Bank Holidays in September 2022: ಸೆಪ್ಟೆಂಬರ್​ನಲ್ಲಿ 12 ರಜೆ; ಈ ದಿನ ಬ್ಯಾಂಕಿಂಗ್ ಕೆಲಸ ಇಟ್ಟುಕೊಳ್ಳಬೇಡಿ!

ಸೆಪ್ಟೆಂಬರ್ 2022 ರಲ್ಲಿ ಯಾವ ರಾಜ್ಯಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಮುಂದಿನ ತಿಂಗಳ ರಜೆಯ ಪಟ್ಟಿಯ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ನೀವು ಪ್ಲಾನ್ ಮಾಡಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೆಪ್ಟೆಂಬರ್ (September)ತಿಂಗಳಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್​ಗಳಿಗೆ ರಜೆ(Bank Holidays) ಇದ್ದು, ಮುಚ್ಚಲ್ಪಟ್ಟಿರುತ್ತವೆ. ಈ ರಜಾದಿನ (Holiday)ಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ. ಆದಾಗ್ಯೂ ಭಾರತ(India)ದಲ್ಲಿ ಎಲ್ಲಾ ಬ್ಯಾಂಕ್​ ಗಳು ಸಹ 12 ದಿನಗಳ ಕಾಲ ಮುಚ್ಚಿರುವುದಿಲ್ಲ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳಿದ್ದರೆ, ಮೊದಲು ರಜಾದಿನಗಳ ಪಟ್ಟಿಯನ್ನು ತಿಳಿದುಕೊಳ್ಳಿ. ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು ಅರ್ಧ ತಿಂಗಳು ಅಂದರೆ 12 ದಿನಗಳ ಕಾಲ ಬ್ಯಾಂಕ್‌ ಗಳು ಮುಚ್ಚಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟೆಂಬರ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್​​ನಲ್ಲಿ ಒಟ್ಟು 12 ದಿನಗಳ ಬ್ಯಾಂಕ್ ರಜಾದಿನಗಳಲ್ಲಿ 4 ರಜಾದಿನಗಳು ಭಾನುವಾರ ಇವೆ. ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ರಜಾ ದಿನಗಳು

ಸೆಪ್ಟೆಂಬರ್ 1: ಗಣೇಶ ಚತುರ್ಥಿ 2 ನೇ ದಿನ - ಪಣಜಿ

ಸೆಪ್ಟೆಂಬರ್ 6: ಕರ್ಮ ಪೂಜೆ - ರಾಂಚಿ

ಸೆಪ್ಟೆಂಬರ್ 7: ಮೊದಲ ಓಣಂ - ಕೊಚ್ಚಿ, ತಿರುವನಂತಪುರಂ

ಸೆಪ್ಟೆಂಬರ್ 8: ತಿರುವೋಣಂ - ಕೊಚ್ಚಿ, ತಿರುವನಂತಪುರಂ

ಸೆಪ್ಟೆಂಬರ್ 9: ಇಂದ್ರಜಾತ್ರ - ಗ್ಯಾಂಗ್ಟಾಕ್

ಸೆಪ್ಟೆಂಬರ್ 10: ಶ್ರೀ ನರವನ ಗುರು ಜಯಂತಿ - ಕೊಚ್ಚಿ, ತಿರುವನಂತಪುರಂ

ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನ - ಕೊಚ್ಚಿ, ತಿರುವನಂತಪುರಂ

ಸೆಪ್ಟೆಂಬರ್ 26: ನವರಾತ್ರಿ ಸ್ಥಾಪನಾ/ಮೇರಾ ಚೋರೆನ್ ಹೌಬಾ ಆಫ್ ಲೈನಿಂಗ್‌ಥೌ ಸನಾಮಾಹಿ - ಜೈಪುರ, ಇಂಫಾಲ್

ವಾರಾಂತ್ಯದ ರಜೆಗಳು

ಸೆಪ್ಟೆಂಬರ್ 4: ಮೊದಲ ಭಾನುವಾರ

ಸೆಪ್ಟೆಂಬರ್ 10: ಎರಡನೇ ಶನಿವಾರ

ಸೆಪ್ಟೆಂಬರ್ 11: ಎರಡನೇ ಭಾನುವಾರ

ಸೆಪ್ಟೆಂಬರ್ 18: ಮೂರನೇ ಭಾನುವಾರ

ಸೆಪ್ಟೆಂಬರ್ 24: ನಾಲ್ಕನೇ ಶನಿವಾರ

ಸೆಪ್ಟೆಂಬರ್ 25: ನಾಲ್ಕನೇ ಭಾನುವಾರ

ಇದನ್ನೂ ಓದಿ:   Zomato: 287 ರೂಪಾಯಿಗೆ 10 ಸಾವಿರ ದಂಡ ಕಟ್ಟಿದ ಝೊಮಾಟೊ, ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರಂತೆ!

ಮುಂದಿನ ತಿಂಗಳು ರಜೆಯ ಪಟ್ಟಿಯ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ನೀವು ಪ್ಲಾನ್ ಮಾಡಿಕೊಳ್ಳಬೇಕು. ಇದರಿಂದ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸೋದು ತಪ್ಪಲಿದೆ.

bank-holidays-in-september-2022-see-the-complete-list-of-holidays-mrq
ಸಾಂದರ್ಭಿಕ ಚಿತ್ರ


ಮೂರು ವರ್ಗಗಳಾಗಿ ರಜಾದಿನ ವಿಂಗಡಣೆ

ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ ಮತ್ತು ಅಕೌಂಟ್ಸ್​ ಕ್ಲೋಸಿಂಗ್ ಅಡಿಯಲ್ಲಿ ರಜಾದಿನ

ಗ್ರಾಹಕರು ಬ್ಯಾಂಕ್​ಗೆ ಹೋಗುವ ಮುನ್ನ

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.

Fixed Deposits: ಹಿರಿಯ ನಾಗರಿಕರಿಗೆ ಗುಡ್ ​ನ್ಯೂಸ್​

ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸಿರುವುದರಿಂದ, ಅನೇಕ ಬ್ಯಾಂಕುಗಳು (BANKS) ಇತ್ತೀಚೆಗೆ ತಮ್ಮ FD (ನಿಶ್ಚಿತ ಠೇವಣಿ) ಬಡ್ಡಿದರಗಳನ್ನು ಹೆಚ್ಚಿಸಿವೆ. ಈ ಪ್ರವೃತ್ತಿಯನ್ನು ಅನುಸರಿಸಿ, ಎರಡು ಬ್ಯಾಂಕುಗಳು ಇತ್ತೀಚೆಗೆ FD ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದವು. ಹೊಸ ಬಡ್ಡಿದರಗಳ ಪರಿಣಾಮಕಾರಿ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಈಗ ಹಿರಿಯ ನಾಗರಿಕರು ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ ಎಂಟಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

ಇದನ್ನೂ ಓದಿ:  Smart Business idea: ಅಲೆಲೆಲೇ ಏನ್​ ತಲೆ ಗುರು ನಿಮ್ದು! ನಿಜಕ್ಕೂ ನೀವು ವೆರೈಟಿ ಫಾರ್ಮರ್​, ಹೀಗೂ ದುಡ್ಡು ಮಾಡ್ಬಹುದು

RBI Guidelines: ಸೆಪ್ಟೆಂಬರ್​​ 30ರೊಳಗೆ ಈ ಕೆಲ್ಸ ಮಾಡಿ ಮುಗಿಸಿ!

ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್​ಗೆ ಆರ್​​ಬಿಐ ಡೆಡ್​ ಲೈನ್ (RBI Deadline)​ ಕೊಟ್ಟಿದೆ. ಈ ಒಂದು ಕೆಲಸ ಮಾಡದಿದ್ದರೆ ಸೆಪ್ಟೆಂಬರ್ 30ರಿಂದ ನಿಮ್ಮ ಬಳಿ ಇರುವ ಡೆಬಿಟ್​ ಕಾರ್ಡ್ ಹಾಗೂ ಕ್ರೆಡಿಟ್​ ಕಾರ್ಡ್ ಕೆಲಸ ಮಾಡುವುದಿಲ್ಲ.

bank-holidays-in-september-2022-see-the-complete-list-of-holidays-mrq
ಸಾಂದರ್ಭಿಕ ಚಿತ್ರ


ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟೆಂಬರ್ 30, 2022 ರೊಳಗೆ ಆನ್‌ಲೈನ್, ಪಾಯಿಂಟ್-ಆಫ್-ಸೇಲ್ ಮತ್ತು ಇನ್-ಆ್ಯಪ್ ವಹಿವಾಟುಗಳಲ್ಲಿ ಬಳಸಲಾಗುವ ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಡೇಟಾವನ್ನು ಟೋಕನ್‌ಗಳೊಂದಿಗೆ ಬದಲಾಯಿಸಲು ಕಡ್ಡಾಯಗೊಳಿಸಿದೆ.
Published by:Mahmadrafik K
First published: