Bank Holidays In June: ಜೂನ್ ತಿಂಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇದೆಯೇ? ಇಲ್ಲಿ ಚೆಕ್ ಮಾಡಿ
ಈ ರಜಾದಿನಗಳನ್ನು ನೀವು ತಿಳಿದಿಟ್ಟುಕೊಂಡಿದ್ದರೆ ಬ್ಯಾಂಕ್ ವಹಿವಾಟು ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಯೋಜಿಸಲು ನಿಮಗೆ ಸಾಧ್ಯವಾಗುತ್ತದೆ. ದೀರ್ಘ ವಾರಾಂತ್ಯಗಳಲ್ಲಿ ನಿಮ್ಮ ರಜಾದಿನಗಳನ್ನು ಸಹ ನೀವು ಚೆನ್ನಾಗಿ ಯೋಜನೆ ರೂಪಿಸಬಹುದು.
ಪ್ರತಿ ಹೊಸ ತಿಂಗಳು ಶುರುವಾಗುತ್ತಿದ್ದಂತೆ ಆ ತಿಂಗಳಲ್ಲಿ ಬ್ಯಾಂಕ್ಗಳಿಗೆ ಎಷ್ಟು ದಿನ ರಜೆ ಇದೆ ಎಂಬ ಕುತೂಹಲ ಹುಟ್ಟಿಕೊಳ್ಳುತ್ತದೆ. ನಮ್ಮ ಬ್ಯಾಂಕ್ ಕೆಲಸಗಳನ್ನು ಯಾವತ್ತು ಮಾಡಿಕೊಳ್ಳಬೇಕು? ಯಾವತ್ತು ಹೋದರೆ ನಮ್ಮ ಕೆಲಸಗಳು ಆಗುತ್ತೆ? ಯಾವತ್ತು ಹೋದರೆ ಬ್ಯಾಂಕ್ ಬಾಗಿಲು ಹಾಕಿರುತ್ತೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿದುಕೊಂಡಿರಲೇಬೇಕು. ಬ್ಯಾಂಕ್ ರಜಾದಿನಗಳನ್ನು (Bank Holidays In June) ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸುತ್ತದೆ. ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜಾದಿನಗಳು ಬದಲಾಗುತ್ತವೆ. ಜೂನ್ ತಿಂಗಳಲ್ಲಿ ವಿಶೇಷವಾಗಿ ಯಾವುದೇ ಹಬ್ಬಗಳಿಲ್ಲ. ಜೂನ್ ತಿಂಗಳಲ್ಲಿ ಎರಡನೇ ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ರಾಜ್ಯದ ಹೆಚ್ಚಿನ ಬ್ಯಾಂಕುಗಳು (June Bank Holiday List) ತಿಂಗಳು ಪೂರ್ತಿ ತೆರೆದಿರುತ್ತವೆ.
ದೇಶಾದ್ಯಂತ ಬ್ಯಾಂಕುಗಳು ಗೆಜೆಟೆಡ್ ರಜಾದಿನಗಳನ್ನು ಮಾತ್ರ ಅನುಸರಿಸುತ್ತವೆ. ಸಾರ್ವಜನಿಕ ರಜಾದಿನಗಳಲ್ಲಿ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕೆಲವು ರಜಾದಿನಗಳು ರಾಜ್ಯದಿಂದ ಭಿನ್ನವಾಗಿರುತ್ತವೆ.
ಜೂನ್ ತಿಂಗಳ ಬ್ಯಾಂಕ್ ರಜಾದಿನಗಳು ಇಲ್ಲಿವೆ ಜೂನ್ 2, ಮಹಾರಾಣಾ ಪ್ರತಾಪ್ ಜಯಂತಿ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
ಜೂನ್ 15, ವೈ.ಎಂ.ಎ. ದಿನ/ಗುರು ಹರಗೋಬಿಂದ್ ಜಿ ಅವರ ಜನ್ಮದಿನ/ರಾಜ ಸಂಕ್ರಾಂತಿ: ಐಜ್ವಾಲ್, ಮಿಸೋರಾಂ ಮತ್ತು ಭುವನೇಶ್ವರ್, ಒರಿಸ್ಸಾ ಮತ್ತು ಜಮ್ಮು ಮತ್ತು ಶ್ರೀನಗರಗಳಲ್ಲಿ ಬ್ಯಾಂಕ್ ರಜಾದಿನ.
ಮೇಲಿನ ಬ್ಯಾಂಕ್ ರಜಾದಿನಗಳನ್ನು ಹೊರತುಪಡಿಸಿ ಬ್ಯಾಂಕ್ ರಜಾದಿನಗಳಾದ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು, ಭಾನುವಾರಗಳು ಈ ಕೆಳಗಿನ ದಿನಾಂಕಗಳಲ್ಲಿ ಬರುತ್ತವೆ:
ದಿನಾಂಕ
ರಜೆಗೆ ಕಾರಣ
ಜೂನ್ 5
ಭಾನುವಾರ
ಜೂನ್ 11
ಎರಡನೇ ಶನಿವಾರ
ಜೂನ್ 12
ಭಾನುವಾರ
ಜೂನ್ 19
ಭಾನುವಾರ
ಜೂನ್ 25
ನಾಲ್ಕನೇ ಶನಿವಾರ
ಜೂನ್ 26
ಭಾನುವಾರ
ರಾಜ್ಯ ಘೋಷಿತ ರಜಾದಿನಗಳ ಪ್ರಕಾರ ವಿವಿಧ ಪ್ರದೇಶಗಳಲ್ಲಿ ಉಲ್ಲೇಖಿಸಲಾದ ದಿನಗಳ ರಜಾದಿನಗಳನ್ನು ಆಚರಿಸಲಾಗುತ್ತದೆ, ಆದರೆ ಗೆಜೆಟೆಡ್ ರಜಾದಿನಗಳಂದು ದೇಶದಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಎಲ್ಲಾ ಹಬ್ಬಗಳಿಗೂ ಬ್ಯಾಂಕ್ ರಜೆ ಇರಲ್ಲ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಬ್ಯಾಂಕುಗಳು ಎರಡು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಆದರೆ ಇತರ ದಿನಗಳು ವಾರಾಂತ್ಯದ ದಿನಗಳಾಗಿವೆ. ಆದರೂ ಎಲ್ಲಾ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಎಲ್ಲಾ ಹಬ್ಬಗಳಿಗೆ ಬ್ಯಾಂಕ್‌ಗಳನ್ನು ಮುಚ್ಚಲಾಗುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ಉದಾಹರಣೆಗೆ, ದೆಹಲಿಯಲ್ಲಿ ಬ್ಯಾಂಕ್ ಶಾಖೆಗಳನ್ನು ಮುಚ್ಚಿದರೆ ಅದೇ ದಿನ ಬೆಂಗಳೂರಿನಲ್ಲೂ ಬ್ಯಾಂಕ್ ಮುಚ್ಚಿರಬೇಕು ಅಂತೇನಿಲ್ಲ.
3 ರೀತಿಯ ಬ್ಯಾಂಕ್ ರಜೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರಜಾದಿನಗಳನ್ನು ಮೂರು ರೀತಿಯ ಅಡಿಯಲ್ಲಿ ನಿಗಡಿಪಡಿಸುತ್ತದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನಗಳು ಎಂಬ ವರ್ಗದಲ್ಲಿ ರಿಸರ್ವ್ ಬ್ಯಾಂಕ್ ರಜಾದಿನಗಳನ್ನು ನಿಗದಿಪಡಿಸುತ್ತದೆ.
ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.
ಈ ರಜಾದಿನಗಳನ್ನು ನೀವು ತಿಳಿದಿಟ್ಟುಕೊಂಡಿದ್ದರೆ ಬ್ಯಾಂಕ್ ವಹಿವಾಟು ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಯೋಜಿಸಲು ನಿಮಗೆ ಸಾಧ್ಯವಾಗುತ್ತದೆ. ದೀರ್ಘ ವಾರಾಂತ್ಯಗಳಲ್ಲಿ ನಿಮ್ಮ ರಜಾದಿನಗಳನ್ನು ಸಹ ನೀವು ಚೆನ್ನಾಗಿ ಯೋಜನೆ ರೂಪಿಸಬಹುದು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ