Bank Holiday: ಫೆಬ್ರವರಿ 15 ರಿಂದ 11 ದಿನ ಬ್ಯಾಂಕ್ ಗೆ ರಜೆ; ಬೇಗ ಬೇಗ ಬ್ಯಾಂಕಿಗೆ ಸಂಬಂಧಿಸಿದ ಕೆಲಸ ಮುಗಿಸಿಕೊಳ್ಳಿ

ಸಾರ್ವಜನಿಕ (Public) ಮತ್ತು ಖಾಸಗಿ (Private) ವಲಯದ ಬ್ಯಾಂಕ್‌(Banks)ಗಳು ತಿಂಗಳ ಉಳಿದ ದಿನಗಳಲ್ಲಿ 11 ದಿನಗಳವರೆಗೆ ಮುಚ್ಚಲಿವೆ. ಇವುಗಳಲ್ಲಿ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರದ (Bank Strike) ಕಾರಣ ಬ್ಯಾಂಕ್‌ನಲ್ಲಿ ಯಾವುದೇ ಕೆಲಸ ಇರುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bank Holiday: ಪ್ರತಿ ತಿಂಗಳು ಬ್ಯಾಂಕ್(Bank)‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆ(Holidays)ಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ(Bank Customers) ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.  ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೆ, ಅವುಗಳನ್ನು ತಕ್ಷಣವೇ ಇತ್ಯರ್ಥಪಡಿಸಿ. ಏಕೆಂದರೆ ಈಗ ಎಲ್ಲಾ ಸಾರ್ವಜನಿಕ (Public) ಮತ್ತು ಖಾಸಗಿ (Private) ವಲಯದ ಬ್ಯಾಂಕ್‌(Banks)ಗಳು ತಿಂಗಳ ಉಳಿದ ದಿನಗಳಲ್ಲಿ 11 ದಿನಗಳವರೆಗೆ ಮುಚ್ಚಲಿವೆ. ಇವುಗಳಲ್ಲಿ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರದ (Bank Strike) ಕಾರಣ ಬ್ಯಾಂಕ್‌ನಲ್ಲಿ ಯಾವುದೇ ಕೆಲಸ ಇರುವುದಿಲ್ಲ, ಉಳಿದ ದಿನಗಳಲ್ಲಿ ಶನಿವಾರ ಮತ್ತು ಭಾನುವಾರ ರಜಾದಿನಗಳು ಸೇರಿವೆ.

ಫೆಬ್ರವರಿ 15 ರಿಂದ ರಜೆ ಪ್ರಾರಂಭ

ಬ್ಯಾಂಕುಗಳಿಗೆ ತಮ್ಮ ಹಣಕಾಸಿನ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಜನರಿಗೆ ರಜಾ ದಿನಗಳ ಜೊತೆ ಮುಷ್ಕರದಿಂದಾಗಿ ತೊಂದರೆಯಾಗುತ್ತದೆ. ಇದು ಸಾರ್ವಜನಿಕ ವಲಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿರುವ ರಜಾದಿನಗಳ ಪಟ್ಟಿ ಗಮನಸಿದ್ರೆ ಫೆಬ್ರವರಿ 15 ರಿಂದ ರಜೆಗಳು ಪ್ರಾರಂಭವಾಗುತ್ತವೆ.

ಗುರು ರವಿದಾಸ್ ಜಯಂತಿ, ಛತ್ರಪತಿ ಶಿವಾಜಿ ಜಯಂತಿ ಮತ್ತು ಮೊಹಮ್ಮದ್ ಹಜರತ್ ಅಲಿ ಅವರ ಜನ್ಮದಿನದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇದಲ್ಲದೇ ಫೆ.23 ಮತ್ತು 24ರಂದು ನೌಕರರ ಮುಷ್ಕರದಿಂದಾಗಿ ಬ್ಯಾಂಕ್ ಶಾಖೆಯಲ್ಲಿ ಕೆಲಸ ನಡೆಯುವುದಿಲ್ಲ. ಮತ್ತೊಂದೆಡೆ, ಭಾನುವಾರ ಮತ್ತು ಶನಿವಾರದ ಕಾರಣ ಐದು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ:  RBIನ ಈ ಯೋಜನೆ ಜೊತೆಗೂಡಿ FDಗಿಂತ ಹೆಚ್ಚಿನ ಬಡ್ಡಿಯನ್ನು ನಿಮ್ಮದಾಗಿಸಿಕೊಳ್ಳಿ

ಬ್ಯಾಂಕ್ ರಜೆ, ಮುಷ್ಕರವಿದ್ರೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ವಾರಾಂತ್ಯದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಹಣ ವರ್ಗಾವಣೆ ಸೇರಿದಂತೆ ಇನ್ನಿತರ ಸೇವೆಗಳು ಆನ್ ಲೈನ್ ಬ್ಯಾಂಕಿಂಗ್ ನಲ್ಲಿ ಲಭ್ಯವಿರುತ್ತದೆ.

ಬ್ಯಾಂಕ್ ಮುಷ್ಕರ ಸೇವೆಗಳ ಮೇಲೆ ಪರಿಣಾಮ ಬೀರಲಿದೆ

ಫೆಬ್ರುವರಿ 23 ಮತ್ತು 24 ರಂದು ಬ್ಯಾಂಕ್ ನೌಕರರು ಮತ್ತೊಮ್ಮೆ ಮುಷ್ಕರ ನಡೆಸಲಿದ್ದಾರೆ. ಈ ಬಗ್ಗೆ ಜನವರಿಯಲ್ಲಿ ಬ್ಯಾಂಕ್ ಮುಷ್ಕರದ ಮಾಹಿತಿ ನೀಡಲಾಗಿತ್ತು. ಸರ್ಕಾರದ ಕಾರ್ಮಿಕ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ಕೇಂದ್ರ ಕಾರ್ಮಿಕ ಸಂಘಗಳು (CTU) ಮತ್ತು ಇತರ ಸಂಘಟನೆಗಳು ಫೆಬ್ರವರಿ 23 ಮತ್ತು 24 ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳ ನೌಕರರು ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕೇಂದ್ರ ಸಮಿತಿ ಕೂಡ ಈ ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ.

ಇದನ್ನೂ ಓದಿ:  Dried Mango Leaves: ಮಾವಿನ ಹಣ್ಣಿಗಿಂತ ಒಣಗಿದ ಎಲೆಗಳಿಗೆ ಹೆಚ್ಚು ಬೇಡಿಕೆ: ಇದು ಲಕ್ಷ ಲಕ್ಷ ಗಳಿಸುವ ವ್ಯವಹಾರ

ರಾಜ್ಯಗಳಲ್ಲಿ ರಜಾ ದಿನಗಳು ಭಿನ್ನವಾಗಿರುತ್ತವೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿಯಲ್ಲಿ ತನ್ನ ಪಟ್ಟಿಯಲ್ಲಿ ಹಲವಾರು ದಿನಗಳವರೆಗೆ ಬ್ಯಾಂಕ್ ಅನ್ನು ಮುಚ್ಚುವುದಾಗಿ ಘೋಷಿಸಿದೆ. ನೀವು ಆನ್‌ ಲೈನ್ ಮೋಡ್‌ ನಲ್ಲಿ ಬ್ಯಾಂಕಿಂಗ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. ಹಬ್ಬಗಳ ನಿಮಿತ್ತ ರಾಜ್ಯಗಳಲ್ಲಿ ಬೇರೆ ಬೇರೆ ದಿನಗಳು ರಜೆ ಇರಲಿವೆ.

ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿ ಬ್ಯಾಂಕ್ ರಜಾದಿನಗಳು ಬದಲಾಗುತ್ತವೆ. ವಾಸ್ತವವಾಗಿ, ಬ್ಯಾಂಕಿಂಗ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿನ ಹಬ್ಬಗಳ ಮೇಲೆ ಅವಲಂಬಿತವಾಗಿರುತ್ತದೆ.

ರಜಾ ದಿನಗಳ ಮಾಹಿತಿ ಇಲ್ಲಿದೆ

ಫೆಬ್ರವರಿ 15: ಮೊಹಮ್ಮದ್ ಹಜರತ್ ಅಲಿ/ಲೂಯಿಸ್-ನಾಗೈ-ನೀ ಇಂಫಾಲ್, ಕಾನ್ಪುರ್ ಮತ್ತು ಲಕ್ನೋ ಅವರ ಜನ್ಮದಿನ

ಫೆಬ್ರವರಿ 16: ಗುರು ರವಿದಾಸ್ ಜಯಂತಿ ಚಂಡೀಗಢ

ಫೆಬ್ರವರಿ 18: ಡೊಲ್ಜಾತ್ರಾ ಕೋಲ್ಕತ್ತಾ

ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಬೇಲಾಪುರ, ಮುಂಬೈ ಮತ್ತು ನಾಗ್ಪುರ ಅವರ ಜನ್ಮದಿನ

ಫೆಬ್ರವರಿ 23: ಬ್ಯಾಂಕ್ ಮುಷ್ಕರ

ಫೆಬ್ರವರಿ 24: ಬ್ಯಾಂಕ್ ಮುಷ್ಕರ

ಫೆಬ್ರವರಿ 13, 20, 27: ಭಾನುವಾರದ ರಜೆ

ಫೆಬ್ರವರಿ 12, 26 : ಎರಡು ಮತ್ತು ನಾಲ್ಕನೇ ಶನಿವಾರ
Published by:Mahmadrafik K
First published: