವಾರಿಗಿಯೇ ಉಳಿದಿದ್ದಾರೆ. ಜಾತಿ, ಧರ್ಮದ ದ್ವೇಷ ಒಂದೇ. ಅಲ್ಲದೇ ಅವರನ್ನು ಬಳಸಿಕೊಂಡು  ಜನರನ್ನು ಕೆರಳಿಸಿ ಹಣ ಗಳಿಸಲು ಯತ್ನಿಸುವವರೂ ಇದ್ದಾರೆ. ವಿಶೇಷವಾಗಿ ಹಿಂದೂ ಧರ್ಮ ಮತ್ತು ಜಾತಿಯ ಮೇಲೆ ಇಂತಹ ದಾಳಿಗಳ ಘಟನೆಗಳನ್ನು ನಾವು ನೋಡುತ್ತಿದ್ದೇವೆ.


ಇತ್ತೀಚೆಗೆ ಬೇಕಿಂಗ್ ಸ್ಟುಡಿಯೋ  ಖಾಸಗಿ ಸಮಾರಂಭಕ್ಕಾಗಿ ಬ್ರಾಹ್ಮಣ ಬಿಸ್ಕೆಟ್​ಗಳನ್ನು  ತಯಾರಿಸಿದೆ. ಆ ಕುಕೀಗಳಲ್ಲಿ ಬ್ರಾಹ್ಮಣರು ಜನಿವಾರವನ್ನು ಧರಿಸಿರುವಂತೆಯೂ ಕಾಣುತ್ತದೆ. ವಿಶೇಷ ಸಂದರ್ಭಗಳಲ್ಲಿ ಅವರು ಇದೇ ರೀತಿಯ ಕುಕೀಗಳನ್ನು ತಯಾರಿಸುತ್ತಾರೆ ಎಂದು ಕಂಪನಿ ಹೇಳಿದೆ. ಈ ಬಿಸ್ಕೆಟ್​ ವಿಚಾರ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.



ಇದನ್ನೂ ಓದಿ: ಪೇಟಿಎಂ ಮೂಲಕ ಗ್ರಾಹಕರು ಎಫ್​​ಡಿ ಹಣವನ್ನು ಬಳಸಿಕೊಳ್ಬಹುದು! ಹೇಗೆ ಗೊತ್ತಾ?


ಬಿಸ್ಕೆಟ್​ ತಯಾರಿಸಿದವರ ವಿರುದ್ಧ ಆಕ್ರೋಶ!


ಖಾಸಗಿ ಸಮಾರಂಭಕ್ಕೆ ಇವುಗಳನ್ನು ಸಿದ್ಧಪಡಿಸಿದ್ದರೂ ಜಾತಿಗೆ ಸಂಬಂಧಿಸಿದ್ದರಿಂದ ದೊಡ್ಡ ಗಲಾಟೆಯೇ ಎದ್ದಿತ್ತು. ನೆಟಿಜನ್‌ಗಳು ಟ್ವಿಟರ್‌ನಲ್ಲಿ ಹರಿಹಾಯ್ದಿದ್ದಾರೆ. "ಜಾತಿ ಪ್ರಾಬಲ್ಯವನ್ನು ತೋರಿಸಲು ಅವರು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ" ಎಂದು ಒಬ್ಬರು ಬಳಕೆದಾರ ಆಕ್ಷೇಪಿಸಿದರು. ಇನ್ನೂ ಈ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



ಬೇಕಿಂಗ್ ಸ್ಟುಡಿಯೋ ವಿರುದ್ಧ ಆಕ್ರೋಶ!


ಈ ರೀತಿಯ ಬಿಸ್ಕೆಟ್​ಗಳನ್ನು ತಯಾರಿಸಿದ ಬೇಕಿಂಗ್ ಸ್ಟುಡಿಯೋ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ರೀತಿಯ ಬಿಸ್ಕೆಟ್​ಗಳನ್ನು ಉಪನಯನ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಲು ಮಾಡಿಸಿರುವುದು ಮೂಲಗಳಿಂದ ತಿಳಿದುಬಂದಿದೆ. ಈ ರೀತಿ ಬ್ರಾಹ್ಮಣರೇ ಬಿಸ್ಕೆಟ್​ ಮಾಡಿಸಿರುವುದರಿಂದ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಈ ರೀತಿ ಜಾತಿಯನ್ನು ಮಧ್ಯೆ ತಂದು ದುಡ್ಡು ಮಾಡುವುದು ಎಷ್ಟು ಸರಿ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ.



ಪ್ಯೂರ್​ ವೆಜ್ ಹ್ಯಾಷ್​ಟ್ಯಾಗ್​​ ಟ್ರೆಂಡಿಂಗ್!


ಇತ್ತೀಚೆಗಷ್ಟೇ ಇದೇ ರೀತಿಯ ಮತ್ತೊಂದು ವಿವಾದ ಭುಗಿಲೆದ್ದಿದೆ. ಪ್ಯೂರ್-ವೆಜ್ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ರೆಸ್ಟೋರೆಂಟ್‌ಗಳು ಪ್ಯೂರ್​ ವೆಜ್​ ಸಂದೇಶಗಳನ್ನು ಪ್ರದರ್ಶಿಸಿದ್ದಕ್ಕೆ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಬಗ್ಗೆ ಚರ್ಚೆ ನಡೆಯಿತು. ಬಳಕೆದಾರರ ಆಕ್ಷೇಪ ಏನೆಂದರೆ... ನಾನ್ ವೆಜ್ ಮಾಡುವವರು ತಿನ್ನುವ ಆಹಾರ ಶುದ್ಧವಾಗಿದೆಯೇ ಎಂದು ಪ್ರಶ್ನಿಸುತ್ತಿದ್ದರು. ನಾನ್ ವೆಜ್ ತಿನ್ನುವವರನ್ನು ಅವಮಾನಿಸುತ್ತಿರುವಂತೆ ಈ ಬಗ್ಗೆ ಚರ್ಚೆ ಮುಂದುವರೆದಿದೆ ಇದು ಟ್ರೆಂಡಿಂಗ್ ಆಗಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು