ಇನ್ನೊಂದು ದಿನ ಕಳೆದರೆ ಮಾರ್ಚ್ ತಿಂಗಳು (March) ಬರುತ್ತಿದೆ. ಮಾರ್ಚ್‌ನಲ್ಲಿ ಬ್ಯಾಂಕ್ ರಜೆಗಳ (Bank Holidays In March) ಸಂಪೂರ್ಣ ಪಟ್ಟಿಯನ್ನು ಆರ್‌ಬಿಐ (RBI) ಪ್ರಕಟಿಸಿದೆ. ಅದರಂತೆ ಮಾರ್ಚ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕ್ಗಳು ಬಂದ್ ಆಗಲಿವೆ. ಹೋಳಿ, ನವರಾತ್ರಿ, ರಾಮ ನವಮಿಯಂತಹ ದೊಡ್ಡ ಹಬ್ಬಗಳು ಮಾರ್ಚ್ ತಿಂಗಳಲ್ಲಿ ಬರಲಿವೆ. ಇದಲ್ಲದೆ, ಕೆಲವು ರಾಜ್ಯಗಳು ವಿವಿಧ ದಿನಗಳಲ್ಲಿ ರಜಾದಿನಗಳನ್ನು ಹೊಂದಿವೆ. ಹಾಗಾಗಿ ಈ 12 ರಜಾದಿನಗಳಲ್ಲಿ ಆರು ರಜೆಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್ ಕ್ಲೋಸ್ ಆಗಿರಲಿದೆ. ನೀವು ಮಾರ್ಚ್‌ನಲ್ಲಿ ಬ್ಯಾಂಕ್‌ಗಳಲ್ಲಿ ಕೆಲವು ಪ್ರಮುಖ ಕೆಲಸವನ್ನು ಮಾಡಲು ಹೊರಟಿದ್ದರೆ, ರಜಾದಿನಗಳ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ. ಆದಷ್ಟು ಈ ದಿನಾಂಕಗಳಂದು ಬ್ಯಾಂಕ್ಗೆ ಹೋಗೋದನ್ನು ತಪ್ಪಿಸಿ.
ಮಾರ್ಚ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ?
ಮಾರ್ಚ್ 3, 2023 : ಅಮಲಕಿ ಏಕಾದಶಿ ಅಥವಾ ರಂಗಭರಣಿ ಏಕಾದಶಿ ( ಕೆಲವೊಂದು ಬ್ಯಾಂಕ್ಗಳಿ ಮಾತ್ರ ಕ್ಲೋಸ್ ಆಗಿರುತ್ತದೆ)
ಮಾರ್ಚ್ 5, 2023: ಭಾನುವಾರ
ಮಾರ್ಚ್ 7, 2023 : ಹೋಳಿ ದಹನ
ಮಾರ್ಚ್ 8, 2023 : ಹೋಳಿ
ಮಾರ್ಚ್ 9, 2023: ಹೋಳಿ
ಮಾರ್ಚ್ 11, 2023 : ತಿಂಗಳ ಎರಡನೇ ಶನಿವಾರ
ಮಾರ್ಚ್ 12, 2023: ಭಾನುವಾರ
ಮಾರ್ಚ್ 19, 2023: ಭಾನುವಾರ
ಮಾರ್ಚ್ 22, 2023 : ಯುಗಾದಿ
ಮಾರ್ಚ್ 25, 2023: ಶನಿವಾರ
ಮಾರ್ಚ್ 26, 2023: ಭಾನುವಾರ
ಮಾರ್ಚ್ 30, 2023: ಶ್ರೀ ರಾಮ ನವಮಿ
ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ!
ಬ್ಯಾಂಕ್ ರಜಾದಿನಗಳ ಪಟ್ಟಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಎಲ್ಲಾ ರಾಜ್ಯಗಳು ರಜಾದಿನಗಳ ವಿಭಿನ್ನ ಪಟ್ಟಿಯನ್ನು ಹೊಂದಿವೆ. ಈ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು RBI ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಇದು ರಾಜ್ಯವಾರು ವಿವಿಧ ಹಬ್ಬಗಳು ಮತ್ತು ರಜಾದಿನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಏತನ್ಮಧ್ಯೆ, ಬ್ಯಾಂಕ್ ರಜಾದಿನಗಳಲ್ಲಿ ನೀವು ನಿಮ್ಮ ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಆದರೆ ನೀವು ಬ್ಯಾಂಕಿನಲ್ಲಿ ಕೆಲವು ಪ್ರಮುಖ ಕೆಲಸವನ್ನು ಹೊಂದಿದ್ದರೆ, ಈ ರಜಾದಿನಗಳ ಪ್ರಕಾರ ನಿಮ್ಮ ಕೆಲಸವನ್ನು ಯೋಜಿಸುವುದು ಅವಶ್ಯಕ.
ಇದನ್ನೂ ಓದಿ: ಮಾರ್ಚ್‌ನಲ್ಲಿ ಹಬ್ಬಗಳ ಸರಮಾಲೆ, ಯಾವ ಆಚರಣೆ ಯಾವಾಗ? ಇಲ್ಲಿದೆ ವಿವರ
ಮಾರ್ಚ್ ಕ್ಯಾಲೆಂಡರ್ ಮೇಲೆ ಕಣ್ಣಿರಲಿ!
ಕೆಲವೊಮ್ಮೆ ಅಂತೂ ಈ ಹಬ್ಬದ ದಿನಗಳಂದು ಮತ್ತು ಹೀಗೆ ಸಾಲು ಸಾಲಾಗಿ ಬಂದ ರಜಾ ದಿನಗಳಿಂದ ಎಟಿಎಂನಲ್ಲಿಯೂ (ATM) ಸಹ ಹಣ ಖಾಲಿಯಾಗಿರುತ್ತದೆ. ಕೆಲವೊಮ್ಮೆ ಹೀಗೆ ತುಂಬಾ ರಜಾ ದಿನಗಳು ಬಂದಾಗ ಹಣವನ್ನು ಹೇಗೆ ಪಡೆಯುವುದು ಅಂತ ತುಂಬಾನೇ ಪರದಾಡಿರುವ ಸಂದರ್ಭಗಳು ಸಾಕಷ್ಟಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು..ಅದಕ್ಕೆ ಈಗ ಜನರು ಸಹ ಕ್ಯಾಲೆಂಡರ್ ಗಳ ಮೇಲೆ ಒಂದು ಕಣ್ಣನ್ನು ಇಟ್ಟಿರುತ್ತಾರೆ.
ಏಕೆಂದರೆ ಮತ್ತೆ ಸಾಲು ಸಾಲಾಗಿ ಬರುವ ಬ್ಯಾಂಕ್ ರಜೆಗಳು ತಮ್ಮ ವ್ಯವಹಾರಕ್ಕೆ ಅಡ್ಡಿಯಾಗಬಾರದು ಅಂತ ಮೊದಲೇ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
‘ಏನಪ್ಪಾ ಇದು 15 ದಿನ ರಜೆನಾ’ ಅಂತ ಗಾಬರಿಯಾಗಬೇಡಿ. ಇದು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳನ್ನು ಸಹ ಒಳಗೊಂಡಿದೆ ಅಂತ ಹೇಳಬಹುದು. ಇಷ್ಟೇ ಅಲ್ಲದೆ ಇವೆಲ್ಲಾ ರಜಾ ದಿನಗಳು ದೇಶದ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ್ದಲ್ಲ ಅಂತ ಹೇಳಬಹುದು. ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶನಿವಾರಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ