ತಿಂಗಳಿಗೆ 5,000 ರೂ. Pension ಕೊಡುತ್ತೆ ಈ ಯೋಜನೆ.. ಈವರೆಗೆ 3.75 ಕೋಟಿ ಜನ ಇದರ ಫಲಾನುಭವಿಗಳು!

ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana) ನೀವು ಹಣವನ್ನು ಹೂಡಿಕೆ ಮಾಡಬಹುದು. ಇದರಲ್ಲಿ ತಿಂಗಳಿಗೆ 5000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ (Central Government) ಈ ಯೋಜನೆ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬ ವ್ಯಕ್ತಿಯು ತನ್ನ ವೃದ್ಧಾಪ್ಯದಲ್ಲಿ (Old Age) ನೆಮ್ಮದಿಯ ಜೀವನ ನಡೆಸಲು ಬಯಸುತ್ತಾನೆ. ಬಹುತೇಕರು ಈಗಾಗಲೇ ತಮ್ಮ ವೃದ್ಧಾಪ್ಯಕ್ಕೆ ತಯಾರಿ ಪ್ರಾರಂಭಿಸುತ್ತಾರೆ. ನಿಮ್ಮ ನಿವೃತ್ತಿಯ ನಂತರ ನೀವು ಸುರಕ್ಷಿತ ಜೀವನವನ್ನು ಹೊಂದಲು ಬಯಸಿದರೆ, ಅದಕ್ಕಾಗಿ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ (Atal Pension Yojana) ನೀವು ಹಣವನ್ನು ಹೂಡಿಕೆ ಮಾಡಬಹುದು. ಇದರಲ್ಲಿ ತಿಂಗಳಿಗೆ 5000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ (Central Government) ಈ ಯೋಜನೆ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಯೋಜನೆಗೆ ಸೇರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 2021-22 ರ ಹಣಕಾಸು ವರ್ಷದಲ್ಲಿ, ಜನವರಿ 24 ರವರೆಗೆ, 71 ಲಕ್ಷಕ್ಕೂ ಹೆಚ್ಚು ಜನರು ಈ ಯೋಜನೆಗೆ ಸೇರಿದ್ದಾರೆ.

ಇದನ್ನೂ ಓದಿ: Income Tax Return: ಈ SBI ಯೋಜನೆ ಮೂಲಕ ಆದಾಯ ತೆರಿಗೆ ಉಳಿಸಿ.. ಟ್ಯಾಕ್ಸ್ ಟೆನ್ಷನ್ ಇರಲ್ಲ!

ಈ ಯೋಜನೆಗೆ 3.75 ಕೋಟಿ ಜನ ಸೇರಿದ್ದಾರೆ

ಈ ಯೋಜನೆಗೆ ಸೇರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಬಿ.ಕೆ.ಕರದ್ ಅವರು, ಜನವರಿ 24, 2022 ರವರೆಗೆ 71,06,743 ಹೊಸ ಸದಸ್ಯರನ್ನು ಅಟಲ್ ಪಿಂಚಣಿ ಯೋಜನೆಯಡಿ ಸೇರಿಸಲಾಗಿದೆ. ಈ ಯೋಜನೆಗೆ ಜನರಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ನಿರಂತರವಾಗಿ ಸೇರುವವರ ಸಂಖ್ಯೆಯನ್ನು ನೋಡಿಯೇ ಇದರ ಜನಪ್ರಿಯತೆ ಗೊತ್ತಾಗುತ್ತದೆ. 2020-21 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021-22 ರಲ್ಲಿ ಹೊಸ ಸದಸ್ಯರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. 2020-21 ರಲ್ಲಿ, 79 ಲಕ್ಷಕ್ಕೂ ಹೆಚ್ಚು ಜನರು ಈ ಯೋಜನೆಯನ್ನು ಶುರು ಮಾಡಿದ್ದಾರೆ. ಅದೇ ಸಮಯದಲ್ಲಿ, 2018-19 ರಲ್ಲಿ 70 ಲಕ್ಷ ಜನರು ಈ ಯೋಜನೆಗೆ ಸೇರಿದ್ದಾರೆ. ಪ್ರಸ್ತುತ, ನಾವು ಒಟ್ಟು ಚಂದಾದಾರರನ್ನು ನೋಡಿದರೆ, ಈ ಯೋಜನೆಗೆ ಸೇರುವವರ ಸಂಖ್ಯೆ ಈಗ 3.75 ಕೋಟಿ ದಾಟಿದೆ ಎಂದು ಸಚಿವರು ತಿಳಿಸಿದ್ದಾರೆ.

ಯೋಜನೆ ಬಗ್ಗೆ ಮುಖ್ಯವಾದ ಮಾಹಿತಿ..

ಈ ವಿಶೇಷ ಯೋಜನೆಯನ್ನು ಮೇ 2015 ರಲ್ಲಿ ಪ್ರಾರಂಭಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯು ಸರ್ಕಾರಿ ಯೋಜನೆಯಾಗಿದೆ, ಇದನ್ನು 9 ಮೇ 2015 ರಂದು ಪ್ರಾರಂಭಿಸಲಾಯಿತು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರನ್ನು ಗಮನದಲ್ಲಿಟ್ಟುಕೊಂಡು ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆದರೆ ಈಗ 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: LIC Pension: ಮಾ.1ರಿಂದ ಸರಳ್ ಪಿಂಚಣಿ ಯೋಜನೆ ಆರಂಭ.. ಇದೊಂದು ಮಾಡಿದ್ರೆ ನೆಮ್ಮದಿಯ ಜೀವನ ನಿಮ್ಮದು

ಈ ಯೋಜನೆ ಆರಂಭಿಸಲು ಇರುವ ನಿಯಮಗಳೇನು?

  • ಭಾರತದ ಪ್ರಜೆಯಾಗಿರಬೇಕು.

  • ಅರ್ಜಿದಾರರ ವಯಸ್ಸು 18-40 ವರ್ಷಗಳ ನಡುವೆ ಇರಬೇಕು.

  • ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

  • ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

  • ಈಗಾಗಲೇ ಅಟಲ್ ಪಿಂಚಣಿ ಫಲಾನುಭವಿ ಆಗಿರಬಾರದು.

  •  ಕನಿಷ್ಠ ಕೊಡುಗೆ ಅವಧಿ 20 ವರ್ಷಗಳು.

  • ಇದರ ನಂತರ ಸರ್ಕಾರವು ಖಾತರಿಯ ಕನಿಷ್ಠ ಪಿಂಚಣಿ ನೀಡುತ್ತದೆ.


ಹೀಗೆ ಸುಲಭವಾಗಿ ಖಾತೆ ತೆರೆಯಿರಿ

ಅಟಲ್ ಪಿಂಚಣಿ ಯೋಜನೆಯಲ್ಲಿ ನಿಮ್ಮ ಖಾತೆಯನ್ನು ತೆರೆಯಲು, ನೀವು ನಿಮ್ಮ ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‌ಗೆ ಹೋಗಬೇಕು. ಅಲ್ಲಿ APY ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ನೀಡಬೇಕಾಗುತ್ತದೆ. ಪ್ರತಿ ತಿಂಗಳ ಕಂತಿಗೆ ನಿಮ್ಮ ಉಳಿತಾಯ ಖಾತೆಯಲ್ಲಿ ಲಭ್ಯವಿರುವ ಮೊತ್ತವನ್ನು ಹೊಂದಿರುವುದು ಮುಖ್ಯವಾಗಿದೆ. ಇದಲ್ಲದೆ, ಈಗ ಆನ್‌ಲೈನ್ ಮೂಲಕವೂ ಈ ಯೋಜನೆಗೆ ಸೇರಬಹುದು.
Published by:Kavya V
First published: