• Home
  • »
  • News
  • »
  • business
  • »
  • Amazon: ಭಾರತದ ಅಮೇಜಾನ್‌ನಲ್ಲೂ ಸಾಮೂಹಿಕ ವಜಾ, 5 ತಿಂಗಳ ವೇತನದ ಭರವಸೆ ನೀಡಿದ ಕಂಪನಿ!

Amazon: ಭಾರತದ ಅಮೇಜಾನ್‌ನಲ್ಲೂ ಸಾಮೂಹಿಕ ವಜಾ, 5 ತಿಂಗಳ ವೇತನದ ಭರವಸೆ ನೀಡಿದ ಕಂಪನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ವಿಟ್ಟರ್‌ (Twitter) ಇತ್ತೀಚಿಗಷ್ಟೇ ಸಾವಿರಾರು ಜನರನ್ನು ಉದ್ಯೋಗದಿಂದ ವಜಾಗೊಳಿಸಿದ ಬೆನ್ನಲ್ಲೇ ಅಮೆಜಾನ್‌ ಕೂಡ ಸಾವಿರಾರು ಜನರನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದೆ.

  • Share this:

ಇ-ಕಾಮರ್ಸ್‌ (E Commerce) ದೈತ್ಯ ಅಮೇಜಾನ್‌ (Amazon), ಭಾರತದಲ್ಲೂ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ (Job Cut) ಗೊಳಿಸುತ್ತಿದೆ. ವಜಾಗೊಂಡಿರುವ ಉದ್ಯೋಗಿಗಳಿಗೆ ಇಮೇಲ್‌ ಮೂಲಕ ತಿಳಿಸಲಾಗುತ್ತಿದ್ದು, 5 ತಿಂಗಳ ವೇತನವನ್ನು ನೀಡುವುದಾಗಿ ಭರವಸೆ ನೀಡಿದೆ.ಅಲ್ಲದೇ ಇಮೇಲ್‌ (Email) ಕಳುಹಿಸಿರುವ ಉದ್ಯೋಗಿಗಳಿಗೆ ಇನ್ನಷ್ಟು ಸ್ಪಷ್ಟತೆ ಪಡೆಯಲು ನಿರ್ದಿಷ್ಟ ದಿನಾಂಕದಂದು ಲೀಡರ್‌ಶಿಪ್‌ ಟೀಂ (leadership Team) ಅನ್ನು ಭೇಟಿಯಾಗುವಂತೆ ಹೇಳಿದೆ. ಟ್ವಿಟ್ಟರ್‌ (Twitter) ಇತ್ತೀಚಿಗಷ್ಟೇ ಸಾವಿರಾರು ಜನರನ್ನು ಉದ್ಯೋಗದಿಂದ ವಜಾಗೊಳಿಸಿದ ಬೆನ್ನಲ್ಲೇ ಅಮೆಜಾನ್‌ ಕೂಡ ಸಾವಿರಾರು ಜನರನ್ನು ಉದ್ಯೋಗದಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದೆ.


ಭಾರತೀಯರೂ ಸೇರಿದಂತೆ ಸುಮಾರು 18 ಸಾವಿರಕ್ಕೂ ಹೆಚ್ಚು ಜನರನ್ನು ವಜಾಗೊಳಿಸಲು ನಿರ್ಧರಿಸಿರುವುದಾಗಿ ಅಮೆಜಾನ್ ಸಿಇಒ ಆಂಡಿ ಜಸ್ಸಿ ಹೇಳಿದ್ದಾರೆ.


ಭಾರತದಲ್ಲಿ 1000 ಉದ್ಯೋಗಿಗಳ ವಜಾ!


ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಇನ್ನೂ ಕೆಲವು ವಿಭಾಗಗಳೂ ಸೇರಿದಂತೆ ಅಮೆಜಾನ್ ಇಂಡಿಯಾದಲ್ಲಿನ ಸುಮಾರು 1000 ಉದ್ಯೋಗಿಗಳನ್ನು ವಜಾ ಮಾಡಬಹುದೆಂದು ಹೇಳಲಾಗಿದೆ. ಜನವರಿ 18ರ ನಂತರ ಕಂಪನಿಯು ಪ್ರಭಾವಿತ ಉದ್ಯೋಗಿಗಳೊಂದಿಗೆ ಸಂವಹನ ನಡೆಸುತ್ತದೆ ಎಂದು ಹೇಳಲಾಗಿತ್ತು.


ಇದೀಗ ಮೂಲಗಳ ಪ್ರಕಾರ ಬೆಂಗಳೂರು, ಗುರುಗ್ರಾಮ್ ಮತ್ತು ಇತರ ಕಚೇರಿಗಳಲ್ಲಿ ಭಾರತದಿಂದ ಕಾರ್ಯನಿರ್ವಹಿಸುತ್ತಿರುವ ಅನೇಕ ಇಲಾಖೆಗಳನ್ನು ವಜಾಗೊಳಿಸಿದೆ ಎಂದು ಹೇಳಲಾಗಿದೆ. ಕಂಪನಿಗೆ ನಷ್ಟವನ್ನುಂಟುಮಾಡುವ ಟೀಂಗಳಿಗೆ ಇದು ಹೆಚ್ಚು ಪರಿಣಾಮ ಬೀರಿದೆ. ಅಲ್ಲದೇ ವಜಾಗೊಳಿಸಿದ ಉದ್ಯೋಗಿಗಳಲ್ಲಿ ಹೊಸಬರು ಮತ್ತು ಅನುಭವಿ ಉದ್ಯೋಗಿಗಳು ಇದ್ದಾರೆ ಎನ್ನಲಾಗಿದೆ.


ಲೀಡರ್‌ಶಿಪ್‌ ಟೀಂ ಭೇಟಿಯಾಗುವಂತೆ ಇಮೇಲ್‌


ಅಮೆಜಾನ್ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದು, ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ವಿವರಣೆಗಾಗಿ ಲೀಡರ್‌ಶಿಪ್‌ ಟೀಂ ಭೇಟಿಯಾಗುವಂತೆ ಇಮೇಲ್‌ನಲ್ಲಿ ಹೇಳಲಾಗಿದೆ. ಅದೇ ಇಮೇಲ್‌ನಲ್ಲಿ, ಕಂಪನಿಯು 5 ತಿಂಗಳ ಬೇರ್ಪಡಿಕೆ ವೇತನವನ್ನು ನೀಡುವುದಾಗಿ ಭರವಸೆ ನೀಡಿದೆ. ಈ ಮೂಲಕ ಅಮೇಜಾನ್‌ ಎಲೋನ್ ಮಸ್ಕ್‌ ಅವರ ಟ್ವಿಟರ್ ಹಾದಿ ಹಿಡಿದಿದೆ.


ಅನಿಶ್ಚಿತ ಆರ್ಥಿಕತೆಯಿಂದಾಗಿ ಈ ನಿರ್ಧಾರ ಎಂದ ಸಿಇಒ


ಅಮೆಜಾನ್ ವಜಾಗೊಳಿಸುವಿಕೆಗಳು ಇನ್ನೂ ಕೆಲವು ವಾರಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಕಳೆದ ವಾರದ ಬ್ಲಾಗ್‌ಪೋಸ್ಟ್‌ನಲ್ಲಿ, ಅಮೆಜಾನ್ ಸಿಇಒ ಜಸ್ಸಿ ಅವರು ಸಾಂಕ್ರಾಮಿಕ ಸಮಯದಲ್ಲಿ ಸಂಸ್ಥೆಯು ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ಆದ್ದರಿಂದ ಮುಂಬರುವ ವಾರಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಬಿಡಬೇಕಾಗಿದೆ ಎಂದು ಹೇಳಿದ್ದರು.


"ಕಳೆದ ಹಲವಾರು ವರ್ಷಗಳಿಂದ ನಾವು ವೇಗವಾಗಿ ನೇಮಕ ಮಾಡಿಕೊಂಡಿದ್ದೇವೆ. ಅನಿಶ್ಚಿತ ಆರ್ಥಿಕತೆಯಿಂದಾಗಿ ಈ ವರ್ಷ ಹೆಚ್ಚು ಕಷ್ಟಕರವಾಗಿದೆ " ಎಂದು ಅಮೆಜಾನ್ ಸಿಇಒ ಅಧಿಕೃತ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದ್ದರು. "ನಾವು ಕೇವಲ 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜಿಸಿದ್ದೇವೆ. ಹಲವಾರು ತಂಡಗಳು ಇದರಲ್ಲಿವೆ. ಆದಾಗ್ಯೂ, ವಜಾಗೊಂಡ ಹೆಚ್ಚಿನ ರೋಲ್‌ಗಳು ಅಮೆಜಾನ್ ಸ್ಟೋರ್‌ ಮತ್ತು PXT ಸಂಸ್ಥೆಗಳಲ್ಲಿವೆ" ಎಂದು ಜಾಸ್ಸಿ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದಿದ್ದರು.


"ಈ ಉದ್ಯೋಗ ಕಡಿತ ಜನರಿಗೆ ಕಷ್ಟಕರವೆಂದು ನಮಗೆ ತಿಳಿದಿದೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ವಜಾಗೊಂಡವರ ಜೀವನದ ಮೇಲೆ ಅವು ಎಷ್ಟು ಪರಿಣಾಮ ಬೀರಬಹುದು ಎಂಬುದರ ಅಂದಾಜು ನಮಗಿದೆ.  ಅದಕ್ಕಾಗಿಯೇ ಪ್ರತ್ಯೇಕ ಪಾವತಿ, ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ" ಎಂದೂ ಅವರು ಹೇಳಿದ್ದಾರೆ.


ಇದನ್ನೂ ಓದಿ: ಚಾಕೊಲೇಟ್ ಬೆಲೆಗೆ ಚಿನ್ನ, ಇದು ಸುಳ್ಳಲ್ಲ ಸತ್ಯ! ಬಿಲ್​ ನೋಡಿ ನೀವೇ ಶಾಕ್​ ಆಗ್ತೀರಾ!


ಇನ್ನು ಅಮೆಜಾನ್‌ನಲ್ಲಿ ವಜಾಗೊಳಿಸುವಿಕೆ ಪ್ರಾರಂಭವಾಗುತ್ತಿದ್ದಂತೆ, ಅನೇಕ ಉದ್ಯೋಗಿಗಳು ತಮ್ಮನ್ನು ವಜಾಗೊಳಿಸಿರುವ ಬಗ್ಗೆ ಹಾಗೂ ಹೊಸ ಅವಕಾಶಗಳನ್ನು ಹುಡುಕುತ್ತಿರುವ ಬಗ್ಗೆ ಲಿಂಕ್ಡ್‌ಇನ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು