• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Bank: ಭಾರತದ ಈ 3 ಬ್ಯಾಂಕ್‌ಗಳೇ ಆರ್ಥಿಕತೆಗೆ ಆಧಾರವೇ? ಇವು ಮುಗ್ಗರಿಸಿದ್ರೆ ನಷ್ಟ ಭರಿಸೋ ಶಕ್ತಿ ಸರ್ಕಾರಕ್ಕೆ ಇಲ್ವಾ?

Bank: ಭಾರತದ ಈ 3 ಬ್ಯಾಂಕ್‌ಗಳೇ ಆರ್ಥಿಕತೆಗೆ ಆಧಾರವೇ? ಇವು ಮುಗ್ಗರಿಸಿದ್ರೆ ನಷ್ಟ ಭರಿಸೋ ಶಕ್ತಿ ಸರ್ಕಾರಕ್ಕೆ ಇಲ್ವಾ?

ವಿಶ್ವದಲ್ಲಿರುವ ಆರ್ಥಿಕ ಮಾರುಕಟ್ಟೆ ಈ ಬ್ಯಾಂಕ್‌ಗಳ ವಿಫಲತೆಯಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿರುವ ಬ್ಯಾಂಕ್‌ಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ವಿಶ್ವದಲ್ಲಿರುವ ಆರ್ಥಿಕ ಮಾರುಕಟ್ಟೆ ಈ ಬ್ಯಾಂಕ್‌ಗಳ ವಿಫಲತೆಯಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿರುವ ಬ್ಯಾಂಕ್‌ಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ವಿಶ್ವದಲ್ಲಿರುವ ಆರ್ಥಿಕ ಮಾರುಕಟ್ಟೆ ಈ ಬ್ಯಾಂಕ್‌ಗಳ ವಿಫಲತೆಯಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿರುವ ಬ್ಯಾಂಕ್‌ಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

  • Share this:

ಅಮೇರಿಕಾ  (America) ಎರಡು ಖ್ಯಾತ ಬ್ಯಾಂಕ್‌ಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಹಾಗೂ ಸಿಗ್ನೇಚರ್ ಬ್ಯಾಂಕ್ (Signature Bank) ಕಳೆದ ಒಂದು ವಾರದಲ್ಲಿ ತೀವ್ರ ನಷ್ಟಕ್ಕೆ ಒಳಗಾಗಿ ನೆಲಕ್ಕಚ್ಚಿದವು. ಬೆಂಗಳೂರು (Bengaluru) ಸೇರಿದಂತೆ ವಿಶ್ವದ ನಾನಾ ಸ್ಟಾರ್ಟಪ್‌ಗಳಿಗೆ (Startups) ಆರ್ಥಿಕ ಬೆಂಬಲವಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಆರ್ಥಿಕ ಮುಗ್ಗರಿಸುವಿಕೆಯು ಅದೆಷ್ಟೋ ಸ್ಟಾರ್ಟಪ್‌ಗಳಿಗೆ ಬರಸಿಡಿಲಿನ ಸುದ್ದಿಯಾಗಿದೆ. ಇದರ ಜೊತೆಗೆ ಅಮೇರಿಕಾದ ಇನ್ನೊಂದು ಬ್ಯಾಂಕ್ ಫಸ್ಟ್ ರಿಪಬ್ಲಿಕ್ ಬ್ಯಾಂಕ್ (First Republic Bank) ಕೂಡ ಕುಸಿಯುವ ಹಂತದಲ್ಲಿತ್ತು. ಆದರೆ ಅದೃಷ್ಟವಶಾತ್ ಇತರ ಸಾಲದಾತರು $30 ಬಿಲಿಯನ್ ಸಾಲ ನೀಡುವ ಮೂಲಕ ಆ ಬ್ಯಾಂಕ್ ಅನ್ನು ಆರ್ಥಿಕ ವಿಫಲತೆಗೆ ಒಳಗಾಗುವುದರಿಂದ ರಕ್ಷಿಸಿದ್ದಾರೆ.


ಭಾರತದಲ್ಲಿರುವ ಬ್ಯಾಂಕ್‌ಗಳ ಮೇಲೆ ಬೀರುವ ಪರಿಣಾಮವೇನು?


ಒಟ್ಟಿನಲ್ಲಿ ವಿಶ್ವದಲ್ಲಿರುವ ಆರ್ಥಿಕ ಮಾರುಕಟ್ಟೆ ಈ ಬ್ಯಾಂಕ್‌ಗಳ ವಿಫಲತೆಯಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದು ಭಾರತದಲ್ಲಿರುವ ಬ್ಯಾಂಕ್‌ಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ವಿಶ್ವದ ನಾನಾ ಖ್ಯಾತ ಬ್ಯಾಂಕ್‌ಗಳು ಹಣಾಸಿನ ಸಮಸ್ಯೆಯ ನಡುವೆ ಕುಸಿಯುತ್ತಿರುವಾಗ ಭಾರತದಲ್ಲಿರುವ ಬ್ಯಾಂಕ್‌ಗಳ ಗತಿ ಏನು ಎಂದು ಹೂಡಿಕೆದಾರರು, ಠೇವಣಿದಾರರು ಅನುಮಾನಿಸುತ್ತಿದ್ದಾರೆ ಆತಂಕಕ್ಕೊಳಗಾಗಿದ್ದಾರೆ.


ಈ ಮೂರು ಉನ್ನತ ಬ್ಯಾಂಕ್‌ಗಳು ಪರಿಣಾಮಕ್ಕೊಳಗಾಗುವುದಿಲ್ಲ ಏಕೆ?


ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಬ್ಯಾಂಕ್‌ಗಳಾಗಿರುವ ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ ಯುಎಸ್ ಮಾರುಕಟ್ಟೆಯಲ್ಲಿನ ಆರ್ಥಿಕ ಸಂಕಷ್ಟದಿಂದ ಪ್ರಭಾವಕ್ಕೆ ಒಳಗಾಗುವುದಿಲ್ಲ ಹಾಗೂ ಈ ಬ್ಯಾಂಕ್‌ಗಳ ಮೇಲೆ ಈ ವಿಫಲತೆ ಪರಿಣಾಮ ಬೀರುವುದಿಲ್ಲ ಏಕೆ ಎಂಬುದನ್ನು ತಿಳಿದುಕೊಳ್ಳೋಣ


ಡಿ-ಎಸ್‌ಐಬಿ ವರ್ಗದಲ್ಲಿ ಬರುವ ಬ್ಯಾಂಕ್‌ಗಳು


ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಆರ್‌ಬಿಐ ವರ್ಗೀಕರಿಸಿದಂತೆ ಡಿ-ಎಸ್‌ಐಬಿ ವರ್ಗದ ಅಡಿಯಲ್ಲಿ ಬರುತ್ತವೆ. ಜನವರಿಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ 2021 ಗಾಗಿ ದೇಶೀಯ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕ್‌ಗಳ (ಡಿ-ಎಸ್‌ಐಬಿ) ಇತ್ತೀಚಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಆರ್‌ಬಿಐ D-SIB (ದೇಶೀಯ ವ್ಯವಸ್ಥಿತ ಪ್ರಮುಖ ಬ್ಯಾಂಕ್‌ಗಳು) ಗಳ ವರ್ಗದಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ವರ್ಗೀಕರಿಸುವುದನ್ನು ಮುಂದುವರೆಸಿದೆ.


ಇದನ್ನೂ ಓದಿ: ಜಾಗತಿಕ ಬ್ಯಾಂಕ್ ಬಿಕ್ಕಟ್ಟಿನ ನಡುವೆ ನಿಮ್ಮ ಹಣ ಎಷ್ಟು ಸುರಕ್ಷಿತ? ವಿಶ್ವವನ್ನೇ ಚಿಂತೆಗೀಡು ಮಾಡಿದೆ ಈ ವಿಚಾರ


D-SIB ಗಳು SIB (ದೇಶೀಯ ವ್ಯವಸ್ಥಿತ ಪ್ರಮುಖ ಬ್ಯಾಂಕ್‌ಗಳು) ಎಂದರೇನು?


D-SIB ಗಳು ಎಂದರೆ ಅತ್ಯಂತ ದೊಡ್ಡ ಆರ್ಥಿಕ ಬ್ಯಾಂಕ್‌ಗಳಾಗಿದ್ದು, ಇವುಗಳ ವಿಫಲತೆಯನ್ನು ಸರಕಾರ ಭರಿಸಲಾರದ್ದಾಗಿದೆ. ಅಂತೆಯೇ ದೇಶದ ಆರ್ಥಿಕತೆಗೆ ಈ ಬ್ಯಾಂಕ್‌ಗಳು ಪ್ರಮುಖವಾಗಿವೆ. ಈ ಬ್ಯಾಂಕ್‌ಗಳು ವಿಫಲವಾಗಲು ದೊಡ್ಡದಾದ ಬ್ಯಾಂಕ್‌ಗಳು ಎಂಬುದಾಗಿ ಉಲ್ಲೇಖಿಸಲಾಗಿವೆ.


ಆರ್‌ಬಿಐ ಬ್ಯಾಂಕ್‌ಗಳಿಗೆ ಪ್ರಾಮುಖ್ಯತೆಯ ಅಂಕವನ್ನು ಹೇಗೆ ನೀಡುತ್ತದೆ?


ಆರ್‌ಬಿಐ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳಿಗೆ ಅವುಗಳ ಕಾರ್ಯಕ್ಷಮತೆ ಹಾಗೂ ಗ್ರಾಹಕರನ್ನು ಅನುಸರಿಸಿ ಪ್ರಾಮುಖ್ಯತೆಯ ಅಂಕವನ್ನು ನೀಡುತ್ತದೆ. ಯಾವುದೇ ಬ್ಯಾಂಕ್ ಡಿ-ಎಸ್‌ಐಬಿ ಎಂಬುದಾಗಿ ಮಾನ್ಯತೆಗೊಳಪಡಲು ಅದರ ಸ್ವತ್ತು ಆದಾಯ ರಾಷ್ಟ್ರೀಯ ಜಿಡಿಪಿಯ 2% ಕ್ಕಿಂತ ಹೆಚ್ಚಿರಬೇಕು.


ಬ್ಯಾಂಕ್‌ನ ಪ್ರಾಮುಖ್ಯತೆಯನ್ನು ಆಧರಿಸಿ ಡಿ-ಎಸ್‌ಐಬಿಗಳನ್ನು ಐದು ವಿಭಿನ್ನ ವರ್ಗಗಳಲ್ಲಿ ಇರಿಸಲಾಗುತ್ತದೆ. ಐದನೇ ಶ್ರೇಣಿ ವರ್ಗ ಎಂದರೆ ಅತ್ಯಂತ ಪ್ರಮುಖ ಬ್ಯಾಂಕ್ ಎಂದಾಗಿದೆ, ಇದೇ ರೀತಿ ಶ್ರೇಣಿ ಒಂದು ಎಂಬುದು ಅತ್ಯಂತ ಕನಿಷ್ಟ ಪ್ರಾಮುಖ್ಯತೆಯ ಬ್ಯಾಂಕ್ ಎಂದಾಗಿದೆ. ಮೂರು ಬ್ಯಾಂಕ್‌ಗಳಲ್ಲಿ ಎಸ್‌ಬಿಐ ಮೂರನೇ ಶ್ರೇಣಿಯಲ್ಲಿದ್ದರೆ, ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಒಂದನೇ ಶ್ರೇಣೀಯಲ್ಲಿವೆ.


D-SIB ಬ್ಯಾಂಕ್‌ಗಳು ಸಾಮಾನ್ಯ ಇಕ್ವಿಟಿ ಶ್ರೇಣಿ 1 (CET1) ಬಂಡವಾಳ ಎಂಬ ಹೆಚ್ಚುವರಿ ನಿಧಿಯನ್ನು ಸಹ ನಿರ್ವಹಿಸಬೇಕಾಗುತ್ತದೆ.

top videos
    First published: