Layoff: ಲಂಚ್ ಬ್ರೇಕ್ ಮುಗಿಸಿ ಬಂದ HRಗೇ ಶಾಕ್; ಏಕಾಏಕಿ ಉದ್ಯೋಗದಿಂದ ವಜಾಗೊಳಿಸಿದ ಅಮೆಜಾನ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮಧ್ಯಾಹ್ನದ ಊಟ ಆದ ನಂತರ HR ತಮ್ಮ ಸಿಸ್ಟಮ್ ಅಕ್ಸೆಸ್ ಮಾಡಿದಾಗ ಶಾಕ್ ಕಾದಿತ್ತು. ಅವರನ್ನು ಏಕಾಏಕಿ ಉದ್ಯೋಗದಿಂದ ವಜಾ ಮಾಡಲಾಗಿತ್ತು.

  • Share this:

ಕಳೆದ ವರ್ಷ ನವೆಂಬರ್ ನಿಂದ ಆಗೊಮ್ಮೆ ಈಗೊಮ್ಮೆ ಅಂತ ಅಮೆಜಾನ್ (Amazon) ತನ್ನ ಕಂಪನಿಯಲ್ಲಿ ಕೆಲಸ (Employees) ಮಾಡುವ ಸಾವಿರಾರು ಉದ್ಯೋಗಿಗಳನ್ನು (Layoff) ಕೆಲಸದಿಂದ ವಜಾಗೊಳಿಸುತ್ತಲೇ ಇದೆ. 2022 ರ ನವೆಂಬರ್ ನಲ್ಲಿ 18,000 ಉದ್ಯೋಗಿಗಳನ್ನು ಕೈಬಿಡುವ ನಿರ್ಧಾರವನ್ನು ಅಮೆಜಾನ್ ಪ್ರಕಟಿಸಿತ್ತು. ಈ ಲೇ-ಆಫ್ ಡ್ರಾಮಾ 2023 ರ ಜನವರಿಯವರೆಗೂ ಹಾಗೆ ಮುಂದುವರೆದವು.


ಲಿಂಕ್ಡ್ಇನ್ ಮಾತ್ರ ಅಮೆಜಾನ್ ನ ಮಾಜಿ ಉದ್ಯೋಗಿಗಳ ಸಂದೇಶಗಳಿಂದ ತುಂಬಿ ಹೋಗಿತ್ತು. ಮಾರ್ಚ್ ನಲ್ಲಿ ಕಂಪನಿಯು ಇನ್ನೂ 9,000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಗೊಳಿಸಿದರು.


ಅಮೆಜಾನ್ ನ ಮೊದಲ ಅಲೆಯ ಲೇ-ಆಫ್ ವ್ಯಾಪಾರ, ಸಾಧನಗಳು, ನೇಮಕಾತಿ ಮುಂತಾದ ವಿವಿಧ ಇಲಾಖೆಗಳ ಜನರ ಮೇಲೆ ಪರಿಣಾಮ ಬೀರಿದರೆ, ಇತ್ತೀಚಿನ ಸುತ್ತಿನ ವಜಾಗಳು ಜಾಹೀರಾತು ವ್ಯವಹಾರ, ಟ್ವಿಚ್ ಲೈವ್ ಸ್ಟ್ರೀಮಿಂಗ್, ಎಡಬ್ಲ್ಯೂಎಸ್ ಮತ್ತು ಎಚ್ಆರ್ ತಂಡಗಳ ಜನರ ಮೇಲೆ ಪರಿಣಾಮ ಬೀರಿದೆ.


ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು ಲೇ-ಆಫ್ ಮಾಡಿದ ಅಮೆಜಾನ್


8 ವರ್ಷಗಳಿಂದ ನೇಮಕಾತಿದಾರರಾಗಿ ಕೆಲಸ ಮಾಡುತ್ತಿದ್ದ  ಅಮೆಜಾನಿನ ಹೆಚ್.ಆರ್ ಒಬ್ಬರ ಪ್ರಸಂಗ ನಿಜಕ್ಕೂ ಅಚ್ಚರಿ ಹಾಗೂ ಆಘಾತದಿಂದ ಕೂಡಿದೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.




ಅವರ ಪ್ರಕಾರ, ಮಧ್ಯಾಹ್ನದ ಊಟ ಆದ ನಂತರ ಅವರು ತಮ್ಮ ಸಿಸ್ಟಮ್ ಅಕ್ಸೆಸ್ ಮಾಡಿದಾಗ ಶಾಕ್ ಕಾದಿತ್ತು. ತಾವು ಕೆಲಸ ಮಾಡುತ್ತಿದ್ದ ಸಿಸ್ಟಂ ಒಳಗೆ ಅವರ ಪ್ರವೇಶ ನಿರ್ಬಂಧಿಸಲಾಗಿತ್ತು. ಆಕೆಯನ್ನು ಹೇಗೆ ಕೆಲಸದಿಂದ ತೆಗೆದು ಹಾಕಲಾಯಿತು ಅಂತ ಹೇಳಿಕೊಂಡು ತುಂಬಾನೇ ಅದರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


ಲಿಂಕ್ಡ್ಇನ್ ಪೋಸ್ಟ್ ನಲ್ಲಿ "ಅಮೆಜಾನ್ ನೊಂದಿಗೆ 8 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅನೇಕರಂತೆ ನಾನು ಸಹ ಲೇ-ಆಫ್ ನಿಂದ ನಾನು ಕೂಡ ಪ್ರಭಾವಿತಳಾದೆ ಎಂದು ಹೇಳಲು ನನಗೆ ದುಃಖವಾಗಿದೆ. ಅದರಲ್ಲೂ ಮಧ್ಯಾಹ್ನ ಊಟ ಮಾಡಿದ ನಂತರ ನನ್ನ ಕಂಪ್ಯೂಟರ್ ಅನ್ನು ಪ್ರವೇಶಿಸಲು ಸಾಧ್ಯವಾಗದಿದ್ದಾಗ ನನಗೆ ಸ್ವಲ್ಪ ಆಘಾತವಾಗಿತ್ತು.


ಅನೇಕ ಸುದ್ದಿ ಲೇಖನಗಳು ವರದಿ ಮಾಡಿದಂತೆ, ಲೇ-ಆಫ್ ಗಳು ಹಠಾತ್ ಆಗಿದ್ದು, ಯಾವುದೇ ಕರುಣೆ ತೋರದೆ ಅಥವಾ ವಿವರಣೆ ನೀಡದೆ ಕೆಲಸದಿಂದ ತೆಗೆದು ಹಾಕುತ್ತಾರೆ. ಈ ಅನುಭವ ಈಗ ನನಗೆ ಆಗಿದೆ ಮತ್ತು ನಾನು ತುಂಬಾನೇ ಗೊಂದಲದ ಸ್ಥಿತಿಯಲ್ಲಿದ್ದೇನೆ” ಅಂತ ಬರೆದಿದ್ದಾರೆ.


ಇದನ್ನೂ ಓದಿ: Layoffs: ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದೇ ಹಣ ಉಳಿಸುವುದಕ್ಕಾಗಿ! ಅಧ್ಯಯನದಿಂದ ಬಹಿರಂಗ


ಲೇ-ಆಫ್ ಬಗ್ಗೆ ಉದ್ಯೋಗಿ ಏನೆಲ್ಲಾ ಹೇಳಿಕೊಂಡಿದ್ದಾರೆ ನೋಡಿ..


"ನನ್ನ ತಕ್ಷಣದ ಆಲೋಚನೆ ನನ್ನ ಬಗ್ಗೆ ಅಲ್ಲ, ಆದರೆ ನನ್ನ ತಂಡವು ಅನೇಕ ಆಂತರಿಕ ಗ್ರಾಹಕರನ್ನು ಹೊಂದಿದೆ, ಅವರಿಗೆ ಬೇಕಾದ ಕೆಲಸದ ಪ್ರೋಗ್ರಾಂ ನನ್ನ ಸಿಸ್ಟಂ ನಲ್ಲಿದೆ ಮತ್ತು ಈಗ ಅವರು ಯಾವುದೇ ವಿವರಣೆಯಿಲ್ಲದೆ ಅನಿಶ್ಚಿತರಾಗಿದ್ದಾರೆ. ನನ್ನ ಎರಡನೆಯ ಆಲೋಚನೆಯೆಂದರೆ, ಹೋಗುವಾಗ ಎಲ್ಲರಿಗೂ ಸರಿಯಾಗಿ ವಿದಾಯ ಸಹ ಹೇಳಿಲ್ಲ" ಎಂದು ಬರೆದು ಕೊಂಡಿದ್ದಾರೆ.


"ಕೆಲಸದಿಂದ ತೆಗೆದು ಹಾಕಲ್ಪಟ್ಟಿದ್ದರೂ, ನನ್ನ ಇಡೀ ತಂಡದೊಂದಿಗೆ, ನನ್ನ ಅದ್ಭುತ ಅಮೆಜಾನ್ ಕಮ್ಯುನಿಟಿ ಟುಗೆದರ್ ಸಹೋದ್ಯೋಗಿಗಳಿಗೆ ಮತ್ತು ನಾವು ಒಟ್ಟಿಗೆ ಸಾಗಿದ ಪ್ರಯಾಣಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ.


ಅಮೆಜಾನ್ ನನಗೆ ನೀಡಿದ ಎಲ್ಲಾ ಅವಕಾಶಗಳು ಮತ್ತು ಅನುಭವಗಳಿಗೆ ನಾನು ತುಂಬಾನೇ ಕೃತಜ್ಞಳಾಗಿದ್ದೇನೆ ಎಂಬುದನ್ನು ನಾನು ತಳ್ಳಿಹಾಕಲು ಸಾಧ್ಯವಿಲ್ಲ.


ಲೇ ಆಫ್​


ಈಗ ನನಗೆ ಎಚ್ಆರ್, ಆಡಳಿತ ಸಹಾಯಕ ಮತ್ತು ಅಂತಿಮವಾಗಿ ಪ್ರೋಗ್ರಾಂ ಬಿಲ್ಡಿಂಗ್ ಮತ್ತು ಕೇಸ್ ಮ್ಯಾನೇಜ್ಮೆಂಟ್ ನಲ್ಲಿ ವೃತ್ತಿಜೀವನದ ಬೆಳವಣಿಗೆಯವರೆಗೆ ಎಲ್ಲವೂ ನನಗೆ ಗೊತ್ತು, ಒಂದು ಬಾಗಿಲು ಮುಚ್ಚಿದಾಗ, ಇನ್ನೊಂದು ಬಾಗಿಲು ತೆರೆಯುತ್ತದೆ. ಈ ಲೇ-ಆಫ್ ಗಳ ಬಗ್ಗೆ ನನಗೆ ಹತಾಶೆ ಇದೆ, ಹೊರತಾಗಿ ನಾನು ಯಾವಾಗಲೂ ಅಮೆಜೋನಿಯನ್ ಆಗಿರುತ್ತೇನೆ” ಅಂತ ಬರೆದುಕೊಂಡಿದ್ದಾರೆ.


ಇನ್ನೊಬ್ಬ ಉದ್ಯೋಗಿಯನ್ನು 9 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಲೇ-ಆಫ್ ಮಾಡಿದ್ದಾರಂತೆ..


ಇನ್ನೊಬ್ಬ ಮಾಜಿ ಅಮೆಜಾನ್ ಎಚ್ಆರ್ ಲಿಂಕ್ಡ್ಇನ್ ಗೆ ಹೋಗಿ 9 ವರ್ಷಗಳ ಸೇವೆಯ ನಂತರ ಅವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ಹಂಚಿಕೊಂಡಿದ್ದಾರೆ. ಲೇ-ಆಫ್ ಸುದ್ದಿ ನಿರಾಶಾದಾಯಕವಾಗಿದ್ದರೂ, ಕಂಪನಿಯಲ್ಲಿ ಕಳೆದ ವರ್ಷಗಳಿಗೆ ನಾನು ಕೃತಜ್ಞನಾಗಿದ್ದೇನೆ ಅಂತ ಅವರು ಹೇಳಿದರು.


"ನಿನ್ನೆ, ಇತ್ತೀಚಿನ ಸುತ್ತಿನ ಅಮೆಜಾನ್ ಲೇ-ಆಫ್ ನಿಂದ ಪ್ರಭಾವಿತರಾದ 9,000 ಜನರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂಬ ನೋವಿನ ಸುದ್ದಿಯನ್ನು ನಾನು ಸ್ವೀಕರಿಸಿದೆ. ಈ ಸುದ್ದಿಯಿಂದ ನನಗೆ ದುಃಖವಾಗಿದ್ದರೂ, ಕಳೆದ 9 ವರ್ಷಗಳಿಂದ ಜನರಿಗೆ ಉದ್ಯೋಗ ಹುಡುಕಲು ಸಹಾಯ ಮಾಡಲು ಮತ್ತು ತಂಡಗಳನ್ನು ನೇಮಿಸಿಕೊಳ್ಳಲು ನಾನು ತುಂಬಾ ಕೃತಜ್ಞನಾಗಿದ್ದೇನೆ.

top videos


    ಕೆಲಸದಲ್ಲಿ ನಾನು ಅನೇಕ ಅದ್ಭುತ ಜನರನ್ನು ಭೇಟಿಯಾಗಿದ್ದೇನೆ ಮತ್ತು ನನ್ನ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದವರನ್ನು ತುಂಬಾನೇ ಪ್ರೀತಿಸುತ್ತೇನೆ” ಅಂತ ಬರೆದಿದ್ದಾರೆ.

    First published: