Australia Visa: ಕಾರ್ಮಿಕರ ಕೊರತೆ ಪರಿಹಾರಕ್ಕೆ ವೀಸಾ ನಿಯಮ ಸಡಿಲಿಸಿದ ಆಸ್ಟ್ರೇಲಿಯಾ

ಆಗಸ್ಟ್ ನಲ್ಲಿ ಘೋಷಿಸಲಾದ 2022-23 ರ ವಲಸೆ ಕಾರ್ಯಕ್ರಮ ಯೋಜನಾ ಮಟ್ಟಗಳಲ್ಲಿ, ಆಸ್ಟ್ರೇಲಿಯಾ ಸರ್ಕಾರವು ಹಲವಾರು ನುರಿತ ವೀಸಾ ಪ್ರಕಾರಗಳಿಗೆ ಕೋಟಾಗಳನ್ನು ಹೆಚ್ಚಿಸಿದೆ. ಈ ಹಣಕಾಸು ವರ್ಷದಲ್ಲಿ 109,900 ನುರಿತ ಆಸ್ಟ್ರೇಲಿಯನ್ ವೀಸಾಗಳನ್ನು ನೀಡಲು ಯೋಜಿಸಿದೆ ಎಂದು ಘೋಷಿಸಿದೆ. ವಿಶೇಷವಾಗಿ, ರಾಜ್ಯ ನಾಮನಿರ್ದೇಶಿತ ವೀಸಾಗಳು ಹೆಚ್ಚಿನ ಆದ್ಯತೆ ಎಂದು ಸಾಬೀತುಪಡಿಸುತ್ತಿವೆ.

ಆಸ್ಟ್ರೇಲಿಯಾ ವೀಸಾ

ಆಸ್ಟ್ರೇಲಿಯಾ ವೀಸಾ

 • Share this:
ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಈ ಎರಡೂವರೆ ವರ್ಷಗಳಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗಿ ಕೆಲಸ (Work) ಮಾಡುತ್ತಿದ್ದಂತಹ ಅನೇಕ ಕಾರ್ಮಿಕರು (workers) ತಮ್ಮ ದೇಶಕ್ಕೆ ವಾಪಾಸಾಗಿದ್ದು, ಅನೇಕರು ಇಲ್ಲೇ ತಮ್ಮ ದೇಶದಲ್ಲಿ ಏನಾದರೂ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರಲು ಬಯಸಿ ಇಲ್ಲೇ ಉಳಿದುಕೊಂಡಿದ್ದಾರೆ. ಇದರಿಂದ ಬೇರೆ ದೇಶಗಳಲ್ಲಿ ಕೌಶಲ್ಯವಿರುವ ಕೆಲಸಗಾರರ ಕೊರತೆ (Lack of workers) ತುಂಬಾನೇ ಆಗಿದ್ದು, ಇದೀಗ ಬೇರೆ ರಾಷ್ಟ್ರಗಳು ತಮ್ಮ ವೀಸಾ ನಿಯಮಗಳನ್ನು (Visa Rules) ಸಡಿಲಿಸುತ್ತಿರುವುದನ್ನು ನಾವು ನೋಡಬಹುದು. ಒಇಸಿಡಿ ಪ್ರಕಾರ, ಕೆನಡಾ (Canada) ನಂತರ ಆಸ್ಟ್ರೇಲಿಯಾ (Australia) ದೇಶವು ವಿಶ್ವದ ಎರಡನೇ ಅತ್ಯಂತ ತೀವ್ರವಾದ ಕಾರ್ಮಿಕ ಮತ್ತು ಕೌಶಲ್ಯ ಕೊರತೆಯನ್ನು ಹೊಂದಿದೆ. 

ಆಸ್ಟ್ರೇಲಿಯಾದಲ್ಲಿ ಕಾರ್ಮಿಕರ ಕೊರತೆ
ಜುಲೈನಲ್ಲಿ ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ದತ್ತಾಂಶವು ದೇಶದಲ್ಲಿ ನಿರುದ್ಯೋಗಿಗಳಂತೆ ಅನೇಕ ಉದ್ಯೋಗಗಳು ಸಹ ಖಾಲಿ ಇವೆ ಎಂದು ತೋರಿಸಿದೆ. ಇದನ್ನು ಸರಿಪಡಿಸಲು ಮತ್ತು ಕಾರ್ಮಿಕರ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಯತ್ನದಲ್ಲಿ, ಆಸ್ಟ್ರೇಲಿಯಾವು ಹಲವಾರು ನುರಿತ ವೀಸಾ ವರ್ಗಗಳಿಗೆ ತಮ್ಮ ಕೋಟಾಗಳನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯನ್ ವೀಸಾದಲ್ಲಿ ಸಡಿಲಿಕೆ
ಆಗಸ್ಟ್ ನಲ್ಲಿ ಘೋಷಿಸಲಾದ 2022-23 ರ ವಲಸೆ ಕಾರ್ಯಕ್ರಮ ಯೋಜನಾ ಮಟ್ಟಗಳಲ್ಲಿ, ಆಸ್ಟ್ರೇಲಿಯಾ ಸರ್ಕಾರವು ಹಲವಾರು ನುರಿತ ವೀಸಾ ಪ್ರಕಾರಗಳಿಗೆ ಕೋಟಾಗಳನ್ನು ಹೆಚ್ಚಿಸಿದೆ. ಈ ಹಣಕಾಸು ವರ್ಷದಲ್ಲಿ 109,900 ನುರಿತ ಆಸ್ಟ್ರೇಲಿಯನ್ ವೀಸಾಗಳನ್ನು ನೀಡಲು ಯೋಜಿಸಿದೆ ಎಂದು ಘೋಷಿಸಿದೆ. ವಿಶೇಷವಾಗಿ, ರಾಜ್ಯ ನಾಮನಿರ್ದೇಶಿತ ವೀಸಾಗಳು ಹೆಚ್ಚಿನ ಆದ್ಯತೆ ಎಂದು ಸಾಬೀತುಪಡಿಸುತ್ತಿವೆ.

ಇವುಗಳಲ್ಲಿ ಅತ್ಯಂತ ಅಪೇಕ್ಷಣೀಯವಾದ, ಪಾಯಿಂಟ್ಸ್-ಆಧಾರಿತ ಸ್ಕಿಲ್ಡ್ ಇಂಡಿಪೆಂಡೆಂಟ್ ವೀಸಾ ಹೋಲ್ಡರ್ ಗಳನ್ನು ಆಸ್ಟ್ರೇಲಿಯಾದ ಯಾವುದೇ ಭಾಗದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ರಾಜ್ಯ ನಾಮನಿರ್ದೇಶಿತ (ಉಪವರ್ಗ 190) ವೀಸಾ 
ನೀವು ಆಸ್ಟ್ರೇಲಿಯಾ ದೇಶದಲ್ಲಿ ಇಳಿದ ಕ್ಷಣದಿಂದ ನೀವು ಆಸ್ಟ್ರೇಲಿಯಾದ ಶಾಶ್ವತ ರೆಸಿಡೆನ್ಸಿಯನ್ನು ಪಡೆಯುತ್ತೀರಿ. ಕನಿಷ್ಠ ಎರಡು ವರ್ಷಗಳ ಕಾಲ ನಿಮ್ಮನ್ನು ನಾಮನಿರ್ದೇಶನ ಮಾಡಿದ ರಾಜ್ಯದಲ್ಲಿ ನೀವು ವಾಸಿಸಬೇಕು ಮತ್ತು ಕೆಲಸ ಮಾಡಬೇಕಾಗುತ್ತದೆ. ತದ ನಂತರ, ನೀವು ಎಲ್ಲಿ ಬೇಕಾದರೂ ಹೋಗಬಹುದು.

ಇದನ್ನೂ ಓದಿ:  Zomato: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಝೊಮ್ಯಾಟೋ, ಎಲ್ಲಿಂದ ಏನ್ ಬೇಕಾದ್ರೂ ಆರ್ಡರ್​ ಮಾಡಿ!

ನಾಮನಿರ್ದೇಶಿತ ಪ್ರಾದೇಶಿಕ ರಾಜ್ಯದ ವೀಸಾ (ಉಪವರ್ಗ 491)
ಇದು ಒಂದು ತಾತ್ಕಾಲಿಕ ವೀಸಾವಾಗಿದ್ದು, ಇದು ಶಾಶ್ವತ ವಾಸಕ್ಕೆ ಸ್ಪಷ್ಟವಾದ ಮಾರ್ಗವನ್ನು ಹೊಂದಿದೆ ಮತ್ತು ಇತರ ತಾತ್ಕಾಲಿಕ ಆಸ್ಟ್ರೇಲಿಯಾದ ವೀಸಾಗಳು ಮೆಡಿಕೇರ್ ಗೆ ಪೂರ್ಣ ಪ್ರವೇಶದಂತಹ ಕೆಲವು ಪ್ರಯೋಜನಗಳನ್ನು ನೀಡುವುದಿಲ್ಲ.

ನಿಮ್ಮನ್ನು ಮೂರು ವರ್ಷಗಳ ಕಾಲ ನಾಮನಿರ್ದೇಶನ ಮಾಡಿದ ನಿರ್ದಿಷ್ಟ ಪ್ರದೇಶದಲ್ಲಿ ನೀವು ವಾಸಿಸಬೇಕು ಮತ್ತು ಕೆಲಸ ಮಾಡಬೇಕಾಗುತ್ತದೆ ಮತ್ತು ಶಾಶ್ವತ ರೆಸಿಡೆನ್ಸಿಗೆ ಅರ್ಹರಾಗಲು ಆ ಪ್ರತಿ ವರ್ಷಕ್ಕೂ 53,000 ಡಾಲರ್ ಗಿಂತ ಹೆಚ್ಚು ತೆರಿಗೆಗೆ ಒಳಪಡುವ ಆದಾಯವನ್ನು ಗಳಿಸಬೇಕಾಗುತ್ತದೆ.

ನುರಿತ ವೀಸಾಗೆ ಅರ್ಹರಾಗಲು ನೀವು ಅನುಸರಿಸಬೇಕಾದ ಅಂಶಗಳು ಕೆಳಗಿನಂತಿವೆ:

 • 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು

 • ಸೂಕ್ತ ಕೌಶಲ್ಯಗಳ ಪಟ್ಟಿಯಲ್ಲಿ ಉದ್ಯೋಗವನ್ನು ನಾಮನಿರ್ದೇಶನ ಮಾಡಿ

 • ಕೌಶಲ್ಯಗಳ ಮೌಲ್ಯಮಾಪನವನ್ನು ಮಾಡಿ

 • ಇಂಗ್ಲಿಷ್ ಭಾಷಾ ಮಾನದಂಡವನ್ನು ಪೂರೈಸಿ

 • ಉತ್ತಮ ಆರೋಗ್ಯ ಮತ್ತು ಉತ್ತಮ ಚಾರಿತ್ರ್ಯವುಳ್ಳವರಾಗಿರಿ

 • ಕಾನೂನುಬದ್ಧ ಅಂಕಗಳ ಸ್ಕೋರ್ ಅನ್ನು ಪೂರೈಸಿ (ವಯಸ್ಸು, ಅನುಭವ ಮತ್ತು ಶಿಕ್ಷಣದಂತಹ ಅಂಶಗಳಿಗೆ ಅಂಕಗಳನ್ನು ನೀಡಲಾಗುತ್ತದೆ).


ಇದನ್ನೂ ಓದಿ:  Singapore Visa: ವಿದೇಶಿ ಪ್ರತಿಭೆಗಳನ್ನು ಆಕರ್ಷಿಸಲು ವೀಸಾ ನಿಯಮಗಳನ್ನೇ ಬದಲಾಯಿಸಿದ ಸಿಂಗಾಪುರ್!

ಈ ದಾಖಲೆಗಳು ಸಹ ಪರಿಶೀಲನೆಗೆ ನಿಮ್ಮ ಬಳಿ ಇರಬೇಕು

 • ಇಂಗ್ಲಿಷ್ ಭಾಷಾ ಪರೀಕ್ಷೆಯ ಫಲಿತಾಂಶಗಳು

 • ಕೌಶಲ್ಯ ಮೌಲ್ಯಮಾಪನ ದಾಖಲೆಗಳು

 • ವಿದ್ಯಾರ್ಹತೆಯ ದಾಖಲೆಗಳು

 • ಹಿಂದೆ ಮಾಡಿದ ಉದ್ಯೋಗದ ಅನುಭವ ಪತ್ರ ಮತ್ತು ಉಲ್ಲೇಖಗಳು

 • ಪ್ರಾಯೋಜಕತ್ವ ದಾಖಲೆಗಳು

 • ತೆರಿಗೆ ದಾಖಲೆಗಳು, ಸಂಬಳದ ಸ್ಲಿಪ್ ಗಳು, ಇತ್ಯಾದಿ.

 • ನಿಮ್ಮ ಸಂಗಾತಿ ಮತ್ತು ನಿಮ್ಮ ಅವಲಂಬಿತರ ಗುರುತಿನ ದಾಖಲೆಗಳು ಮತ್ತು ಪಾಸ್‌ಪೋರ್ಟ್ ಸೈಜಿನ ಫೋಟೋಗಳು

 • ನಿಮ್ಮ ಸಂಗಾತಿಯ ಮತ್ತು ನಿಮ್ಮ ಅವಲಂಬಿತರ ವೈಯಕ್ತಿಕ ದಾಖಲೆಗಳು, ಉದಾಹರಣೆಗೆ ಜನನ ಪ್ರಮಾಣ ಪತ್ರಗಳು, ದತ್ತು ಪತ್ರಗಳ ಪ್ರತಿಗಳು, ವಿವಾಹ ಪ್ರಮಾಣ ಪತ್ರಗಳು, ವಿಚ್ಛೇದನ ಪ್ರಮಾಣ ಪತ್ರಗಳು ಅಥವಾ ಮರಣ ಪ್ರಮಾಣ ಪತ್ರಗಳು.

 • ನಿಮ್ಮ ತವರು ದೇಶದಿಂದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಗಳಂತಹ ಕ್ಯಾರೆಕ್ಟರ್ ಡಾಕ್ಯುಮೆಂಟ್ ಗಳು ಇರಬೇಕು.

Published by:Ashwini Prabhu
First published: