• Home
  • »
  • News
  • »
  • business
  • »
  • Business Idea: ಮಸ್ಕತ್​ನಿಂದ ವಾಪಸ್​ ಬಂದವನ ಕೈ ಹಿಡಿದಿದ್ದು ಕೃಷಿ, ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರೋ ಕೇರಳ ರೈತ!

Business Idea: ಮಸ್ಕತ್​ನಿಂದ ವಾಪಸ್​ ಬಂದವನ ಕೈ ಹಿಡಿದಿದ್ದು ಕೃಷಿ, ತಿಂಗಳಿಗೆ 4 ಲಕ್ಷ ಆದಾಯ ಗಳಿಸುತ್ತಿರೋ ಕೇರಳ ರೈತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಲಕ್ಕಾಡ್ (Palakkad) ಮೂಲದ ವಿಜಯಕುಮಾರ್ ನಾರಾಯಣನ್ (Vijaykumar Narayanan) ಅವರು 20 ವರ್ಷಗಳ ಕಾಲ ನಗರದಲ್ಲಿ ವಿವಿಧ ಉದ್ಯೋಗಗಳಲ್ಲಿ ದುಡಿದ ನಂತರ ಮಸ್ಕತ್‌ (Maskat) ನಿಂದ ತಮ್ಮ ಊರಿಗೆ ಹಿಂದಿರುಗುತ್ತಾರೆ.

  • Share this:

ನಗರ ಜೀವನದಿಂದ ಬೇಸತ್ತು ಮತ್ತೆ ತಮ್ಮ ಊರಿಗೆ ಹಿಂದಿರುಗಿ, ಕೃಷಿ (Agriculture) ಮಾಡುವ ಮೂಲಕ ಸಾಕಷ್ಟು ಲಾಭ ಗಳಿಸುತ್ತಿರುವ ಕೇರಳ (Kerala) ದ ಆದರ್ಶ ಕೃಷಿಕ (Farmers) ನ ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಅವರ ಈ ಕೃಷಿ ಪ್ರಯಾಣದಲ್ಲಿ ಏನೆಲ್ಲ ಅಡೆ ತಡೆಗಳನ್ನು ಎದುರಿಸಿದರು? ಅವುಗಳನ್ನೆಲ್ಲ ಹೇಗೆ ಪರಿಹರಿಸಿದರು? ಎಂಬೆಲ್ಲ ಮಾಹಿತಿಗಳ ಬಗ್ಗೆ ಇಲ್ಲಿ ಚರ್ಚೆ ಮಾಡೋಣ.  2012 ರಲ್ಲಿ, ಪಾಲಕ್ಕಾಡ್ (Palakkad) ಮೂಲದ ವಿಜಯಕುಮಾರ್ ನಾರಾಯಣನ್ (Vijaykumar Narayanan) ಅವರು 20 ವರ್ಷಗಳ ಕಾಲ ನಗರದಲ್ಲಿ ವಿವಿಧ ಉದ್ಯೋಗಗಳಲ್ಲಿ ದುಡಿದ ನಂತರ ಮಸ್ಕತ್‌ (Maskat) ನಿಂದ ತಮ್ಮ ಊರಿಗೆ ಹಿಂದಿರುಗುತ್ತಾರೆ. ಆಗ ಅವರಿಗೆ ಮುಖ್ಯವಾಗಿ ಕಾಡುವ ಪ್ರಶ್ನೆಯೆಂದರೆ ಮುಂದೆ ಏನು ಮಾಡೋದು? ಎಂದು ಅವರಿಗೆ ತಿಳಿಯುವುದಿಲ್ಲ.


ಆ ಕ್ಷಣಕ್ಕೆ ಅವರಿಗೆ ಹೊಳೆದ ಒಂದು ಐಡಿಯಾ ಎಂದರೆ ತನ್ನ ಪೂರ್ವಜರು ಮಾಡುತ್ತಿದ್ದ ಕೃಷಿ. ವಿಜಯ್ ಅವರು ಅಂದೇ ಕೃಷಿ ಮಾಡಲು ನಿರ್ಧರಿಸಿ, ಅದಕ್ಕೆ ಬೇಕಾದ ತಯಾರಿ ಸಹ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.


ಭಿನ್ನ ಕೃಷಿ ಪದ್ಧತಿಯಿಂದ ಆದಾಯ ಹೆಚ್ಚು


ಆದರೆ ಎಲ್ಲಾ ಕೃಷಿಕರು ಒಂದೇ ಕೃಷಿ ಪದ್ದತಿಯನ್ನು ಬಳಸುವುದರಿಂದ ನಾನು ಅದೇ ಪದ್ಧತಿ ಬಳಸಿದರೆ ಏನು ಪ್ರಯೋಜನ ಆಗುವುದಿಲ್ಲ ಎಂದು ಯೋಚಿಸಿದ ವಿಜಯ್ ನಂತರ ಅವರು ಹೊಸ ಕೃಷಿ ತಂತ್ರಗಳು ಮತ್ತು ಕೇರಳದ ಹವಾಮಾನಕ್ಕೆ ಸೂಕ್ತವಾದ ಬೆಳೆಗಳ ಬಗ್ಗೆ ಪುಸ್ತಕಗಳ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.


ವಿಜಯ್ ಅವರು ಗಣಿತಶಾಸ್ತ್ರದಲ್ಲಿ ಪದವೀಯನ್ನು ಪಡೆದಿದ್ದಾರೆ. ಇದರಿಂದ ಅವರಿಗೆ ವಿಜ್ಞಾನಕ್ಕೆ ಸಂಬಂಧಪಟ್ಟ ಅಧ್ಯಯನ ಮಾಡುವುದು ಕೊಂಚ ಸುಲಭವಾಯಿತು ಎಂದು ಹೇಳಬಹುದು. ಅವರು ಎಲ್ಲ ಅಧ್ಯಯನ ಮುಗಿದ ಮೇಲೆ ಅಂತಿಮವಾಗಿ ಜಲಕೃಷಿ ಮತ್ತು ಸಾವಯವ ಕೃಷಿಯ ಸಂಯೋಜನೆಯನ್ನು ಒಳಗೊಂಡಿರುವ ಆಕ್ವಾಪೋನಿಕ್ಸ್‌ ಕೃಷಿ ವಿಧಾನವನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕೆಂದು ನಿರ್ಧರಿಸಿದರು.


ಆಕ್ವಾಪೋನಿಕ್ಸ್‌ ಕೃಷಿ ವಿಧಾನ ಎಂದರೇನು?


ಈ ವಿಧಾನದಲ್ಲಿ 'ಮೀನುಗಳ ವಿಸರ್ಜನೆಯಲ್ಲಿರುವ ಪೋಷಕಾಂಶಗಳು ನೀರನ್ನು ಉತ್ಕೃಷ್ಟಗೊಳಿಸುತ್ತದೆ. ಆ ನೀರನ್ನೇ ನಂತರದ ದಿನಗಳಲ್ಲಿ ಸಸ್ಯಗಳಿಗೆ ಬಳಸಲಾಗುತ್ತದೆ. ಇದರಿಂದ ಸಸ್ಯಗಳಿಗೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು ದೊರಕಿ, ಸಸ್ಯಗಳು ಉತ್ತಮವಾಗಿ ಬೆಳೆಯುತ್ತವೆ' ಇದನ್ನೆ ಆಕ್ವಾಪೋನಿಕ್ಸ್ ಕೃಷಿ ವಿಧಾನ ಎನ್ನುತ್ತಾರೆ.


ಆಕ್ವಾಪೋನಿಕ್ಸ್ ಕೃಷಿ ವಿಧಾನ ಅಳವಡಿಸಲು ಉಂಟಾದ ಪ್ರೇರಣೆ


ಅಕ್ವಾಪೋನಿಕ್ಸ್ ಕೃಷಿ ವಿಧಾನವನ್ನು ಅಳವಡಿಸಬೇಕೆಂದು ಅವರು ನಿರ್ಧಾರ ಮಾಡಿದ್ದೇ ಒಂದು ಗಂಭೀರ ಕಾರಣದಿಂದ ಎಂಬುದು ವಿಶೇಷ. 2012ರ ಮಾನ್ಸೂನ್ ನಲ್ಲಿ ನಡೆದ ಒಂದು ನಿರ್ದಿಷ್ಟ ಘಟನೆಯಿಂದ ವಿಜಯಕುಮಾರ್ ಅವರು ಆಕ್ವಾಪೋನಿಕ್ಸ್ ವಿಧಾನವನ್ನು ಕೃಷಿಯಲ್ಲಿ ತರಲು ನಿರ್ಧರಿಸಿದರು.


ಮೀನಿನ ತೊಟ್ಟಿಯಲ್ಲಿರುವ ವಿವಿಧ ಮೀನುಗಳು


ಇಂದು, ವಿಜಯ್ ಕುಮಾರ್ ನಿರ್ಮಿಸಿರುವ ಮೀನಿನ ತೊಟ್ಟಿಯಲ್ಲೀ ನೈಲ್ ಟಿಲಾಪಿಯಾ, ಕಾರ್ಪ್ ಮತ್ತು ದೈತ್ಯ ಗೌರಾಮಿ ಮತ್ತು ಸಣ್ಣ ಅಲಂಕಾರಿಕ ಮೀನುಗಳು ಇವೆ. "ನಾನು ಅವುಗಳಿಗೆ ಪೂರಕ ಆಹಾರಗಳಾದ ಅಜೋಲಾ, ಕೊಲೊಕಾಸಿಯಾ ಎಲೆಗಳು, ಭತ್ತದ ಹೊಟ್ಟು ಮತ್ತು ಕಪ್ಪು ನೊಣ ಲಾರ್ವಾಗಳು, ತೆಂಗಿನಕಾಯಿ ಮತ್ತು ಕಡಲೆಕಾಯಿ ಎಣ್ಣೆ ಇತ್ಯಾದಿ ಪೂರಕ ಆಹಾರಗಳನ್ನು ನೀಡುತ್ತೆನೆ. ಆದ್ದರಿಂದ ಈ ಮೀನುಗಳು ಸಾವಯವ ಮೀನುಗಳಾಗಿವೆ" ಎಂದು ವಿಜಯ್ ಅವರು ಹೇಳುತ್ತಾರೆ.


ತೊಟ್ಟಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಜಯಕುಮಾರ್ ಅವರು ಕೋಸುಗಡ್ಡೆ, ಲೆಟಿಸ್, ಪಾಲಕ್, ಮೆಂತೆ, ಟೊಮೆಟೊ, ಬೆಂಡೆಕಾಯಿ, ಮೆಣಸಿನಕಾಯಿ, ಬದನೆ ಹೀಗೆ ನಾನಾ ಬಗೆಯ ತರಕಾರಿ ಬೆಳೆಗಳನ್ನು ಹಾಕಿದ್ದರು.


ಅಕ್ವಾಪೋನಿಕ್ಸ್ ಕೃಷಿ ವಿಧಾನದ ಪ್ರಯೋಜನ


ಅಕ್ವಾಪೋನಿಕ್ಸ್‌ನ ದೊಡ್ಡ ಪ್ರಯೋಜನವೆಂದರೆ ಮೀನಿನ ಆಹಾರಕ್ಕಾಗಿ ಖರ್ಚು ಮಾಡುವ ಮೂಲಕ ಮೀನು ಮತ್ತು ತರಕಾರಿ ಕೃಷಿ ಎರಡರಿಂದಲೂ ಉತ್ತಮ ಇಳುವರಿಯನ್ನು ಪಡೆಯಬಹುದು.


ಇದನ್ನೂ ಓದಿ: ಈ ಆರೋಗ್ಯಕರ ಪದಾರ್ಥ ಬೆಳೆಯಿರಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸಿ!


ವಿಜಯ್ ಕುಮಾರ್ ಸ್ಥಾಪಿಸಿರುವ ಎನ್‌ಎಆರ್‌ಡಿಸಿ ಸಂಸ್ಥೆ


"ನಾನು ಆರಂಭಿಸಿದಾಗ ಕೇರಳದಲ್ಲಿ ಹೆಚ್ಚು ಅಕ್ವಾಪೋನಿಕ್ ಫಾರ್ಮ್‌ಗಳು ಇರಲಿಲ್ಲ. ಹಾಗಾಗಿ, ನನ್ನ ಹಳ್ಳಿಯಲ್ಲಿ ನನ್ನಿಯೋಡ್ ಅಕ್ವಾಪೋನಿಕ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಸೆಂಟರ್ (ಎನ್‌ಎಆರ್‌ಡಿಸಿ) ಎಂಬ ಸಂಸ್ಥೆಯನ್ನು ಸಹ ಪ್ರಾರಂಭಿಸಿದೆ. ಇಲ್ಲಿ, ನಾನು ಅಕ್ವಾಪೋನಿಕ್ಸ್ ಸಾವಯವ ಕೃಷಿ, ಸಮಗ್ರ ಜಲಚರ ಸಾಕಣೆ, ಪಾಲಿಹೌಸ್/ಮಳೆ ಆಶ್ರಯ ತೋಟಗಾರಿಕೆ (ವಿನ್ಯಾಸ, ನಿರ್ವಹಣೆ, ಮಾರ್ಗದರ್ಶನ, ಕಾರ್ಯಾಚರಣೆಗಳು), ಜೈವಿಕ ಕೀಟ ನಿರ್ವಹಣೆ, ಸಾವಯವ ಕೃಷಿ, ವಾಣಿಜ್ಯ ಉದ್ಯಮ ಅಭಿವೃದ್ಧಿ ನೆರವು ಮತ್ತು ಹೆಚ್ಚಿನವುಗಳ ಕುರಿತು ತರಗತಿಗಳನ್ನು ನೀಡುತ್ತೇನೆ" ಎಂದು ಕೃಷಿಕ ವಿಜಯ್ ಕುಮಾರ್ ವಿವರಿಸುತ್ತಾರೆ.

ಕಡಿಮೆ ಸ್ಥಳ, ಆದರೆ ದೊಡ್ಡ ಫಲಿತಾಂಶವಿಲ್ಲಿದೆ


"ಅಕ್ವಾಪೋನಿಕ್ಸ್ ಫಾರ್ಮ್ ಅನ್ನು ನಿರ್ಮಾಣ ಮಾಡಲು ನಿಮಗೆ ಬೇಕಾಗಿರುವುದು 2-ಸೆಂಟ್ ಭೂಮಿ (~ 900 ಚದರ ಅಡಿಗಿಂತ ಕಡಿಮೆ) ಅಷ್ಟೆ ಎಂಬುದು ವಿಶೇಷ. ಅದರಲ್ಲಿ ಒಂದು ಸೆಂಟ್ ಭೂಮಿಯನ್ನು ಮೀನಿನ ತೊಟ್ಟಿಗೆ ಮತ್ತು ಉಳಿದ ಬೆಳೆಗಳಿಗೆ ಮೀಸಲಿಡಲಾಗಿದೆ.


ಅಂತಹ ತೊಟ್ಟಿಯಲ್ಲಿ ನೀವು ಎರಡು ಟನ್ ಗಳಷ್ಟು ಮೀನುಗಳನ್ನು ಬೆಳೆಯಬಹುದು. ಅದರಲ್ಲೂ ಟಿಲಾಪಿಯಾ ಮೀನಿನ ಸಾಕಾಣಿಕೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಾಮಾನ್ಯ ಬೇಸಾಯಕ್ಕಿಂತ ಸಂಪೂರ್ಣ ಭಿನ್ನವಾಗಿರುವುದರಿಂದ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಈ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ ”ಎಂದು ಕೃಷಿಕ ವಿಜಯ್ ಅವರು ಹೇಳುತ್ತಾರೆ.

ವಿಜಯ್ ಕುಮಾರ್ ಗಳಿಸುತ್ತಿರುವ ಆದಾಯ


"ಈ ಕೃಷಿಯಿಂದ ವರ್ಷಕ್ಕೆ 4 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತೇನೆ. ಪ್ರದೇಶ ಮತ್ತು ಹೂಡಿಕೆಯ ಆಧಾರದ ಮೇಲೆ ಆದಾಯವು ಹೆಚ್ಚಾಗುತ್ತದೆ ”ಎಂದು ಅಕ್ವಾಪೋನಿಕ್ಸ್ ಸಲಹೆಗಾರರಾದ ವಿಜಯ್ ಸಲಹೆ ನೀಡುತ್ತಾರೆ. ಅವರು ಶೀಘ್ರದಲ್ಲೇ ಮತ್ತೊಂದು ಅಕ್ವಾಪೋನಿಕ್ಸ್ ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಅದರ ಹೆಸರು ವೀನಸ್ ಪ್ರಾಜೆಕ್ಟ್ ಎಂಬುದಾಗಿದೆ.


ಇದನ್ನೂ ಓದಿ: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!


"ನಾವು ಸುಮಾರು 130 ಜನರಿಗೆ (30 ಕುಟುಂಬಗಳು) ಶುದ್ಧ, ತಾಜಾ ಮತ್ತು ಹೆಚ್ಚು ಪೌಷ್ಟಿಕಾಂಶದ ಮೀನು, ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ವರ್ಷಪೂರ್ತಿ ಆಹಾರವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಸಬ್‌ಸ್ಕ್ರಿಪ್ಷನ್‌ಗಳ ಆಧಾರದ ಮೇಲೆ ಸಾಪ್ತಾಹಿಕ ಪ್ಯಾಕೇಜ್‌ಗಳ ಮೂಲಕ ಆಹಾರವನ್ನು ಸ್ಥಳೀಯವಾಗಿ ಒದಗಿಸುವ ಆಶಯವನ್ನು ನಾವು ಹೊಂದಿದ್ದೇವೆ ”ಎಂದು ಅವರು ವಿವರಿಸುತ್ತಾರೆ.

ವಿಜಯಕುಮಾರ್ ನಾರಾಯಣನ್ ಅವರನ್ನು ಸಂಪರ್ಕಿಸಲು +91 81292 19282 ಗೆ ಕರೆ ಮಾಡಿ ಅಥವಾ info.vkn@nardc.in ಗೆ ಮೇಲ್ ಮಾಡಿ.

Published by:ವಾಸುದೇವ್ ಎಂ
First published: