ಇನ್ನೇನು ತಡವಿಲ್ಲ ಹೊಸ ಆರ್ಥಿಕ ವರ್ಷ ಕೆಲವೇ ದಿನಗಳಿಗೆ ಬಂದೇಬಿಡುತ್ತದೆ. ಏಪ್ರಿಲ್ 1 ರಿಂದ (April 1) ಹೊಸ ಆರ್ಥಿಕ ವರ್ಷ ಆರಂಭವಾಗುತ್ತದೆ ಪ್ರಾರಂಭವಾಗುತ್ತದೆ. ಹೊಸ ಆರ್ಥಿಕ ವರ್ಷದ (New Financial Year) ಮೊದಲ ತಿಂಗಳು, ಅಂದರೆ ಏಪ್ರಿಲ್ನಲ್ಲಿ ಬ್ಯಾಂಕ್ಗಳಿಗೆ ಭೇಟಿ ನೀಡುವವರು ಒಂದಷ್ಟು ವಿಷಯಗಳನ್ನು ಅರಿತಿರಬೇಕು. ಏಪ್ರಿಲ್ 2022 ರಲ್ಲಿ (Bank Holiday April 2022) ದೇಶದ ವಿವಿಧ ಬ್ಯಾಂಕ್ಗಳ ಶಾಖೆಗಳು ಮುಚ್ಚುವ ದಿನಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿಯೇ ಸಂಗ್ರಹಿಸಿ ನೀಡಲಾಗಿದೆ. ಈ ವರ್ಷ ಏಪ್ರಿಲ್ನಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಎರಡೂ ಬ್ಯಾಂಕ್ಗಳಿಗೆ 9 ರಜೆಗಳಿವೆ.
ಬ್ಯಾಂಕ್ ಖಾತೆಗಳ ವಾರ್ಷಿಕ ಮುಕ್ತಾಯವಾದ ಏಪ್ರಿಲ್ 1 ರಿಂದ ಪ್ರಾರಂಭಿಸಿ, ತಿಂಗಳಲ್ಲಿ ಕನಿಷ್ಠ 2 ದೀರ್ಘ ವಾರಾಂತ್ಯಗಳು ಇರುತ್ತವೆ. ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಏಪ್ರಿಲ್ 1 ಶುಕ್ರವಾರದಂದು ಬರುವುದರಿಂದ ಏಪ್ರಿಲ್ನಲ್ಲಿ ಮೊದಲ 3 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 1 ರಂದು ರಜೆ ಏಕೆ? ಏಪ್ರಿಲ್ 1 ರಿಂದ ಪ್ರಾರಂಭವಾಗುವ ತಿಂಗಳು ಬ್ಯಾಂಕ್ ವಹಿವಾಟುಗಳ ವಾರ್ಷಿಕ ಮುಕ್ತಾಯವಾದ ತಿಂಗಳಾಗಿದೆ. ಏಪ್ರಿಲ್ 1ರಂದು ಬ್ಯಾಂಕ್ಗಳು ತೆರೆದಿಡುವುದಿಲ್ಲ. ಹೆಚ್ಚಿನ ಎಲ್ಲಾ ಶಾಖೆಗಳು ಏಪ್ರಿಲ್ 1ನೇ ತಾರೀಕಿನಂದು ಮುಚ್ಚಲ್ಪಡುತ್ತವೆ. ಏಪ್ರಿಲ್ 1 ಶುಕ್ರವಾರದಂದು ಬರುತ್ತದೆ. ನಂತರದ ಎರಡು ದಿನಗಳು ಶನಿವಾರ ಮತ್ತು ರವಿವಾರ ಬರುವ ಕಾರಣದಿಂದ ಏಪ್ರಿಲ್ನಲ್ಲಿ ಮೊದಲ ಮೂರು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.
ಯುಗಾದಿ ಹಬ್ಬದ ರಜೆ ಏಪ್ರಿಲ್ 2 ರಂದು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಯುಗಾದಿ ಹಬ್ಬ ಎಂದು ಗುರುತಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇದೇ ಹಬ್ಬವನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ. ಇದೇ ದಿನವನ್ನು ತೆಲುಗು ಹೊಸ ವರ್ಷದ ದಿನ ಮತ್ತು ಸಜಿಬು ನೋಂಗ್ಮಾಪನ್ಬಾ (ಚೀರಾಬಾ) ಎಂದು ಆಚರಿಸಲಾಗುತ್ತದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಸೇರಿದಂತೆ ಎಲ್ಲೆಡೆ ಬ್ಯಾಂಕ್ಗಳು ಏಪ್ರಿಲ್ 2ರಂದು ಮುಚ್ಚಿರುತ್ತವೆ. ಏಕೆಂದರೆ ತಿಂಗಳ ಮೊದಲ ಶನಿವಾರ ಏಪ್ರಿಲ್ 2 ರಂದು ಬಂದಿದೆ.
ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಏಪ್ರಿಲ್ 14 ರಂದು ವಿವಿಧ ಪ್ರದೇಶಗಳಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ಮಹಾವೀರ್ ಜಯಂತಿ/ಬೈಸಾಖಿ/ವೈಶಾಖಿ/ತಮಿಳು ಹೊಸ ವರ್ಷದ ದಿನ/ಚೀರೋಬಾ/ಬಿಜು ಹಬ್ಬ/ಬೋಹಾಗ್ ಬಿಹು ಎಂದು ಆಚರಿಸುತ್ತಾರೆ. ಏಪ್ರಿಲ್ 15ನ್ನು ಶುಭ ಶುಕ್ರವಾರ/ಬಂಗಾಳಿ ಹೊಸ ವರ್ಷದ ದಿನವನ್ನಾಗಿ ಆಚರಿಸಲಾಗುತ್ತದೆ. (ನಬಾಬರ್ಶಾ)/ಹಿಮಾಚಲ ದಿನ/ವಿಶು/ಬೋಹಾಗ್ ಬಿಹು ಎಂದು ಸಹ ಈ ದಿನವನ್ನು ಹಲವೆಡೆ ಕರೆಯಲಾಗುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ ಈ ಕೆಲವು ದಿನಗಳನ್ನು ಹೊರತುಪಡಿಸಿ ರಜಾದಿನಗಳಲ್ಲಿ ಹೆಚ್ಚಿನವು ಕೆಲವು ನಗರಗಳು ಮತ್ತು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು ಮತ್ತು ದೇಶಾದ್ಯಂತ ಪ್ರಾದೇಶಿಕ ಬ್ಯಾಂಕ್ಗಳು ಸೂಚಿಸಿದ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ.
RBI ರಜಾದಿನಗಳ ಪಟ್ಟಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ರಾಜ್ಯ-ನಿರ್ದಿಷ್ಟ ಹಬ್ಬಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳು, ಆರ್ಬಿಐ ಈ ವರ್ಗಗಳ ಅಡಿಯಲ್ಲಿ ಸಾಲದಾತರಿಗೆ ಈ ರೀತಿ ರಜಾದಿನಗಳನ್ನು ಸೂಚಿಸಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ ಮತ್ತು ಬ್ಯಾಂಕ್ಗಳ ಖಾತೆಗಳನ್ನು ಮುಚ್ಚುವುದು ಎಂಬುದೇ ಆ ರಜಾದಿನಗಳಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ