PM Kusum Scheme: ಕೃಷಿಕರೇ, ಸರ್ಕಾರಕ್ಕೇ ವಿದ್ಯುತ್ ಮಾರಾಟ ಮಾಡಿ! ಉಚಿತವಾಗಿ ನೀರು ಹಾಯಿಸಿ

 ಕರ್ನಾಟಕದ ಸುಮಾರು 10,000 ರೈತರು ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕರ್ನಾಟಕದ ರೈತರಿಗೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. 11 ಮಾರ್ಚ್ 2022 ರಂದು ಕರ್ನಾಟಕ ಸಚಿವ ಸಂಪುಟವು ಕೇಂದ್ರ ಸರ್ಕಾರ ಪ್ರಾಯೋಜಿಸುವ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್-ಬಿ (PM KUSUM Yojana) ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ (Karnataka Farners) ಸೌರಶಕ್ತಿ ಚಾಲಿತ ನೀರಾವರಿ ಪಂಪ್ ಸೆಟ್‌ಗಳನ್ನು (Solar Pump Sets) ಒದಗಿಸುವ ಯೋಜನೆಯ ಅನುಷ್ಠಾನಕ್ಕೆ ಅನುಮತಿ ನೀಡಿದೆ.  ಕರ್ನಾಟಕದ ಸುಮಾರು 10,000 ರೈತರು ಪ್ರಧಾನ ಮಂತ್ರಿ ಕುಸುಮ್ (PM Kusum Scheme) ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇದು ಕೃಷಿ ಕಾರ್ಯಗಳಿಗೆ ರೈತರು ಗ್ರಿಡ್-ಸಂಪರ್ಕಿತ ವಿದ್ಯುತ್ ಶಕ್ತಿಯನ್ನು (Solar Power Grid in Farm) ಅವಲಂಬಿಸುವುದನ್ನು ತಡೆದು ರೈತರಿಗೆ ಸ್ವಾತಂತ್ರ್ಯ ಒದಗಿಸುತ್ತದೆ. ಇದಲ್ಲದೆ, ತಮ್ಮ ಐಪಿ ಸೆಟ್‌ಗಳಿಂದ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡಲು ಕೃಷಿಕರ ಕ್ಷೇತ್ರಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಸಹ ಕರ್ನಾಟಕದ ರೈತರಿಗೆ ಅನುವು ಮಾಡಿಕೊಡುತ್ತದೆ.

ಸೌರಶಕ್ತಿ ಬೆಳೆಗೆ ನೀರು ಹಾಯಿಸಿ
ರೈತರು ಬಳಸುವ ಪಂಪ್‌ಗಳು ಸಾಮಾನ್ಯವಾಗಿ ಡೀಸೆಲ್ ಅಥವಾ ಪೆಟ್ರೋಲ್‌ನಿಂದ ಕೆಲಸ ಮಾಡುತ್ತವೆ. ಈ ಯೋಜನೆಯಡಿ ರೈತರ ಪಂಪ್​ಸೆಟ್​ಗಳನ್ನು ಸೌರಶಕ್ತಿ ಚಾಲಿತ ಪಂಪ್‌ಗಳನ್ನಾಗಿ ಪರಿವರ್ತಿಸಲಾಗುವುದು.

ಈಮೂಲಕ ರೈತರು ಸ್ವಾವಲಂಬಿಗಳಾಗಬಹುದು. ಅಲ್ಲದೇ ರೈತರ ಕೃಷಿ ಭೂಮಿಯಲ್ಲಿ ಸೋಲಾರ್ ಪವರ್ ಗ್ರಿಡ್ ಸ್ಥಾಪಿಸಿ ಅಲ್ಲಿ ಸಂಗ್ರಹವಾಗುವ ವಿದ್ಯುತ್ ಶಕ್ತಿಯನ್ನು ಸರ್ಕಾರವೇ ಖರೀದಿ ಮಾಡುತ್ತದೆ. ಇದರಿಂದ ರೈತರ ಕೈಗೆ ಹಣವೂ ಸೇರುತ್ತದೆ.

ಶುಲ್ಕವೆಷ್ಟು?
ಕುಸುಮ್ ಯೋಜನೆಯಡಿ ರೈತರು ಸೌರ ವಿದ್ಯುತ್ ಕೇಂದ್ರವನ್ನು ತಮ್ಮ ಜಮೀನಿನಲ್ಲಿ ಸ್ಥಾಪಿಸಲು ಕೊಂಚ ಶುಲ್ಕ ಭರಿಸಬೇಕು. 0.5 MWನಿಂದ 2 MW ವರೆಗಿನ ಸೋಲಾರ್ ವಿದ್ಯುತ್ ಸ್ಥಾವರ ಸ್ಥಾಪಿಸಲು ಶುಲ್ಕ ಕ್ರಮವಾಗಿ 2500 ರೂಪಾಯಿಯಿಂದ  10 ಸಾವಿರ ರೂಪಾಯಿವರೆಗೆ ಇದೆ.

ರೈತರು ಸೋಲಾರ್ ಚಾಲಿತ ಪಂಪ್​ಸೆಟ್​ಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಸ್ಥಾಪಿಸಲು ಈ ಯೋಜನೆಗೆ ತಗಲುವ ಒಟ್ಟು ವೆಚ್ಚದ 40 ಶೇಕಡಾ ಹಣವನ್ನು ಅನ್ನು ಬ್ಯಾಂಕ್ ಸಾಲದ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಇದನ್ನು ಓದಿ: Explained: ಪುರುಷರ ಒಳ ಉಡುಪಿಗೂ ದೇಶದ ಆರ್ಥಿಕತೆಗೂ ಇದೆ ಸಂಬಂಧ!

ಕೇಂದ್ರ ಮತ್ತು ರಾಜ್ಯವು ಸೌರಶಕ್ತಿ ಚಾಲಿತ ಐಪಿ ಸೆಟ್‌ಗಳ 30 ಶೇಕಡಾ ವೆಚ್ಚವನ್ನು ಭರಿಸಲಿದೆ. ಈ ಯೋಜನೆಯ ಒಟ್ಟು ವೆಚ್ಚದ   ಸುಮಾರು ರೂ. 30,723 ಕೋಟಿ, ರಾಜ್ಯವು ರೂ, 10,697 ಕೋಟಿ ನೀಡಲಿದ್ದು, ಉಳಿದ ವೆಚ್ಚವನ್ನು ಕೇಂದ್ರ ಭರಿಸಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು ಮೊದಲು ಕುಸುಮ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಆಯ್ಕೆ ಮಾಡಿಕೊಳ್ಳಿ.
ಅಲ್ಲಿ ಕಾಣಿಸುವ ಅರ್ಜಿಯಲ್ಲಿಅಗತ್ಯ ದಾಖಲೆಗಳ ವಿವರಗಳನ್ನು ತುಂಬಿ.
ಆಧಾರ್ ಕಾರ್ಡ್ ವಿವರ ಮತ್ತು ಬ್ಯಾಂಕ್ ಖಾತೆಯ ವಿವರದ ಪ್ರತಿಯನ್ನು ಸ್ಕ್ಯಾನ್ ಮಾಡಿ ಸಬ್​ಮಿಟ್ ಮಾಡಿ.

ಹೊಸಬರಿಗೆ ಅವಕಾಶ
ಸೋಲಾರ್ ವಿದ್ಯುತ್ ಅನ್ನು ಹೊಸ ಸೋಲಾರ್ ಚಾಲಿತ ಪಂಪ್​ಸೆಟ್​ಗಳಿಗೆ ಮಾತ್ರ ನೀಡಲಾಗುವುದು ಈಗಾಗಲೇ ಐಪಿ ಸೆಟ್‌ಗಳಿಗೆ ಶಕ್ತಿ ತುಂಬಿದವರಿಗೆ ನೀಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಪಿಎಂ ಕುಸುಮ್ ಯೋಜನೆಯಡಿ ಫಲಾನುಭವಿಗಳನ್ನು ಆನ್‌ಲೈನ್ ಮೂಲಕ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಪಿಸಿಎಲ್) ಆಯ್ಕೆ ಮಾಡುತ್ತದೆ ಎಂಬುದನ್ನು ಗಮನಿಸಬೇಕು.

ರೈತರ ಬಲವರ್ಧನೆಯೇ ಆಶಯ
ಈ ಯೋಜನೆಯನ್ನು ರೈತರಿಗೆ ಮತ್ತು ಎಸ್ಕಾಮ್‌ಗಳ ಬಲವರ್ಧನೆ ಮಾಡಲು ಎಂದೇ ಕಾರ್ಯರೂಪಕ್ಕೆ ತರಲಾಗಿದೆ.  ರೈತರು ತಮ್ಮ ಐಪಿ ಸೆಟ್‌ಗಳನ್ನು ಎಸ್ಕಾಮ್‌ಗಳಿಂದ ಪೂರೈಕೆಯಾಗುವ ವಿದ್ಯುತ್ ಶಕ್ತಿ ಅವಲಂಬಿಸದೆ ಚಲಾಯಿಸಬಹುದು.

ಸರ್ಕಾರಕ್ಕೂ ಇದೆ ಪ್ರಯೋಜನ!
ವಿದ್ಯುತ್ ನಿಗಮಗಳು ಕೃಷಿ ವಲಯಕ್ಕೆ ಪೂರೈಕೆಯನ್ನು ಕಡಿಮೆ ಮಾಡದೇ ಇರಬಹುದು. ವಿದ್ಯುತ್ ಹೊರೆ ಮತ್ತು ರೈತರ ಹೊಲಗಳಿಗೆ ಅದರ ವಿದ್ಯುತ್ ಜಾಲವನ್ನು ವಿಸ್ತರಿಸಲು ತಗಲುವ ವೆಚ್ಚದಿಂದ ವಿದ್ಯುತ್ ನಿಗಮಗಳು ಈ ಯೋಜನೆಯಿಂದ ಮುಕ್ತವಾಗುತ್ತವೆ. ಸರ್ಕಾರಕ್ಕೆ ಸಬ್ಸಿಡಿ ಮೇಲೆ ತಗಲುವ ವೆಚ್ಚವನ್ನು ಸಹ ಈ ಯೋಜನೆ ಉಳಿಸುತ್ತದೆ.

ಇದಲ್ಲದೇ ರಾಜ್ಯ ಸಚಿವ ಸಂಪುಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ 2,500 ಕೋಟಿ ರೂ ಸಾಲ ಪಡೆಯಲು ಕೆಪಿಸಿಎಲ್‌ಗೆ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: Beekeeping Business: ಕರ್ನಾಟಕದಲ್ಲಿ ಜೇನು ಕೃಷಿ ಉದ್ಯಮ ಮಾಡೋದು ಹೇಗೆ? ಏನು? ಎತ್ತ?

ಕೇಂದ್ರದ ಜಲಜೀವನ್ ಮಿಷನ್ ಅಡಿಯಲ್ಲಿ ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಬೆಳಗಾವಿಯ 3 ಜಿಲ್ಲೆಗಳ ವಿವಿಧ ಗ್ರಾಮಗಳಿಗೆ ಪೈಪ್‌ಲೈನ್ ಕುಡಿಯುವ ನೀರು ಸರಬರಾಜು ಮಾಡುವ 3 ಪ್ರಸ್ತಾವನೆಗಳನ್ನು ಸಹ ಕರ್ನಾಟಕ ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ.
Published by:guruganesh bhat
First published: