Citibank​ನ್ನು ತೆಕ್ಕೆಗೆ ತೆಗೆದುಕೊಂಡ Axis ಬ್ಯಾಂಕ್! ಗ್ರಾಹಕರೇ, ಏನೆಲ್ಲ ಬದಲಾವಣೆ ಆಗಲಿದೆ ತಿಳಿಯಿರಿ

ಈ ಪ್ರಕ್ರಿಯೆಯು ಸಿಟಿ ಬ್ಯಾಂಕ್ ಇಂಡಿಯಾದ (Citi Bank India) ಗ್ರಾಹಕ ಬ್ಯಾಂಕಿಂಗ್ ವ್ಯವಹಾರಗಳ ಮಾರಾಟವನ್ನು ಒಳಗೊಂಡಿದೆ.

ಸಿಟಿ ಬ್ಯಾಂಕ್

ಸಿಟಿ ಬ್ಯಾಂಕ್

  • Share this:
    ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ (Axis Bank)  ಸಿಟಿ ಬ್ಯಾಂಕ್​ನ (Citibank)  ಭಾರತದಲ್ಲಿನ ಗ್ರಾಹಕ ವ್ಯವಹಾರಗಳನ್ನು ಸರಿಸುಮಾರು $1.6 ಬಿಲಿಯನ್​ಗೆ ಸ್ವಾಧೀನಪಡಿಸಿಕೊಳ್ಳಲಿದೆ. ಇದರಲ್ಲಿ ಕ್ರೆಡಿಟ್ ಕಾರ್ಡ್‌ಗಳು (Credit Card) ಚಿಲ್ಲರೆ ಬ್ಯಾಂಕಿಂಗ್, ಸಂಪತ್ತು ನಿರ್ವಹಣೆ ಮತ್ತು ಗ್ರಾಹಕ ಸಾಲಗಳು ಸೇರಿವೆ ಎಂದು ಹೇಳಿಕೆ ತಿಳಿಸಿದೆ. ಈ ಪ್ರಕ್ರಿಯೆಯು ಸಿಟಿ ಬ್ಯಾಂಕ್ ಇಂಡಿಯಾದ (Citi Bank India) ಗ್ರಾಹಕ ಬ್ಯಾಂಕಿಂಗ್ ವ್ಯವಹಾರಗಳ ಮಾರಾಟವನ್ನು ಒಳಗೊಂಡಿದೆ.

    ವಿಸ್ತೃತ ಮತ್ತು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ನಂತರ ಸಿಟಿ ಬ್ಯಾಂಕ್ ಭಾರತದ ಖಾಸಗಿ ಕ್ಷೇತ್ರದ ಬಹುದೊಡ್ಡ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಸಿಟಡಿ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸಿಟಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸೇವೆ ನೀಡುವಲ್ಲಿ ಬದ್ಧವಾಗಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಸಾಂಸ್ಥಿಕ ಗ್ರಾಹಕರಿಗೆ ಸೇವೆ ಸಲ್ಲಿಸಲು ಎಲ್ಲ ರೀತಿಯಲ್ಲೂ ಗಮನಹರಿಸಲಿದೆ ಎಂದು ಸಿಟಿ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

    ಬ್ಯಾಂಕಿಂಗ್ ಸೇವೆಗಳು ಏನಾಗಲಿವೆ?
    ನಮ್ಮ ಸಿಬ್ಬಂದಿಯ ಗರಿಷ್ಠ ಮಟ್ಟದ ಪರಿಶ್ರಮದ ಪ್ರತಿಫಲವೇ ಈ ಒಪ್ಪಂದ ಎಂದು ಸಹ ಸಿಟಿ ಬ್ಯಾಂಕ್ ಮಾಹಿತಿ ನೀಡಿದೆ. ಈ ಬಹುದೊಡ್ಡ ಬದಲಾವಣೆಯಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಸಿಟಿ ಬ್ಯಾಂಕ್ ಗ್ರಾಹಕರು ಏನೆಲ್ಲ ಬದಲಾವಣೆ ಅನುಭವಿಸುತ್ತಾರೆ ಎಂಬುದು ಸಿಟಿ ಬ್ಯಾಂಕ್ ಪ್ರಕಟಣೆಯ ನಂತರ ತಿಳಿಯಬಹುದಾಗಿದೆ.

    ಉದ್ಯೋಗಿಗಳ ಕಥೆ ಏನು?
    ಸಿಟಿಬ್ಯಾಂಕ್‌ನ ಭಾರತದ ಗ್ರಾಹಕ ವ್ಯವಹಾರದ ಭಾಗವಾಗಿ 3,600 ರಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಉದ್ದೇಶಿತ ವಹಿವಾಟು ಪೂರ್ಣಗೊಂಡ ನಂತರ ಈ ಉದ್ಯೋಗಿಗಳನ್ನು ಆಕ್ಸಿಸ್‌ ಬ್ಯಾಂಕ್​ಗೆ ವರ್ಗಾಯಿಸಲಾಗುತ್ತದೆ ಎಂದು ಸಿಟಿಗ್ರೂಪ್ ಹೇಳಿದೆ.

    ಇದನ್ನೂ ಓದಿ: Wheat Price Hike: ಹೆಚ್ಚಾಯ್ತು ಗೋಧಿ ಬೆಲೆ! ಎಲ್ಲಿ ಎಷ್ಟು ರೇಟ್? ರೈತರಿಗೆ ಸಿಗುವ ಹಣವೆಷ್ಟು?

    ಸಿಟಿ ಇಂಡಿಯಾ ಸಿಇಒ ಅಶು ಖುಲ್ಲರ್ ಅವರು ಆಕ್ಸಿಸ್ ಜೊತೆಗಿನ ಒಪ್ಪಂದವು "ನಮ್ಮ ಸಿಬ್ಬಂದಿಗೆ ಧನಾತ್ಮಕ ಫಲಿತಾಂಶವಾಗಿ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ. ಕಂಪನಿಯ ಆದ್ಯತೆಯು ಅವರ ಭವಿಷ್ಯವನ್ನು ಭದ್ರಪಡಿಸುತ್ತದೆ ಎಂದು ಅವರು ಹೇಳಿದರು.

    ಸಿಟಿ ಬ್ಯಾಂಕ್ ತಂತ್ರಜ್ಞಾನ, ಕಾರ್ಯಾಚರಣೆಗಳು, ವಿಶ್ಲೇಷಣೆಗಳು, ಹಣಕಾಸು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಭಾರತದ ಶ್ರೀಮಂತ ಪ್ರತಿಭೆಗಳ ಸಮೂಹವನ್ನು ಬಳಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಭಾರತದಲ್ಲಿನ ಐದು ನಗರಗಳಲ್ಲಿ ನೆಲೆಗೊಂಡಿರುವ ಮತ್ತು ನಮ್ಮ ಜಾಗತಿಕ ವ್ಯವಹಾರಗಳಿಗೆ ಬೆಂಬಲ ನೀಡುವ ಸಿಟಿ ಪರಿಹಾರ ಕೇಂದ್ರಗಳ ಜಾಲದ ಮೂಲಕ ಕ್ರಿಯಾತ್ಮಕ ಸೇವೆ ನೀಡಲಿದೆ ಎಂದು ಅವರು ಖಚಿತಪಡಿಸುತ್ತಾರೆ.

    ಜೀವಮಾನದ ಒಪ್ಪಂದ!
    ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಚೌಧರಿ ಅವರು ಮಾರ್ಚ್ 30 ರಂದು ಸಿಟಿಬ್ಯಾಂಕ್‌ನ ಭಾರತದ ಗ್ರಾಹಕ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್‌ನ ಕ್ರಮವನ್ನು "ಜೀವಮಾನದ ಒಪ್ಪಂದ" ಎಂದು ವ್ಯಾಖ್ಯಾನಿಸಿದ್ದಾರೆ. ಖರೀದಿಯು ಆಕ್ಸಿಸ್ ಬ್ಯಾಂಕ್ 2.5 ಮಿಲಿಯನ್ ಸಿಟಿಬ್ಯಾಂಕ್ ಗ್ರಾಹಕ ಕಾರ್ಡ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.  ಅಲ್ಲದೇ ಈಮೂಲಕ ಆಕ್ಸಿಸ್ ಬ್ಯಾಂಕ್​ನ  ಅಸ್ತಿತ್ವದಲ್ಲಿರುವ ಕಾರ್ಡ್ ಬೇಸ್‌ ಸುಮಾರು 31% ರಷ್ಟು ಹೆಚ್ಚಳವಾಗಲಿದೆ.

    ವಹಿವಾಟು ಸಾಲದಾತರಿಗೆ ತನ್ನ ಕಾರ್ಡ್ ಖರ್ಚು ಮಾಡುವ ಮಾರುಕಟ್ಟೆ ಪಾಲನ್ನು 480 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಲು ಸಹಾಯ ಮಾಡಲಿದೆ. ಸಿಟಿಬ್ಯಾಂಕ್ ಸುಮಾರು 2.5 ಮಿಲಿಯನ್ ಕಾರ್ಡ್‌ಗಳ ಪೂರಕ ಮತ್ತು ಗುಣಮಟ್ಟದ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಜೊತೆಗೆ ಉದ್ಯಮದಾದ್ಯಂತ ಪ್ರತಿ ಕಾರ್ಡ್‌ಗೆ ಅತ್ಯಧಿಕ ಮಾಸಿಕ ವೆಚ್ಚ ಮತ್ತು ಜೂನ್ 2021 ರ ಹೊತ್ತಿಗೆ ಸುಮಾರು 8,900 ಕೋಟಿ ರೂಪಾಯಿಗಳಷ್ಟು ಬೃಹತ್ ವಿಸ್ತಾರ ಹೊಂದಿದೆ.

    ಇದನ್ನೂ ಓದಿ: Indian Economy: 7-8 ವರ್ಷಗಳಲ್ಲಿ ಭಾರತದ ಆರ್ಥಿಕತೆ ದ್ವಿಗುಣ! ಇದು ಓದಲೇಬೇಕಾದ ಒಳ್ಳೇ ಸುದ್ದಿ

    ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ಬದ್ಧರಾಗಿರುತ್ತೇವೆ ಎಂದು ಸಿಟಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
    Published by:guruganesh bhat
    First published: