• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Apple India: ಆ್ಯಪಲ್ ಇಂಡಿಯಾದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಮಾರಾಟದಲ್ಲಿ ತೀವ್ರ ಕುಸಿತ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Apple India: ಆ್ಯಪಲ್ ಇಂಡಿಯಾದ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಮಾರಾಟದಲ್ಲಿ ತೀವ್ರ ಕುಸಿತ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಪಿಸಿ ಮಾರಾಟಗಳು 56.9 ಮಿಲಿಯನ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 80.2 ಮಿಲಿಯನ್‌ನಿಂದ ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಹೊರಹಾಕಿದೆ.

 • Share this:

ದುರ್ಬಲ ಬೇಡಿಕೆ, ಹೆಚ್ಚುವರಿ ದಾಸ್ತಾನು ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದಾಗಿ 2023 ರ ಮೊದಲ ತ್ರೈಮಾಸಿಕದಲ್ಲಿ ಪರ್ಸನಲ್ ಕಂಪ್ಯೂಟರ್‌ಗಳ (PC) ಜಾಗತಿಕ ಸಾಗಣೆಗಳು 29% ರಷ್ಟು ಕುಸಿತ ಕಂಡಿದ್ದು ಆ್ಯಪಲ್ ನ (Apple) ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ IDC ತಿಳಿಸಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣಬೇಕಾಗಿರುವ ಪಿಸಿಗಳ ಸಾಗಣೆಯು ಕುಸಿತ ಕಾಣುತ್ತಿದ್ದು ಹಿಂದೆಂದೂ ಕಾಣದ ಆರ್ಥಿಕ ಅಭಾವಕ್ಕೆ ಒಳಗಾಗಿದೆ ಎಂದು ಐಡಿಸಿ ಸೂಚಿಸಿದೆ. ಆ್ಯಪಲ್​ನ ಡೆಸ್ಕ್‌ಟಾಪ್‌ಗಳು (Desktop) ಮತ್ತು ಲ್ಯಾಪ್‌ಟಾಪ್‌ಗಳ (Laptop) ಭಾರತದ ಸಾಗಣೆಗಳು 2023 ರ ಮೊದಲ ತ್ರೈಮಾಸಿಕದಲ್ಲಿ ತೀವ್ರ ಕುಸಿತಕ್ಕೆ ಒಳಗಾಗಲಿದೆ ಎಂದು ನಿರೀಕ್ಷಿಸಲಾಗಿದೆ


ಕುಸಿತ ಕಾಣುತ್ತಿರುವ ಪಿಸಿ ಹಾಗೂ ಲ್ಯಾಪ್‌ಟಾಪ್‌ಗಳು


ಭಾನುವಾರ ಪ್ರಕಟವಾದ ವರದಿಯಲ್ಲಿ, ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (IDC) ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಪಿಸಿ ಮಾರಾಟಗಳು 56.9 ಮಿಲಿಯನ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 80.2 ಮಿಲಿಯನ್‌ನಿಂದ ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಹೊರಹಾಕಿದೆ.


ಯಾವ ಯಾವ ಕಂಪನಿಗಳು ಯಾವ ಸ್ಥಾನಗಳಲ್ಲಿವೆ?


ವರದಿಯಲ್ಲಿ ವಿಶ್ಲೇಷಿಸಿದ ಅಗ್ರ ಐದು ಪಿಸಿ ಕಂಪನಿಗಳಲ್ಲಿ, ಆ್ಯಪಲ್ ಇಂಕ್‌ನ ಮೊದಲ ತ್ರೈಮಾಸಿಕ ರವಾನೆಗಳು 2022 ರಲ್ಲಿ ಅದೇ ಅವಧಿಯಿಂದ 40.5% ನಷ್ಟು ದೊಡ್ಡ ಕುಸಿತಕ್ಕೆ ಕಾರಣವಾಗಿದ್ದು, ಡೆಲ್ ಟೆಕ್ನಾಲಜೀಸ್ ಇಂಕ್ 31% ಕುಸಿತದೊಂದಿಗೆ ಎರಡನೇ ಸ್ಥಾನದಲ್ಲಿದೆ. ಲೆನೋವೋ ಗ್ರೂಪ್ ಲಿಮಿಟೆಡ್, ಅಸುಸ್ಟೆಕ್ ಕಂಪ್ಯೂಟರ್ ಹಾಗೂ ಹೆಚ್‌ಪಿ ಇಂಕ್ ಕೂಡ ಸಾಗಣೆಯಲ್ಲಿ ಕುಸಿತವನ್ನು ಎದುರಿಸುತ್ತಿವೆ ಎಂದು IDC ತಿಳಿಸಿದೆ.


ಇದನ್ನೂ ಓದಿ: ಭಾರತದ ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆಯೇ ಈ ದೇಶಗಳಿಗೆ ನೀವು ಭೇಟಿ ನೀಡಬಹುದು


ಐಡಿಸಿ ತಿಳಿಸಿರುವ ಮಾಹಿತಿಯಲ್ಲಿ ಏನು ಹೇಳಿದೆ?


ಫೆಬ್ರವರಿ ತಿಂಗಳಿನಲ್ಲಿ ಆ್ಯಪಲ್ ತನ್ನ ಮ್ಯಾಕ್ ಕಂಪ್ಯೂಟರ್‌ಗಳ ಮಾರಾಟವನ್ನು ಇತ್ತೀಚಿನ ತ್ರೈಮಾಸಿಕ ಸಮಯದಲ್ಲಿ ವರದಿ ಮಾಡಿದ್ದು, ಸಾಂಕ್ರಾಮಿಕದ ಅವಧಿಯಲ್ಲಿ ವರ್ಕ್ ಫ್ರಮ್ ಹೋಮ್‌ ಸಮಯದಲ್ಲಿ ಏರಿಕೆಯನ್ನು ಕಂಡಿತ್ತು. ಹೆಚ್ಚಿನ ಬೇಡಿಕೆಯನ್ನು ಸಹ ಹೊಂದಿತ್ತು.


ಸಾಂಕೇತಿಕ ಚಿತ್ರ


ಪ್ರಾಥಮಿಕ ಸಾಗಣೆ ಫಲಿತಾಂಶಗಳು ಕೋವಿಡ್ ಯುಗದಲ್ಲಿದ್ದ ಬೇಡಿಕೆಯನ್ನು ಪ್ರತಿನಿಧಿಸಿದ್ದು ಕನಿಷ್ಟ ಪಕ್ಷ ಕೋವಿಡ್ ಪೂರ್ವದಲ್ಲಿದ್ದ ಬೇಡಿಕೆಗಳನ್ನು ಪ್ರತಿನಿಧಿಸುತ್ತವೆ. Q1 2023 ರಲ್ಲಿ ಸಾಗಣೆ ಪ್ರಮಾಣವು Q1 2019 ರಲ್ಲಿ ಸಾಗಿಸಲಾದ 59.2 ಮಿಲಿಯನ್ ಯೂನಿಟ್‌ಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು Q1 2018 ರಲ್ಲಿ 60.6 ಮಿಲಿಯನ್ ಆಗಿದೆ ಎಂದು IDC ಮಾಹಿತಿಯನ್ನೊದಗಿಸಿದೆ.


ಮಾರುಕಟ್ಟೆಯನ್ನು ಕಾಡುತ್ತಿರುವ ಅತಂತ್ರ ಸ್ಥಿತಿ


ಬೆಳವಣಿಗೆ ಹಾಗೂ ಬೇಡಿಕೆಯಲ್ಲಿನ ವಿರಾಮವು ಅನೇಕ ಕಾರ್ಖಾನೆಗಳು ಚೀನಾದ ಹೊರಗೆ ಉತ್ಪಾದನಾ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸುವುದರಿಂದ ಬದಲಾವಣೆಗಳನ್ನು ಮಾಡಲು ಪೂರೈಕೆ ಸರಪಳಿಗೆ ಸ್ವಲ್ಪ ಅವಕಾಶವನ್ನು ನೀಡುತ್ತಿದೆ ಎಂದು ಐಡಿಸಿ ತಿಳಿಸಿದೆ. ಪ್ರಮುಖ ಆರ್ಥಿಕತೆಗಳಲ್ಲಿನ ನಿಧಾನಗತಿಯ ಬಗ್ಗೆ ಕಳವಳಗಳು ಉಂಟಾಗಿದ್ದು ಬ್ಯಾಂಕಿಂಗ್ ವಲಯದಲ್ಲಿ ತಲೆದೋರಿರುವ ಸಮಸ್ಯೆಗಳು, ಹಣದುಬ್ಬರ ಸಂಕಷ್ಟಗಳು ಅಂತೆಯೇ ಬಿಗಿಯಾದ ವಿತ್ತೀಯ ನೀತಿಯ ಬೆಳವಣಿಗೆ ಹಣಕಾಸು ಹೂಡಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬ ಚಿಂತೆಗಳನ್ನು ಹೆಚ್ಚಿಸುತ್ತಿದೆ.
2024 ರಲ್ಲಿ ಕೊಂಚ ಪ್ರಗತಿ ಕಾಣಬಹುದೇ?

top videos


  2024 ರಲ್ಲಿ ಆರ್ಥಿಕತೆ ಪ್ರಗತಿ ಕಂಡಲ್ಲಿ ಗ್ರಾಹಕರು ತಾಜಾ ಉತ್ಪನ್ನಗಳತ್ತ ಗಮನಹರಿಸಲು ಪ್ರಯತ್ನಿಸುತ್ತಾರೆ ಅಂತೆಯೇ ಶಾಲೆಗಳು ಹಾಳಾದ ಕ್ರೋಮ್‌ಬುಕ್‌ಗಳ ಬದಲಿಗೆ, ಬದಲಿ ಉತ್ಪನ್ನಗಳನ್ನು ಖರೀದಿಸಬಹುದು ಹಾಗೂ ವ್ಯವಹಾರಳು ವಿಂಡೋಸ್ 11 ಗೆ ಅಪ್‌ಗ್ರೇಡ್‌ಗೊಳ್ಳಬಹುದೆಂಬ ನಿರೀಕ್ಷೆ ಇದೆ ಎಂದು IDC ಸಾಧನಗಳು ಮತ್ತು ಪ್ರದರ್ಶನಗಳ ಸಂಶೋಧನಾ ಉಪಾಧ್ಯಕ್ಷ ಲಿನ್ ಹುವಾಂಗ್ ತಿಳಿಸಿದ್ದಾರೆ. ಮಾರುಕಟ್ಟೆಯ ಪರಿಸ್ಥಿತಿ ಮುಂದಿನ ವರ್ಷವು ಇದೇ ರೀತಿ ಇದ್ದರೆ ಚೇತರಿಕೆಯು ನಿಧಾನಗೊಳ್ಳುತ್ತದೆ ಎಂದು ಲಿನ್ ತಿಳಿಸಿದ್ದಾರೆ.

  First published: