ದೇಶದ ಹಲವು ಭಾಗಗಳಲ್ಲಿ ಮುಂದಿನ ವಾರ ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಅರ್ಥಾತ್ ಬ್ಯಾಂಕ್ಗಳಿಗೆ ರಜಾ ಇರುತ್ತದೆ. ನೀವು ಮುಂದಿನ ವಾರದ ಯಾವುದೇ ಕೆಲಸ ಕಾರ್ಯಗಳಿಗಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಬೇಕಿದ್ದಲ್ಲಿ ಈ ಸುದ್ದಿಯನ್ನು ಸಂಪೂರ್ಣ ಓದಲೇಬೇಕು. ಸುಮ್ಮನೆ ಮನೆಯಿಮದ ಹೊರಟು ಬ್ಯಾಂಕ್ ತಲುಪುವಷ್ಟರಲ್ಲಿ ಬ್ಯಾಂಕ್ ಬಾಗಿಲು ಹಾಕಿದ್ದರೆ (Bank Holiday In March 2022) ) ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ ಹೇಳಿ! ನಿಮ್ಮ ಸಮಯ, ಶ್ರಮ ವ್ಯರ್ಥವಾಗದಿರಲು ಎರಡು ನಿಮಿಷ ಈ ಸುದ್ದಿಯನ್ನು ಗಮನಿಸಿ ಸಾಕು! ಮಾರ್ಚ್, 2022 ರ ಮೂರನೇ ವಾರದಲ್ಲಿ Bank Holiday March 3rd Week) ನಿಗದಿಪಡಿಸಲಾದ ಬ್ಯಾಂಕ್ ರಜಾದಿನಗಳ ಪಟ್ಟಿ ನಿಮಗಾಗಿ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವರ್ಷದ ಆರಂಭದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಿಗೆ ರಜಾದಿನಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಇದು ಸಾಮಾನ್ಯವಾಗಿ ಎಲ್ಲ ಬ್ಯಾಂಕ್ಗಳ ರಜಾದಿನಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತದೆ. ದೇಶದ ಅತ್ಯುನ್ನತ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಈ ಮಾಹಿತಿಯಂತೆ ಬ್ಯಾಂಕ್ಗಳು ರಜೆಯನ್ನು ನಿಗದಿಪಡಿಸುತ್ತವೆ.
ರಾಜ್ಯದಿಂದ ರಾಜ್ಯಕ್ಕೆ ರಜಾ ಬದಲಾವಣೆ ಬ್ಯಾಂಕ್ ರಜಾದಿನಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಗುತ್ತವೆ ಎಂದು ಹೇಳಲೇಬೇಕು. ಹೋಳಿ ಹಬ್ಬದ ಮುನ್ನ ಹೋಲಿಕಾ ದಹನ್ ಹಬ್ಬವನ್ನು ಆಚರಿಸಲು, ಮಾರ್ಚ್ 17 ರಂದು ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಝಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕ್ಗಳನ್ನು ಮುಚ್ಚಲಾಗುವುದು. ಮಾರ್ಚ್ 18 ರಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ.
ಈ ನಗರಗಳ ಗ್ರಾಹಕರೇ ಗಮನಿಸಿ ಹೀಗಾಗಿ ಮಾರ್ಚ್ 18ರಂದು ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ, ರಾಂಚಿ, ಶಿಲ್ಲಾಂಗ್ನಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.
ಮುಂದಿನ ವಾರ ಮಾರ್ಚ್ 18 ರಂದು ಶುಕ್ರವಾರ ಶ್ರೀನಗರ. ಮಾರ್ಚ್ 19 ರಂದು ಹೋಳಿ ಅಥವಾ ಯೋಸಾಂಗ್ನಿಂದಾಗಿ ಒರಿಸ್ಸಾ, ಮಣಿಪುರ ಮತ್ತು ಬಿಹಾರದ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಲಭ್ಯವಿರುವುದಿಲ್ಲ.
ಕರ್ನಾಟಕದಲ್ಲಿ ಬ್ಯಾಂಕ್ ರಜೆ ಯಾವತ್ತು? ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ತಿಂಗಳ ಎಲ್ಲಾ ಭಾನುವಾರದಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ. ಆದ್ದರಿಂದ ಮಾರ್ಚ್ 20 ರಂದು ಭಾರತದಾದ್ಯಂತ ಮುಚ್ಚಿರುತ್ತದೆ. ಇದು ಕರ್ನಾಟಕಕ್ಕೂ ಅನ್ವಯವಾಗುತ್ತದೆ.
ರಿಸರ್ವ್ ಬ್ಯಾಂಕ್ನಿಂದಲೇ ರಜಾ ನಿಗದಿ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು ಮತ್ತು ದೇಶಾದ್ಯಂತ ಪ್ರಾದೇಶಿಕ ಬ್ಯಾಂಕ್ಗಳು ಸೇರಿದಂತೆ ಎಲ್ಲಾ ಬ್ಯಾಂಕ್ಗಳು ರಿಸರ್ವ್ ಬ್ಯಾಂಕ್ ಅಧಿಸೂಚಿತ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಮುಂತಾದ ರಜಾದಿನಗಳಂದು ಬ್ಯಾಂಕ್ಗಳು ತಮ್ಮ ಶಾಖೆಗಳಿಗೆ ರಜೆ ಘೋಷಿಸುತ್ತವೆ.
ಇನ್ನಿತರ ಪ್ರಮುಖ ರಜಾದಿನಗಳಿವು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15), ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ ದಿನ (ಡಿಸೆಂಬರ್ 25) ಮುಚ್ಚಲ್ಪಟ್ಟಿರುತ್ತಾರೆ. ಸಾಮಾನ್ಯವಾಗಿ ದೀಪಾವಳಿ, ಕ್ರಿಸ್ಮಸ್, ಈದ್, ಗುರುನಾನಕ್ ಜಯಂತಿ, ಶುಭ ಶುಕ್ರವಾರ ಸೇರಿದಂತೆ ಹಬ್ಬಗಳಂದು ಬ್ಯಾಂಕ್ಗಳು ಮುಚ್ಚಿರುತ್ತವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ