ಕೋವಿಡ್ (Covid) ಸಾಂಕ್ರಾಮಿಕ ಬಂದೆರಗಿ ಎರಡು ಮೂರು ವರುಷಗಳು ಕಳೆದಿದ್ದರೂ ಅವುಗಳು ಕರಿನೆರಳು ಬೀರಿರುವ ಕ್ಷೇತ್ರಗಳು ಇಂದಿಗೂ ಆರಕ್ಕೇರದೆ ಮೂರಕ್ಕಿಳಿಯದೆ ಆರ್ಥಿಕ ಸಂಕಷ್ಟ (Financial Distress) ಗಳಿಂದ ಬಳಲುತ್ತಿವೆ. ಅದರಲ್ಲೊಂದು ಕ್ಷೇತ್ರ ನಾಗರಿಕ ವಿಮಾನಯಾನ ಉದ್ಯಮ (Aviation Industry) ವಾಗಿದೆ. ಕುಸಿಯುತ್ತಿರುವ ಬೇಡಿಕೆ ಹಾಗೂ ಆರ್ಥಿಕ ಹೊಡೆತಗಳಿಂದ ಕಂಗಾಲಾಗಿದ್ದ ವಿಮಾನಯಾನ ಉದ್ಯಮ ಇದೀಗ ಕೊಂಚ ಕೊಂಚವಾಗಿ ತನ್ನ ಹಿಂದಿನ ಸ್ಥಾನಕ್ಕೇರುತ್ತಿದೆ. ಮುಂಬರುವ ಯೂನಿಯನ್ ಬಜೆಟ್ನತ್ತ (Union Budget 2023) ಚಿತ್ತ ನೆಟ್ಟಿರುವ ವಿಮಾನಯಾನ ಉದ್ಯಮ, ವಿಮಾನ ನಿಲ್ದಾಣ ಹಾಗೂ ಸಂಸ್ಥೆಗಳ ನಿರ್ಮಾಣ ವೆಚ್ಚವನ್ನು ತಗ್ಗಿಸಲು ತೆರಿಗೆಯ ಪರಿಹಾರ ನೀಡಬಹುದೇನೋ ಎಂಬ ಆಶಾ ಭಾವನೆಯನ್ನು ಹೊಂದಿದೆ ಎನ್ನಬಹುದು.
ಇಂಧನದ ಮೇಲಿನ ಸುಂಕ ತಗ್ಗಿಸಲು ಮನವಿ
ವಿಮಾನ ಯಾನ ಖರ್ಚುವೆಚ್ಚದ 35-40% ಭಾಗವನ್ನು ಅತಿಕ್ರಮಿಸಿಕೊಂಡಿರುವ ಜೆಟ್ ಇಂಧನದ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಪ್ರಸ್ತುತ 11% ರಿಂದ 4-5% ಕ್ಕೆ ಕಡಿತಗೊಳಿಸಬೇಕೆಂದು ಹೆಚ್ಚಿನ ತಯಾರಕರ ಆಗ್ರಹವಾಗಿದೆ. ಇನ್ನು ಕೆಲವರು ಈ ಘಟಕವೇ ಬೇಡ ನಿಲ್ಲಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಇಂಧನ ವೆಚ್ಚದ ಮೇಲಿನ ಹೊರೆ ತಗ್ಗಿಸುವ ಇರಾದೆ
ಎಟಿಎಫ್ (ವಾಯುಯಾನ ಟರ್ಬೈನ್ ಇಂಧನ) ಮೇಲಿನ ಕೇಂದ್ರೀಯ ಅಬಕಾರಿ ಸುಂಕ ದರವನ್ನು ಅಲ್ಪಾವಧಿಯಲ್ಲಿ 11% ದಿಂದ 5% ಕ್ಕೆ ಇಳಿಸುವ ಮೂಲಕ ಇಂಧನ ವೆಚ್ಚದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹಣಕಾಸು ಸಚಿವಾಲಯವನ್ನು ಒತ್ತಾಯಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಎಟಿಎಫ್ ಅನ್ನು ಆಮದು ಮುಕ್ತ ಸಾಮಾನ್ಯ ಪರವಾನಗಿ ಅಡಿಯಲ್ಲಿ ಅನುಮತಿಸಬೇಕಾಗಿದೆ ಎಂದು ಉದ್ಯಮ ತಿಳಿಸಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಬೆಲೆಗೆ ಹೋಲಿಸಿದರೆ ಪ್ರತಿ ಹದಿನೈದು ದಿನಗಳಿಗೊಮ್ಮೆ ರಿಫೈನರ್ಗಳ ಬೆಲೆಗಳ ಘೋಷಣೆಯು ತುಲನಾತ್ಮಕವಾಗಿ ಹೆಚ್ಚಾಗಿದೆ.
ವಿದೇಶಗಳಿಗೆ ವಿಮಾನ ಸಂಚಾರ ರದ್ದುಗೊಳಿಸುತ್ತಿರುವುದು
ವಿಮಾನ ಯಾನ ಸಂಸ್ಥೆಗಳು ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟ ಎಂದರೆ ದೇಶ ಹಾಗೂ ವಿದೇಶಗಳಿಗೆ ವಿಮಾನ ಸಂಚಾರವನ್ನು ಅನುಮತಿಸುವುದಾಗಿದೆ.ಕೋವಿಡ್ ಹಿನ್ನಲೆಯಲ್ಲಿ ವಿದೇಶಗಳಿಗೆ ವಿಮಾನ ಸಂಚಾರಗಳನ್ನು ರದ್ದುಗೊಳಿಸುತ್ತಿರುವುದು ಈ ಉದ್ಯಮದಲ್ಲಿ ಹೆಚ್ಚಿನ ಆರ್ಥಿಕ ಹಾನಿಯನ್ನುಂಟು ಮಾಡುತ್ತಿದೆ ಎಂದು ಹಿರಿಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸರಕಾರವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಚಾರವನ್ನು ಬಲಪಡಿಸಲು ಪರ್ಯಾಯ ವ್ಯವಸ್ಥೆಯನ್ನು ಹೊರತರಬೇಕಾಗಿದೆ ಎಂದು ತಿಳಿಸಿದ್ದಾರೆ.ಪ್ರಾದೇಶಿಕ ವಾಹಕವಾದ ಸ್ಟಾರ್ ಏರ್ ಜೆಟ್, ಜೆಟ್ ಇಂಧನದ ಮೇಲೆ ಶೂನ್ಯ ತೆರಿಗೆ ವಿಧಿಸಬೇಕೆಂಬ ಇರಾದೆ ಹೊಂದಿದೆ. ಇಕಾನಾಮಿ ಪ್ರಯಾಣಿಕರಿಂದ ಸಂಸ್ಥೆ ಸಂಗ್ರಹಿಸುವ 5% ಜಿಎಸ್ಟಿ ಅನ್ನು ಜಿಎಸ್ಟಿ ಕೌನ್ಸಿಲ್ ಅನುಮತಿಸಬೇಕು ಎಂದು ಸ್ಟಾರ್ ಏರ್ಜೆಟ್ನ ಮುಖ್ಯಕಾರ್ಯನಿರ್ವಾಹಕರಾದ ಕ್ಯಾಪ್ಟನ್ ಸಿಮ್ರಾನ್ ಸಿಂಗ್ ತಿವಾನಾ ತಿಳಿಸಿದ್ದಾರೆ.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ, ಕೇಂದ್ರ ಸರ್ಕಾರದಿಂದ ಪ್ರಮುಖ ನಿರ್ಧಾರ!
ಆದಾಯ ತೆರಿಗೆ ಕಡಿತ
ವಿಮಾನಯಾನ ಸಂಸ್ಥೆಯ ಆದಾಯಕ್ಕಿಂತ 20% ಹೆಚ್ಚಿನ ಪರೋಕ್ಷ ತೆರಿಗೆಗಳಿಗೆ ಸಂಸ್ಥೆಗಳು ಒಳಪಡುತ್ತಿದ್ದು, ಇದು ಹೆಚ್ಚುವರಿ ತೆರಿಗೆ ಪಾವತಿಸುವ ಪ್ರಕ್ರಿಯೆಯಾಗಿದೆ ಎಂದು ಸಂಸ್ಥೆಗಳು ಟೀಕಿಸಿವೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಆದಾಗ್ಯೂ ಆದಾಯ ತೆರಿಗೆ ಕಾಯಿದೆ, 1961 ರ ನಿಬಂಧನೆಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳಿಗೆ ಪಾವತಿಸುವಾಗ ಗ್ರಾಹಕರ ಮೂಲ ಶುಲ್ಕದಲ್ಲಿಯೇ ಆದಾಯ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.ಇದರಿಂದ ಹಲವಾರು ವರ್ಷಗಳವರೆಗೆ ವಿಮಾನ ಯಾನ ಸಂಸ್ಥೆಗಳಿಗೆ ಸಮರ್ಪಕ ಹಣ ದೊರೆಯುವುದಿಲ್ಲ ಎಂದು ವಿಮಾನಯಾನ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Shwetha PSITR ಫೈಲ್ ಮಾಡುತ್ತಿದ್ದೀರಾ? ಈ ಭತ್ಯೆ ಪ್ರಯೋಜನಗಳೊಂದಿಗೆ ತೆರಿಗೆ ಉಳಿತಾಯ ಮಾಡಿ!
ತೆರಿಗೆ ಅಮಾನತು
ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರ ಸಂಘವು ಕನಿಷ್ಠ ಎರಡು ವರ್ಷಗಳವರೆಗೆ ವಿಮಾನಯಾನ ಮತ್ತು ವಿಮಾನ ನಿಲ್ದಾಣ ವಲಯಕ್ಕೆ ಕನಿಷ್ಠ ಪರ್ಯಾಯ ತೆರಿಗೆಯನ್ನು (MAT) ಅಮಾನತುಗೊಳಿಸುವ ಭರವಸೆಯಿದೆ ಎಂದು ತಿಳಿಸಿದೆ. ಹಣಕಾಸಿನ ವಿಷಯದಲ್ಲಿ, ವಾಯುಯಾನ ವಲಯವು ಕೆಲವು ರಿಯಾಯಿತಿಗಳ ಭರವಸೆಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ