• Home
  • »
  • News
  • »
  • business
  • »
  • Amazon: ಭಾರತದಲ್ಲಿ ಸಗಟು ವಿತರಣೆ ಉದ್ಯಮಕ್ಕೆ ಅಂತ್ಯ ಹಾಡಲು ಅಮೆಜಾನ್ ನಿರ್ಧಾರ

Amazon: ಭಾರತದಲ್ಲಿ ಸಗಟು ವಿತರಣೆ ಉದ್ಯಮಕ್ಕೆ ಅಂತ್ಯ ಹಾಡಲು ಅಮೆಜಾನ್ ನಿರ್ಧಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಮೆಜಾನ್ ಇಂಡಿಯಾ ತನ್ನ ಆಹಾರ ವಿತರಣಾ ವ್ಯವಹಾರವಾದ ಅಮೆಜಾನ್ ಫುಡ್ಸ್ ಅನ್ನು ವರ್ಷದ ಅಂತ್ಯದ ವೇಳೆಗೆ ಮುಚ್ಚಲು ನಿರ್ಧರಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • Share this:

ಯುಎಸ್ ಮೂಲದ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ತನ್ನ ಸಗಟು ವಿತರಣೆ ವ್ಯವಹಾರವಾದ ಅಮೆಜಾನ್ ಡಿಸ್ಟ್ರಿಬ್ಯೂಶನ್ ಅನ್ನು ಭಾರತದಲ್ಲಿ ಮುಚ್ಚಲಿದೆ. ಅಮೆಜಾನ್ ಸದ್ಯ ಈ ವ್ಯವಹಾರವನ್ನು ಬೆಂಗಳೂರು (Bengaluru) ಹುಬ್ಬಳ್ಳಿ (Hubballi) ಮತ್ತು ಮೈಸೂರಿನಿಂದ (Mysuru) ನಿರ್ವಹಿಸುತ್ತಿದೆ. ಈ ಮೂಲಕ ಅಮೆಜಾನ್ ದೇಶದಲ್ಲಿ ಮುಚ್ಚುತ್ತಿರುವ ಮೂರನೇ ಉದ್ಯಮ ಇದಾಗಿದೆ. ಸಂಸ್ಥೆಯ ವಾರ್ಷಿಕ ಆಪರೇಟಿಂಗ್ ಯೋಜನಾ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಸುತ್ತಮುತ್ತಲಿನ ಸಣ್ಣ ನೆರೆಹೊರೆಯ ಅಂಗಡಿಗಳಿಗೆ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಸಗಟು ವಿತರಣೆಯನ್ನು ಮಾಡುತ್ತಿದ್ದು ಇನ್ನು ಮುಂದೆ ಅದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಸಂಸ್ಥೆ ಮಾಡಿರುವುದಾಗಿ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.


ಅಮೆಜಾನ್ ಬೆಂಬಲ
ಅಮೆಜಾನ್ ಡಿಸ್ಟ್ರಿಬ್ಯೂಶನ್ ಸಂಸ್ಥೆಯ ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಇಕಾಮರ್ಸ್ ಮಾರುಕಟ್ಟೆ ಅಮೆಜಾನ್ ಬ್ಯುಸಿನೆಸ್‌ನಿಂದ ಪ್ರತ್ಯೇಕವಾಗಿದ್ದು, ಥರ್ಡ್ ಪಾರ್ಟಿ ಸೆಲ್ಲರ್‌ಗಳೊಂದಿಗೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ. ಸಂಸ್ಥೆಯು ತೆಗೆದುಕೊಂಡಿರುವ ನಿರ್ಧಾರವು ಲಘುವಾಗಿರುವಂತಹ ತೀರ್ಮಾನವಲ್ಲ ಎಂದು ತಿಳಿಸಿರುವ ಸಂಸ್ಥೆಯು, ಪ್ರಸ್ತುತ ಗ್ರಾಹಕರು ಹಾಗೂ ಪಾಲುದಾರರ ಕಾಳಜಿಯನ್ನು ಪರಿಗಣಿಸಿ ಮುಚ್ಚುವಿಕೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಗುವುದು ಹಾಗೂ ಈ ಮೂಲಕ ನಮ್ಮ ಪೀಡಿತ ಉದ್ಯೋಗಿಗಳಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಅದು ತಿಳಿಸಿದೆ.


ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿರುವ ಸಂಸ್ಥೆ
ಕಂಪನಿಯು ತನ್ನ ಪ್ರಮುಖ ಇ-ಕಾಮರ್ಸ್ ವ್ಯವಹಾರದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಸೌಂದರ್ಯ ಮತ್ತು ಅಮೆಜಾನ್ ಬ್ಯುಸಿನೆಸ್‌ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ.


ಆದರೆ ಅಮೆಜಾನ್ ಇಂಡಿಯಾ ತನ್ನ ಆಹಾರ ವಿತರಣಾ ವ್ಯವಹಾರವಾದ ಅಮೆಜಾನ್ ಫುಡ್ಸ್ ಅನ್ನು ವರ್ಷದ ಅಂತ್ಯದ ವೇಳೆಗೆ ಮುಚ್ಚಲು ನಿರ್ಧರಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ನಡುವೆ ಸಂಸ್ಥೆಯು ತನ್ನ ಎಜ್ಯುಟೆಕ್ ವ್ಯವಹಾರವಾದ ಅಮೆಜಾನ್ ಅಕಾಡೆಮಿಯನ್ನು ಸಹ ಮುಚ್ಚುತ್ತಿದೆ.


ಆರ್ಥಿಕ ಹಿಂಜರಿತ ಕಾರಣ
ಆರ್ಥಿಕ ಹಿಂಜರಿತ ಹಾಗೂ ಕೋವಿಡ್ ರೋಗವು ಇಂಟರ್ನೆಟ್ ದೈತ್ಯ ಅಮೆಜಾನ್ ವ್ಯವಹಾರಕ್ಕೆ ಹೊಡೆತ ನೀಡಿದ್ದು ಜಾಗತಿಕ ಮಟ್ಟದಲ್ಲಿ ಸಂಸ್ಥೆಯು ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಕಂಪನಿ ಈ ನಿರ್ಧಾರ ತಾಳಿದೆ ಎನ್ನಲಾಗಿದೆ.


ಕಂಪನಿಯು ಜಾಗತಿಕವಾಗಿ 10,000 ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸುತ್ತಿದೆ ಭಾರತದಲ್ಲಿ ನೂರಾರು ಉದ್ಯೋಗಿಗಳ ಮೇಲೆ ಈ ವಜಾಗೊಳಿಸುವಿಕೆ ಪರಿಣಾಮ ಬೀರಿದೆ ಎಂದು ಸುದ್ದಿವಾಹಿನಿ ವರದಿ ಮಾಡಿತ್ತು.


ಅಮೆಜಾನ್ ವ್ಯವಹಾರಗಳ ವಿಸ್ತರಣೆ
ಸೆಪ್ಟೆಂಬರ್‌ನಲ್ಲಿ, ಸಂಶೋಧನಾ ಸಂಸ್ಥೆ ಬರ್ನ್‌ಸ್ಟೈನ್, ಅಮೆಜಾನ್ ಇಂಡಿಯಾದ ವ್ಯವಹಾರ ಬಗ್ಗೆ ಟೀಕೆಗಳನ್ನು ನೀಡಿತ್ತು ಹಾಗೂ ಫಲಿತಾಂಶದ ಬಗ್ಗೆ ಮಿಶ್ರ ವರದಿಯನ್ನು ನೀಡಿತ್ತು. ಈ ಸಂದರ್ಭದಲ್ಲಿ ಸಂಶೋಧನಾ ಸಂಸ್ಥೆಯು ಅಮೆಜಾನ್‌ 6.5 ಶತಕೋಟಿ ಲಾಭವನ್ನು ಪಡೆದುಕೊಂಡಿದ್ದರೂ ನಿರಂತರ ನಷ್ಟಕ್ಕೆ ಒಳಗಾಗಿದೆ ಎಂದೇ ವರದಿ ನೀಡಿತ್ತು.


ಇದನ್ನೂ ಓದಿ: LIC Policy: ಈ LIC ಪಾಲಿಸಿಯಲ್ಲಿ ಕೇವಲ ಒಂದು ಪ್ರೀಮಿಯಂ ಕಟ್ಟಿದ್ರೆ ಸಾಕು, ಒಂದು ಕೋಟಿವರೆಗೂ ಸಿಗುತ್ತೆ ಲಾಭ!


ಅಮೆಜಾನ್ ಇಂಡಿಯಾ ಮಾರುಕಟ್ಟೆ, ಅಮೆಜಾನ್ ಮಾರಾಟಗಾರ ಸೇವೆಗಳು ಆರ್ಥಿಕ ವರ್ಷ 2022 ರಲ್ಲಿ ಸುಮಾರು 23% ನಷ್ಟ ಅಂದರೆ ರೂ 3,649 ಕೋಟಿ ನಷ್ಟವನ್ನು ಸರಿದೂಗಿಸಲು ಸಾಧ್ಯವಾಯಿತು. ಇದೇ ಸಮಯದಲ್ಲಿ ಇನ್ನೆರಡು ವ್ಯವಹಾರಗಳಾದ ಪೇಮೆಂಟ್ಸ್ ಹಾಗೂ ಲಾಜಿಸ್ಟಿಕ್ಸ್ ಅನ್ನು ಸಂಸ್ಥೆ ವಿಸ್ತರಿಸಿದೆ.


ಸ್ವಯಂಪ್ರೇರಿತ ಪ್ರತ್ಯೇಕತೆ ಕಾರ್ಯಕ್ರಮ
ಈ ಹಿಂದೆ ಕಂಪನಿಯು ತನ್ನ ಆಹಾರ ವಿತರಣಾ ಸೇವೆ-ಅಮೆಜಾನ್ ಫುಡ್ ಮತ್ತು ಎಡ್-ಟೆಕ್ ವೆಂಚರ್-ಅಮೆಜಾನ್ ಅಕಾಡೆಮಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಕಂಪನಿಯು ತಂಡಗಳನ್ನು ಬದಲಾಯಿಸಲು ಕೇಳಿಕೊಂಡಿದ್ದು, ಸ್ವಯಂಪ್ರೇರಿತ ಪ್ರತ್ಯೇಕತೆ ಕಾರ್ಯಕ್ರಮಕ್ಕೆ (VSP) ಸೈನ್ ಅಪ್ ಮಾಡುವ ಮೂಲಕ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ.


ಇದನ್ನೂ ಓದಿ: Farmers: ಈ 5 ಯೋಜನೆಗಳಲ್ಲಿ ನಿಮ್ಮ ಹೆಸರಿದ್ರೆ ನೆಮ್ಮದಿ! ಏನೇ ಕಷ್ಟು ಬಂದ್ರೂ ಅನ್ನದಾತರಿಗೆ ತೊಂದ್ರೆಯಾಗೋದಿಲ್ಲ!


VSP ಅಡಿಯಲ್ಲಿ, ಉದ್ಯೋಗಿಗಳು 22 ವಾರಗಳ ಮೂಲ ವೇತನವನ್ನು ಪಡೆಯುತ್ತಾರೆ. ಪ್ರತಿ ಆರು ತಿಂಗಳ ಸೇವೆಗೆ ಒಂದು ವಾರದ ಮೂಲ ವೇತನ ಜೊತೆಗೆ ಉದ್ಯೋಗಿಗಳು ವಿಮಾ ಪ್ರಯೋಜನ ನೀತಿಯಡಿಯಲ್ಲಿ 6 ತಿಂಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ ಎಂದು ಸಂಸ್ಥೆ ತಿಳಿಸಿದೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು