Amazon Great Republic Day Sale ಆರಂಭಕ್ಕೆ ಕ್ಷಣಗಣನೆ, ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್.. ಇಲ್ಲಿದೆ ಪುಲ್‌ ಡೀಟೈಲ್ಸ್

ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಶಾಪಿಂಗ್ ಮಾಡುವ ಗ್ರಾಹಕರು ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್‌ಗಳು ಮತ್ತು ಬಜಾಜ್ ಫಿನ್‌ಸರ್ವ್ EMI ಕಾರ್ಡ್, ಅಮೆಜಾನ್ ಪೇ (Amazon Pay). ಐಸಿಐಸಿಐ (ICICI) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆಮಾಡಿಕೊಂಡಲ್ಲಿ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯುಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನ್​ಲೈನ್ ಶಾಪಿಂಗ್ ನ ಅತಿ ದೊಡ್ಡ್ ಇ-ಕಾಮರ್ಸ್ (Online E-Commerce) ​ ಸಂಸ್ಥೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon's Great Republic Day Sale) 2022 ಮಧ್ಯರಾತ್ರಿ ಜನವರಿ 17 ರಿಂದ ಜನವರಿ 20 ರವರೆಗೆ ನಡೆಯುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾರಾಟವು ಜನವರಿ 16ರಂದು ಪ್ರಾರಂಭವಾಗಲಿದ್ದು ಒಂದು ದಿನ ಮುಂಚಿತವಾಗಿ ಸೇಲ್ ನಲ್ಲಿ ಖರೀದಿ ಮಾಡಬಹುದು. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಸೌಂದರ್ಯ, ಮನೆ ಮತ್ತು ಅಡುಗೆಮನೆ,(Home and Kitchen, Appliances) ಉಪಕರಣಗಳು, ಟಿವಿಗಳು, ದೈನಂದಿನ ಅಗತ್ಯ ವಸ್ತುಗಳು(Essentials) ಮತ್ತು ಹೆಚ್ಚಿನವುಗಳಾದ್ಯಂತ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಭಾರೀ ಡಿಲ್ ಮತ್ತು ಆಫರ್ ಗಳು ಇವೆ.

ಶಾಪಿಂಗ್‌ನಲ್ಲಿ 5% ವರೆಗೆ ಉಳಿತಾಯ
ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಶಾಪಿಂಗ್ ಮಾಡುವ ಗ್ರಾಹಕರು ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್‌ಗಳು ಮತ್ತು EMI, ಬಜಾಜ್ ಫಿನ್‌ಸರ್ವ್ EMI ಕಾರ್ಡ್, ಅಮೆಜಾನ್ ಪೇ (Amazon Pay). ಐಸಿಐಸಿಐ (ICICI) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆಮಾಡಿಕೊಂಡಲ್ಲಿ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯುಬಹುದು. ಈ ಮೂಲಕ ಹೆಚ್ಚು ಉಳಿಸಬಹುದು.

ಇದರ ಜೊತೆಗೆ, ಗ್ರಾಹಕರು ₹60,000 ವರೆಗೆ ಶಾಪಿಂಗ್ ಮಾಡಿ, ಅಮೆಜಾನ್ ಪೇ ಲೇಟರ್ ನಲ್ಲಿ ಹಣ ಪಾವತಿಸಿದರೆ 150 ರೂ ಫ್ಲಾಟ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಗ್ರಾಹಕರು ತಮ್ಮ ಅಮೆಜಾನ್ ಪೇ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಶಾಪಿಂಗ್‌ನಲ್ಲಿ 5% ವರೆಗೆ ಉಳಿಸಬಹುದು. ಕಾರ್ಡ್ ಹೊಂದಿಲ್ಲದ ಅರ್ಹ ಗ್ರಾಹಕರು 1,500 ರೂವರೆಗೆ ಬಹುಮಾನಗಳನ್ನು ಪಡೆಯಬಹುದು. .

ಈ ಸೇಲ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು, ಟಿವಿಗಳು ಮತ್ತು ಹಾಗೂ ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತದೆ. ಹಾಗಾದರೆ ಸ್ಮಾರ್ಟ್‌ಫೋನ್‌ಗಳ ಮೇಲೆ ಯಾವೆಲ್ಲಾ ಆಫರ್ ಇದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Amazon: ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ಸಾಲು ಸಾಲು ಚಿತ್ರಗಳು, ಇಲ್ಲಿದೆ ಪುಲ್‌ ಡೀಟೈಲ್ಸ್

ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್

1)ಸ್ಮಾರ್ಟ್‌ಫೋನ್‌ಗಳು ಮತ್ತು ಅದರ ಆ್ಯಕ್ಸೆಸರಿ ಮೇಲೆ 40% ವರೆಗೆ ರಿಯಾಯಿತಿ.

2)ಶಿಯೋಮಿ 11T Pro, ಒನ್‌ಪ್ಲಸ್ 8RT 5G, ಸ್ಯಾಮ್‌ಸಂಗ್ ಗ್ಯಾಲಾಕ್ಸಿ S21 FE 5G, ಟೆಕ್ನೋ ಸ್ಪಾರ್ಕ್ 8ಪ್ರೋ, ಟೆಕ್ನೋ ಪಾಪ್ 5 lite ನಂತಹ ದೊಡ್ಡ ಮತ್ತು ಜನಪ್ರಿಯ ಬ್ರ್ಯಾಂಡ್‌ಗಳ ಫೋನ್​ಗಳ ಮೇಲೆ ಹಲವು ಕೊಡುಗೆಗಳು ಕೂಡ ದೊರೆಯಲಿದೆ.

3)ಒನ್ ಪ್ಲಸ್ ಬಡ್ಸ್ Z2, ಒಪ್ಪೊ Enco M32 ಮತ್ತು GOVO ಫೋನ್ ಸೇರಿದಂತೆ ಬಿಡಿಭಾಗಗಳು ಮತ್ತು ಆಡಿಯೋ ಉತ್ಪನ್ನಗಳಿಗೆ ಭಾರೀ ಪ್ರಮಾಣದ ಆಫರ್ ಇರುತ್ತದೆ.

4)56,999 ರೂ ಆರಂಭಿಕ ಬೆಲೆಯಲ್ಲಿ ಐಫೋನ್ 12 ಲಭ್ಯವಿರುತ್ತದೆ.

5)ಹೊಸದಾಗಿ ಬಿಡುಗಡೆಯಾದ ಒನ್ ಪ್ಲಸ್ 9RT 5G ಫೋನ್ ಖರೀದಿ ಮೇಲೆ 4,000 ರೂ ತ್ವರಿತ ಬ್ಯಾಂಕ್ ರಿಯಾಯಿತಿ, ನೋ ಕಾಸ್ಟ್ ಇಎಮ್‌ಐ, ಎಕ್ಸಚೇಂಜ್ ಕೂಡ ಇರುತ್ತದೆ. ಒನ್ ಪ್ಲಸ್ 9 ಸರಣಿ 5G ಬ್ಯಾಂಕ್ ರಿಯಾಯಿತಿಗಳು, ಕೂಪನ್‌ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ₹36,999 ರಿಂದ ಪ್ರಾರಂಭವಾಗಲಿದೆ.

6)ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ರೆಡ್ ಮಿ ನೋಟ್ 11T 5G ಮತ್ತು Xiaomi 11T Pro 5G ಮೇಲೆ ಭಾರೀ ಡೀಲ್‌ಗಳು ಇವೆ. Redmi 9 ಸರಣಿಯು 6,999 ರೂ ನಿಂದ ಲಭ್ಯವಿರುತ್ತದೆ ಮತ್ತು ರೆಡ್‌ಮಿ ನೋಟ್ 10 ಎಸ್, ರೆಡ್‌ಮಿ ನೋಟ್ 10 ಪ್ರೊ, ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್ ಮತ್ತು ರೆಡ್‌ಮಿ ನೋಟ್ 10 ಲೈಟ್ ಒಳಗೊಂಡಿರುವ ರೆಡ್‌ಮಿ ನೋಟ್ 10 ಸರಣಿಯು 12,999 ರೂ ನಿಂದ ಲಭ್ಯವಿರುತ್ತದೆ. ಅಲ್ಲದೆ, ಶ್ಯೋಮಿ 11ಲೈಟ್ ಎನ್‌ಇ 5G ₹21,999 ಕ್ಕೆ ಲಭ್ಯವಿರುತ್ತದೆ.

ಇದನ್ನೂ ಓದಿ: ಓಟಿಟಿಗೆ ಬಂದ ಜೇಮ್ಸ್ ಬಾಂಡ್ ಸರಣಿಯ 24 ಸಿನಿಮಾಗಳು: ಅಮೇಜಾನ್​ ಪ್ರೈಮ್​ನಲ್ಲಿ ಮಾತ್ರ ಲಭ್ಯ..!

7).ಗ್ರಾಹಕರು ₹6,299 ರಿಂದ ಪ್ರಾರಂಭವಾಗುವ ಟೆಕ್ನೋ ಸ್ಮಾರ್ಟ್‌ಫೋನ್‌ಗಳನ್ನು ಪಡೆಯಬಹುದು.

8)ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G ಮೇಲೆ ಗ್ರಾಹಕರು ಫ್ಲಾಟ್ 7,000 ರೂ ರಿಯಾಯಿತಿ ಇದೆ.

9)Samsung S20 FE 5G ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹1500 ರಿಯಾಯಿತಿಯೊಂದಿಗೆ ₹36,990 ರಿಂದ ಆರಂಭವಾಗುತ್ತದೆ.

10)iQOO Z3 5G ₹17,990 ರಿಂದ ಲಭ್ಯವಿರುತ್ತದೆ ಮತ್ತು ಇತ್ತೀಚೆಗೆ ಬಿಡುಗಡೆ ಮಾಡಲಾದ iQOO Z5 5G ₹7,000 ರಿಯಾಯಿತಿಯೊಂದಿಗೆ ₹22,990 ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ.

11)ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಗ್ರಾಹಕರು ರಿಯಲ್‌ಮಿ ಮತ್ತು ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ 5,000 ರೂವರೆಗೆ ಡಿಸ್ಕೌಂಟ್ ಪಡೆಯಬಹುದು.
Published by:vanithasanjevani vanithasanjevani
First published: