FD: ಫಿಕ್ಸೆಡ್ ಡೆಪಾಸಿಟ್ ಮಾಡುವ ಪ್ಲಾನ್ ಇದೆಯಾ? ಹಾಗಿದ್ರೆ ಸ್ವಲ್ಪ ದಿನ ವೇಟ್ ಮಾಡಿ

Fixed Deposit: ನೀವೂ ಏನಾದ್ರೂ ಈ ಪ್ಲಾನ್ ಮಾಡುತ್ತಿದ್ರೆ ಒಂದಿಷ್ಟು ದಿನ ವೇಟ್ ಮಾಡೋದು ತುಂಬಾನೇ ಒಳ್ಳೆಯದು. ಯಾಕೆ ಅಂತ ನೀವು ಕೇಳಬಹುದು. ಅದಕ್ಕೂ ಒಂದು ಬಲವಾದ ಕಾರಣವಿದೆ, ಅದೇನೂ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿ ಅಥವಾ ಕೈಯಲ್ಲಿ ಒಂದಿಷ್ಟು ಮೊತ್ತ (Amount) ಇದ್ರೆ ಏನು ಮಾಡೋದು ಅಂತ ಎಲ್ಲರೂ ಯೋಚನೆ ಮಾಡುತ್ತಾರೆ. ಬಹುತೇಕ ಸಾಮಾನ್ಯ ಜನರು ಇರೋ ಒಂದಿಷ್ಟು ಹಣ(Money)ವನ್ನು ಬ್ಯಾಂಕ್ (Bank) ನಲ್ಲಿ ಡೆಪಾಸಿಟ್ (Deposite) ಮಾಡೋಣ. ಒಂದಿಷ್ಟು ಬಡ್ಡಿ (Interest Amount) ಆದ್ರೂ ಬರುತ್ತೆ ಅಂತ ಲೆಕ್ಕ ಹಾಕುತ್ತಾರೆ. ನೀವೂ ಏನಾದ್ರೂ ಈ ಪ್ಲಾನ್ ಮಾಡುತ್ತಿದ್ರೆ ಒಂದಿಷ್ಟು ದಿನ ವೇಟ್ ಮಾಡೋದು ತುಂಬಾನೇ ಒಳ್ಳೆಯದು. ಯಾಕೆ ಅಂತ ನೀವು ಕೇಳಬಹುದು. ಅದಕ್ಕೂ ಒಂದು ಬಲವಾದ ಕಾರಣವಿದೆ, ಅದೇನೂ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ.  ನೀವು ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ Fixed Deposite) ಮಾಡಲು ಯೋಜಿಸುತ್ತಿದ್ದರೆ, ಸ್ವಲ್ಪ ಕಾಯಿರಿ. ಕಾರಣ ನೀವು ಹೆಚ್ಚಿನ  ಬಡ್ಡಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಈಗ ಬ್ಯಾಂಕ್‌ಗಳು ಮತ್ತು ಇತರ ಸಾಲ ನೀಡುವ ಕಂಪನಿಗಳು ಎಫ್‌ಡಿ (FD) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿವೆ.

ಜನವರಿಯಿಂದ ಬಡ್ಡಿ ಹೆಚ್ಚಿಸುವ ವೇಗ ಹೆಚ್ಚಲಿದೆ

ಜನವರಿಯಿಂದ ಬಡ್ಡಿದರ ಏರಿಕೆಯ ವೇಗ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಆಯ್ದ ಸಮಯದ FD ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಹೊಸ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬಂದಿವೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 7 ರಿಂದ 29 ದಿನಗಳ FD ಗಳಲ್ಲಿ 2.50% ಬಡ್ಡಿ ಲಭ್ಯವಿರುತ್ತದೆ. 30 ರಿಂದ 90 ದಿನಗಳ ಠೇವಣಿಗಳ ಮೇಲೆ 3% ಮತ್ತು 91 ದಿನಗಳಿಂದ 6 ತಿಂಗಳ ಅವಧಿಯ ಠೇವಣಿಗಳ ಮೇಲೆ 3.5% ಬಡ್ಡಿ ಲಭ್ಯವಿರುತ್ತದೆ.

ಪ್ರತಿ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ

ಅದೇ ರೀತಿ, 6 ತಿಂಗಳಿಗಿಂತ ಹೆಚ್ಚು ಮತ್ತು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ FD ಗಳಿಗೆ 4.4% ಬಡ್ಡಿ ನೀಡಲಾಗುತ್ತದೆ. ಬ್ಯಾಂಕ್ ಒಂದು ವರ್ಷಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ 4.9% ಬಡ್ಡಿಯನ್ನು ನೀಡುತ್ತದೆ. 2 ವರ್ಷಗಳ ಅವಧಿಯ ಠೇವಣಿಗಳ ಮೇಲೆ 5% ಬಡ್ಡಿ ಲಭ್ಯವಿರುತ್ತದೆ. 3 ವರ್ಷದ ಅವಧಿಯ ಮೇಲೆ 5.35 ಮತ್ತು 5 ವರ್ಷದಿಂದ 10 ವರ್ಷಗಳ ಠೇವಣಿಯ ಮೇಲೆ 5.50% ಬಡ್ಡಿ. ಈ ಎಲ್ಲಾ ಬಡ್ಡಿಯನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ.

ಇದನ್ನೂ ಓದಿ:  Cheaper EVs- ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಗಣನೀಯ ಇಳಿಕೆ ಸಾಧ್ಯತೆ

ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ

ಹಿರಿಯ ನಾಗರಿಕರಿಗೆ ಶೇಕಡ ಅರ್ಧದಷ್ಟು ಬಡ್ಡಿ ಹೆಚ್ಚುವರಿಯಾಗಿ ದೊರೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ. ಸಾಮಾನ್ಯ ಜನರು 3% ಬಡ್ಡಿಯನ್ನು ಪಡೆದರೆ ಹಿರಿಯ ನಾಗರಿಕರು 3.5% ಬಡ್ಡಿಯನ್ನು ಪಡೆಯುತ್ತಾರೆ. ಇತರ ಬ್ಯಾಂಕುಗಳ ಬಡ್ಡಿ ದರ ಗಮನಿಸಿದ್ರೆ., ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2.9 ರಿಂದ 5.4% ರ ನಡುವೆ ಬಡ್ಡಿಯನ್ನು ನೀಡುತ್ತಿದೆ. ICICI ಬ್ಯಾಂಕ್ 2.5 ರಿಂದ 5.5% ಬಡ್ಡಿ ನೀಡುತ್ತಿದೆ.

ಎನ್‌ಬಿಎಫ್‌ಸಿಗಳು ಸಹ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ

ಈ ಹಿಂದೆ, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ NBFC) ಸಹ ಬಡ್ಡಿದರಗಳನ್ನು ಹೆಚ್ಚಿಸಿವೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಬಜಾಜ್ ಫೈನಾನ್ಸ್ ಮಂಗಳವಾರ ಬಡ್ಡಿದರದಲ್ಲಿ ಹೆಚ್ಚಳವನ್ನು ಘೋಷಿಸಿವೆ. ಎಲ್ಲಾ ಬ್ಯಾಂಕುಗಳು ಮತ್ತು ಕಂಪನಿಗಳು ಜನವರಿಯಿಂದ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ ಎಂದು ಬ್ಯಾಂಕಿಂಗ್ ಉದ್ಯಮವು ನಂಬುತ್ತದೆ. ಏಕೆಂದರೆ ಮುಂದಿನ ವರ್ಷದಿಂದ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ತಮ್ಮ ರೆಪೋ ದರವನ್ನು ಹೆಚ್ಚಿಸಲು ಯೋಜಿಸುತ್ತಿವೆ.

ಇದನ್ನೂ ಓದಿ:  ನಿಮ್ಮಲ್ಲಿ 786 ನಂಬರ್ ಇರುವ ನೋಟ್ ಇದ್ದರೆ 3 ಲಕ್ಷ ಲಾಭ; ಇಲ್ಲಿದೆ ವಿವರ

ಮುಂದಿನ ವಾರ ಆರ್‌ಬಿಐ ಸಭೆ

ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಭೆ ಮುಂದಿನ ವಾರ ನಡೆಯಲಿದೆ. ಇದರಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಬಹುದು ಎಂದು ವರದಿಯಾಗುತ್ತಿದೆ. ಪ್ರಸ್ತುತ, ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳು ಅತ್ಯಂತ ಕೆಳಮಟ್ಟಕ್ಕೆ ತಲುಪಿವೆ. ಅಂತಹ ಪರಿಸ್ಥಿತಿಯಲ್ಲಿ, ಠೇವಣಿ ಮೇಲಿನ ಬಡ್ಡಿಯು ಹೆಚ್ಚಾದಾಗ, ನೀವು ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
Published by:Mahmadrafik K
First published: