• Home
  • »
  • News
  • »
  • business
  • »
  • Elon Musk: ಟ್ವಿಟರ್​​ನಲ್ಲಿ ತುಟಿಕ್​-ಪಿಟಿಕ್​ ಅಂದ್ರೆ ಅಷ್ಟೇ! ಎಲಾನ್​ ಮಸ್ಕ್​ಗೆ ವಾರ್ನಿಂಗ್​ ಕೊಟ್ಟ ಆ್ಯಪಲ್​ ಸಂಸ್ಥೆ!

Elon Musk: ಟ್ವಿಟರ್​​ನಲ್ಲಿ ತುಟಿಕ್​-ಪಿಟಿಕ್​ ಅಂದ್ರೆ ಅಷ್ಟೇ! ಎಲಾನ್​ ಮಸ್ಕ್​ಗೆ ವಾರ್ನಿಂಗ್​ ಕೊಟ್ಟ ಆ್ಯಪಲ್​ ಸಂಸ್ಥೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೀಗ ಮಸ್ಕ್ ಅವರು ಟೆಕ್ ದೈತ್ಯ ಆ್ಯಪಲ್​ ಕಂಪನಿ (Apple Company) ಯ ವಿರುದ್ಧ ಸರಣಿ ಟ್ವಿಟ್ ಮಾಡುತ್ತ ಆರೋಪ ಹೊರಿಸಿದ್ದಾರೆ.

  • Share this:

ಇತ್ತೀಚಿಗಷ್ಟೇ ಎಲಾನ್​ ಮಸ್ಕ್ (Elon Musk) ಟ್ವಿಟರ್ (Twitter) ಒಡೆತನವನ್ನು ಪಡೆದಿದ್ದು ಅದನ್ನು ತಮ್ಮದೆ ಆದ ರೀತಿಯಲ್ಲಿ ಸುಧಾರಿಸುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ಅವರು ಸಾವಿರಾರುಗಟ್ಟಲೆ ಸಂಖ್ಯೆಯಲ್ಲಿ ಟ್ವಿಟರ್ ಉದ್ಯೋಗಿ (Twitter Employees) ಗಳಿಗೆ ಕಂಪನಿಯಿಂದ ಗೇಟ್ ಪಾಸ್ (Gate Pass) ಸಹ ನೀಡಿದ್ದು ಎಲ್ಲೆಡೆ ಸಾಕಷ್ಟು ಆಕ್ರೋಶ ಸಹ ವ್ಯಕ್ತವಾಗಿತ್ತು. ಇದೀಗ ಮಸ್ಕ್ ಅವರು ಟೆಕ್ ದೈತ್ಯ ಆ್ಯಪಲ್​ ಕಂಪನಿ (Apple Company) ಯ ವಿರುದ್ಧ ಸರಣಿ ಟ್ವಿಟ್ ಮಾಡುತ್ತ ಆರೋಪ ಹೊರಿಸಿದ್ದಾರೆ. ಮಸ್ಕ್ ಆರೋಪಿಸಿರುವಂತೆ ಆ್ಯಪಲ್ ಇಂಕ್ ಸಂಸ್ಥೆಯು ಯಾವ ಸಮಂಜಸ ಕಾರಣ ನೀಡದೆ ತಮ್ಮ ಆ್ಯಪಲ್​ ಸ್ಟೋರ್ (Apple Store) ನಿಂದ ಟ್ವಿಟರ್ ಅನ್ನು ಹೊರತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾರಂತೆ. ಅಷ್ಟೇ ಅಲ್ಲದೆ, ಆ್ಯಪಲ್​ ಇದೀಗ ಟ್ವಿಟರ್ ವೇದಿಕೆಯ ಮೇಲೆ ಜಾಹೀರಾತು ನೀಡುವುದನ್ನೂ ಸಹ ನಿಲ್ಲಿಸಿರುವುದಾಗಿ ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ.


ಎಲಾನ್ ಮಸ್ಕ್​ಗೆ ಆ್ಯಪಲ್ ಸಂಸ್ಥೆ ವಾರ್ನಿಂಗ್!


ಮಸ್ಕ್ ಅವರ ಪ್ರಕಾರ, ಆ್ಯಪಲ್​ ಸಂಸ್ಥೆಯು ಕಂಟಂಟ್ ಅನ್ನು ಮಾಡರೇಟ್ ಮಾಡುವಂತೆ ಟ್ವಿಟರ್ ಮೇಲೆ ಒತ್ತಡ ಹೇರುತ್ತಿದೆ. ಇನ್ನು ಈ ಕ್ರಮದ ಕುರಿತು ಹೇಳುವುದಾದರೆ ಆ್ಯಪಲ್ ವತಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅದಾಗ್ಯೂ ಆ್ಯಪಲ್ ಸಂಸ್ಥೆಗೆ ಇದು ಹೊಸದೇನಲ್ಲ. ಹಿಂದೆಯೂ ತನ್ನ ನಿಯಮಗಳನ್ನು ಪಾಲಿಸುವ ವಿಷಯಕ್ಕೆ ಆ್ಯಪಲ್ ಕಟಿಬದ್ಧವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಗ್ಯಾಬ್ ಹಾಗೂ ಪಾರ್ಲರ್ ನಂತಹ ಆಪ್ ಗಳನ್ನು ತನ್ನ ಸ್ಟೋರ್‍ ನಿಂದ ತೆಗೆದು ಹಾಕಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.


ಗ್ಯಾಬ್​ ಆ್ಯಪ್​ ಶುರುವಾದಗಿನಿಂದಲೂ ಕಿರಿಕ್!


ಗ್ಯಾಬ್ ಎನ್ನುವ ಆ್ಯಪ್​ ಅಮೆರಿಕದ ಒಂದು ವರ್ಗದ ಜನರಲ್ಲಿ ಅತ್ಯಂತ ಜನಪ್ರಿಯವಾದ ಆ್ಯಪ್​ ಆಗಿದೆ. ಅದು ಆ್ಯಪಲ್​ ಸಂಸ್ಥೆಯ ನಿಯಮಗಳನ್ನನುಸರಿಸಿ ತನ್ನ ಕಂಟೆಂಟ್ ಹಾಗೂ ಮಾಡರೇಷನ್ ಪ್ರಕ್ರಿಯೆಗಳನ್ನು ರೂಢಿಸಿಕೊಂಡ ಬಳಿಕ 2021 ರಲ್ಲಿ ಮತ್ತೆ ಅದನ್ನು ಆ್ಯಪಲ್​ ಸ್ಟೋರ್ ನಲ್ಲಿ ಸೇರಿಸಲಾಯಿತು ಎಂದು ಸ್ವತಃ ಗ್ಯಾಬ್ ಹೇಳಿಕೊಂಡಿತ್ತು.


ಇದನ್ನೂ ಓದಿ: 7000 ಕೋಟಿ ಆಸ್ತಿ ಭಾರ ಹೊರಲು ಒಪ್ಪದ ಮಗಳು! ಇದೇ ಕಾರಣಕ್ಕೆ ಬಿಸ್ಲೆರಿ ಮಾರಿದ್ರಾ ರಮೇಶ್​ ಚೌಹಾಣ್​?


ಸರಣಿ ಟ್ವೀಟ್ ಮಾಡಿದ ಎಲಾನ್ ಮಸ್ಕ್​!


ಇನ್ನು, ಮಸ್ಕ್ ಅವರು ಆ್ಯಪಲ್​ ಸಂಸ್ಥೆಗೆ ಸಂಬಂಧಿಸಿದಂತೆ ಹಲವು ರೀತಿಯ ಆರೋಪಭರಿತ ಟ್ವಿಟ್ ಗಳನ್ನು ಮಾಡಿದ್ದಾರೆ. ಅವರು, "ಆ್ಯಪಲ್​ ಇದೀಗ ಟ್ವಿಟರ್ ನಲ್ಲಿ ಜಾಹೀರಾತುಗಳನ್ನು ನೀಡುವುದನ್ನು ಬಹುತೇಕ ನಿಲ್ಲಿಸಿದೆ. ಅವರು ಅಮೆರಿಕದಲ್ಲಿ ಮುಕ್ತ ಮಾತುಗಳನ್ನು ಇಷ್ಟಪಡುವುದಿಲ್ಲವೆ?" ಎಂದು ಟ್ವಿಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.


ತದನಂತರ ಮಸ್ಕ್ ಅವರು ತಮ್ಮ ಇನ್ನೊಂದು ಟ್ವಿಟ್ ನಲ್ಲಿ ಆ್ಯಪಲ್​ ಸಂಸ್ಥೆಯ ಸಿಇಒ ಆಗಿರುವ ಟಿಮ್ ಕುಕ್ ಅವರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ "ಇಲ್ಲಿ ಏನು ನಡೆಯುತ್ತಿದೆ" ಎಂದು ಪರ್ಶ್ನಾರ್ಥಕ ಟ್ವಿಟ್ ಮಾಡಿದ್ದಾರೆ. ಇದಕ್ಕೆ ತ್ವರಿತವಾಗಿ ಆ್ಯಪಲ್​ ಸಂಸ್ಥೆ ಏನನ್ನೂ ಪ್ರತಿಕ್ರಯಿಸಲಿಲ್ಲ.


ಇನ್ನೂ ಪ್ರತಿಕ್ರಿಯೆ ನೀಡದ ಆ್ಯಪಲ್​!


ಈ ಒಟ್ಟಾರೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಿಕಾಗೊ ಕಾನೂನು ವಿದ್ಯಾಲಯದ ಪ್ರೊಫೆಸರ್ ಆಗಿರುವ ರಾಂಡಾಲ್ ಪಿಕರ್ ಅವರು, "ಆಪಲ್ ಫುಡ್ ಚೈನ್ ಗೆ ಸಂಬಂಧಿಸಿದಂತೆ ಈ ಪರಿಕಲ್ಪನೆಯು ಆಂತರಿಕವಾಗಿ ಎಷ್ಟು ಮುಂದೆ ಹೋಗಿದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಹಾಗೂ ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಟಿಡಿಎಸ್ ಕಡಿತದಿಂದ ವಿನಾಯಿತಿ: ಅರ್ಜಿ ಸಲ್ಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ


ಇನ್ನು ಜಾಹೀರಾತು ವೆಚ್ಚಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳ ಮಾಹಿತಿ ನೀಡಿರುವ ಪಾಥ್ ಮ್ಯಾಟಿಕ್ಸ್ ಎಂಬ ಸಂಸ್ಥೆಯ ಪ್ರಕಾರ ಆಪಲ್ ಟ್ವಿಟರ್ ನಲ್ಲಿ ಜಾಹೀರಾತುಗಳಿಗಾಗಿ ಅಕ್ಟೋಬರ್ 16 ರಿಂದ 22ರ ಮಧ್ಯದ ಅವಧಿಯಲ್ಲಿ 220,800 ಡಾಲರ್ ಗಳನ್ನು ವ್ಯಯಿಸಿತ್ತು. ಅದಾದ ಬಳಿಕ ಮಸ್ಕ್ ಟ್ವಿಟರ್ ಒಡೆತನದ ಒಪ್ಪಂದ ಅಂತಿಮವಾಯಿತು.  ತದನಂತರ ನವೆಂಬರ್ 10 ರಿಂದ 16ರ ಮಧ್ಯದ ಅವಧಿಯಲ್ಲಿ ಆಪಲ್ ವೆಚ್ಚ ಮಾಡಿದ್ದು ಕೇವಲ 131,600 ಡಾಲರ್ ಗಳಷ್ಟೆ ಎಂದು ತಿಳಿದುಬಂದಿದೆ.

Published by:ವಾಸುದೇವ್ ಎಂ
First published: