Interest Rate Hiked: ರೆಪೋ ರೇಟ್ ಏರಿಕೆ ಎಫೆಕ್ಟ್! ಯಾವ ಬ್ಯಾಂಕ್​ಗಳ ಬಡ್ಡಿದರ ಹೆಚ್ಚಳವಾಗಿದೆ ಚೆಕ್ ಮಾಡಿ

ಇತರ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳಾದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹ ರೆಪೋ ಲಿಂಕ್ಡ್ ಸಾಲದ ಬಡ್ಡಿದರವನ್ನು ಹೆಚ್ಚಿಸಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವಾರದ ಆರಂಭದಲ್ಲಿ ಪ್ರಮುಖ ರೆಪೋ ದರವನ್ನು ಹೆಚ್ಚಿಸಿದ್ದು ಸಾರ್ವಜನಿಕರ ಮೇಲೆ ವಿವಿಧ ಪರಿಣಾಮ ಬೀರುತ್ತಿದೆ. ರೆಪೊ ಲಿಂಕ್ಡ್ ಸಾಲದ ದರವನ್ನು ಪರಿಷ್ಕರಿಸಲು (Repo Rate Hike) ಪರಿಷ್ಕರಣೆಯ ನಂತರ ಭಾರತದ ಕೆಲವು ಪ್ರಮುಖ ಬ್ಯಾಂಕ್​ಗಳು ಬಡ್ಡಿದರವನ್ನು (Interest Rate Hiked) ಹೆಚ್ಚಿಸಿವೆ.  ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ (ICICI Bank) ತನ್ನ ಬಾಹ್ಯ ಮಾನದಂಡದ ಸಾಲದ ದರವನ್ನು (EBLR) ಪರಿಷ್ಕರಿಸಿದೆ. ಐಸಿಐಸಿಐ ಬ್ಯಾಂಕ್ ಬಾಹ್ಯ ಮಾನದಂಡದ ಸಾಲದ ಬಡ್ಡಿದರವನ್ನು ಶೇಕಡಾ 8.10  ಕ್ಕೆ ಏರಿಸಿದೆ. ಇದೇ ಸಮಯದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (Bank Of Baroda) ತಕ್ಷಣದಿಂದ ಜಾರಿಗೆ ಬರುವಂತೆ ಈ ದರವನ್ನು ಶೇಕಡಾ 6.90 ಕ್ಕೆ ಏರಿಸಿದೆ.

    ಅಂತೆಯೇ ಇತರ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳಾದ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹ ರೆಪೋ ಲಿಂಕ್ಡ್ ಸಾಲದ ಬಡ್ಡಿದರವನ್ನು ಹೆಚ್ಚಿಸಿವೆ. ರೆಪೋ ದರದಲ್ಲಿ ಶೇಕಡಾ 0.40 ರಷ್ಟು ಹೆಚ್ಚಳದ ನಂತರ ಹಲವಾರು ಬ್ಯಾಂಕುಗಳು ತಮ್ಮ ಬಾಹ್ಯ ಮಾನದಂಡ ಆಧಾರಿತ ಸಾಲದ ದರಗಳನ್ನು ಹೆಚ್ಚಿಸಿವೆ. ಇದರಲ್ಲಿ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಅಲ್ಪಾವಧಿಯ ಹಣವನ್ನು ನೀಡುತ್ತದೆ.

    ತಮ್ಮ ಬಡ್ಡಿ ದರಗಳನ್ನು ಪರಿಷ್ಕರಿಸಿದ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ:
    ಇಂಡಿಯನ್ ಬ್ಯಾಂಕ್
    ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ರೆಪೊ ಲಿಂಕ್ಡ್ ಲೆಂಡಿಂಗ್ ದರವನ್ನು ಶೇ.4 ರಿಂದ ಶೇ.4.40ಕ್ಕೆ ಪರಿಷ್ಕರಿಸಿರುವುದಾಗಿ ಹೇಳಿದೆ. ಬ್ಯಾಂಕ್‌ನ ಪರಿಷ್ಕೃತ ಸಾಲದ ಬಡ್ಡಿದರವು ಮೇ 9 ರಿಂದ ಹೊಸ ಗ್ರಾಹಕರಿಗೆ ಅನ್ವಯವಾಗಲಿದೆ. ಜೊತೆಗೆ ಜೂನ್ 1 ರಿಂದ ಬ್ಯಾಂಕ್‌ನ ಎಲ್ಲಾ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

    ಬ್ಯಾಂಕ್‌ನ ಆಸ್ತಿ ಹೊಣೆಗಾರಿಕೆ ನಿರ್ವಹಣಾ ಸಮಿತಿಯು (ALCO) ಪಾಲಿಸಿ ರೆಪೊ ದರದೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಸಾಲಗಳು/ಮುಂಗಡಗಳ ಸಾಲದ ಬಡ್ಡಿದರವನ್ನು ಪರಿಶೀಲಿಸಿದೆ. ರೆಪೊವನ್ನು ಆಧರಿಸಿ ಪಾಲಿಸಿ ರೆಪೋ ದರದೊಂದಿಗೆ ಲಿಂಕ್ ಮಾಡಲಾದ ಸಾಲದ ಬಡ್ಡಿದರವನ್ನು 4 ಶೇಕಡಾದಿಂದ 4.40 ಕ್ಕೆ ಪರಿಷ್ಕರಿಸಲಾಗಿದೆ ಎಂದು ಇಂಡಿಯನ್ ಬ್ಯಾಂಕ್ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದದೆ.

    ಇದನ್ನೂ ಓದಿ: LIC IPO Record: ದಾಖಲೆಗಳ ಮೇಲೆ ದಾಖಲೆ! ಎಲ್​ಐಸಿ ಐಪಿಒ ಈವರೆಗೆ ಏನೇನಾಯ್ತು?

    ಎಚ್‌ಡಿಎಫ್‌ಸಿ ಬ್ಯಾಂಕ್
    ದೇಶದ ಅತಿದೊಡ್ಡ ಸಾಲದಾತ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ತನ್ನ ಗೃಹ ಸಾಲಕ್ಕೆ  ಶೇಕಡಾ 0.30 ರಷ್ಟು ಬಡ್ಡಿದರ ಹೆಚ್ಚಳವನ್ನು ಘೋಷಿಸಿದೆ. HDFC ಗೃಹ ಸಾಲಗಳ ಮೇಲೆ ಅದರ ರಿಟೇಲ್ ಪ್ರೈಮ್ ಲೆಂಡಿಂಗ್ ಬಡ್ಡಿದರವನ್ನು (RPLR) ಹೆಚ್ಚಿಸುತ್ತದೆ. ಈ ಬದಲಾವಣೆ ಮೇ 9, 2022 ರಿಂದ ಜಾರಿಗೆ ಬರಲಿದೆ ಎಂದು HDFC ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ 
    ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಜೂನ್ 1 ರಿಂದ ಅನ್ವಯವಾಗುವಂತೆ ರೆಪೋ ಲಿಂಕ್ಡ್ ಸಾಲದ ಬಡ್ಡಿದರವನ್ನು ಶೇಕಡಾ 6.5 ರಿಂದ 6.9 ಕ್ಕೆ ಹೆಚ್ಚಿಸಿದೆ ಎಂದು PNB ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

    ಇದನ್ನೂ ಓದಿ: Nirmala Sitharaman Viral Video: ವಿಡಿಯೋದಲ್ಲಿ ಬಯಲಾಯ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾನವೀಯತೆ! ವೈರಲ್ ವಿಡಿಯೋ ನೋಡಿ

    ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್
    ಬ್ಯಾಂಕ್ ಚಿಲ್ಲರೆ ಗ್ರಾಹಕರಿಗೆ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳಲ್ಲಿ ದರ ಹೆಚ್ಚಳವನ್ನು ಘೋಷಿಸಿದೆ. ₹2 ಕೋಟಿಗಿಂತ ಕಡಿಮೆ ಇರುವ ಎಲ್ಲಾ ಠೇವಣಿಗಳ ಮೇಲೆ ಮೇ 6 ರಿಂದ ಈ ಹೆಚ್ಚಳ ಜಾರಿಗೆ ಬರಲಿದೆ.
    Published by:guruganesh bhat
    First published: