ನಗದು ಬೇಕು ಅಂದರೆ ತಡ ಮಾಡದೇ ಥಟ್ ಅಂತಾ ATMಗೆ ಹೋಗಿ ನಮ್ಮ ಪಿನ್ ಅನ್ನು ನಮೂದಿಸಿ ಹಣ (Money) ತೆಗೆದುಕೊಂಡು ಬರುವುದು ಎಷ್ಟು ಸುಲಭದ ಕೆಲಸ ಅಲ್ವಾ. ಎಂಟಿಎಂ ಬರೋ ಮುಂಚೆ ಬ್ಯಾಂಕ್‌ನಲ್ಲಿ (Bank) ಗಂಟೆಗಟ್ಟಲೇ ಕಾಯಬೇಕಿತ್ತು. ಈಗ ಎಟಿಎಂ ಜನರ ಕೆಲಸವನ್ನು ಸುಲಭ ಮಾಡಿದೆ. ಎಟಿಎಂ ನಮ್ಮ ಹಣ ಸುಲಭವಾಗಿ ನಮ್ಮ ಕೈ ಸೇರುವಂತೆ ಮಾಡುವುದರ ಜೊತೆ ಇದೊಂದು ಉತ್ತಮ ವ್ಯವಹಾರ ಆಯ್ಕೆಯೂ ಹೌದು. ಎಟಿಎಂ ಅಲ್ಲಿ ಏನು ವ್ಯವಹಾರ ಅಂತೀರಾ ತಿಳಿಯಲು ಮುಂದೆ ಓದಿ.
ಎಟಿಎಂ ಫ್ರ್ಯಾಂಚೈಸ್ ವ್ಯವಹಾರ
ಒಂದು ವಹಿವಾಟನ್ನು ಆರಂಭಿಸಿದ ಬಳಿಕ ಅದರ ಬೇಡಿಕೆ ಹೇಗಿದೆ ಎಂಬುವುದರ ಆಧಾರದಲ್ಲಿ ಆ ವಹಿವಾಟನ್ನು ಯಶಸ್ವಿಯಾಗಿ ನಡೆಸುವುದು ಒಂದು ಸವಾಲಾಗಿ ಪರಿಣಮಿಸುತ್ತದೆ.
ಇಂತಹ ವ್ಯವಹಾರಗಳಲ್ಲಿ ಈ ಎಟಿಎಂ ಫ್ರಾಂಚೈಸಿ ಬ್ಯುಸಿನೆಸ್ ಕೂಡಾ ಒಂದು. ನೀವು ಇಲ್ಲಿ ಸಣ್ಣ ಮೊತ್ತದ ಹೂಡಿಕೆಯನ್ನು ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ. ಅಂದರೆ ನೀವು ಸುಮಾರು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದಿರಿ ಎಂತಾದರೆ, ತಿಂಗಳಿಗೆ ಸುಲಭವಾಗಿ 60,000-70,000 ರೂಪಾಯಿ ಆದಾಯವನ್ನು ಪಡೆಯಬಹುದು.
ಎಟಿಎಂ ಫ್ರ್ಯಾಂಚೈಸ್ ಕಾರ್ಯವಿಧಾನ
ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ, ಪಿಎನ್‌ಬಿ ಮತ್ತು ಯುಬಿಐನಂತಹ ಬ್ಯಾಂಕ್-ಬ್ರಾಂಡೆಡ್ ಎಟಿಎಂ ಸೇವೆಯನ್ನು ನೀಡುತ್ತದೆ. ನಮಗೆ ಹಣ ಬೇಕು ಅಂದರೆ ತಕ್ಷಣಕ್ಕೆ ಎಂಟಿಎಂಗೆ ಹೋಗಿ ಡ್ರಾ ಮಾಡಿಕೊಳ್ಳುತ್ತೇವೆ. ಹೀಗೆ ಎಂಟಿಎಂ ಹೇಗೆ ಬರುತ್ತದೆ ಅಂದರೆ ಎಟಿಎಂಗಳನ್ನು ಸ್ಥಾಪಿಸುವ ಬ್ಯಾಂಕ್‌ಗಳು ವಾಸ್ತವವಾಗಿ ಈ ಬ್ಯಾಂಕುಗಳು ಗುತ್ತಿಗೆದಾರರನ್ನು ನೇಮಿಸಿ ಈ ಎಟಿಎಂಗಳನ್ನು ಇನ್‌ಸ್ಟಾಲ್ ಮಾಡುಕೊಳ್ಳುತ್ತದೆ.
ಈ ಗುತ್ತಿಗೆದಾರರು ಬೇರೆ ಬೇರೆ ಕಡೆ ಎಟಿಎಂಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಹಲವಾರು ಬ್ಯಾಂಕ್‌ಗಳು ಗುತ್ತಿಗೆದಾರರೊಂದಿಗೆ ಅಗ್ರಿಮೆಂಟ್ ಅನ್ನು ಸಹ ಮಾಡಿಕೊಳ್ಳುತ್ತಾರೆ.
ಭಾರತದಲ್ಲಿ ಎಟಿಎಂಗಳ ಸ್ಥಾಪನೆಗಾಗಿ, ಬಹುತೇಕ ಬ್ಯಾಂಕ್‌ಗಳು ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಆದ್ದರಿಂದ, ನೀವು ಎಸ್‌ಬಿಐ ಅಥವಾ ಇತರ ಯಾವುದೇ ಬ್ಯಾಂಕ್‌ನಿಂದ ಎಟಿಎಂ ಫ್ರಾಂಚೈಸ್ ಪಡೆಯಲು ಬಯಸಿದರೆ, ನೀವು ಈ ಕಂಪನಿಗಳಿಗೆ ಅವರ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕು.
ಇಲ್ಲೊಂದು ಪ್ರಮುಖ ಸೂಚನೆ ಎಂದರೆ, ಎಟಿಎಂ ಫ್ರಾಂಚೈಸಿಯ ನೆಪದಲ್ಲಿ ಅನೇಕ ವಂಚನೆ ಕೇಸ್‌ಗಳು ದಾಖಲಾಗುತ್ತಿರುವ ಕಾರಣದಿಂದಾಗಿ ಎಚ್ಚರಿಕೆಯಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಿರಿ.
ATM ಫ್ರ್ಯಾಂಚೈಸ್ ಆರಂಭಿಸಲು ಏನೆಲ್ಲಾ ಅಗತ್ಯ?
ಮೊದಲಿಗೆ ನೀವು ಒಂದು ಎಟಿಎಂ ಅನ್ನು ಸ್ಥಾಪಿಸಲುಸುಮಾರು 50ರಿಂದ 80 ಚದರ ಅಡಿಗಳಷ್ಟು ಜಾಗ ಬೇಕಾಗುತ್ತದೆ. ಹಾಗೆಯೇ ಜನರು ಎಲ್ಲಿ ಸುಲಭವಾಗಿ ನೋಡಲು ಸಾಧ್ಯವೋ ಅಂತಹ ಪ್ರದೇಶದಲ್ಲಿ ಎಟಿಎಂ ಇನ್‌ಸ್ಟಾಲ್ ಮಾಡಬೇಕಾಗುತ್ತದೆ.
ಹಾಗೆಯೇ ಒಂದು ಎಟಿಎಂ ಇನ್ನೊಂದು ಎಟಿಎಂನಿಂದ ಕನಿಷ್ಠ 100 ಮೀಟರ್ ಅಂತರದಲ್ಲಿ ಇರಬೇಕಾಗುತ್ತದೆ. ನಿರಂತರವಾಗಿ ಎಲೆಕ್ಟ್ರಿಸಿಟಿ ಸರಬರಾಜು ಎಟಿಎಂನಲ್ಲಿ ಕಡ್ಡಾಯವಾಗಿ ಇರಬೇಕಾಗುತ್ತದೆ. V-SAT ಅನ್ನು ಸ್ಥಾಪಿಸಲು ನೀವು ಸೊಸೈಟಿ ಅಥವಾ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
ಎಟಿಎಂ ಫ್ರ್ಯಾಂಚೈಸ್‌ಗೆ ಯಾವೆಲ್ಲಾ ದಾಖಲೆಗಳು ಬೇಕು?
* ID ಪುರಾವೆ - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್
* ವಿಳಾಸ ಪುರಾವೆ - ಪಡಿತರ ಚೀಟಿ, ವಿದ್ಯುತ್ ಬಿಲ್
* ಬ್ಯಾಂಕ್ ಖಾತೆ ಮತ್ತು ಪಾಸ್‌ಬುಕ್
* ಭಾವಚಿತ್ರ, ಇ-ಮೇಲ್ ಐಡಿ, ದೂರವಾಣಿ ಸಂಖ್ಯೆ.
* ಕಂಪನಿಗೆ ಅಗತ್ಯವಿರುವ ಇತರ ದಾಖಲೆಗಳು/ಫಾರ್ಮ್‌ಗಳು
* ಜಿಎಸ್‌ಟಿ ಸಂಖ್ಯೆ
* ಕಂಪನಿಗೆ ಅಗತ್ಯವಿರುವ ಹಣಕಾಸಿನ ದಾಖಲೆಗಳು
ಇದನ್ನೂ ಓದಿ: Lottery Tax Rules: ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಗೆದ್ರೆ, ಎಷ್ಟು ಲಕ್ಷ ತೆರಿಗೆ ಕಟ್ ಆಗುತ್ತೆ ಗೊತ್ತೇ?
ATM ಫ್ರಾಂಚೈಸಿಯಿಂದ ಬರುವ ಆದಾಯ
ನೀವು ಅರ್ಜಿ ಸಲ್ಲಿಸಿದಾಗ ಮತ್ತು ATM ಫ್ರ್ಯಾಂಚೈಸ್‌ಗೆ ಅನುಮತಿ ನೀಡಿದಾಗ, ನೀವು ಸಾಮಾನ್ಯವಾಗಿ ರೂ 2 ಲಕ್ಷವನ್ನು ಭದ್ರತಾ ಠೇವಣಿಯಾಗಿ ಮತ್ತು ರೂ 3 ಲಕ್ಷವನ್ನು ಕಾರ್ಯಾಚರಣೆಯ ಬಂಡವಾಳವಾಗಿ ಪಾವತಿಸಬೇಕಾಗುತ್ತದೆ. ಸುಮಾರು 5 ಲಕ್ಷ ರೂಪಾಯಿ ಇದ್ದರೆ ATM ಫ್ರಾಂಚೈಸಿ ವ್ಯವಹಾರವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಎಟಿಎಂ ಸ್ಥಾಪಿಸಿದ ನಂತರ ಮತ್ತು ಜನರು ಅದನ್ನು ಬಳಸಲು ಪ್ರಾರಂಭಿಸಿದಾಗ, ಪ್ರತಿ ವಹಿವಾಟಿಗೆ ನಿಮಗೆ 8 ರೂಪಾಯಿ ಲಭ್ಯವಾಗುತ್ತದೆ. ಹಣಕಾಸೇತರ ವಹಿವಾಟಿಗೆ 2 ರೂಪಾಯಿ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನೀವು ಮಾಸಿಕವಾಗಿ 60,000-70,000 ರೂಪಾಯಿ ಆದಾಯ ಗಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ