Home Loan: ಗೃಹಸಾಲದ ಮೇಲೆ ಈ ಬ್ಯಾಂಕುಗಳಲ್ಲಿ ಬಡ್ಡಿ ಹೆಚ್ಚಾಗಿದೆ, ಮನೆ ಕೊಳ್ಳುವವರು ಗಮನಿಸಿ

Interest Increased on Home Loan: ಬ್ಯಾಂಕ್‌ನ ಹೊಸ ಬಡ್ಡಿ ದರವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳಿಗೂ ಅನ್ವಯಿಸುತ್ತದೆ. ಗಮನಾರ್ಹವಾಗಿ, ಈ ಬಡ್ಡಿ ದರದ ಅಡಿಯಲ್ಲಿ ಪಡೆಯಬಹುದಾದ ಸಾಲದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ ಮತ್ತು ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಿಗೆ ಲಭ್ಯವಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Interest on Home Loan: ಗೃಹ ಸಾಲ ಪಡೆಯುವವರಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಕೆಟ್ಟ ಸುದ್ದಿಯೊಂದನ್ನು ನೀಡಿದ್ದು ಹಬ್ಬದ ಆಫರ್ ಮುಗಿದ ಒಡನೆಯೇ ಗೃಹ ಸಾಲದ ಬಡ್ಡಿದರಗಳನ್ನು (Interest) ಹೆಚ್ಚಿಸುವುದಾಗಿ ಘೋಷಿಸಿದೆ. ಗೃಹ ಸಾಲಗಳ ಬಡ್ಡಿದರಗಳನ್ನು ಬ್ಯಾಂಕ್ ಹೆಚ್ಚಿಸಿದ್ದು 5 ಬೇಸಿಸ್ ಪಾಯಿಂಟ್‌ಗಳು ಅಂದರೆ 0.05%ನಷ್ಟು ಏರಿಸಿದೆ. ಈ ಪ್ರಕಾರವಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಗೃಹ ಸಾಲ (Home Loan) ಬಡ್ಡಿದರಗಳು 6.55%ನಿಂದ ಆರಂಭವಾಗುತ್ತವೆ. ಗೃಹ ಸಾಲಗಳಿಗಾಗಿ ಬಡ್ಡಿದರಗಳು ನವೆಂಬರ್ 9 ರಿಂದ ಡಿಸೆಂಬರ್ 10 ರವರೆಗೆ ಅನ್ವಯವಾಗಲಿದೆ. ಈ ಕುರಿತು ಬ್ಯಾಂಕ್ ಹೇಳಿಕೆ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ ಆರಂಭದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಹಬ್ಬದ ಋತುವನ್ನು ವಾರ್ಷಿಕ 6.50% ದರದಲ್ಲಿ ಗೃಹ ಸಾಲ ಬಡ್ಡಿದರಗಳನ್ನು ಪರಿಚಯಿಸಿತು. ಸೀಮಿತ ಅವಧಿಯ ಹಬ್ಬದ ಋತುವಿನ ಆಫರ್ ನವೆಂಬರ್ 8, 2021ಕ್ಕೆ ಮುಕ್ತಾಯಗೊಂಡಿದೆ. ನವೆಂಬರ್ 8ರ ಒಳಗೆ ಅನುಮೋದನೆಗೊಂಡ ಲೋನ್‌ಗಳು ಮುಂದಿನ ಏಳು ದಿನಗಳಲ್ಲಿ ಅಂದರೆ ನವೆಂಬರ್ 15, 2021ರಂದು ವಿತರಣೆಯಾಗಲಿದೆ ಹಾಗೂ ಲೋನ್ ಬಡ್ಡಿದರವು 6.50% ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಸಾಲಕ್ಕೆ ಭಾರೀ ಬೇಡಿಕೆ ಇದೆ

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಗ್ರಾಹಕ ಆಸ್ತಿ (ಕಸ್ಟಮರ್ ಅಸೆಟ್) ಅಧ್ಯಕ್ಷರಾದ ಅಂಬುಜ್ ಚಂದನ್ ಹೇಳುವಂತೆ ಇತ್ತೀಚೆಗೆ ಬ್ಯಾಂಕ್‌ನ 60 ದಿನಗಳ ಹಬ್ಬದ ಋತುವಿನ ಆಫರ್ ಮನೆ ಸಾಲ ಖರೀದಿದಾರರಿಂದ ಹೆಚ್ಚಿನ ಮೆಚ್ಚುಗೆ ಪಡೆದಿದ್ದುಇದರಿಂದ ಹೊಸ ಸಾಲಗಳು ಮತ್ತು ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗಳಲ್ಲಿ ಒಳ್ಳೆಯ ಬೇಡಿಕೆಯನ್ನು ಬ್ಯಾಂಕ್ ಪಡೆದುಕೊಂಡಿದೆ. ಹೀಗಾಗಿ ಹೊಸ ಗೃಹ ಸಾಲ ದರವನ್ನು 6.55%ಕ್ಕೆ ಸಾಲಗಾರರಿಗೆ ವಿಸ್ತರಿಸಲು ಸಂತಸಪಡುತ್ತಿದ್ದು, ಗ್ರಾಹಕರಿಗೆ ತಮ್ಮ ಕನಸಿನ ಮನೆ ಖರೀದಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದ್ದಾರೆ.

ಇದು ಬ್ಯಾಲೆನ್ಸ್ ಟ್ರಾನ್ಸ್​ಫರ್ ಲೋನ್​ಗೂ ಅನ್ವಯ

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಹೊಸ ಬಡ್ಡಿ ದರವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳಿಗೂ ಅನ್ವಯಿಸುತ್ತದೆ. ಗಮನಾರ್ಹವಾಗಿ, ಈ ಬಡ್ಡಿ ದರದ ಅಡಿಯಲ್ಲಿ ಪಡೆಯಬಹುದಾದ ಸಾಲದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ ಮತ್ತು ಇದು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಿಗೆ ಲಭ್ಯವಿದೆ. ಗ್ರಾಹಕರು ಪಡೆಯುವ ಅಂತಿಮ ದರವು ಅವರ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Home Loan: ಗೃಹ ಸಾಲದ ಸಹಾಯದಿಂದ ಮನೆ ಖರೀದಿಸುವ ಆಲೋಚನೆ ಇದೆಯೇ..? ಹಾಗಾದ್ರೆ, ನಿಮ್ಮ ಮನೆಯ ಒಟ್ಟಾರೆ ವೆಚ್ಚ ಹೀಗಿರುತ್ತದೆ ನೋಡಿ..!

ದೇಶದಾದ್ಯಂತ ಈ ಸೌಕರ್ಯ ಲಭ್ಯ

ಕೋಟಕ್ ಗೃಹ ಸಾಲಗಳು (ಹೋಮ್ ಲೋನ್) ಭಾರತದಲ್ಲಿ 180ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಲಭ್ಯವಿದೆ. ಪ್ರಸ್ತುತ ಕೋಟಕ್ ಗ್ರಾಹಕರು ಕೋಟಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಅಥವಾ ನೆಟ್‌ ಬ್ಯಾಂಕಿಂಗ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕ್ ತಿಳಿಸಿದೆ. ಈ ದರಗಳು ಹೊಸ ಗೃಹ ಸಾಲಗಳು ಮತ್ತು ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗಳಿಗೆ ಅನ್ವಯವಾಗುತ್ತದೆ ಹಾಗೂ ಎಲ್ಲಾ ಲೋನ್ ಮೊತ್ತಗಳಾದ್ಯಂತ ಲಭ್ಯವಿದೆ.

ಇದನ್ನೂ ಓದಿ: Home Loan: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

ಉದ್ಯಮದಾರರು ಪ್ರಸ್ತುತ ದರಗಳನ್ನು ಅತಿ ಕಡಿಮೆ ಎಂದು ವ್ಯಾಖ್ಯಾನಿಸಿದ್ದು ಪ್ರಸ್ತುತ ಬಡ್ಡಿದರಗಳು ಡಿಸೆಂಬರ್ 10ರವರೆಗೆ ಅನ್ವಯವಾಗಲಿದೆ ಎಂದು ಬ್ಯಾಂಕ್ ಹೇಳಿಕೆ ತಿಳಿಸಿದೆ.
Published by:Soumya KN
First published: