Bank Holidays in March: ಮಾರ್ಚ್ ತಿಂಗಳಲ್ಲಿ ಒಟ್ಟು 13 ರಜೆಗಳು: ಈ ದಿನ ಬ್ಯಾಂಕಿಂಗ್ ಕೆಲಸ ಇಟ್ಟುಕೊಳ್ಳಬೇಡಿ!

ಮಾರ್ಚ್ 2022 ರಲ್ಲಿ ಯಾವ ರಾಜ್ಯಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಮುಂದಿನ ತಿಂಗಳು ರಜೆಯ ಪಟ್ಟಿಯ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ನೀವು ಪ್ಲಾನ್ ಮಾಡಿಕೊಳ್ಳಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾರ್ಚ್ (March)ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್​ಗಳಿಗೆ ರಜೆ(Bank Holidays) ಇದ್ದು, ಮುಚ್ಚಲ್ಪಟ್ಟಿರುತ್ತವೆ. ಈ ರಜಾದಿನ(Holiday)ಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ. ಆದಾಗ್ಯೂ ಭಾರತ(India)ದಲ್ಲಿ ಎಲ್ಲಾ ಬ್ಯಾಂಕ್​ ಗಳು ಸಹ 13 ದಿನಗಳ ಕಾಲ ಮುಚ್ಚಿರುವುದಿಲ್ಲ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಮಾರ್ಚ್ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳಿದ್ದರೆ, ಮೊದಲು ರಜಾದಿನಗಳ ಪಟ್ಟಿಯನ್ನು ತಿಳಿದುಕೊಳ್ಳಿ. ಮಾರ್ಚ್ ತಿಂಗಳಿನಲ್ಲಿ ಸುಮಾರು ಅರ್ಧ ತಿಂಗಳು ಅಂದರೆ 13 ದಿನಗಳ ಕಾಲ ಬ್ಯಾಂಕ್‌ ಗಳು ಮುಚ್ಚಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಾರ್ಚ್‌ ನಲ್ಲಿ ಒಟ್ಟು 13 ದಿನಗಳ ಬ್ಯಾಂಕ್ ರಜಾದಿನಗಳಲ್ಲಿ 4 ರಜಾದಿನಗಳು ಭಾನುವಾರ ಇವೆ. ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳು

ಮಾರ್ಚ್ 2022 ರಲ್ಲಿ ಯಾವ ರಾಜ್ಯಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಮುಂದಿನ ತಿಂಗಳು ರಜೆಯ ಪಟ್ಟಿಯ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ನೀವು ಪ್ಲಾನ್ ಮಾಡಿಕೊಳ್ಳಬೇಕು. ಇದರಿಂದ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸೋದು ತಪ್ಪಲಿದೆ.

ಇದನ್ನೂ ಓದಿ:  Insurance: ವಾಹನಗಳಿಗೆ ಮಾತ್ರವಲ್ಲ, ಕುದುರೆ ಮಾಲೀಕರಿಗೂ ವಿಮೆ ಕಡ್ಡಾಯ! ಏನಿದು ಹೊಸ ನಿಯಮ?

ಮಾರ್ಚ್ ರಜಾದಿನಗಳ ಪಟ್ಟಿ ಇಲ್ಲಿದೆ

ಮಾರ್ಚ್ 1 (ಮಹಾಶಿವರಾತ್ರಿ) - ಅಗರ್ತಲಾ, ಐಜ್ವಾಲ್, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತ್ತಾ, ನವದೆಹಲಿ, ಪಣಜಿ, ಪಾಟ್ನಾ ಮತ್ತು ಶಿಲ್ಲಾಂಗ್ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.

ಮಾರ್ಚ್ 3 (ಲೋಸರ್) - ಗ್ಯಾಂಗ್‌ ಟಾಕ್ ‌ನಲ್ಲಿ ಬ್ಯಾಂಕ್ ರಜೆ ಇರಲಿದೆ.

ಮಾರ್ಚ್ 4 (ಚಾಪ್ಚಾರ್ ಕುಟ್) - ಐಜ್ವಾಲ್‌ ನಲ್ಲಿ ಬ್ಯಾಂಕ್ ರಜೆ

ಮಾರ್ಚ್ 6 (ಭಾನುವಾರ) - ಸಾಪ್ತಾಹಿಕ ರಜೆ

ಮಾರ್ಚ್ 12 (ಶನಿವಾರ) - ತಿಂಗಳ ಎರಡನೇ ಶನಿವಾರ

ಮಾರ್ಚ್ 13 (ಭಾನುವಾರ) - ಸಾಪ್ತಾಹಿಕ ರಜೆ

ಮಾರ್ಚ್ 17 (ಹೋಳಿ ಹಬ್ಬ) - ಡೆಹ್ರಾಡೂನ್, ಕಾನ್ಪುರ್, ಲಕ್ನೋ ಮತ್ತು ರಾಂಚಿಯಲ್ಲಿ ಬ್ಯಾಂಕ್‌ ಗಳನ್ನು ಮುಚ್ಚಲಾಗಿದೆ.

ಮಾರ್ಚ್ 18 (ಹೋಳಿ / ಧೂಲೇತಿ / ಡೋಲ್ ಜಾತ್ರೆ) - ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಮಾರ್ಚ್ 19 (ಹೋಳಿ / ಯೋಸಾಂಗ್‌ನ 2 ನೇ ದಿನ) - ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್‌ ಗಳನ್ನು ಮುಚ್ಚಲಾಗಿರುತ್ತದೆ.

ಮಾರ್ಚ್ 20 (ಭಾನುವಾರ) - ಸಾಪ್ತಾಹಿಕ ರಜೆ

ಮಾರ್ಚ್ 22 (ಬಿಹಾರ ದಿನ) - ಪಾಟ್ನಾದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ.

ಮಾರ್ಚ್ 26 (ಶನಿವಾರ) - ತಿಂಗಳ ನಾಲ್ಕನೇ ಶನಿವಾರ

ಮಾರ್ಚ್ 27 (ಭಾನುವಾರ) - ಸಾಪ್ತಾಹಿಕ ರಜೆ

ಮೂರು ವರ್ಗಗಳಾಗಿ ರಜಾದಿನ ವಿಂಗಡಣೆ

ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್​ ಕ್ಲೋಸಿಂಗ್

ಇದನ್ನೂ ಓದಿ:  LIC: ಪಾಲಿಸಿದಾರರೇ ಗಮನಿಸಿ, ಫೆ. 28ರೊಳಗೆ ಈ ಕೆಲಸ ಮಾಡಿಕೊಳ್ಳಿ

ಗ್ರಾಹಕರು ಬ್ಯಾಂಕ್ಗೆ ಹೋಗುವ ಮುನ್ನ 

ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್​ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್​ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್​ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್​ ಮತ್ತು ಇಂಟರ್​ ನೆಟ್​​​​​​​​ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
Published by:Mahmadrafik K
First published: