• Home
  • »
  • News
  • »
  • business
  • »
  • ಅಮೆರಿಕದಲ್ಲಿ ಆರ್ಥಿಕ ಸಂಕಷ್ಟ?- H1B & L ವೀಸಾಗಳ ಶುಲ್ಕ ಹೆಚ್ಚಿಸಲು ಮುಂದಾದ ಜೋ ಬೈಡನ್

ಅಮೆರಿಕದಲ್ಲಿ ಆರ್ಥಿಕ ಸಂಕಷ್ಟ?- H1B & L ವೀಸಾಗಳ ಶುಲ್ಕ ಹೆಚ್ಚಿಸಲು ಮುಂದಾದ ಜೋ ಬೈಡನ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಶುಲ್ಕ ಏರಿಸುವ ಪ್ರಸ್ತಾವನೆಯ ನೀತಿಗೆ ಅನುಸಾರವಾಗಿ, ವಲಸೆ ವ್ಯವಸ್ಥೆಯನ್ನು ನಿರ್ವಹಿಸುವ ಏಜೆನ್ಸಿಯ ವೆಚ್ಚವನ್ನು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳು ಭರಿಸಬೇಕಾಗುತ್ತದೆ

  • Trending Desk
  • 5-MIN READ
  • Last Updated :
  • Share this:

    ಅಮೆರಿಕದ ಜೋ ಬೈಡನ್(Joe Biden) ಸರಕಾರವು ವಲಸಿಗರಲ್ಲದ ಉದ್ಯೋಗ ಆಧಾರಿತ ವೀಸಾಗಳಾದ H-1B (US ಮೂಲದ ಕಂಪನಿ ಅಥವಾ ಸಂಸ್ಥೆಗೆ ವೃತ್ತಿಪರರಾಗಿ ಕೆಲಸ ಮಾಡುವವರಿಗೆ ನೀಡುವ ವೀಸಾ) ಮತ್ತು L ವೀಸಾಗಳಿಗೆ (US-ಆಧಾರಿತ ಕಂಪನಿಯ ವಿದೇಶಿ ಶಾಖೆಯಲ್ಲಿ ಕೆಲಸ ಮಾಡುವವರಿಗೆ ನೀಡಲಾಗುತ್ತದೆ) ಹೆಚ್ಚಿನ ಶುಲ್ಕವನ್ನು ಪ್ರಸ್ತಾಪಿಸಿದೆ. ಪ್ರಸ್ತುತ ಯುಎಸ್ ಉದ್ಯೋಗಿಗಳು ಈ ಶುಲ್ಕವನ್ನು ಭರಿಸುತ್ತಿದ್ದು, ಇದರೊಂದಿಗೆ ವಲಸೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಉದ್ಯೋಗದಾತರು ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ.


    ಏಜೆನ್ಸಿ ವೆಚ್ಚವನ್ನು ಸಂಸ್ಥೆಗಳೇ ಭರಿಸಬೇಕು


    ಶುಲ್ಕ ಏರಿಸುವ ಪ್ರಸ್ತಾವನೆಯ ನೀತಿಗೆ ಅನುಸಾರವಾಗಿ, ವಲಸೆ ವ್ಯವಸ್ಥೆಯನ್ನು ನಿರ್ವಹಿಸುವ ಏಜೆನ್ಸಿಯ ವೆಚ್ಚವನ್ನು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳು ಭರಿಸಬೇಕಾಗುತ್ತದೆ ಹಾಗೂ ಅಮೆರಿಕಾದಲ್ಲಿ ಆಶ್ರಯ ಪಡೆಯುವವರು ರಕ್ಷಣೆಗಾಗಿ ಅರ್ಜಿ ಸಲ್ಲಿಸಲು ಏನೂ ಪಾವತಿಸಬೇಕಾಗಿಲ್ಲ ಎಂಬುದನ್ನು ದೃಢೀಕರಿಸಿದೆ.


    ಹೊಸ ಶುಲ್ಕ ನೀತಿಯ ಪ್ರಯೋಜನಗಳೇನು? 


    ಹೊಸ ಶುಲ್ಕ ನೀತಿಯಿಂದ ಮಾನವ ಕಳ್ಳಸಾಗಣೆ ಹಾಗೂ ಇತರ ಅಪರಾಧಗಳಿಂದ ತೊಂದರೆಗೆ ಒಳಗಾದವರಿಗೆ ನ್ಯಾಯ ದೊರಕುತ್ತದೆ ಹಾಗೂ ಇದು ಆಡಳಿತದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಲಸೆ ನೀತಿ ಸಂಸ್ಥೆಯ ಹಿರಿಯ ನೀತಿ ವಿಶ್ಲೇಷಕ ಜೂಲಿಯಾ ಗೆಲಾಟ್ ತಿಳಿಸಿದ್ದಾರೆ.


    ಇದನ್ನೂ ಓದಿ: Zomato, Blinkit ವೈರಲ್ ಜಾಹೀರಾತನ್ನು ನಕಲು ಮಾಡಿದ ಹೋಂಡಾ ಕಂಪನಿ!


    ಏರಿಕೆಯಾದ ಶುಲ್ಕಗಳು ಹೀಗಿವೆ


    ಗ್ರೀನ್ ಕಾರ್ಡ್ ಹೊಂದ ಬಯಸುವ ಉದ್ಯೋಗಿಗಳು ಆರಂಭದ ಅಪ್ಲಿಕೇಶನ್‌ಗಾಗಿ $11,160 ಅನ್ನು ಪಾವತಿಸಬೇಕು ಎಂದು ಪ್ರಸ್ತಾವನೆ ತಿಳಿಸಿದ್ದು, 204% ದರ ಏರಿಕೆ ಸೂಚಿಸಿದೆ.


    ಜನವರಿ 3 ರಂದು ಯುಎಸ್ ಪೌರತ್ವ ಹಾಗೂ ಇಮಿಗ್ರೇಶನ್ ಸೇವೆಗಳು (USCIS) 469 ಪುಟಗಳ ಶುಲ್ಕ ಪ್ರಸ್ತಾವನೆಗಳನ್ನು ಬಿಡುಗಡೆ ಮಾಡಿದ್ದು, ಶುಲ್ಕದಲ್ಲಿ ಏರಿಕೆಯನ್ನು ತಕ್ಷಣವೇ ಜಾರಿಗೊಳಿಸುವುದಿಲ್ಲ ಎಂಬ ಭರವಸೆ ನೀಡಿದೆ.


    ಸಾರ್ವಜನಿಕರ ಅಭಿಪ್ರಾಯ


    ಪ್ರಸ್ತಾವನೆಯನ್ನು ಸಾರ್ವಜನಿಕ ಅಭಿಪ್ರಾಯಗಳನ್ನು ಸ್ವೀಕರಿಸುವ ಸಲುವಾಗಿ ಮುಕ್ತವಾಗಿ ಇರಿಸಲಾಗಿದ್ದು, 60 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.


    ಈ 60 ದಿನಗಳೊಳಗೆ ಯಾರು ಬೇಕಾದರೂ ಪ್ರಸ್ತಾವನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ. ಶುಲ್ಕ ಹೆಚ್ಚಳ ಇದೀಗ ಪ್ರಸ್ತಾವನೆ ಮಾತ್ರವಾಗಿದ್ದು ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಕೆಲವು ತಿಂಗಳುಗಳ ಬಳಿಕ ಜಾರಿಯಾಗಲಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.


    ಶುಲ್ಕ ಹೆಚ್ಚಳ ಪ್ರಸ್ತಾವನೆಗೆ ಕಾರಣಗಳೇನು?


    ಶುಲ್ಕ ಹೆಚ್ಚಳಕ್ಕೆ ಕಾರಣ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ನಷ್ಟ ಎಂಬುದಾಗಿ ಸಂಸ್ಥೆಗಳು ಉಲ್ಲೇಖಿಸಿದ್ದು, ಆದಾಯದ ಹರಿವು ಕುಂಠಿತಗೊಂಡಿದ್ದು ಸಿಬ್ಬಂದಿ ಕೊರತೆ ಸಮಸ್ಯೆ ಎಂದೆನಿಸಿದೆ.


    ಪ್ರಸ್ತಾವನೆಗೊಂಡಿರುವ ಶುಲ್ಕ ನಿಯಮವು USCIS ಪರಿಶೀಲಿಸಿ ಒಪ್ಪಿಗೆ ನೀಡಿರುವ ಅಂತಿಮ ಶುಲ್ಕ ಎಂದೆನಿಸಿದ್ದು, ಬದಲಾಗದೇ ಉಳಿದಿರುವ ಏಜೆನ್ಸಿ ವೆಚ್ಚ ಹಾಗೂ ಕಾರ್ಯಾಚರಣೆ ವೆಚ್ಚವನ್ನು ಮರುಪಡೆಯುವ ಉದ್ದೇಶವನ್ನು ಹೊಂದಿದೆ. ಅದಾಗ್ಯೂ ಏರಿಸಿರುವ ವೆಚ್ಚ ಈ ಹಿನ್ನಲೆಯಲ್ಲಿ ತುಂಬಾ ಕಡಿಮೆ ಎಂಬುದಾಗಿ ಏಜೆನ್ಸಿ ಅಭಿಪ್ರಾಯಪಟ್ಟಿದೆ.


    ಇದನ್ನೂ ಓದಿ: Walmart: ಸಿಂಗಾಪುರದಿಂದ ಫೋನ್‌ ಪೇ ಪ್ರಧಾನ ಕಚೇರಿ ಭಾರತಕ್ಕೆ ಸ್ಥಳಾಂತರ, ಷೇರುದಾರರಿಗೆ ಕಂಟಕ


    ಬದಲಾವಣೆಗಳು ಅನ್ವಯಗೊಳ್ಳಲಿದೆ


    ಶುಲ್ಕ ಹೆಚ್ಚಳ ಪ್ರಸ್ತಾವನೆ ಜಾರಿಯಾದರೆ ವಲಸೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯುಎಸ್ ಉದ್ಯೋಗದಾತರಿಗೆ ವೆಚ್ಚಗಳು ಹೆಚ್ಚಾಗಲಿವೆ. 2018 ರಲ್ಲಿ ಫೈಲ್ ಮಾಡಿರುವ ಅಪ್ಲಿಕೇಶನ್‌ಗಳು ಇನ್ನು ಹಾಗೆಯೇ ಇದ್ದು ಇದರ ನಡುವೆ ವಲಸೆ ಏಜೆನ್ಸಿ ಪ್ರತಿ ಅಪ್ಲಿಕೇಶನ್‌ಗೆ $11,160 ಶುಲ್ಕ ವಿಧಿಸಲು ನಿರ್ಧರಿಸಲಿದೆ ಹಾಗೂ ಇದಕ್ಕೆ ಯಾವುದೇ ಖಾತ್ರಿಯನ್ನು ನೀಡುವುದಿಲ್ಲ.


    ಇನ್ನು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಇದೇ ನಿಯಮ ಅನ್ವಯವಾಗುತ್ತದೆ ಎಂದು ಇಮಿಗ್ರೇಶನ್ ವಕೀಲರಾದ ಉಪಾಧ್ಯಾಯ ತಿಳಿಸಿದ್ದಾರೆ. ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಾತ್ರ H-1B ಕ್ಯಾಪ್ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ವರದಿ ತಿಳಿಸಿದೆ. ಇ-ರಿಜಿಸ್ಟ್ರೇಶನ್ ಶುಲ್ಕ $10 ಆಗಿದ್ದು ಇದೀಗ 2050% ಏರಿಕೆಯಾಗುವ ಮೂಲಕ $215 ಎಂದು ನಿಗದಿಪಡಿಸಲಾಗಿದೆ.


    ಎರಡನೇ ಹಂತದಲ್ಲಿ H-1B ಅಪ್ಲಿಕೇಶನ್‌ಗಳಿಗಾಗಿ ಫೈಲಿಂಗ್ ಶುಲ್ಕ ಈ ಹಿಂದೆ $460 ಆಗಿದ್ದು ಇದೀಗ 70% ಏರಿಸುವ ಮೂಲಕ $780 ಎಂದು ನಿಗದಿಪಡಿಸಲಾಗಿದೆ.

    Published by:Latha CG
    First published: