Apple: 100 ಗುತ್ತಿಗೆ ಸಿಬ್ಬಂದಿಗಳನ್ನು ಕೈಬಿಟ್ಟ ಆ್ಯಪಲ್ ಕಂಪನಿ; ಗೂಗಲ್​ನಿಂದಲೂ ವಾರ್ನಿಂಗ್​!

ಮೈಕ್ರೋಸಾಫ್ಟ್, ನೆಟ್ ಫ್ಲಿಕ್ಸ್, ಒರೆಕಾಲ್ ಹೀಗೆ ಇನ್ನೂ ಅನೇಕ ಕಂಪನಿಗಳು ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾ ಮಾಡಿವೆ. ಮೊನ್ನೆ ತಾನೇ ಪ್ರತಿಷ್ಠಿತ ಗೂಗಲ್ ಕಂಪನಿ ಸಹ ಸಿಬ್ಬಂದಿಗೆ ಉದ್ಯೋಗದಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದೆ. ಗೂಗಲ್ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡುತ್ತಿದ್ದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಸಂಸ್ಥೆ ಆ್ಯಪಲ್ ಇಂಕ್ ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ತಿಳಿದು ಬಂದಿದೆ.

ಆ್ಯಪಲ್ ಕಂಪನಿ

ಆ್ಯಪಲ್ ಕಂಪನಿ

  • Share this:

ವಿಶ್ವದ ದೈತ್ಯ ಕಂಪನಿಗಳನ್ನು (Company) ಸೇರಿ ಎಲ್ಲೆಡೆ ಉದ್ಯೋಗಿಗಳ ವಜಾದ (Employees Laid off ) ಮಹಾಪರ್ವ ನಡೆಯುತ್ತಿದೆ. ಮೈಕ್ರೋಸಾಫ್ಟ್, ನೆಟ್ ಫ್ಲಿಕ್ಸ್, ಒರೆಕಾಲ್ ಹೀಗೆ ಇನ್ನೂ ಅನೇಕ ಕಂಪನಿಗಳು ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾ ಮಾಡಿವೆ. ಮೊನ್ನೆ ತಾನೇ ಪ್ರತಿಷ್ಠಿತ ಗೂಗಲ್ ಕಂಪನಿ (Google company) ಸಹ ಸಿಬ್ಬಂದಿಗೆ ಉದ್ಯೋಗದಿಂದ ವಜಾಗೊಳಿಸುವ ಎಚ್ಚರಿಕೆ (Warning) ನೀಡಿದೆ. ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುತ್ತಿದ್ದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಸಂಸ್ಥೆ ಆ್ಯಪಲ್ ಇಂಕ್ (Apple Inc) ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ತಿಳಿದು ಬಂದಿದೆ.


100 ಗುತ್ತಿಗೆ ನೌಕರರನ್ನು ಕೈ ಬಿಟ್ಟ ಆಪಲ್ ಕಂಪನಿ
ಹೌದು, ಆ್ಯಪಲ್ ಇಂಕ್ ಈಗ ತನ್ನ ನೇಮಕಾತಿ ಮತ್ತು ವೆಚ್ಚವನ್ನು ನಿರ್ಬಂಧಿಸುವ ಪ್ರಯತ್ನದಲ್ಲಿ ತನ್ನ ಅನೇಕ ಗುತ್ತಿಗೆ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಬ್ಲೂಮ್‌ಬರ್ಗ್ ವರದಿ ಮಾಡಿರುವ ಪ್ರಕಾರ, ಆ್ಯಪಲ್ ವಿಶ್ವದ ಅತ್ಯಂತ ದೊಡ್ಡ ಕಂಪನಿಗೆ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಾರಣವಾದ ಸುಮಾರು 100 ಗುತ್ತಿಗೆ ಆಧಾರಿತ ನೇಮಕಾತಿಗಳನ್ನು ವಜಾಗೊಳಿಸಿದೆ ಎಂದು ತಿಳಿಸಿದೆ.


ವಜಾಗೊಂಡ ಗುತ್ತಿಗೆದಾರರು ಎರಡು ವಾರಗಳವರೆಗೆ ವೇತನ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ಮತ್ತು ಪೂರ್ಣಾವಧಿ ಉದ್ಯೋಗಿಗಳಾಗಿರುವ ನೇಮಕಾತಿದಾರರನ್ನು ಕಂಪನಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಟೆಕ್ಸಾಸ್ ಮತ್ತು ಸಿಂಗಾಪುರ್‌ನಲ್ಲಿರುವ ಆಪಲ್‌ನ ಕಚೇರಿಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ನೇಮಕಾತಿದಾರರನ್ನು ಕೈಬಿಡಲಾಗಿದೆ.


 ನೌಕರರನ್ನು ವಜಾಗೊಳಿಸಲು ಕಾರಣವೇನು
ವಜಾಗೊಳಿಸಿದ ಕಾರ್ಮಿಕರಿಗೆ ಆ್ಯಪಲ್ ಕಂಪನಿಯ ಪ್ರಸ್ತುತ ಹಣಕಾಸಿನ ಅಗತ್ಯಗಳ ಕಾರಣದಿಂದಾಗಿ ಮತ್ತು ಆ್ಯಪಲ್‌ನ ಪ್ರಸ್ತುತ ವ್ಯವಹಾರದ ಅಗತ್ಯಗಳಲ್ಲಿನ ಬದಲಾವಣೆಗಳಿಂದಾಗಿ ಉದ್ಯೋಗಿಗಳ ಕಡಿತವನ್ನು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಆ್ಯಪಲ್ ತನ್ನ ವೆಚ್ಚದಲ್ಲಿ ಕಡಿತ ಮಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಳೆದ ತಿಂಗಳು ಆ್ಯಪಲ್ ಇಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಹೇಳಿದ್ದರು.


ಇದನ್ನೂ ಓದಿ: Tejas Fighter Jet: ಎಲ್ಲರಿಗೂ ಫೇವರೇಟ್​ ಅಂತೆ ತೇಜಸ್ ಯುದ್ದ ವಿಮಾನ, ಎಲ್ಲಾ ದೇಶಗಳಿಂದಲೂ ಡಿಮ್ಯಾಂಡೋ ಡಿಮ್ಯಾಂಡ್! 

"ನಾವು ಕುಸಿತದ ಮೂಲಕ ಹೂಡಿಕೆ ಮಾಡುವುದನ್ನು ನಂಬುತ್ತೇವೆ" ಎಂದು ಬ್ಲೂಮ್‌ಬರ್ಗ್ ಉಲ್ಲೇಖಿಸಿದಂತೆ ಟಿಮ್ ಕುಕ್ ಹೇಳಿದ್ದಾರೆ. "ಹಾಗಾಗಿ ನಾವು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಮತ್ತು ಪ್ರದೇಶಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ, ಆದರೆ ಪರಿಸರದ ನೈಜತೆಯನ್ನು ಗುರುತಿಸುವಲ್ಲಿ ನಾವು ಹೆಚ್ಚು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದೇವೆ." ಎಂದು ತಿಳಿಸಿದ್ದರು.


2019ರಲ್ಲೂ ಸಿಬ್ಬಂದಿಗಳನ್ನು ತೆಗೆದುಹಾಕಿದ್ದ ಕಂಪನಿ
ಉದ್ಯೋಗಿಗಳನ್ನು ಆ್ಯಪಲ್ ಕೈ ಬಿಡುತ್ತಿರುವುದು ಇದೇ ಮೊದಲಲ್ಲ, ಆ್ಯಪಲ್ ಈ ಹಿಂದೆ 2019 ರಲ್ಲೂ ಐರ್ಲೆಂಡ್‌ನ ಕಾರ್ಕ್‌ನಲ್ಲಿ ಅನೇಕ ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಿತ್ತು.


ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ ಗೂಗಲ್
ಗೂಗಲ್ ಕಂಪನಿಯಲ್ಲೂ ಉದ್ಯೋಗಿಗಳ ವಜಾ ಸಮೀಪವಿರುವಂತೆ ಕಾಣುತ್ತಿದೆ. ಈಗಾಗಲೇ ಕಂಪನಿಯ ಕಾರ್ಯನಿರ್ವಾಹಕರು ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ, ಫಲಿತಾಂಶಗಳು ಉತ್ತಮವಾಗಿ ಕಂಡು ಬರದಿದ್ದರೆ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ:  Ratan Tata: ಯುವ ತಂಡದ ಬೆನ್ನಿಗೆ ನಿಂತ ರತನ್​ ಟಾಟಾ! ಈ ಕಂಪೆನಿಯಲ್ಲಿ ಇನ್ವೆಸ್ಟ್​ ಮಾಡ್ತಾರಂತೆ ದಿಗ್ಗಜ ಉದ್ಯಮಿ

ಈ ತಿಂಗಳ ಆರಂಭದಲ್ಲಿ, ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಅನೇಕ ಉದ್ಯೋಗಿಗಳ ಕೆಲಸದ ಫಲಿತಾಂಶದಿಂದ ತೃಪ್ತರಾಗಿಲ್ಲ ಎಂದು ಹೇಳಿದರು. ಪಿಚೈ ಅವರು ಕಂಪನಿಯ ಕೆಲಸದ ಗುಣಮಟ್ಟದ ಬಗ್ಗೆ ಮಾತನಾಡಿ , ಗೂಗಲ್‌ನಲ್ಲಿ ಉತ್ಪಾದಕತೆ ಇರಬೇಕಾದ ಸ್ಥಳಕ್ಕಿಂತ ಕೆಳಗಿದೆ ಎಂದು ತಿಳಿಸಿದ್ದರು. ಹೀಗಾಗಿ ಕಂಪನಿಯ ಉತ್ಪಾದಕತೆ ಹೆಚ್ಚಿಸಲು ಉದ್ಯೋಗಿಗಳಿಗೆ ವಜಾಗೊಳಿಸುವಿಕೆಯ ಎಚ್ಚರಿಕೆ ನೀಡಿದ್ದಾರೆ. ಮೊದಲ ತ್ರೈಮಾಸಿಕದಂತೆಯೇ 2022ರ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಗಳಿಕೆಯು ನಿರೀಕ್ಷೆಗಿಂತ ಕಡಿಮೆಯಾಗಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಂಪನಿಯು 2023ರ ವೇಳೆಗೆ ನೇಮಕಾತಿ ಮತ್ತು ಹೂಡಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಸಿಇಒ ಸುಂದರ್ ಪಿಚೈ ತಿಳಿಸಿದ್ದರು.


ಇತ್ತೀಚಿನ ತಿಂಗಳುಗಳಲ್ಲಿ, ಮೆಟಾ ಇಂಕ್, ಟೆಲ್ಸಾ, ಅಮೆಜಾನ್ ಹೀಗೆ ಅನೇಕ ಟೆಕ್ ದೈತ್ಯರು ಖರ್ಚು ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ತನ್ನ ಉದ್ಯೋಗಿಗಳನ್ನು ತೆಗೆದುಹಾಕಿವೆ.

Published by:Ashwini Prabhu
First published: