ಮಕ್ಕಳ (Kids) ಬೆಳವಣಿಗೆ ಸಮಯದಲ್ಲಿ ವಸ್ತ್ರ, ಶೂಗಳನ್ನು ಪ್ರತಿ ವರ್ಷ ಕೊಳ್ಳುವುದು ಪೋಷಕರಿಗೆ ಆರ್ಥಿಕ ಹೊರೆ. ಈ ನಿಟ್ಟಿನಲ್ಲಿ ಬಹಳಷ್ಟು ಪೋಷಕರು ತಮ್ಮ ಮಕ್ಕಳಿಗೆ ಅವರ ದೇಹದ ಅಳತೆಯನ್ನು ಮೀರಿ ಸಡಿಲವಾದ ಬಟ್ಟೆ ಮತ್ತು ಶೂಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಇದು ಕೇವಲ ಭಾರತೀಯ (Indian Problems) ಸಮಸ್ಯೆ ಮಾತ್ರವಲ್ಲ. ಜಾಗತಿಕವಾಗಿಯೂ ಈ ಮನೋಭಾವವಿದೆ. ಇಂತಹದ್ದೇ ಕುಟುಂಬದಿಂದ ಬಂದ ಪುಣೆಯ ಯುವ ಉದ್ಯಮಿ ಸತ್ಯಜಿತ್ ಮಿತ್ತಲ್ (Satyajeet mittal) ಅವರು ಮಕ್ಕಳು ಬೆಳೆದಂತೆ ಅವರ ಪಾದಗಳು ಬೆಳವಣಿಗೆಯಾಗುತ್ತವೆ ಆಕಾರಣಕ್ಕಾಗಿ ಅದಕ್ಕೆ ಅನುಗುಣವಾಗಿ ವಿಸ್ತಾರವಾಗುವ ಶೂ ವಿನ್ಯಾಸ ಮಾಡಿದ್ದಾರೆ. ಇದು ಮಕ್ಕಳನ್ನು ಆಕರ್ಷಿಸುತ್ತಿದೆ.
ಮಕ್ಕಳ ಮೊದಲ ಹತ್ತು ವರ್ಷಗಳು
ಮಕ್ಕಳು ಬೆಳೆಯುವಾಗ ಮೊದಲ 10 ವರ್ಷದಲ್ಲಿ ಮಕ್ಕಳ ಶೂಗಳ ಅಳತೆಯಲ್ಲಿ ಸ್ಪಷ್ಟತೆ ಇರುವುದಿಲ್ಲ. ಅದರಲ್ಲೂ ಹುಟ್ಟಿದಾಗಿನಿಂದ ಮೊದಲ 3 ವರ್ಷಗಳಲ್ಲಿ ಮಕ್ಕಳ ಪಾದದ ಆಕಾರ ಬದಲಾಗುತ್ತಿರುತ್ತದೆ.
ಅದು 13 ನೇ ವರ್ಷಕ್ಕೆ ಒಂದು ಆಕಾರವನ್ನು ಪಡೆದುಕೊಳ್ಳುತ್ತದೆ. ಹೀಗೆ ಪಾದಗಳ ಬೆಳವಣಿಗೆಯಲ್ಲಿ ಮಕ್ಕಳ ಶೂಗಳು ಚಿಕ್ಕದಾಗುತ್ತವೆ. ಆಕಾರ ರಹಿತ ಶೂ ಪಾದಕ್ಕೆ ಹಾನಿಕಾರಕ.
ಆರ್ಥಿಕ ಹೊರೆ
ಕೆಲವರು ಅದನ್ನು ಅಗತ್ಯವಿರುವ ಮಕ್ಕಳಿಗೆ ನೀಡಿದರೆ, ಮತ್ತೆ ಕೆಲವರು ಅದನ್ನು ಬಿಸಾಡುತ್ತಾರೆ. ಆದರೆ ಇದು ಆರ್ಥಿಕವಾಗಿ ಹೊರೆ ಹೆಚ್ಚಿಸುತ್ತದೆ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಅನುಗುಣವಾಗಿ ಶೂ ವಿನ್ಯಾಸ ಮಾಡಬೇಕು ಎಂದು ಸತ್ಯಜಿತ್ ಆಲೋಚಿಸಿ ಐಡಿಯಾ ಮಾಡಿದ್ದಾರೆ.
ಅರೆಟ್ಟೊ ಸ್ಟಾರ್ಟ್ಅಪ್ ಆರಂಭ
ಮಕ್ಕಳು ಮತ್ತು ಪೋಷಕರು ಇಬ್ಬರಿಗೂ ನೆರವಾಗಲು ಬಾಲ್ಯದ ಗೆಳತಿ ಕೃತಿಕಾ ಜೊತೆಗೂಡಿ ಅರೆಟ್ಟೊವನ್ನು 2022 ರಲ್ಲಿ ಆರಂಭಿಸಿದ್ದಾರೆ. ಮಾರ್ಕೆಟಿಂಗ್ ಮತ್ತು ಮಾರಾಟವನ್ನು ಕೃತಿಕಾ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: Sundar Pichai: ಎಲ್ಲರ ಕೆಲಸವನ್ನು AI ಇಂಜಿನಿಯರ್ಸ್ ಕಸಿದುಕೊಳ್ತಾ ಇದ್ದಾರಾ? ಗೂಗಲ್ ಸಿಇಓ ಏನಂತಾರೆ?
ಪೇಟೆಂಟ್ 3 ಡಿ ವಿನ್ಯಾಸದೊಂದಿಗೆ ಶೂ ಮಾರಾಟ ಮಾಡಲಾಗುತ್ತಿದೆ. ಇದನ್ನು ಫ್ಯಾಷನ್ಶೋಗಳಲ್ಲೂ ಬಳಸಬಹುದು. ದೀರ್ಘಕಾಲ ಬಾಳಿಕೆ ಬರುತ್ತದೆ.
360 ಡಿಗ್ರಿ ಹೊಂದಿಕೊಳ್ಳುವ ಶೂ
ಈ ಶೂ 360 ಡಿಗ್ರಿಗೂ ವಿಸ್ತರಿಸುತ್ತದೆ. ಅಲ್ಲದೇ 3 ಗಾತ್ರದಲ್ಲಿ ವಿಸ್ತರಿಸುತ್ತದೆ ಎಂದಿದ್ದಾರೆ ಸತ್ಯಜಿತ್. 18 ಮಿಮಿ ಬೆಳವಣಿಗೆಗೆ ಹೊಂದುವಂತೆ 3 ಗಾತ್ರದಲ್ಲಿ ಶೂ ವಿನ್ಯಾಸ ಮಾಡಲಾಗಿದೆ.
ಮಗುವಿನ ಪಾದಗಳು ಹಿಂದೆ , ಮುಂದೆ , ಅಕ್ಕ , ಪಕ್ಕಕ್ಕೆ ಬೆಳವಣಿಗೆಯಾದಾಗ ಈ ಶೂಗಳು ಅದರಂತೆಯೇ ವಿಸ್ತಾರವಾಗುತ್ತವೆ. ಇದು ಮಕ್ಕಳ ಪಾದದ ಆಕಾರವನ್ನು ಕಾಪಾಡುತ್ತದೆ. ಸೋಲ್ನಲ್ಲಿ ಜೆಲ್ಲಿ ಸಾಫ್ಟ್ ಮೆಮೊರಿ ಫೋಮ್ ಬಳಸಲಾಗಿದೆ. ಆರಾಮದಾಯಕ ಅಂಗಾಲಿನ ಪ್ಯಾಡ್ಗಳಿವೆ.
ಮಕ್ಕಳ ತಜ್ಞರ ಸಲಹೆ ಮೇರೆಗೆ ಶೂ ವಿನ್ಯಾಸ
2020 ರಲ್ಲಿ ಮಕ್ಕಳ ತಜ್ಞರನ್ನು ಭೇಟಿ ಮಾಡಿದ ಸತ್ಯಜಿತ್ ಮಕ್ಕಳ ಪಾದರಚನೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಮೊದಲ 6 ವರ್ಷಗಳಲ್ಲಿ ಪಾದದ ರಚನೆಯಲ್ಲಿ ಸಾವಿರಾರು ನರಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ಅಲ್ಲದೇ ಇವು ಮಕ್ಕಳ ಮಿದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ದೊಡ್ಡ ಸಂಸ್ಥೆಗಳು ದೊಡ್ಡವರ ಶೂ ಬಗ್ಗೆ ಹೆಚ್ಚು ಒತ್ತು ನೀಡುತ್ತವೆ. ಸಣ್ಣ ಮಕ್ಕಳ ಬಗ್ಗೆ ಅಷ್ಟಾಗಿ ಗಮನವಹಿಸುವುದಿಲ್ಲ ಎನ್ನುವುದು ಇವರ ಗಮನಕ್ಕೆ ಬಂದಿದೆ. ಅದನ್ನೇ ಕೇಂದ್ರವಾಗಿರಿಸಿಕೊಂಡು ಶೂ ವಿನ್ಯಾಸ ಮಾಡಿದ್ದಾರೆ.
ಬೆಲೆ
ಈ ಶೂಗಳ ಬೆಲೆ 1800 ರೂನಿಂದ 2600 ರೂ ವರೆಗೆ ಇದೆ. ಇಲ್ಲಿಯವರೆಗೆ ಸಂಸ್ಥೆಯು ಶೂ ವ್ಯಾಪಾರದಿಂದ 21 ಲಕ್ಷ ಆದಾಯ ಮತ್ತು 80 ಪ್ರತಿಶತದಷ್ಟು ಮಾಸಿಕ ಬೆಳವಣಿಗೆ ದರ ದಾಖಲಿಸಿದೆ. ದೆಹಲಿ, ಪುಣೆ, ಮುಂಬೈ, ಬೆಂಗಳೂರು, ಯುಎಸ್ ಮತ್ತು ಯುಕೆಯಲ್ಲಿ ಇವರ ಗ್ರಾಹಕರಿದ್ದಾರೆ.
ಗ್ರಾಹಕರು ಖುಷ್
ಸಾಮಾನ್ಯವಾಗಿ ಮಕ್ಕಳು ಪ್ರತಿ ಬಾರಿ ಹೊಸ ಶೂಗಳಿಗೆ ಬೇಡಿಕೆ ಇಡುತ್ತಾರೆ. ಆದರೆ ಈ ಶೂ ಧರಿಸಿದ ಮಕ್ಕಳು ಅದನ್ನು ಇಷ್ಟಪಡುವುದಿಲ್ಲ. ಕೆಲವು ಪೋಷಕರು 2500 ರೂ ಕೊಟ್ಟು ಶೂ ಕೊಂಡರು ಇದು ಉತ್ತಮ ಆಯ್ಕೆ ಎಂದು ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ