ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ ವಾರಾಂತ್ಯ ಸೇರಿದಂತೆ ಮೇ ತಿಂಗಳಲ್ಲಿ ಒಟ್ಟು 11 ದಿನಗಳವರೆಗೆ ಬ್ಯಾಂಕುಗಳು (Bank Holidays in May 2022) ಮುಚ್ಚಲ್ಪಡುತ್ತವೆ. ಇವುಗಳಲ್ಲಿ ಭಾನುವಾರ ಮತ್ತು ಎರಡು ನಾಲ್ಕನೇಯ ಶನಿವಾರದ ಜೊತೆಗೆ ಹಬ್ಬಗಳ ನಾಲ್ಕು ರಜಾದಿನಗಳು ಸೇರಿವೆ. ಆದರೆ ಆನ್ಲೈನ್ ಬ್ಯಾಂಕಿಂಗ್ ಸೇವೆಗಳು (Online Banking Service) ರಜಾದಿನಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತ. ಗ್ರಾಹಕರು (Bank Customers) ಬ್ಯಾಂಕ್ ರಜಾದಿನಗಳಂದು ಸಹ ತಮ್ಮ ಕೆಲಸ ಕಾರ್ಯಗಳನ್ನು ಆನ್ಲೈನ್ ಸೇವೆಯ ಮೂಲಕ ಪಡೆದುಕೊಳ್ಳಬಹುದು ಎಂಬುದನ್ನು ಗಮನಿಸಬೇಕು.
ನೆನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಮತ್ತು ಬ್ಯಾಂಕ್ಗಳ ಖಾತೆಗಳನ್ನು ಮುಚ್ಚುವ ಅಡಿಯಲ್ಲಿ RBI ರಜಾದಿನಗಳ ಪಟ್ಟಿಯನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಎಂದು ವರ್ಗೀಕರಿಸುತ್ತದೆ. ಅನೇಕ ರಜಾದಿನಗಳು ಪ್ರದೇಶಕ್ಕೆ ನಿರ್ದಿಷ್ಟವಾಗಿರುತ್ತವೆ ಮತ್ತು ಇದು ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕ್ನಿಂದ ಬ್ಯಾಂಕ್ಗೆ ಬದಲಾಗಬಹುದು.
ಈದ್-ಉಲ್-ಫಿತರ್ ಮತ್ತು ಬುದ್ಧ ಪೂರ್ಣಿಮೆ
ಮುಂಬರುವ ತಿಂಗಳಲ್ಲಿ ಎರಡು ದೀರ್ಘ ವಾರಾಂತ್ಯಗಳಿವೆ. ಈದ್-ಉಲ್-ಫಿತರ್ ಮತ್ತು ಬುದ್ಧ ಪೂರ್ಣಿಮೆಯ ದಿನಗಳ ಸಂದರ್ಭದಲ್ಲಿ ಬ್ಯಾಂಕುಗಳು ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಹೀಗಾಗಿ ಮುಂಬರುವ ತಿಂಗಳಲ್ಲಿ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿರುವ ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು ನಡೆಸುವ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ. ನಿಮಗಾಗಿಯೇ ಇಲ್ಲಿದೆ ಮೇ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ.
ರಜೆ ಇರುವ ರಾಜ್ಯ/ನಗರ |
ಏನಕ್ಕೆ ರಜೆ? |
ಎಲ್ಲೆಲ್ಲಿ ರಜೆ? |
ಮೇ 1, ಭಾನುವಾರ |
ವಾರಾಂತ್ಯ |
ಇಡೀ ದೇಶದಲ್ಲಿ |
ಮೇ 2, ಸೋಮವಾರ |
ರಂಜಾನ್-ಈದ್ (ಈದ್-ಯುಐ-ಫಿತರ್) |
ಕೊಚ್ಚಿ, ತಿರುವನಂತಪುರಂ |
ಮೇ 3, ಮಂಗಳವಾರ |
ಭಗವಾನ್ ಶ್ರೀ ಪರಶುರಾಮ ಜಯಂತಿ/ರಂಜಾನ್-ಈದ್ (ಈದ್-ಯುಐ-ಫಿತರ್)/ಬಸವ ಜಯಂತಿ/ಅಕ್ಷಯ ತೃತೀಯ |
ಕೊಚ್ಚಿ, ತಿರುವನಂತಪುರಂ ಹೊರತುಪಡಿಸಿ ಇಡೀ ದೇಶದಲ್ಲಿ |
ಮೇ 8, ಭಾನುವಾರ |
ವಾರಾಂತ್ಯ |
ಇಡೀ ದೇಶದಲ್ಲಿ |
ಮೇ 9, ಸೋಮವಾರ |
ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ |
ಕೋಲ್ಕತ್ತಾ |
ಮೇ 14, ಶನಿವಾರ |
ಎರಡನೇ ಶನಿವಾರ |
ಇಡೀ ದೇಶದಲ್ಲಿ |
ಮೇ 15, ಭಾನುವಾರ |
ವಾರಾಂತ್ಯ |
ಇಡೀ ದೇಶದಲ್ಲಿ |
ಮೇ 16, ಸೋಮವಾರ |
ಬುದ್ಧ ಪೂರ್ಣಿಮೆ |
ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ. |
ಮೇ 22, ಭಾನುವಾರ
|
ವಾರಾಂತ್ಯ |
ಇಡೀ ದೇಶದಲ್ಲಿ |
ಮೇ 28, ಶನಿವಾರ |
ನಾಲ್ಕನೇ ಶನಿವಾರ |
ಇಡೀ ದೇಶದಲ್ಲಿ |
ಮೇ 29, ಭಾನುವಾರ |
ಭಾನುವಾರ |
ಇಡೀ ದೇಶದಲ್ಲಿ |
ಇದನ್ನೂ ಓದಿ: Price Hike: ಚಾಕೊಲೇಟ್, ಚ್ಯೂಯಿಂಗ್ ಗಮ್ ಬೆಲೆಯೂ ಆಗಲಿದೆಯೇ ಏರಿಕೆ?
ಮೇ 2 ಸೋಮವಾರ- ರಂಜಾನ್-ಈದ್ (ಈದ್-ಯುಐ-ಫಿತ್ರಾ) ಕೊಚ್ಚಿ, ತಿರುವನಂತಪುರಂ
ಮೇ 3 ಮಂಗಳವಾರ- ಭಗವಾನ್ ಶ್ರೀ ಪರಶುರಾಮ ಜಯಂತಿ/ರಂಜಾನ್-ಈದ್ (ಈದ್-ಯುಐ-ಫಿತ್ರಾ)/ಬಸವ ಜಯಂತಿ/ಅಕ್ಷಯ ತೃತೀಯ ಅಖಿಲ ಭಾರತ, ಕೊಚ್ಚಿ ಹೊರತುಪಡಿಸಿ, ತಿರುವನಂತಪುರಂ
ಮೇ 8 ಭಾನುವಾರ - ವಾರಾಂತ್ಯ ಅಖಿಲ ಭಾರತ
ಮೇ 9 ಸೋಮವಾರ - ಕೋಲ್ಕತ್ತಾ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ
ಮೇ 14 ಶನಿವಾರ - ಎರಡನೇ ಶನಿವಾರ ಅಖಿಲ ಭಾರತ
ಇದನ್ನೂ ಓದಿ: Ration Card New Alert: ಹುಷಾರ್! ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಎಚ್ಚರ!
ಮೇ 15 ಭಾನುವಾರ - ವಾರಾಂತ್ಯ ಅಖಿಲ ಭಾರತ
ಮೇ 16 ಸೋಮವಾರ- ಬುದ್ಧ ಪೂರ್ಣಿಮೆ ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ.
ಮೇ 22 ಭಾನುವಾರ - ವಾರಾಂತ್ಯ ಅಖಿಲ ಭಾರತ
ಮೇ 28 ಶನಿವಾರ - ನಾಲ್ಕನೇ ಶನಿವಾರ ಅಖಿಲ ಭಾರತ
ಮೇ 29 ಭಾನುವಾರ - ಭಾನುವಾರ ಅಖಿಲ ಭಾರತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ