• Home
  • »
  • News
  • »
  • business
  • »
  • Bandhani Making: ಅರ್ಧ ಲಕ್ಷ ಜನರಿಗೆ ಉದ್ಯೋಗ ನೀಡಿದ ಬಾಂಧಣಿ ತಯಾರಿಸುವ ಕೆಲಸ

Bandhani Making: ಅರ್ಧ ಲಕ್ಷ ಜನರಿಗೆ ಉದ್ಯೋಗ ನೀಡಿದ ಬಾಂಧಣಿ ತಯಾರಿಸುವ ಕೆಲಸ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಜರಾತ್ ನ ಜಾಮ್‌ನಗರದಲ್ಲಿರುವ ಬಾಂಧಣಿ ತಯಾರಿಸುವ ವ್ಯವಹಾರ ಒಂದು ಕನಿಷ್ಠ 50,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಜೀವನೋಪಾಯವನ್ನು ಒದಗಿಸಲು ಸಾಧ್ಯವಾಗಿದೆ.

  • Share this:

ಕೆಲವು ಕೆಲಸಗಳು (Works) ಅನೇಕ ಜನರ ಹೊಟ್ಟೆಪಾಡಿಗೆ ಒಂದು ದಾರಿಯನ್ನು ಮಾಡಿಕೊಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಇಲ್ಲಿಯೂ ಸಹ ಅದೇ ರೀತಿಯ ಒಂದು ವ್ಯವಹಾರವು (Business) ಅರ್ಧ ಲಕ್ಷ ಜನರಿಗೆ ಉದ್ಯೋಗವನ್ನು (Job) ಒದಗಿಸಿದೆ ಅಂತ ಹೇಳಲಾಗುತ್ತಿದೆ. ‘ಬಾಂಧಣಿ’ ಮಾಡುವ ಒಂದು ಬಿಸಿನೆಸ್ ಅರ್ಧ ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸಿದೆ ನೋಡಿ. ಬಹಳಷ್ಟು ಜನರಿಗೆ ಈ ಬಾಂಧಣಿ ಎಂದರೆ ಏನು ಅಂತ ಗೊತ್ತಿರಲಿಕ್ಕಿಲ್ಲ. ಹೌದು, ಇದು ಪಶ್ಚಿಮ ಭಾರತದ ಜನರಿಗೆ ಬೇಗನೆ ಅರ್ಥವಾಗುತ್ತದೆ.


ಏನಿದು ‘ಬಾಂಧಣಿ’ ಮಾಡುವ ಕೆಲಸ?


ಟೈ-ಡೈಯಿಂಗ್ ನ ಅತ್ಯಂತ ಹಳೆಯ ವಿಧಾನಗಳಲ್ಲಿ ಒಂದಾದ ಬಾಂಧಣಿ, ಇಂದಿಗೂ ಪಶ್ಚಿಮ ಭಾರತದಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದೆ. ಬಟ್ಟೆಯ ಅತ್ಯಂತ ಸಣ್ಣ ಭಾಗಗಳನ್ನು ಕೈ ಉಗುರುಗಳಿಂದ ಚಿವುಟುವ ಮೂಲಕ ಆ ಚಿವುಟಿದ ಬಟ್ಟೆಯನ್ನು ಅನೇಕ ಸಣ್ಣ ಬೈಂಡಿಂಗ್ ಗಳಲ್ಲಿ ಎಳೆಯುವ ಮೂಲಕ ಅವುಗಳನ್ನು ಚಿಕ್ಕ ಚಿಕ್ಕ ಚುಕ್ಕೆಗಳಾಗಿ ಕಟ್ಟುವ ಮೂಲಕ ಆ ಬಟ್ಟೆಗೆ ಒಂದು ವಿಭಿನ್ನ ರೀತಿಯ ಡಿಸೈನ್ ನೀಡುವುದೇ ಬಾಂಧಣಿ ಕಲೆ ಎಂದೆನೆಸಿದೆ.


50 ಸಾವಿರ ಜನರಿಗೆ ಉದ್ಯೋಗ


ಗುಜರಾತ್ ನ ಜಾಮ್‌ನಗರದಲ್ಲಿರುವ ಬಾಂಧಣಿ ತಯಾರಿಸುವ ವ್ಯವಹಾರ ಒಂದು ಕನಿಷ್ಠ 50,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಜೀವನೋಪಾಯವನ್ನು ಒದಗಿಸಲು ಸಾಧ್ಯವಾಗಿದೆ.


ಬಾಂಧಣಿ ಎಂಬುದು ಸೀರೆಗಳು, ದುಪಟ್ಟಾಗಳು ಮತ್ತು ಸ್ಟೋಲ್ ಗಳಿಗೆ ಬಟ್ಟೆ ವಸ್ತುಗಳನ್ನು ತಯಾರಿಸಲು ಬಳಸುವ ಒಂದು ಸಾಂಪ್ರದಾಯಿಕ ಕಲಾ ಪ್ರಕಾರವಾಗಿದೆ. ಇದು ಜಾಮ್‌ನಗರಕ್ಕೆ ವಿಶ್ವದಾದ್ಯಂತ ಮಾನ್ಯತೆಯನ್ನು ನೀಡಿದೆ. ಇಲ್ಲಿನ ಪುರುಷರು ಬಟ್ಟೆಗೆ ಬಣ್ಣ ಹಚ್ಚುತ್ತಾರೆ ಮತ್ತು ಮಹಿಳೆಯರು ಅವುಗಳನ್ನು ಕಟ್ಟುತ್ತಾರೆ, ಇದು ಪ್ರಾಯೋಗಿಕವಾಗಿ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ.


ಬಾಂಧಣಿ ತಯಾರಿಕೆಯಲ್ಲಿ ಶೇಕಡಾ 75 ರಷ್ಟು ಕೊಡುಗೆ ನೀಡ್ತಾರೆ ಇಲ್ಲಿನ ಮಹಿಳೆಯರು


ಇಲ್ಲಿನ ಮಹಿಳೆಯರು ಬಾಂಧಣಿ ತಯಾರಿಕೆಯಲ್ಲಿ ಶೇಕಡಾ 75 ರಷ್ಟು ಕೊಡುಗೆ ನೀಡುತ್ತಾರೆ. ಬಾಂಧಣಿ ಕುಶಲಕರ್ಮಿ ಸಲೀಂ, ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ “ಬಾಂಧಣಿ ತಯಾರಿಕೆಯ ವೃತ್ತಿಯು 5,000 ವರ್ಷಗಳಷ್ಟು ಹಳೆಯದಾಗಿದ್ದು, ಮಹಾಭಾರತದ ಯುಗದಿಂದಲೂ ಕಾರ್ಯ ನಿರ್ವಹಿಸುತ್ತಿದೆ, ಎಂಬುದನ್ನು ಅವರು ತಮ್ಮ ಪೂರ್ವಜರಿಂದ ಕೇಳುತ್ತಾ ಬಂದಿದ್ದಾರಂತೆ. ಬಾಂಧಣಿಯನ್ನು ನಗರದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಇಬ್ಬರೂ ತಯಾರಿಸುತ್ತಾರೆ ಎಂಬುದು ಅವರ ಹೇಳಿಕೆಯಾಗಿದೆ.


ಈ ವ್ಯವಹಾರದಲ್ಲಿ ಅವರು ತಮ್ಮ ಕುಟುಂಬದಲ್ಲಿ ಏಳನೇ ತಲೆಮಾರಿನವರು ಎಂದು ಸಲೀಮ್ ಹೇಳಿಕೊಳ್ಳುತ್ತಾರೆ.


"ಮನೆಯಲ್ಲಿ ಒಂದೆಡೆ ಕುಳಿತುಕೊಂಡು ಮಾಡಬಹುದಾದ ಬಾಂಧಣಿ ತಯಾರಿಕೆಯ ಕೆಲಸವು ಕನಿಷ್ಠ 50,000 ಜಾಮ್‌ನಗರ ಮೂಲದ ಜನರನ್ನು ಅವಲಂಬಿಸಿದೆ" ಎಂದು ಸಲೀಂ ಹೇಳಿದರು.


ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳನ್ನು ಉತ್ತೇಜಿಸುವಲ್ಲಿ ಸರ್ಕಾರವು ತನ್ನ ಪಾತ್ರವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.


"ಇದು ಕೈಯಿಂದ ಮಾಡಬೇಕಾದ ಕೆಲಸವಾಗಿದ್ದು, ಯಂತ್ರಗಳ ಬಳಕೆ ಇಲ್ಲಿರುವುದಿಲ್ಲ. ಪುರುಷರು ಮತ್ತು ಮಹಿಳೆಯರು ಇಬ್ಬರು ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ" ಎಂದು ಅವರು ಹೇಳಿದರು.


ಈ ಕೆಲಸದ ಬಗ್ಗೆ ಏನ್ ಹೇಳಿದ್ರು ನೋಡಿ ಬಾಂಧಣಿ ಕುಶಲಕರ್ಮಿ


"ಸುಮಾರು 50 ವರ್ಷಗಳ ಹಿಂದೆ, ಬಣ್ಣ ಹಚ್ಚಲು ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತಿತ್ತು, ಆದರೆ ಈಗ ಪರಿಸರ ಸ್ನೇಹಿ ಬಣ್ಣಗಳ ಬಳಕೆಯಿದೆ. ನಮ್ಮ ಬೇಡಿಕೆಗೆ ಅನುಗುಣವಾಗಿ ಅಂತಹ ಬಣ್ಣಗಳನ್ನು ತಯಾರಿಸಲು ಸರ್ಕಾರವು ಈ ಕೈಗಾರಿಕೆಗಳಿಗೆ ಮಾಹಿತಿ ನೀಡಿದ್ದು ಇದರ ಪರಿಣಾಮವಾಗಿ, ರಫ್ತು ಮಾಡಿದ ಬಾಂಧಣಿಯ 95 ಪ್ರತಿಶತವನ್ನು ಪರಿಸರ ಸ್ನೇಹಿ ಬಣ್ಣಗಳಿಂದ ತಯಾರಿಸಲಾಗುತ್ತದೆ.


ಏಕೆಂದರೆ ರಾಸಾಯನಿಕ-ಸಮೃದ್ಧ ಬಣ್ಣಗಳು ಹೆಚ್ಚಾಗಿ ಭಾರತೀಯರು ಮತ್ತು ಯುರೋಪಿಯನ್ನರಿಗೆ ಚರ್ಮದ ಅಲರ್ಜಿಯನ್ನು ಉಂಟು ಮಾಡುತ್ತವೆ" ಎಂದು ಸಲೀಂ ಹೇಳುತ್ತಾರೆ.


ಜಿಐ ಟ್ಯಾಗ್ ಪಡೆದ  ಕಲಾಕೃತಿ


ಬಾಂಧಣಿಯ ಇನ್ನೊಬ್ಬ ಉದ್ಯಮಿ ವಿಬೋಧ್ ಷಾ ಅವರು ಜಾಮ್‌ನಗರದ ಕಲಾಕೃತಿಯು ಬಣ್ಣ ಹಾಕುವ ಪ್ರಕ್ರಿಯೆಗೆ ಹೆಸರುವಾಸಿಯಾಗಿದೆ ಮತ್ತು ನೀರಿನ ಕಾರಣದಿಂದಾಗಿ, ಅದು ಸುಲಭವಾಗಿ ಕೊಚ್ಚಿ ಹೋಗದ ಸ್ಥಿರ ಬಣ್ಣವನ್ನು ನೀಡುತ್ತದೆ ಎಂದು ಹೇಳಿದರು.


ಜಾಮ್‌ನಗರದ ಬಂದೇಜ್ ಕಲಾಕೃತಿ ಭೌಗೋಳಿಕ ಗುರುತು ಎಂದರೆ ಜಿಐ ಟ್ಯಾಗ್ ಪಡೆದ ಏಕೈಕ ಚಿತ್ರವಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಕುಶಲಕರ್ಮಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಟ್ಟೆಯನ್ನು ವಿನ್ಯಾಸಗೊಳಿಸುತ್ತಾರೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಟಿಡಿಎಸ್ ಕಡಿತದಿಂದ ವಿನಾಯಿತಿ: ಅರ್ಜಿ ಸಲ್ಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ


"ಮಾರ್ವಾಡಿ ಮತ್ತು ಗುಜರಾತಿ ಜನರಿರುವ ವಿದೇಶಗಳಿಗೆ ನಾವು ಇವುಗಳನ್ನು ಕಳುಹಿಸುತ್ತೇವೆ. ಇದನ್ನು ಬಾಲಿವುಡ್ ನಲ್ಲಿಯೂ ಸಹ ಬಳಸಲಾಗುತ್ತದೆ ಮತ್ತು ಟಿವಿ ಧಾರಾವಾಹಿಗಳಲ್ಲಿನ ಹೆಚ್ಚಿನ ನಟರು ಬಾಂಧಣಿ ಧರಿಸುತ್ತಾರೆ" ಎಂದು ಶಾ ತಿಳಿಸಿದರು, ಅವರು 50 ಜನರಿಗೆ ಒಟ್ಟಿಗೆ ತರಬೇತಿ ನೀಡುತ್ತಿರುವುದರಿಂದ ಸರ್ಕಾರ ಸಮಾನ ಕೊಡುಗೆಗಳನ್ನು ನೀಡುತ್ತಿದೆ ಎಂದು ಹೇಳಿದರು. ಆನ್ಲೈನ್ ಪೋರ್ಟಲ್ ನಲ್ಲಿ ಕಲಾವಿದರು ತಮ್ಮನ್ನು ನೋಂದಾಯಿಸಿಕೊಳ್ಳಲು ಸರ್ಕಾರವು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.


ಭಾರತ ಸರ್ಕಾರದಿಂದ ಉಚಿತ ಸ್ಟಾಲ್ ಗಳನ್ನು ಸಹ ನೀಡಿದ್ದಾರಂತೆ!


"ಭಾರತ ಸರ್ಕಾರದ ‘ವೋಕಲ್ ಫಾರ್ ಲೋಕಲ್’ ಅಭಿಯಾನದಿಂದ ನಾವು ಅವರ ಕಡೆಯಿಂದ ಉಚಿತ ಸ್ಟಾಲ್ ಗಳನ್ನು ಸಹ ಪಡೆಯುತ್ತೇವೆ ಮತ್ತು ಅವರಿಂದ ಉತ್ತಮವಾದ ಬೆಂಬಲ ಸಹ ಪಡೆಯುತ್ತಿದ್ದೇವೆ" ಎಂದು ಅವರು ಹೇಳಿದರು.


ಒಟ್ಟಿನಲ್ಲಿ ಈ ಕೆಲಸವು ಇಲ್ಲಿನ ಮಹಿಳೆಯರಿಗೆ ಒಂದು ಉದ್ಯೋಗವನ್ನು ಸಹ ಒದಗಿಸಿದೆ, ಅದರೊಂದಿಗೆ ಅವರು ತಮ್ಮ ಮನೆಗಳನ್ನು ನಡೆಸಲು ಮತ್ತು ತಮ್ಮ ಮಕ್ಕಳ ಶಿಕ್ಷಣವನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: 7000 ಕೋಟಿ ಆಸ್ತಿ ಭಾರ ಹೊರಲು ಒಪ್ಪದ ಮಗಳು! ಇದೇ ಕಾರಣಕ್ಕೆ ಬಿಸ್ಲೆರಿ ಮಾರಿದ್ರಾ ರಮೇಶ್​ ಚೌಹಾಣ್​?


"ಇದು ಬೇಸರದ ಕೆಲಸವಾಗಿದ್ದರೂ, ಬಾಂಧಣಿಯನ್ನು ಹೃತ್ಪೂರ್ವಕವಾಗಿ ಮಾಡಲು ನಾವು ಕೆಲಸ ಮಾಡುತ್ತೇವೆ. ಏಕೆಂದರೆ ಇದು ನಮ್ಮ ಸಾಂಪ್ರದಾಯಿಕ ಪರಂಪರೆಯಾಗಿದೆ" ಎಂದು ಬಾಂಧಣಿ ತಯಾರಿಸುವ ಮಹಿಳೆಯೊಬ್ಬರು ಹೇಳಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು