EPF: ನೀವು ಪಿಎಫ್ ಸದಸ್ಯರಾ? ಹಾಗಿದ್ರೆ ಆನ್‌ಲೈನ್ ನಲ್ಲಿ ಯುಎಎನ್ ಪಡೆಯುವುದು ಹೇಗೆ ಅಂತ ನೋಡ್ಕೊಳ್ಳಿ

Universal Account Number: ಯುಎಎನ್ ಬಳಸಿ, ಇಪಿಎಫ್ಒ ಸದಸ್ಯರು ತಮ್ಮ ಭವಿಷ್ಯ ನಿಧಿ ಖಾತೆಯನ್ನು ನಿರ್ವಹಿಸಬಹುದು ಮತ್ತು ಇಪಿಎಫ್ ನಲ್ಲಿ ಎಷ್ಟು ಹಣ ಜಮೆ ಆಗಿದೆ ಅಂತ ಸಹ ಪರಿಶೀಲಿಸುವುದು, ಪಿಎಫ್ ಸಾಲದ ಅರ್ಜಿಗಳನ್ನು ಸಲ್ಲಿಸುವುದು ಮತ್ತು ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲದೆ ಆನ್ಲೈನ್ ನಲ್ಲಿಯೇ ಜಮೆಯಾದ ಹಣವನ್ನು ಹಿಂಪಡೆಯುವ ವಿನಂತಿಗಳನ್ನು ಮಾಡುವುದು ಹೀಗೆ ಎಲ್ಲವನ್ನೂ ನೀವು ಈಗ ಆನ್ಲೈನ್ ನಲ್ಲಿಯೇ ಮಾಡಿಕೊಳ್ಳಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸರ್ಕಾರಿ (Government) ಅಥವಾ ಯಾವುದೇ ಖಾಸಗಿ ಕಂಪನಿಯಾಗಿರಲಿ (Private company), ಉದ್ಯೋಗಿಯನ್ನು ಕೆಲಸಕ್ಕೆ (Work) ಸೇರಿಸಿಕೊಂಡ ನಂತರ ಅವರ ಹೆಸರಿನಲ್ಲಿ ಒಂದು ಪ್ರಾವಿಡೆಂಟ್ ಫಂಡ್ ಎಂದರೆ ಭವಿಷ್ಯ ನಿಧಿ ಖಾತೆಯನ್ನು ಶುರು ಮಾಡಿಸಿ, ಪ್ರತಿ ತಿಂಗಳು ಸಂಬಳದಲ್ಲಿ ಸ್ವಲ್ಪ ಹಣವನ್ನು (Money) ಉದ್ಯೋಗದಾತರು ಆ ಖಾತೆಗೆ ಜಮೆ ಮಾಡುತ್ತಾರೆ. ನೀವು ಈ ಪಿಎಫ್ ಸದಸ್ಯರಾದ (PF Members) ಮೇಲೆ ನಿಮಗೆ ಒಂದು ಯೂನಿವರ್ಸಲ್ ಅಕೌಂಟ್ ನಂಬರ್ ಎಂಬುದೊಂದನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ನೀಡುತ್ತದೆ ಮತ್ತು ಆ ಸಂಖ್ಯೆ 12 ಅಂಕಿಗಳ ಒಂದು ಕೋಡ್ ಆಗಿರುತ್ತದೆ.

ಒಂದು ವೇಳೆ ಉದ್ಯೋಗಿಗಳು ತಮ್ಮ ಕೆಲಸವನ್ನು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಬದಲಾಯಿಸಿದಾಗ ಬದಲಾಗುವ ಇಪಿಎಫ್ ಖಾತೆ ಸಂಖ್ಯೆ ಮತ್ತು ಸದಸ್ಯ ಐಡಿಗಿಂತ ಇದು ಭಿನ್ನವಾಗಿರುತ್ತದೆ ಎಂದು ಹೇಳಬಹುದು, ಏಕೆಂದರೆ ನಿಮ್ಮ ಯುಎಎನ್ ಸಂಖ್ಯೆ ಎಂದಿಗೂ ಬದಲಾಗುವುದಿಲ್ಲ. ಒಂದು ಕಂಪನಿಯು 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವಾಗ ಉದ್ಯೋಗದಾತನು ಉದ್ಯೋಗಿಗೆ ಯುಎಎನ್ ಸಂಖ್ಯೆಯನ್ನು ಜನರೇಟ್ ಮಾಡಿ ನೀಡಬೇಕು. ಹೊಸ ಸಂಸ್ಥೆಗೆ ಸೇರುವ ಸಮಯದಲ್ಲಿ ಉದ್ಯೋಗಿಯು ಉದ್ಯೋಗದಾತರಿಗೆ ತಮ್ಮ ಯುಎಎನ್ ಸಂಖ್ಯೆಯನ್ನು ಒದಗಿಸಬೇಕು.

ಇಪಿಎಫ್ಒನೊಂದಿಗೆ ಸೈನ್ ಅಪ್ ಮಾಡಿ ಆನ್ಲೈನ್ ನಲ್ಲಿಯೇ ಎಲ್ಲವನ್ನು ತಿಳಿದುಕೊಳ್ಳಿ 
ಯುಎಎನ್ ಬಳಸಿ, ಇಪಿಎಫ್ಒ ಸದಸ್ಯರು ತಮ್ಮ ಭವಿಷ್ಯ ನಿಧಿ ಖಾತೆಯನ್ನು ನಿರ್ವಹಿಸಬಹುದು ಮತ್ತು ಇಪಿಎಫ್ ನಲ್ಲಿ ಎಷ್ಟು ಹಣ ಜಮೆ ಆಗಿದೆ ಅಂತ ಸಹ ಪರಿಶೀಲಿಸುವುದು, ಪಿಎಫ್ ಸಾಲದ ಅರ್ಜಿಗಳನ್ನು ಸಲ್ಲಿಸುವುದು ಮತ್ತು ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲದೆ ಆನ್ಲೈನ್ ನಲ್ಲಿಯೇ ಜಮೆಯಾದ ಹಣವನ್ನು ಹಿಂಪಡೆಯುವ ವಿನಂತಿಗಳನ್ನು ಮಾಡುವುದು ಹೀಗೆ ಎಲ್ಲವನ್ನೂ ನೀವು ಈಗ ಆನ್ಲೈನ್ ನಲ್ಲಿಯೇ ಮಾಡಿಕೊಳ್ಳಬಹುದು.

ಯುಎಎನ್ ಸಂಖ್ಯೆಯನ್ನು ಸಾಮಾನ್ಯವಾಗಿ ಕಂಪನಿ ಪ್ರತಿ ತಿಂಗಳು ನೀಡುವ ಸಂಬಳದ ಸ್ಲಿಪ್ ನಲ್ಲಿ ಮುದ್ರಿಸಲಾಗುತ್ತದೆ. ಆದಾಗ್ಯೂ, ಉದ್ಯೋಗದಾತರು 12-ಅಂಕಿಯ ಕೋಡ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ಅದನ್ನು ನೀವು ಸ್ವತಃ ಆನ್ಲೈನ್ ನಲ್ಲಿ ಜನರೇಟ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: RBI Monetary Policy: ರೆಪೋ ದರ ಏರಿಕೆಯಾದರೂ ಇಎಂಐ ಹೊರೆ ಕಡಿಮೆ ಮಾಡಲು ಇಲ್ಲಿದೆ ಉಪಾಯ!

ಮೊದಲ ಬಾರಿಗೆ ಇಪಿಎಫ್ಒನೊಂದಿಗೆ ಸೈನ್ ಅಪ್ ಮಾಡುವಾಗ ನಿಮ್ಮ ಯುಎಎನ್ ರಚಿಸಿಕೊಳ್ಳಲು ಉದ್ಯೋಗಿಯು ತಮ್ಮ ಗುರುತಿನ ಪುರಾವೆ, ವಿಳಾಸ ಪುರಾವೆ, ಬ್ಯಾಂಕ್ ಖಾತೆ ವಿವರಗಳು, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ಆಧಾರ್ ಮತ್ತು ಉದ್ಯೋಗಿ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಕಾರ್ಡ್ ಅನ್ನು ಒದಗಿಸಬೇಕು.

ಆನ್ಲೈನ್ ನಲ್ಲಿ ಯುಎಎನ್ ರಚಿಸುವುದು ಹೇಗೆ?

  • ಮೊದಲಿಗೆ ಇಪಿಎಫ್ಒ ಪೋರ್ಟಲ್ ನಲ್ಲಿ ಸದಸ್ಯ ಇ-ಸೇವಾಗೆ ಲಾಗ್ ಇನ್ ಮಾಡಿ

  • ನಂತರ ಪ್ರಮುಖ ಲಿಂಕ್ ವಿಭಾಗದಲ್ಲಿ ಲಭ್ಯವಿರುವ "ಆಕ್ಟಿವೇಟ್ ಯುಎಎನ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  • ಆಧಾರ್ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯಲು ಅಗತ್ಯವಿರುವ ವಿವರಗಳನ್ನು ನಮೂದಿಸಿ.

  • ಅಲ್ಲಿ ‘ಗೆಟ್ ಆಥರೈಸೇಶನ್ ಪಿನ್’ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ

  • ನೀವು ನಮೂದಿಸಿದ ಮಾಹಿತಿಯನ್ನು ಹೊಂದಿರುವ ಹೊಸ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಯಾವುದೇ ದೋಷವನ್ನು ತಪ್ಪಿಸಲು ನೀವು ಸಲ್ಲಿಸಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಿರಿ.


ಇದನ್ನೂ ಓದಿ: NRI: ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ RBI

  • ಮುಂದುವರಿಯಲು ‘ಅಗ್ರಿ’ ಎಂಬ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ವಿನಂತಿಯನ್ನು ಮೌಲ್ಯೀಕರಿಸಲು ನಿಮ್ಮ ಮೊಬೈಲ್ ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ

  • ‘ವ್ಯಾಲಿಡೇಟ್ ಒಟಿಪಿ’ ಮೇಲೆ ಕ್ಲಿಕ್ ಮಾಡಿ ಮತ್ತು ಯುಎಎನ್ ಅನ್ನು ಸಕ್ರಿಯಗೊಳಿಸಿ.

  • ಅಂತಿಮ ಸಲ್ಲಿಕೆಯ ನಂತರ, ನಿಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಹೊಂದಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಪಠ್ಯ ಸಂದೇಶವನ್ನು ಸ್ವೀಕರಿಸುತ್ತೀರಿ.

  • ಆ ವಿವರಗಳನ್ನು ಬಳಸಿಕೊಂಡು ನಿಮ್ಮ ಇಪಿಎಫ್ಒಗೆ ಲಾಗ್ ಇನ್ ಆಗಿ ಮತ್ತು ನಿಮ್ಮ ಇಪಿಎಫ್ ಖಾತೆ ವಿವರಗಳನ್ನು ವೀಕ್ಷಿಸಿ. ಉದ್ಯೋಗಿಯು ಇಪಿಎಫ್ಒ ಪೋರ್ಟಲ್ ನಲ್ಲಿ ತಮ್ಮ ಯುಎಎನ್ ಮತ್ತು ಖಾತೆಯನ್ನು ಬಳಸಿಕೊಂಡು ಸರ್ಕಾರಿ ಹೂಡಿಕೆ ಯೋಜನೆಗಳಲ್ಲಿಯೂ ಸಹ ಹಣವನ್ನು ಹೂಡಿಕೆ ಮಾಡಬಹುದು.

Published by:Ashwini Prabhu
First published: