Nikhil Nanda: 7000 ಕೋಟಿ ಒಡೆಯ ಈ ನಿಖಿಲ್ ನಂದಾ: ಬಿಗ್​ ಬಿ, ರಣಬೀರ್​ ಜೊತೆಗೆ ಆಪ್ತ ಸಂಬಂಧ

ಅಮಿತಾಭ್ ಬಚ್ಚನ್ ಮತ್ತು ನಿಖಿಲ್ ನಂದಾ

ಅಮಿತಾಭ್ ಬಚ್ಚನ್ ಮತ್ತು ನಿಖಿಲ್ ನಂದಾ

ನಿಖಿಲ್ ನಂದಾ, ಎಸ್ಕಾರ್ಟ್ಸ್ ಕಂಪನಿಯ ಮುಖ್ಯಸ್ಥ ಮತ್ತು ಸಿಇಒ. ನೂರಲ್ಲ, ಇನ್ನೂರಲ್ಲ, ಏಳು ಸಾವಿರ ಕೋಟಿ ಉದ್ಯಮದ ಒಡೆಯ ಈ ನಿಖಿಲ್ ನಂದಾ. ಬರೀ ಉದ್ಯಮಿಯಾಗಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ನಿಖಿಲ್ ನಂದಾ ಹೆಸರು ಸದಾ ಚಿರಪರಿಚಿತ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

  • Trending Desk
  • 3-MIN READ
  • Last Updated :
  • New Delhi, India
  • Share this:

ಬಾಲಿವುಡ್‌ನಲ್ಲಿ (Bollywood) ಪ್ರತಿಯೊಂದಕ್ಕೂ ಒಂದೊಂದು ಸಂಬಂಧ ಇರುತ್ತೆ. ಎಲ್ಲರಿಗೂ ಒಂದೊಂದು ನಂಟು ಇದ್ದೇ ಇರುತ್ತದೆ. ಹಾಗೇ ಖ್ಯಾತ ಬ್ಯುಸಿನೆಸ್ ಮ್ಯಾನ್ (Business Man) ನಿಖಿಲ್ ನಂದಾ (Nikhil Nanda) ಅವರು ಬಾಲಿವುಡ್ ಮಂದಿಗೆ ಚಿರಪರಿಚಿತರು. ಇದೀಗ ನಿಖಿಲ್ ನಂದಾ ಕುರಿತಾದ ಸಂಬಂಧಗಳು ಸದ್ದು ಮಾಡುತ್ತಿದೆ.


ನಿಖಿಲ್ ನಂದಾರ ಸಾವಿರ ಕೋಟಿ ಸಾಮ್ರಾಜ್ಯ!


ನಿಖಿಲ್ ನಂದಾ, ಎಸ್ಕಾರ್ಟ್ಸ್ ಕಂಪನಿಯ ಮುಖ್ಯಸ್ಥ ಮತ್ತು ಸಿಇಒ. ನೂರಲ್ಲ, ಇನ್ನೂರಲ್ಲ, ಏಳು ಸಾವಿರ ಕೋಟಿ ಉದ್ಯಮದ ಒಡೆಯ ಈ ನಿಖಿಲ್ ನಂದಾ. ಬರೀ ಉದ್ಯಮಿಯಾಗಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ನಿಖಿಲ್ ನಂದಾ ಹೆಸರು ಸದಾ ಚಿರಪರಿಚಿತ. ಅದಕ್ಕೆ ಕಾರಣ ಅವರಿಗಿರುವ ಸಂಬಂಧದ ನಂಟು. ಯಾಕಂದ್ರೆ ಅಮಿತಾಬ್ ಬಚ್ಚನ್ ಹಾಗೂ ಕಪೂರ್ ಫ್ಯಾಮಿಲಿ ಇಬ್ಬರ ಜತೆಗೂ ನಿಖಿಲ್ ನಂದಾ ಸಂಬಂಧ ಹೊಂದಿದ್ದಾರೆ.


ವಿಷ್ಯ ಏನಂದ್ರೆ, ಈ ನಿಖಿಲ್ ನಂದಾ ಅವರು ಉದ್ಯಮಿ ರಾಜನ್ ನಂದಾ ಹಾಗೂ ರೀತೂ ಅವರ ಪುತ್ರ. ರೀತೂ ಅವರು ಪ್ರಖ್ಯಾತ ನಟ, ನಿರ್ಮಾಪಕ ರಾಜ್‌ಕಪೂರ್ ಅವರ ಪುತ್ರಿ. ಅಂದಹಾಗೇ ರಾಜ್‌ಕಪೂರ್ ಅವರಿಗೆ ರಿಶಿ ಕಪೂರ್, ರಣಧೀರ್ ಕಪೂರ್, ರಾಜೀವ್ ಕಪೂರ್ ಎಂಬ ಮೂವರು ಗಂಡು ಮಕ್ಕಳಿದ್ದು, ರೀತಾ ಹಾಗೂ ರೀಮಾ ಅನ್ನೋ ಇಬ್ಬರು ಪುತ್ರಿಯರಿದ್ದಾರೆ.


ಇದನ್ನೂ ಓದಿ: ಸಲ್ಲು, ಹೃತಿಕ್ ಜತೆ ನಟಿಸುವ ಅವಕಾಶ ಕೈತಪ್ಪಿದ್ದೇ ಘೋರ: ನಟಿ ಅಮೃತಾರಾವ್


ಹೀಗಾಗಿ ರೀತೂ ಅವರಿಗೆ ನಿಖಿಲ್ ಮಗನಾಗಿದ್ದು, ಕಪೂರ್ ಫ್ಯಾಮಿಲಿಯ ಜತೆಗೆಲ್ಲ ಅವರಿಗೆ ನಂಟಿದೆ. ನಟ ರಣಬೀರ್ ಕಫೂರ್ ಅವರಿಗೆ ಸಂಬಂಧದಲ್ಲಿ ರಾಜನ್ ಮಾವ ಆಗಬೇಕಿದ್ದು, ಕಪೂರ್ ಫ್ಯಾಮಿಲಿಯ ಕಾರ್ಯಕ್ರಮಗಳಲ್ಲಿ ನಿಖಿಲ್ ಯಾವಾಗಲೂ ಹಾಜರ್ ಇರುತ್ತಾರೆ..


ಅಮಿತಾಬ್ ಬಚ್ಚನ್ ಅಳಿಯ!


ನಿಖಿಲ್ ನಂದಾ ಅವರ ಹೆಸರು ಮೊದಲು ಬೆಳಕಿಗೆ ಬಂದಿದ್ದು, ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರನ್ನ ವಿವಾಹವಾದಾಗ.. ಯಾಕಂದ್ರೆ, 23ನೇ ವಯಸ್ಸಿನಲ್ಲಿ ಶ್ವೇತಾ ಬಚ್ಚನ್ ಹಾಗೂ ನಿಖಿಲ್ ನಂದಾ ಅವರು ವಿವಾಹವಾದ್ರು.


ಅಮಿತಾಭ್ ಬಚ್ಚನ್ ಮತ್ತು ನಿಖಿಲ್ ನಂದಾ


1997ರಲ್ಲಿ ನಿಖಿಲ್ ಹಾಗೂ ಶ್ವೇತಾ ಬಚ್ಚನ್ ಮದ್ವೆ ಆದರು.. ಈ ಸಮಯದಲ್ಲಿ ಎರಡು ದೊಡ್ಡ ಕುಟುಂಬಗಳು ಸಂಬಂಧಿಗಳು ಆಗುತ್ತಿದ್ದ ವಿಷ್ಯ ಸಾಕಷ್ಟು ಸುದ್ದಿ ಮಾಡಿತ್ತು. ನಿಖಿಲ್ ಹಾಗೂ ಶ್ವೇತಾ ಅವರಿಗೆ ನವ್ಯಾ ನಂದಾ ಹಾಗೂ ಅಗಸ್ತ್ಯಾ ನಂದಾ ಅನ್ನೋ ಇಬ್ಬರು ಮಕ್ಕಳಿದ್ದಾರೆ. ನಿಖಿಲ್ ನಂದಾ ಅವರು ಅವರ ತಾತಾ ಹರಿಪ್ರಸಾದ್ ನಂದಾ ಅವರು 1944 ರಲ್ಲಿ ಸ್ಥಾಪನೆ ಮಾಡಿದಂತಹ ಎಸ್ಕಾರ್ಟ್ಸ್ ಲಿಮಿಟೆಡ್ ಕಂಪನಿಯನ್ನ ಮುನ್ನಡೆಸುತ್ತಿದ್ದಾರೆ.


2005ರಲ್ಲಿ ತಂದೆ ರಾಜನ್ ನಂದಾ ಅವರ ಅಗಲಿಕೆ ಬಳಿಕ ಕಂಪನಿಯ ಸಿಇಒ ಆಗಿ ನಿಖಿಲ್ ಅವರು ಅಧಿಕಾರವನ್ನ ವಹಿಸಿಕೊಂಡರು.. ಸದ್ಯ ಈ ಕಂಪನಿಯ ಒಟ್ಟು ಮೌಲ್ಯ 7000ಕೋಟಿಗೂ ಹೆಚ್ಚಿದೆ.


ಕೃಷಿ ಉಪಕರಣಗಳು, ಅಟೋಮೇಟಿವ್, ಇಂಜಿನಿಯರಿಂಗ್ ವಿಭಾಗದಲ್ಲಿ ಎಸ್ಕಾರ್ಟ್ಸ್ ಕಂಪನಿಯು ತೊಡಗಿಸಿಕೊಂಡಿದೆ. 2021ರಲ್ಲಿ ಎಕಾನಾಮಿಕ್ ಟೈಮ್ಸ್, ಎಸ್ಕಾರ್ಟ್ಸ್ ಕಂಪನಿಯ ಕುರಿತಾಗಿ ವರದಿಯನ್ನ ಪ್ರಕಟಿಸಿತ್ತು. ನಿಖಿಲ್ ನಂದಾ ಅವರ ಕಂಪನಿಯಲ್ಲಿ ಸುಮಾರು 10 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯು ಸುಮಾರು 7000 ಕೋಟಿ ಆದಾಯವನ್ನ ಹೊಂದಿದೆ ಅನ್ನೋ ಮಾಹಿತಿಯನ್ನ ಪ್ರಕಟಿಸಿತ್ತು.
ನಿಖಿಲ್ ನಂದಾ ಅವರು ಬಚ್ಚನ್ ಅವರ ಅಳಿಯ ಹಾಗೂ ರಾಜ್‌ಕಪೂರ್ ಅವರ ಮೊಮ್ಮಗ.. ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳದಿದ್ರೂ, ಸಿನಿಮಾ ರಂಗದ ಫ್ಯಾಮಿಲಿಯ ನಂಟಿದೆ.


ಆದರೆ ಪಕ್ಕಾ ಉದ್ಯಮಿಯಾಗಿರುವ ನಿಖಿಲ್ ನಂದಾ ಅವರಿಗೆ ಬಾಲಿವುಡ್ ಚಿತ್ರರಂಗದವರ ಜತೆ ಒಡನಾಟವಿದೆ. ಇದೇ ಕಾರಣಕ್ಕೆ ನಿಖಿಲ್ ನಂದಾ ಅವರ ಹೆಸರು ಆಗಾಗೇ ಕಾಣಿಸಿಕೊಳ್ಳೂತ್ತಿರುತ್ತದೆ. ಪದೇ ಪದೇ ನಿಖಿಲ್ ಅವರು ಉದ್ಯಮ ಹಾಗೂ ಬಚ್ಚನ್, ಕಪೂರ್ ಫ್ಯಾಮಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

First published: