ಎಟಿಎಂನಿಂದ ಹಣ ಪಡೆದರೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳ, ಮುಂದಿನ ತಿಂಗಳಿಂದ ಜಾರಿ

ATM Transaction Fee Hike- ಉಚಿತವಾಗಿ ವಹಿವಾಟು ನಡೆಸಲು ನಿಗದಿಯಾದ ಸಂಖ್ಯೆಗಿಂತ ಹೆಚ್ಚು ಬಾರಿ ಎಟಿಎಂನಲ್ಲಿ ಟ್ರಾನ್ಸಾಕ್ಷನ್ ಮಾಡಿದರೆ ಪ್ರತೀ ಬಾರಿ ವಿಧಿಸುವ ಶುಲ್ಕವನ್ನು 21 ರೂಪಾಯಿಗೆ ಹೆಚ್ಚಿಸಲಾಗುತ್ತಿದೆ.

ಎಟಿಎಂ ವಹಿವಾಟು

ಎಟಿಎಂ ವಹಿವಾಟು

 • News18
 • Last Updated :
 • Share this:
  ಬೆಂಗಳೂರು, ಡಿ. 02: ನೀವು ಎಟಿಎಂನಿಂದ ತಿಂಗಳಿಗೆ ಇಂತಿಷ್ಟು ಬಾರಿ ಮಾತ್ರ ನೀವು ಯಾವುದೇ ಶುಲ್ಕ ಇಲ್ಲದೇ ಹಣ ವಿತ್ ಡ್ರಾ ಮಾಡಬಹುದು ಅಥವಾ ಬೇರೆ ಸೇವೆ ಪಡೆದುಕೊಳ್ಳಬಹುದು. ಅದನ್ನ ಮೀರಿ ಹೆಚ್ಚು ಬಾರಿ ನೀವು ವಹಿವಾಟು ನಡೆಸಿದರೆ ಪ್ರತೀ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ತೆರಬೇಕಾಗುತ್ತದೆ ಎಂಬುದು ನಿಮಗೆ ಗೊತ್ತಿರಬಹುದು. ಸದ್ಯ ಅದು ಆ ಶುಲ್ಕ 20 ರೂ ಇದೆ. ಜನವರಿ 1ರಿಂದ ಶುಲ್ಕ 21 ರೂಗೆ ಏರಬಹುದು.

  ಉಚಿತವಾಗಿ ವಹಿವಾಟು ನಡೆಸಲು ನಿಗದಿಯಾದ ಪ್ರಮಾಣಕ್ಕಿಂತ ಹೆಚ್ಚು ಬಾರಿ ಎಟಿಎಂ ವಹಿವಾಟು ನಡೆಸಿದರೆ ಪ್ರತೀ ವಹಿವಾಟಿಗೂ ವಿಧಿಸುವ ಶುಲ್ಕವನ್ನ 20 ರೂನಿಂದ 21 ರೂಗೆ ಏರಿಸಲಾಗುತ್ತದೆ ಎಂದು ಆರ್​ಬಿಐ ಹೇಳಿದೆ. ಬ್ಯಾಂಕುಗಳ ಮಧ್ಯೆ ವಿನಿಮಯ ಶುಲ್ಕ (Interchange Fee) ಹೆಚ್ಚಿರುವುದರಿಂದ ಹಾಗೂ ಸಾಮಾನ್ಯ ವೆಚ್ಚ ಹೆಚ್ಚಿರುವುದರಿಂದ ಅದನ್ನ ಸರಿದೂಗಿಸಲು ಬ್ಯಾಂಕುಗಳು ಗ್ರಾಹಕರಿಗೆ ಟ್ರಾನ್ಸಾಕ್ಷನ್ ಶುಲ್ಕ ಹೆಚ್ಚಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆರ್​ಬಿಐನ ಸುತ್ತೋಲೆ ಪ್ರಕಾರ ಜನವರಿ 1, 2022ರಿಂದಲೇ ಇದು ಅನ್ವಯ ಆಗಬಹುದು.

  ಇಂಟರ್​ಚೇಂಜ್ ಫೀ ಹೆಚ್ಚಳ:

  ಕಳೆದ ವರ್ಷ ಆಗಸ್ಟ್​ನಲ್ಲಿ ಎಟಿಎಂನಲ್ಲಿ ವಿನಿಯಮ ಶುಲ್ಕವನ್ನ ಹೆಚ್ಚಿಸಲಾಗಿತ್ತು. ಅಂದು, ಒಂದು ಬ್ಯಾಂಕ್​ನ ಕಾರ್ಡನ್ನು ಬೇರೊಂದು ಬ್ಯಾಂಕ್​ನ ಎಟಿಎಂಗಳಲ್ಲಿ ಬಳಸಿದರೆ ಮೊದಲ ಬ್ಯಾಂಕ್ ಇಂತಿಷ್ಟು ಶುಲ್ಕವನ್ನು ಎರಡನೇ ಬ್ಯಾಂಕ್​ಗೆ ಪಾವತಿಸಬೇಕು. ಈ ರೀತಿ ಕ್ಯಾಷ್ ವಿತ್​ಡ್ರಾ ಮಾಡಿದರೆ ವಿಧಿಸುವ ವಿನಿಯಮ ಶುಲ್ಕವನ್ನ 15 ರೂನಿಂದ 17 ರೂಗೆ ಹೆಚ್ಚಿಸಲಾಗಿದೆ. ಹಾಗೆಯೇ, ಹಣದ ಹೊರತಾಗಿ ಬೇರೆ ವಹಿವಾಟು ನಡೆಸಿದರೆ ವಿಧಿಸುವ ಶುಲ್ಕವನ್ನು 5ರೂನಿಂದ 6 ರೂಗೆ ಹೆಚ್ಚಿಸಲಾಗಿದೆ.

  ಇದನ್ನೂ ಓದಿ: ನಿಯಮ ಉಲ್ಲಂಘನೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ. ದಂಡ ವಿಧಿಸಿದ RBI

  ಎಟಿಎಂಗಳಲ್ಲಿ ಉಚಿತ ವಹಿವಾಟು ಎಷ್ಟು?

  ಗ್ರಾಹಕರು ತಮ್ಮ ಬ್ಯಾಂಕ್​ನ ಎಟಿಎಂಗಳಲ್ಲಿ ಐದು ಬಾರಿ ಕಾರ್ಡ್ ಮೂಲಕ ವಹಿವಾಟು ನಡೆಸಬಹುದಾಗಿದೆ. ಇದರಲ್ಲಿ ಹಣ ವಿತ್ ಡ್ರಾ ಅಥವಾ ಸ್ಟೇಟ್ಮೆಂಟ್ ನೋಡುವುದು ಅಥವಾ ಬ್ಯಾಂಕ್ ಬ್ಯಾಲೆನ್ಸ್ ನೋಡುವುದು ಇದು ಒಂದು ವಹಿವಾಟು ಎಂದೇ ಪರಿಗಣಿತವಾಗುತ್ತದೆ. ಒಂದು ತಿಂಗಳಿಗೆ ಇಂಥ ಐದು ವಹಿವಾಟನ್ನು ಉಚಿತವಾಗಿ ಮಾಡಲು ಅವಕಾಶ ಇದೆ.

  ಹಾಗೆಯೇ, ಬೇರೆ ಬ್ಯಾಂಕ್​ನ ಎಟಿಎಂಗಳಲ್ಲಿ ನೀವು ಕಾರ್ಡ್ ಬಳಸಿ 3ರಿಂದ 5 ಬಾರಿ ಉಚಿತವಾಗಿ ವಹಿವಾಟು ನಡೆಸಲು ಸಾಧ್ಯ. ಮೆಟ್ರೋ ನಗರಗಳಲ್ಲಿ 3 ಬಾರಿ, ಇತರ ನಗರಗಳಲ್ಲಿ 5 ಬಾರಿ ಇಂಥ ವಹಿವಾಟುಗಳನ್ನ ಉಚಿತವಾಗಿ ನಡೆಸಬಹುದು.

  ಈ ಸಂಖ್ಯೆಯನ್ನು ಮೀರಿ ನೀವು ವಹಿವಾಟು ನಡೆಸಿದರೆ ಮುಂದಿನ ತಿಂಗಳಿನಿಂದ 21 ರೂ ಶುಲ್ಕ ತೆರಬೇಕಾಗುತ್ತದೆ.

  ಇದನ್ನೂ ಓದಿ: ನಿಮ್ಮಲ್ಲಿ 786 ನಂಬರ್ ಇರುವ ನೋಟ್ ಇದ್ದರೆ 3 ಲಕ್ಷ ಲಾಭ; ಇಲ್ಲಿದೆ ವಿವರ

  ಹಣಕಾಸಿನ ವಿಚಾರದಲ್ಲಿ ಈ ಕೆಳಗಿನ ಬದಲಾವಣೆಗಳು ಆಗುತ್ತಿವೆ ಗಮನಿಸಿ:

  1)  ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ

  2) ಡಿಸೆಂಬರ್‌ನಿಂದ ಟರ್ಮ್ ಇನ್ಶೂರೆನ್ಸ್ ಪ್ರೀಮಿಯಂ ಏರಿಕೆಯಾಗುವ ಸಾಧ್ಯತೆ ಇದೆ

  3) SBI ಕ್ರೆಡಿಟ್ ಕಾರ್ಡ್‌ಗಳ ಮೂಲಕ EMI ಖರೀದಿಗಳು ದುಬಾರಿಯಾಗುತ್ತವೆ

  4) ಸಾಲ ನಿಧಿ ಹೂಡಿಕೆದಾರರಿಗೆ SEBI ಸಂಭಾವ್ಯ ಅಪಾಯದ ವರ್ಗ ಮ್ಯಾಟ್ರಿಕ್ಸ್ ಅನ್ನು ಪರಿಚಯಿಸುತ್ತದೆ

  5) ಸಿಲ್ವರ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ (ಇಟಿಎಫ್‌ಗಳು) ಹೂಡಿಕೆ ಮಾಡಲು ಮಾರ್ಗಸೂಚಿಗಳು

  6) ಸೆಕ್ಯೂರಿಟಿಗಳಲ್ಲಿ ನೇರವಾಗಿ ಹೂಡಿಕೆ ಮಾಡುವಾಗ ಮ್ಯೂಚುವಲ್ ಫಂಡ್ ಉದ್ಯೋಗಿಗಳಿಗೆ ಹೊಸ ಮಾರ್ಗಸೂಚಿಗಳು

  7) ರಾತ್ರೋರಾತ್ರಿ ಯೋಜನೆಗಳಲ್ಲಿ ಕ್ಲೈಮ್ ಮಾಡದ ಮೊತ್ತವನ್ನು ಹೂಡಿಕೆ ಮಾಡಲು SEBI ಅನುಮತಿ

  ಈ ಮೇಲಿನ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
  Published by:Vijayasarthy SN
  First published: