ಪಾನಿಪುರಿ (Panipuri) ತಿನ್ನೋದು ಅಂದರೆ ಎಲ್ಲರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಪಾನಿಪುರಿ ಎಂದರೆ ಅಷ್ಟು ಇಷ್ಟ ಪಡುತ್ತಾರೆ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವಂಥ ಪಾನಿಪುರಿ ಸೇಲ್ ಆಗೋದು ಹೆಚ್ಚು. ಹೆಚ್ಚು ಗ್ರಾಹಕರನ್ನು ಹೊಂದಿರುವಂಥ ಇಂಥ ಪಾನಿಪುರಿ ಸ್ಟಾಲ್‌ಗಳಲ್ಲಿ (Stalls) ಇರುವಂಥ ಸಣ್ಣ ಭಯವೆಂದರೆ ಅದು ನೀರಿನದ್ದು. ಯಾವ ನೀರನ್ನು ಬಳಸುತ್ತಾರೋ... ಸ್ವಚ್ಛತೆ ಕಾಪಾಡುತ್ತಾರೋ ಎಂಬ ಭಯ ಸಾಮಾನ್ಯವಾಗಿರುತ್ತದೆ. ಆದರೆ ಹಾಗೆ ಸ್ವಚ್ಛತೆಯನ್ನ(Cleanliness) ಕಂಡುಕೊಂಡ ಬಳಿಕ ಕೆಲವೊಬ್ಬರು ಕೆಲವೊಂದು ಸ್ಟಾಲ್‌ಗಳಲ್ಲಿ ಖಾಯಂ ಕಸ್ಟಮರ್ (Customer) ಆಗಿರುತ್ತಾರೆ.
ಕುರುಕಲು ಪುರಿಯೊಂದಿಗೆ ಸಿಹಿ-ಖಾರದ ಪಾನಿ ಬೆರೆಸಿ ನೀಡುವಂಥ ಕ್ರಿಸ್ಪಿ ಪಾನಿಪುರಿ ಎಲ್ಲೆಡೆಯಂತೆ ಪ್ರತಿಯೊಬ್ಬ ದೆಹಲಿಯ ಮೌತ್ ಫ್ರೆಶ್ನರ್ ಆಗಿದೆ ಅಂದರೆ ತಪ್ಪಾಗೋದಿಲ್ಲ. ಈ ಬೀದಿ ತಿಂಡಿಯ ಬೇಡಿಕೆಯನ್ನು ಪೂರೈಸಲು ಪ್ರತಿ ಏರಿಯಾಗಳಲ್ಲೂ ಇಂಥ ಪಾನಿಪುರಿ ಮಾರುವವರು ಇರುತ್ತಾರೆ. ಪಶ್ಚಿಮ ದೆಹಲಿಯ ತಿಲಕ್ ನಗರ್ ಮೆಟ್ರೋ ನಿಲ್ದಾಣದಲ್ಲಿ ಬಿಟೆಕ್ ಪಾನಿ ಪುರಿ ವಾಲಿ ಅವುಗಳಲ್ಲಿ ಒಂದು. ಅಲ್ಲಿ ಕ್ಯಾಪ್ ಹಾಕಿ, ಕೈಗೆ ಗ್ಲೌಸ್ ಹಾಕಿ ಕ್ರಿಸ್ಪಿ ಪಾನಿಪುರಿಗಳನ್ನು ಮಾರುತ್ತಿರುವವರು ಬಿಕೆಟ್ ವಿದ್ಯಾರ್ಥಿನಿ.
ಹೌದು ಈ ಪಾನಿಪುರಿವಾಲಿ ಸಾಮಾನ್ಯ ವ್ಯಕ್ತಿಯಲ್ಲ. ಈಕೆಯ ಹೆಸರು ತಾಪ್ಸಿ ಉಪಾಧ್ಯಾಯ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಜನಕಪುರಿಯ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿನಿ. 21 ವರ್ಷದ ತಾಪ್ಸಿ ಉಪಾಧ್ಯಾಯ ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮವನ್ನು ಪ್ರಾರಂಭಿಸಿದರು.
ಏರ್ ಫ್ರೈಯರ್ ಬಳಸಿ ಕುರುಕಲು ಪುರಿ ತಯಾರಿಕೆ
ಪಾನಿಪುರಿಯಂಥ ಸಾಂಪ್ರದಾಯಿಕ ವ್ಯವಹಾರಕ್ಕೆ ಆಧುನಿಕ ವಿಧಾನವನ್ನು ಸೇರಿಸಲಾಗಿದೆ. ಇಲ್ಲಿ ಕುರುಕುಲಾದ ಪೂರಿಗಳನ್ನು ಏರ್ ಫ್ರೈಯರ್ ಬಳಸಿ ತಯಾರಿಸಲಾಗುತ್ತದೆ. ಈ ವಿಧಾನದಲ್ಲಿ ತಯಾರಿಸಲಾದ ಪುರಿಗಳು ಶುಚಿತ್ವದ ಜೊತೆಗೆ ಆರೋಗ್ಯವನ್ನು ಪರಿಗಣಿಸುತ್ತವೆ. "ನಾವು ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತೇವೆ ಮತ್ತು ತಯಾರಿಕೆಯ ಪ್ರಕ್ರಿಯೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸುತ್ತೇವೆ" ಎಂದು ತಾಪ್ಸಿ ಹೇಳುತ್ತಾರೆ.
ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಆಯ್ಕೆ
ನಾಲ್ಕು ಮಹಿಳೆಯರನ್ನು ನೇಮಿಸಿಕೊಂಡಿರುವ ಪಾನಿಪುರಿವಾಲಿ ತಾಪ್ಸಿ ಉಪಾಧ್ಯಾಯ ಅವರಿಗೆ ಈ ಸ್ಟಾರ್ಟ್‌ಅಪ್‌ಅನ್ನು ಮತ್ತಷ್ಟು ವಿಸ್ತರಿಸುವ ಇರಾದೆಯಿದೆ. ಆದರೆ ಬೀದಿ ಬದಿಯ ಆಹಾರಗಳಲ್ಲಿ ಜನಪ್ರಿಯವಾಗಿರುವ ಇತರ ವಸ್ತುಗಳನ್ನು ಪರಿಚಯಿಸುವ ಯೋಜನೆಯೂ ಇದೆ. "ಕೈಗೆಟಕುವ ಬೆಲೆಯಲ್ಲಿ ಆರೋಗ್ಯಕರ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ತಾಪ್ಸಿ ಹೇಳುತ್ತಾರೆ.
ಅಂದಹಾಗೆ ಪಾನಿಪುರಿ ವಾಲಿ ವ್ಯಾಪಾರದ ಅಡಿಬರಹ 'ಆರೋಗ್ಯವನ್ನು ಪೂರೈಸುವುದು' ಮತ್ತು ಆಹಾರ ವಿತರಣಾ ಅಪ್ಲಿಕೇಶನ್‌ಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡಬಹುದು. ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಿ ಎಂಬುದಾಗಿದೆ.
ಬೆಳಗ್ಗೆ ಕ್ಲಾಸ್ ಸಂಜೆ ಪಾನಿಪುರಿ ಕೆಲಸ !
ಅಂದಹಾಗೆ ತಾಪ್ಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತರಗತಿಗಳಿಗೆ ಹಾಜರಾಗುತ್ತಾರೆ. ಸಾಯಂಕಾಲ 4 ಗಂಟೆಗೆ, ಆಕೆ ತನ್ನ ಹೆಲ್ಮೆಟ್ ಧರಿಸಿ, ತನ್ನ ರಾಯಲ್ ಎನ್‌ಫೀಲ್ಡ್ ಮೋಟಾರ್‌ಬೈಕನ್ನು ಕಿಕ್‌ಸ್ಟಾರ್ಟ್ ಮಾಡಿ ಸಂಜೆ ವ್ಯಾಪಾರಕ್ಕಾಗಿ ಜನಕ್‌ಪುರಿಯಲ್ಲಿರುವ ತನ್ನ ಮನೆಯಿಂದ ಗೋಲ್ಗಪ್ಪೆ ಕಿಯೋಸ್ಕ್ ಗೆ ಬರುತ್ತಾರೆ.
ಪಾನಿಪುರಿವಾಲಿಯಲ್ಲಿ ಯಾವಾಗಲೂ ಪಾನಿಪುರಿ ತಿನ್ನುವಂಥ ಆಕೆಯ ಖಾಯಂ ಗ್ರಾಹಕರು ಶೈಲೇಂದ್ರ ಗಾರ್ಗ್ ಮತ್ತು ಮೀನಾ ದೇವಿ, ಈ ಹುಡುಗಿಯ ಬಗ್ಗೆ ಹೆಮ್ಮೆಪಡುತ್ತಾರೆ. "ದೆಹಲಿ ಜನರನ್ನು ಗೆಲ್ಲಬೇಕಾದರೆ ರುಚಿ ಅತ್ಯಗತ್ಯ ಎಂಬುದನ್ನು ತಾಪ್ಸಿ ಸಾಬೀತುಪಡಿಸುತ್ತಾರೆ ಎಂದು ಮೀನಾದೇವಿ ಹೇಳುತ್ತಾರೆ.
ಒಟ್ಟಾರೆ, ಬೆಳಗ್ಗೆ ಓದಲು ಕಾಲೇಜಿಗೆ ಹೋಗಿ ಸಾಯಂಕಾಲ ಬಂದು ಇಂಥದ್ದೊಂದು ಸ್ಟಾರ್ಟಪ್ ನಡೆಸಿ ಸ್ವಾವಲಂಭಿಯಾಗಿ ಜೀವನ ಆರಂಭಿಸಿದ ತಾಪ್ಸಿ ಉಪಾಧ್ಯಾಯ ಅನೇಕ ಜನಕ್ಕೆ ಸ್ಪೂರ್ತಿಯಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ