Bank Locker Rules Changed: ಲಾಕರ್ ಬಳಸುತ್ತಿದ್ದೀರಾ? ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಬದಲಾವಣೆಗಳ ಮಾಹಿತಿ ಇಲ್ಲಿದೆ

ಭಾರತದ ಅಪೆಕ್ಸ್ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ಗಳು ನೀಡುವ ಸುರಕ್ಷಿತ ಠೇವಣಿ ಲಾಕರ್ ಮತ್ತು ಸುರಕ್ಷಿತ ಕಸ್ಟಡಿ ಸೌಲಭ್ಯಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರ ತಂದಿದೆ.

ಬ್ಯಾಂಕ್ ಲಾಕರ್ (file photo)

ಬ್ಯಾಂಕ್ ಲಾಕರ್ (file photo)

  • Share this:
ನಿಮ್ಮ ಊರಿನಲ್ಲಿ ಕಳ್ಳತನ ಹೆಚ್ಚಾಗಿದೆಯೆಂದೋ ಹಾಗೂ ಮನೆಯಲ್ಲಿ ಯಾರೂ ಇರುವುದಿಲ್ಲ, ಮಹಿಳೆಯರು ಮಾತ್ರ ಇರುತ್ತಾರೆಂದು ಅಥವಾ ಇನ್ನಾವುದೋ ಕಾರಣಕ್ಕೆ ಈಗ ಹೆಚ್ಚಿನ ಮನೆಗಳಲ್ಲಿ ತಮ್ಮ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು, ನಗದು ಹಣ, ಇತರೆ ಬೆಲೆಬಾಳುವ ವಸ್ತುಗಳನ್ನು ಹೆಚ್ಚಾಗಿ ಬ್ಯಾಂಕಿನ ಲಾಕರ್‌ಗಳಲ್ಲಿ ಇಡುತ್ತಾರೆ. ನಿಮ್ಮ ಮನೆಯಲ್ಲೂ ಹಣ, ಆಭರಣ ಮುಂತಾದ ವಸ್ತುಗಳನ್ನು ಲಾಕರ್‌ನಲ್ಲಿಟ್ಟಿದ್ದೀರಾ..? ಹಾಗಾದ್ರೆ, ಈ ಸ್ಟೋರಿಯನ್ನು ನೀವು ಓದಲೇಬೇಕು.

ಭಾರತದ ಅಪೆಕ್ಸ್ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ಗಳು ನೀಡುವ ಸುರಕ್ಷಿತ ಠೇವಣಿ ಲಾಕರ್ ಮತ್ತು ಸುರಕ್ಷಿತ ಕಸ್ಟಡಿ ಸೌಲಭ್ಯಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರ ತಂದಿದೆ. ಬ್ಯಾಂಕಿಂಗ್ ಮತ್ತು ತಂತ್ರಜ್ಞಾನದಲ್ಲಿನ ಹಲವಾರು ಪ್ರಗತಿಗಳು, ಗ್ರಾಹಕರ ದೂರುಗಳು ಮತ್ತು ವಿವಿಧ ಬ್ಯಾಂಕ್‌ಗಳು ಹಾಗೂ ಭಾರತೀಯ ಬ್ಯಾಂಕ್‌ಗಳ ಸಂಘದಿಂದ (IBA) ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿ RBI ಆಗಸ್ಟ್ 18ರಂದು ಈ ನಿರ್ಧಾರ ತೆಗೆದುಕೊಂಡಿತು.

How to Apply Scholarship for Farmers Child in Karnataka 2021 here is the complete details
ಸಾಂದರ್ಭಿಕ ಚಿತ್ರ


ಈ ಬಗ್ಗೆ ನಾವು ಕೆಳಗೆ ಹೊಸ ಲಾಕರ್ ಮಾರ್ಗಸೂಚಿಗಳನ್ನು ಸಮಗ್ರವಾಗಿ ನೀಡಿದ್ದೇವೆ:

1. ಲಾಕರ್‌ಗಳನ್ನು ಪಡೆಯುವವರು ಲಾಕರ್ ನಿರ್ವಹಿಸದ ಅಥವಾ ಶುಲ್ಕ ಪಾವತಿಸದ ಸಂಭವನೀಯ ಸನ್ನಿವೇಶಗಳಿಗೆ ಬ್ಯಾಂಕುಗಳು ಸಾಕ್ಷಿಯಾಗಬಹುದು. ಈ ಹಿನ್ನೆಲೆ ಲಾಕರ್ ಬಾಡಿಗೆಯ ಸಕಾಲಿಕ ಪಾವತಿ ಖಚಿತಪಡಿಸಿಕೊಳ್ಳಲು, ಲಾಕರ್ ಹಂಚಿಕೆಯ ಸಮಯದಲ್ಲಿ ಬ್ಯಾಂಕ್‌ಗಳು ಟರ್ಮ್ ಡಿಪಾಸಿಟ್ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ಮೊತ್ತವು 3 ವರ್ಷಗಳ ಬಾಡಿಗೆ ಹಾಗೂ ಲಾಕರ್ ತೆರೆಯುವ ಶುಲ್ಕಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Bank Locker: ಬ್ಯಾಂಕ್ ಲಾಕರ್​​​ಗಳ ನಿಯಮಗಳಲ್ಲಿ ಬದಲಾವಣೆ ತಂದ RBI

2. ಆದರೆ, ಪ್ರಸ್ತುತ ಲಾಕರ್ ಹೊಂದಿರುವವರಿಂದ ಅಥವಾ ಕಾರ್ಯನಿರ್ವಹಿಸುತ್ತಿರುವ ಆಪರೇಟಿವ್ ಖಾತೆಗಳನ್ನು ಹೊಂದಿರುವವರಿಂದ ಅವಧಿ ಠೇವಣಿಗಳನ್ನು ಬ್ಯಾಂಕ್‌ಗಳು ಕೇಳುವಂತಿಲ್ಲ.

3. ಲಾಕರ್ ಬಾಡಿಗೆಯನ್ನು ಅಡ್ವಾನ್ಸ್‌ ಆಗಿ ತೆಗೆದುಕೊಂಡರೆ, ಸಂಗ್ರಹಿಸಿದ ಮುಂಗಡ ಮೊತ್ತದ ಸೂಕ್ತ ಮೊತ್ತವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುತ್ತದೆ. ಇನ್ನು, ನೈಸರ್ಗಿಕ ವಿಪತ್ತುಗಳಂತಹ ತುರ್ತು ಸಂದರ್ಭಗಳಲ್ಲಿ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬೇಗನೆ ತಿಳಿಸಲು ಪ್ರಯತ್ನ ಮಾಡಬೇಕು.

4. ತಮ್ಮ ನಿರ್ಲಕ್ಷ್ಯದಿಂದಾಗಿ ಲಾಕರ್‌ಗಳ ವಿಷಯಗಳಿಗೆ ಯಾವುದೇ ಹಾನಿ ಅಥವಾ ನಷ್ಟಕ್ಕೆ ಬದ್ಧರಾಗಿರುವ ಸಮಗ್ರ ಮಂಡಳಿಯ ಅನುಮೋದಿತ ನೀತಿಯನ್ನು ಬ್ಯಾಂಕುಗಳು ಪಾಲಿಸಬೇಕಾಗಿದೆ.

5. ಲಾಕರ್ ಆರೈಕೆ ಮಾಡುವುದು ಲಾಕರ್ ಸಿಸ್ಟಂನ ಸರಿಯಾದ ಕಾರ್ಯನಿರ್ವಹಣೆ ಖಾತರಿಪಡಿಸುವುದು ಮತ್ತು ಲಾಕರ್‌ಗಳಿಗೆ ಅನುಮೋದಿತವಲ್ಲದ ಪ್ರವೇಶದಿಂದ ರಕ್ಷಿಸುವುದನ್ನು ಒಳಗೊಂಡಿರುತ್ತದೆ. ದರೋಡೆ ಮತ್ತು ಕಳ್ಳತನದ ವಿರುದ್ಧ ಸಾಕಷ್ಟು ಕ್ರಮಗಳನ್ನು ಖಾತ್ರಿಪಡಿಸುವುದು ಸಹ ಬ್ಯಾಂಕಿನ ಜವಾಬ್ದಾರಿಯಾಗಿದೆ

ಇದನ್ನೂ ಓದಿ: Bank Lockers: ಬ್ಯಾಂಕ್ ಲಾಕರ್‌ಗಳು ಸುರಕ್ಷಿತವೇ? ಅಲ್ಲಿ ನಮ್ಮ ಸ್ವತ್ತುಗಳನ್ನು ಇಡಲು ತೆರಬೇಕಾದ ಶುಲ್ಕವೆಷ್ಟು?

6. ಹೊಸ ನಿಬಂಧನೆಗಳ ಪ್ರಕಾರ, ಭೂಕಂಪಗಳು, ಪ್ರವಾಹಗಳು ಇತ್ಯಾದಿ ಪ್ರಾಕೃತಿಕ ವಿಕೋಪಗಳಿಂದ ಲಾಕರ್‌ನ ಯಾವುದೇ ಹಾನಿ ಅಥವಾ ನಷ್ಟಕ್ಕೆ ಬ್ಯಾಂಕು ಹೊಣೆಗಾರನಾಗಿರುವುದಿಲ್ಲ. ಆದರೂ ಇಂತಹ ಅನಾಹುತಗಳಿಂದ ರಕ್ಷಣೆ ಪಡೆಯಲು ಬ್ಯಾಂಕ್‌ಗಳು ಸೂಕ್ತ ಸುರಕ್ಷತೆ ಅಳವಡಿಸಿಕೊಳ್ಳುತ್ತವೆ.

7. ಲಾಕರ್‌ನಲ್ಲಿ ಅಪಾಯಕಾರಿಯಾದ ಯಾವ ವಸ್ತುವ್ನನಾಗಲೀ, ಬಾಡಿಗೆದಾರರು ಇಡುವಂತಿಲ್ಲ. ಈ ಹೊಸ ಷರತ್ತನ್ನು ಲಾಕರ್‌ ಬಾಡಿಗೆ ಪಡೆಯುವವರಿಗೆ ಬ್ಯಾಂಕುಗಳು ವಿಧಿಸಿವೆ.

ಇದನ್ನೂ ಓದಿ: ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ 85 ಲಕ್ಷ ಮೌಲ್ಯದ ಚಿನ್ನ ಕಳವು; ಉದ್ಯೋಗಿಗಳ ವಿರುದ್ಧ ದಾಖಲಾಯ್ತು ಎಫ್‌ಐಆರ್‌

8. ಬ್ಯಾಂಕಿಂಗ್ ವೃತ್ತಿಪರರ ವಂಚನೆ ಅಥವಾ ಕಟ್ಟಡ ಕುಸಿತದಂತಹ ಘಟನೆಗಳ ಸಂದರ್ಭದಲ್ಲಿ ಬ್ಯಾಂಕುಗಳ ಹೊಣೆಗಾರಿಕೆಯನ್ನು ವಾರ್ಷಿಕ ಬಾಡಿಗೆಯ ಮೊತ್ತಕ್ಕಿಂತ 100 ಪಟ್ಟು ಹೆಚ್ಚಿಸಲಾಗಿದೆ.

ಈ ಮೇಲಿನ ನಿಯಮಗಳನ್ನು ಬ್ಯಾಂಕ್‌ ಲಾಕರ್‌ಗಳನ್ನು ಬಳಸುವವರಿಗೆ ಹಾಗೂ ಲಾಕರ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾದ ಬ್ಯಾಂಕುಗಳಿಗೆ ಆರ್​ಬಿಐ ವಿಧಿಸಿದೆ. ಈ ಹಿನ್ನೆಲೆ ನೀವು ಬ್ಯಾಂಕಿನಲ್ಲಿ ಲಾಕರ್‌ಗಳನ್ನಿಟ್ಟಿದರೆ ಈ ನಿಯಮಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು.
First published: