• Home
  • »
  • News
  • »
  • business
  • »
  • Scorpio N: ಆ ಕುಸ್ತಿಪಟು ಹೊಸ ಕಾರು ಖರೀದಿಸಿದಕ್ಕೆ ಖುಷಿ ಪಟ್ಟಿದ್ಯಾಕೆ ಆನಂದ್ ಮಹೀಂದ್ರಾ? ಕಾರಣ ಇದು!

Scorpio N: ಆ ಕುಸ್ತಿಪಟು ಹೊಸ ಕಾರು ಖರೀದಿಸಿದಕ್ಕೆ ಖುಷಿ ಪಟ್ಟಿದ್ಯಾಕೆ ಆನಂದ್ ಮಹೀಂದ್ರಾ? ಕಾರಣ ಇದು!

ಗೀತಾ ಫೋಗಟ್ ಮತ್ತವರ ಕುಟುಂಬ

ಗೀತಾ ಫೋಗಟ್ ಮತ್ತವರ ಕುಟುಂಬ

Scorpio N: ಗೀತಾ ಫೋಗಟ್ ಅವರ ಟ್ವಿಟರ್ ಪೋಸ್ಟ್​​ಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಮವಾರ ಪ್ರತಿಕ್ರಿಯಿಸಿದ್ದಾರೆ ನೋಡಿ.

  • Share this:

ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಸದಾ ಮತ್ತೊಬ್ಬರ ಖುಷಿಯಲ್ಲಿ (Happy) ಟ್ವೀಟ್ ಮಾಡಿ ಅವರಿಗೆ ಅಭಿನಂದನೆಗಳನ್ನು ತಿಳಿಸುವುದರೊಂದಿಗೆ ಭಾಗಿಯಾಗುವುದನ್ನು ನಾವು ತುಂಬಾ ಹಿಂದೆಯಿಂದಲೂ ನೋಡುತ್ತಲೇ ಬಂದಿದ್ದೇವೆ. ಹಿಂದೊಮ್ಮೆ ಯಾರೋ ಒಬ್ಬ ವ್ಯಕ್ತಿ ತನ್ನ ಜೀವಮಾನದ ಉಳಿತಾಯದ (Savings) ಹಣದಿಂದ ಮಹೀಂದ್ರಾ ಎಸ್‌ಯುವಿ ಖರೀದಿ ಮಾಡಿದರೆ, ಅವರಿಗೆ ಅಭಿನಂದನೆಯನ್ನು ಹೇಳಿದ್ದರು. ಹಾಗೆಯೇ ಈಗ ಮತ್ತೊಬ್ಬರಿಗೆ ಹೊಸ ಕಾರು ಖರೀದಿಸಿದ್ದಕ್ಕೆ ಅಭಿನಂದನೆ (congratulations) ಹೇಳುವುದರ ಜೊತೆಗೆ ಸ್ವಲ್ಪ ಭಾವುಕ (Emotion) ಸಹ ಆಗಿದ್ದಾರೆ ನೋಡಿ. ಅಭಿನಂದನೆ ಹೇಳಿದ್ದೆನೋ ಸರಿ, ತುಂಬಾ ಖುಷಿ ಪಟ್ಟಿದ್ದೇಕೆ ಅಂತ ನಿಮ್ಮೆಲ್ಲರ ತಲೆಯಲ್ಲಿ ಪ್ರಶ್ನೆಯೊಂದು ಓಡಾಡುತ್ತಿರಬೇಕಲ್ಲವೇ? ಇದನ್ನು ತಿಳಿದುಕೊಳ್ಳಬೇಕು ಅಂತಾದರೆ ಮುಂದೆ ಓದಿ.


ಕುಸ್ತಿಪಟು ಮತ್ತು 2010 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ನಮ್ಮ ದೇಶಕ್ಕೆ ಕೀರ್ತಿ ತಂದ ಗೀತಾ ಫೋಗಟ್ ಅವರ ಟ್ವಿಟರ್ ಪೋಸ್ಟ್ ಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಮವಾರ ಪ್ರತಿಕ್ರಿಯಿಸಿದ್ದಾರೆ ನೋಡಿ.


ಸ್ಕಾರ್ಪಿಯೋ-ಎನ್ ಖರೀದಿಸಿದ ಗೀತಾ ಫೋಗಟ್


ಗೀತಾ ಫೋಗಟ್ ಅವರು ತಮ್ಮ ಪತಿ, ಚಿನ್ನದ ಪದಕ ವಿಜೇತ ಕುಸ್ತಿಪಟು ಪವನ್ ಕುಮಾರ್ ಮತ್ತು ಅವರ ಎರಡು ವರ್ಷದ ಮಗನೊಂದಿಗೆ ಸ್ಕಾರ್ಪಿಯೋ-ಎನ್ ಕಾರಿನ ಮುಂದೆ ನಿಂತು ತೆಗೆಸಿಕೊಂಡ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.ಎಂತಹ ಸುಂದರವಾದ ದಿನ ಮತ್ತು ಅಷ್ಟೇ ಸುಂದರವಾದ ಮುಂಜಾನೆ ನವರಾತ್ರಿಯ ಮೊದಲ ದಿನದಂದು ಮಹೀಂದ್ರಾ ಸ್ಕಾರ್ಪಿಯೋ-ಎನ್ ಕಾರನ್ನು ಖರೀದಿಸಿದ್ದೇವೆ. ನಮ್ಮ ಮನೆಯ ಹೊಸ ಸದಸ್ಯರನ್ನು ನಾವು ಸ್ವಾಗತಿಸುತ್ತೇವೆ.


ಇಂತಹ ಅದ್ಭುತ ಕಾರನ್ನು ಬಿಡುಗಡೆ ಮಾಡಿದ್ದಕ್ಕಾಗಿ ಆನಂದ್ ಮಹೀಂದ್ರಾ ಸರ್ ಅವರಿಗೆ ತುಂಬಾ ಧನ್ಯವಾದಗಳು. ಅತ್ಯುತ್ತಮ ಸೇವೆಗಾಗಿ ಪಿಪಿ ಆಟೋಮೋಟಿವ್ ಪ್ರೈವೇಟ್ ಲಿಮಿಟೆಡ್ ಕರ್ನಾಲ್ ಗೆ ಧನ್ಯವಾದಗಳು" ಎಂದು ಕುಸ್ತಿಪಟು ಮೈಕ್ರೋ-ಬ್ಲಾಗಿಂಗ್ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಈ ರಾಶಿಯವರಿಂದು ಯಾರ ಸಹಾಯ ಕೇಳ್ಬೇಡಿ, ಎಲ್ಲ ನೀವೇ ಮಾಡಿದ್ರೂ-ಹೆಸರು ಮಾತ್ರ ಅವರಿಗೆ!


ಗೀತಾ ಪೋಸ್ಟ್ ಗೆ ಆನಂದ್ ಮಹೀಂದ್ರಾ ಏನ್ ಹೇಳಿದ್ದಾರೆ ನೋಡಿ..


ಮೈಕ್ರೋ-ಬ್ಲಾಗಿಂಗ್ ಸೈಟ್ ನಲ್ಲಿ ಗೀತಾ ಹಾಕಿಕೊಂಡಿರುವ ಪೋಸ್ಟ್ ಗೆ ಆನಂದ್ ಮಹೀಂದ್ರಾ ಅವರು “ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ಎಲ್ಲಾ ಹೊಸ ಸ್ಕಾರ್ಪಿಯೋ-ಎನ್ ಸಿರೀಸ್ ಕಾರುಗಳನ್ನು ಮಾರುಕಟ್ಟೆಗೆ ಸ್ವಾಗತಿಸುತ್ತದೆ” ಎಂದು ಉಲ್ಲೇಖಿಸಿದ್ದಾರೆ. ಈ ಕ್ಷಣವನ್ನು "ಬೋನಸ್" ಮತ್ತು "ಸವಲತ್ತು" ಎಂದು ಕರೆದ ಅವರು, ಕುಸ್ತಿಪಟು ಹೊಸ ವಾಹನದ "ಮೊದಲ ಗ್ರಾಹಕರು" ಎಂದು ಸಹ ಬಹಿರಂಗಪಡಿಸಿದರು. ನಾವು ನಿಮ್ಮ ಚಿನ್ನದ ಪದಕದ ವೈಭವವನ್ನು ನೋಡಿದ್ದೇವೆ.. ನಮ್ಮ ಕಾರು ಸಹ ನಿಮ್ಮಂತೆಯೇ ಬಲಿಷ್ಟವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.


ನವರಾತ್ರಿಯ ಮೊದಲ ದಿನದಂದು ಸ್ಕಾರ್ಪಿಯೋ-ಎನ್ ಎಸ್ಯುವಿಗಳ ಡೆಲಿವರಿಗಳ ಪ್ರಾರಂಭವಾಗಿದೆ.


ನವರಾತ್ರಿ 2022 ರ ಮೊದಲ ದಿನದಂದು ಮಹೀಂದ್ರಾ ಆಂಡ್ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿ ಗಳ ಡೆಲಿವರಿಗಳ ಪ್ರಾರಂಭವನ್ನು ಘೋಷಿಸಿದೆ. ಇಂದಿನಿಂದ ಡೆಲಿವರಿ ಪ್ರಾರಂಭವಾಗುವ ಮೊದಲ 10 ದಿನಗಳಲ್ಲಿ ಕಾರಿನ 7,000 ಯುನಿಟ್ ಗಳ ಬ್ಯಾಚ್ ಅನ್ನು ತಲುಪಿಸಲು ಆಟೋಮೊಬೈಲ್ ಕಂಪನಿ ಯೋಜಿಸಿದೆ ಎಂದು ವರದಿಯಾಗಿದೆ.ಸ್ಕಾರ್ಪಿಯೋ-ಎನ್ ಸಿರೀಸ್ ನ ಎಸ್‌ಯುವಿಗಳು ಜುಲೈ 30 ರಂದು ಬುಕಿಂಗ್ ಮಾಡಿದ ದಿನದಂದು ಅಭೂತ ಪೂರ್ವ ಪ್ರತಿಕ್ರಿಯೆಯನ್ನು ಪಡೆಯಿತು, 30 ನಿಮಿಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬುಕಿಂಗ್ ಆಗಿವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ರವಿ ಮೋದಿ; ಇವರ ಆಸ್ತಿ ಬಗ್ಗೆ ಗೊತ್ತಾದ್ರೆ ಶಾಕ್ ಆಗ್ತೀರಾ!


ಈ ಎಸ್‌ಯುವಿಯು ಡೀಸೆಲ್ ಮತ್ತು ಪೆಟ್ರೋಲ್ ಪವರ್ ಟ್ರೇನ್ ಗಳೆರಡನ್ನೂ ಹೊಂದಿರುವ ಐದು ಟ್ರಿಮ್ ಗಳಲ್ಲಿ ಹರಡಿದೆ. ಇದು ತನ್ನ ರೂಪಾಂತರಗಳಲ್ಲಿ ಟೂ-ವೀಲ್ ಡ್ರೈವ್ ಮತ್ತು ಆಲ್-ವ್ಹೀಲ್ ಡ್ರೈವ್ ಆಯ್ಕೆಯನ್ನು ಸಹ ನೀಡುತ್ತದೆ.

First published: