Anand Mahindra: ಮತ್ತೊಬ್ಬರ ಕಲೆ ಗುರುತಿಸುವುದು ನಿಜವಾದ ಟ್ಯಾಲೆಂಟ್​! ಅದ್ರಲ್ಲಿ ಬೆಸ್ಟ್​ ಆನಂದ್ ಮಹೀಂದ್ರಾ, ಏನ್​ ಮಾಡಿದ್ದಾರೆ ನೋಡಿ

ಹೆಸರಾಂತ ಕೈಗಾರಿಕೋದ್ಯಮಿ ಮತ್ತು ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆನಂದ್ ಮಹೀಂದ್ರ ಅನೇಕ ವಿಷಯಗಳ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಆನಂದ್​ ಮಹೀಂದ್ರಾ

ಆನಂದ್​ ಮಹೀಂದ್ರಾ

  • Share this:
ನಾವು ಮಾಡುವ ಕೆಲಸ (Work) ನಿಷ್ಠೆಯಿಂದ ಮಾಡಿದರೆ, ಒಂದಲ್ಲ ಒಂದು ದಿನ ಅದಕ್ಕೆ ತಕ್ಕ ಪ್ರತಿಪಲ ಸಿಗುತ್ತೆ. ತಮ್ಮ ಪಾಡಿಗೆ ತಾನೂ ಕೆಲಸದ ಕಡೆ ಗಮನಕೊಟ್ಟು ಮುನ್ನುಗುತ್ತಿರಬೇಕು. ಅದನ್ನು ಗುರುತಿಸುವವರು ಸಿಗುತ್ತಾರೆ. ಅದು ತಡವಾದರೂ ಸರಿ ಶ್ರದ್ಧೆಯಿಂದ ಕೆಲಸ ಮಾಡಿದ್ದು, ವೇಸ್ಟ್​ ಆಗುವುದಿಲ್ಲ. ಹೀಗೆ ಅನೇಕರ ಬದುಕಲ್ಲಿ ಒಂದು ವಿಡಿಯೋ (Viral Video) ದಿಂದ ಜೀವನ (Life) ವೇ ಬದಲಾಗಿದೆ. ಒಬ್ಬರ ಟ್ಯಾಲೆಂಟ್ (Talent)​ ಅನ್ನು ಮತ್ತೊಬ್ಬರು ಗುರುತಿಸುವುದು ಇದೆಯಲ್ಲಾ, ಅದು ನಿಜವಾದ ಟ್ಯಾಲೆಂಟ್​ ಎಂದರೆ ತಪ್ಪಾಗಲ್ಲ. ಇಲ್ಲೂ ಕೂಡ ಅಷ್ಟೇ ಒಬ್ಬ ಯುವಕ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದ, ಏನನ್ನೂ ಆತ ನಿರೀಕ್ಷಿಸಿರಲಿಲ್ಲ. ಆದರೆ, ಆತನ ಕೆಲಸ ಕಂಡು ಈಗ ದೇಶದ ಶ್ರೀಮಂತರ ಪಟ್ಟಿಯಲ್ಲಿರುವ ಖ್ಯಾತ ಉದ್ಯಮಿ ಆ ಯುವಕನಿಗೆ ಕೆಲಸ ಕೊಟ್ಟಿದ್ದಾರೆ. ಏನಪ್ಪ ಇದು ಕಥೆ ಅಂತೀರಾ? ಮುಂದೆ ನೋಡಿ

ಆನಂದ್​ ಮಹೀಂದ್ರಾ ಅವರಿಂದ ಜಾಬ್​ ಆಫರ್​!

ಹೆಸರಾಂತ ಕೈಗಾರಿಕೋದ್ಯಮಿ ಮತ್ತು ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆನಂದ್ ಮಹೀಂದ್ರ ಅನೇಕ ವಿಷಯಗಳ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ . ಇದೀಗ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಬ್ಯಾಟರಿ ಚಾಲಿತ ಜೀಪಿನದು. ತಮಿಳುನಾಡಿನ ಗೌತಮ್ ಎಂಬ ಯುವಕ ಈ ಜೀಪ್​ ತಯಾರಿಸಿದ್ದಾನೆ.

ಬ್ಯಾಟರಿ ಚಾಲಿತ ಜೀಪು ಕಂಡುಹಿಡಿದ ಯುವಕ!

ಆನಂದ್ ಮಹೀಂದ್ರಾ ಗೌತಮ್ ಯುವಕನ ಕ್ರಿಯೇಟಿವಿಟಿಯನ್ನು ಇಷ್ಟಪಟ್ಟು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ ಕೆಲಸ ಕೊಡಿಸಿದ್ದಾರೆ. ಈ ಯುವಕರನ್ನು ಸಂಪರ್ಕಿಸಲು ಅವರು ಮಹೀಂದ್ರಾ ಮತ್ತು ಮಹೀಂದ್ರಾ ಹಿರಿಯ ಕಾರ್ಯನಿರ್ವಾಹಕ ಆರ್ ವೇಲುಸ್ವಾಮಿ ಅವರನ್ನು ಕೇಳಿದ್ದಾರೆ. ಭಾರತವು ಎಲೆಕ್ಟ್ರಿಕ್ ವಾಹನಗಳಲ್ಲಿ ಮುಂಚೂಣಿಯಲ್ಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಆನಂದ್ ಮಹೀಂದ್ರಾ ಹೇಳಿದರು.


ಇದನ್ನೂ ಓದಿ: ವಡಾ ಪಾವ್ ಮಾರುತ್ತಲೇ 50 ಕೋಟಿ ಸಂಪಾದಿಸಿದ ಗೋಲಿ! 350 ಮಳಿಗೆ, ಎಲ್ಲಾ ಕಡೆಯಲ್ಲೂ ಒಂದೇ ಟೆಸ್ಟ್​

ತಮಿಳುನಾಡು ಮೂಲದ ಯುವಕ ಗೌತಮ್​!

ಮನೆಯಿಂದಲೇ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಗೌತಮ್ ಮೂಲತಃ ತಮಿಳುನಾಡಿನವರು. ಅವರು ತಮ್ಮ ಎಲೆಕ್ಟ್ರಿಕ್ ಜೀಪ್‌ನ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ವಿಡಿಯೋ ಕಂಡ ಆನಂದ್ ಮಹೀಂದ್ರಾ ಅವರಿಗೆ ಕೆಲಸ ಕೊಡಿಸಿದರು.

ಗೌತಮ್ ಅವರು ತಮ್ಮ ವೀಡಿಯೊದಲ್ಲಿ ಎಲೆಕ್ಟ್ರಿಕ್ ಜೀಪ್ ಅನ್ನು ಅದರ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಸ್ವತಂತ್ರವಾಗಿ ನಿಯಂತ್ರಿಸುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಇದು ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಬಳಸಿದೆ. ಈ ಜೀಪ್ ಅನ್ನು ಜಂಕ್ ವಸ್ತುಗಳಿಂದ ತಯಾರಿಸಲಾಗುತ್ತದೆ. ಆನಂದ್ ಮಹೀಂದ್ರಾ ಈ ಐಡಿಯಾವನ್ನು ತುಂಬಾ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗುತ್ತಾ? ಬೈಡನ್ ಚರ್ಚೆ ಬೆನ್ನಲ್ಲೇ ಗುಡ್​​ನ್ಯೂಸ್!

ಇದಕ್ಕಾಗಿಯೇ ಭಾರತವು ಎಲೆಕ್ಟ್ರಿಕ್ ವಾಹನಗಳಲ್ಲಿ ಮುಂಚೂಣಿಯಲ್ಲಿರಬಹುದೆಂದು ನಾನು ನಂಬುತ್ತೇನೆ ಎಂದು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಬರೆದಿದ್ದಾರೆ. ನಾವೀನ್ಯತೆಯ ಕಾರಣದಿಂದ ಅಮೆರಿಕ ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದೆ. ಗೌತಮ್ ಅವರಂತಹವರೊಂದಿಗೆ ನಾವೀನ್ಯತೆಯು ಮುಂದೆ ಹೋಗಬಹುದು. ಗೌತಮ್ ಅವರು ಆನಂದ್ ಮಹೀಂದ್ರಾ ಅವರಿಗೆ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ. ಗೌತಮ್ ಅವರು ಕೃಷಿ ಬಳಕೆಗಾಗಿ ಈ ಜೀಪ್ ವಿನ್ಯಾಸಗೊಳಿಸಿದ್ದಾರೆ.
Published by:Vasudeva M
First published: