Amazon and Flipkart: ಫ್ಲಿಪ್‌ಕಾರ್ಟ್, ಅಮೆಜಾನ್ ನಲ್ಲಿ ಮಹಾ ಸೇಲ್ ಬರ್ತಾ ಇದೆ, Shoppingಗೆ ರೆಡಿ ಆಗಿ!

ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಕೋವಿಡ್ ನಿರ್ಬಂಧನೆಗಳಿಂದಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನ ‘ರಿಪಬ್ಲಿಕ್ ಡೇ’ ಸೇಲ್ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ

Amazon Great Republic Day

Amazon Great Republic Day

  • Share this:
ಪ್ರತಿ ವರ್ಷವೂ ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್(Flipkart) ತಮ್ಮ ‘ರಿಪಬ್ಲಿಕ್ ಡೇ’ ಸೇಲ್ (Republic Day) ಅನ್ನು ಶುರು ಮಾಡುವುದು ನಮಗೆಲ್ಲಾ ತಿಳಿದೇ ಇದೆ, ಬಹುತೇಕರು ಈ ರೀತಿಯ ಮಹಾ ಸೇಲ್‌ಗಳಿಗಾಗಿಯೇ ಕಾತುರದಿಂದ ಕಾಯುತ್ತಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ.ಏಕೆಂದರೆ ಆ ಮಹಾ ಸೇಲ್‌ಗಳಲ್ಲಿ ನೀವು ಕೊಂಡು ಕೊಳ್ಳಲು ಇಚ್ಛಿಸುವ ವಸ್ತುಗಳು ಪ್ರಸ್ತುತ ಬೆಲೆಗಳಿಗಿಂತಲೂ ಸ್ವಲ್ಪ ಕಡಿಮೆ ದರದಲ್ಲಿ ಕೊಂಡು ಕೊಳ್ಳಬಹುದು.ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನಿಸಿ ಈ ವರ್ಷದ ‘ರಿಪಬ್ಲಿಕ್ ಡೇ’ ಸೇಲ್ ಅನ್ನು ಈ ಎರಡು ಇ-ಕಾಮರ್ಸ್ (E-commerce) ದೈತ್ಯರು ಪ್ರತಿ ವರ್ಷದಂತೆ ನಿಗದಿತವಾದ ತಾರೀಖಿನಂದು ಮಾಡದೆ, ಅದಕ್ಕಿಂತಲೂ ನಾಲ್ಕೈದು ದಿನಗಳ ಮುಂಚಿತವಾಗಿಯೇ ‘ರಿಪಬ್ಲಿಕ್ ಡೇ’ ಸೇಲ್ ಅನ್ನು ಪ್ರಾರಂಭಿಸುವ ಎಲ್ಲಾ ಸಾಧ್ಯತೆಗಳು ಇವೆಯಂತೆ. ನೀವು ಈ ‘ರಿಪಬ್ಲಿಕ್ ಡೇ’ ಸೇಲ್ ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಅಗ್ಗದ ದರದಲ್ಲಿ ಖರೀದಿಸಲು ಹಣ ಜೋಡಿಸಿಕೊಳ್ಳಿರಿ.

ರಿಪಬ್ಲಿಕ್ ಡೇ ಸೇಲ್
ದೇಶದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಕೋವಿಡ್ ನಿರ್ಬಂಧನೆಗಳಿಂದಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನ ‘ರಿಪಬ್ಲಿಕ್ ಡೇ’ ಸೇಲ್ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ ಮತ್ತು ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸ್ವಲ್ಪ ವಿಳಂಭವಾಗುವ ಸಾಧ್ಯತೆಗಳು ಇರುತ್ತವೆ ಎಂದು ಅಂದಾಜಿಸಲಾಗುತ್ತಿದೆ. ಆದ್ದರಿಂದಲೇ ಈ ಎರಡು ಇ-ಕಾಮರ್ಸ್ ದೈತ್ಯರು ತಮ್ಮ ಉತ್ತಮ ಗಳಿಕೆಗಾಗಿ ಈ ವರ್ಷದ ‘ರಿಪಬ್ಲಿಕ್ ಡೇ’ ಸೇಲ್ ಅನ್ನು ಜನವರಿ 16 ಅಥವಾ 17 ತಾರೀಖಿನಂದು ಪ್ರಾರಂಭಿಸುವ ಯೋಜನೆ ಹಾಕಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Cyber Crime: ಮರುಳಾಗುವಂತೆ ಮಾತಾಡಿ Flipkart ಹೆಸರಲ್ಲಿ ವಂಚನೆ; ಬರೋಬ್ಬರಿ 32 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಸೂಪರ್ ಪ್ಲಾಸ್ಟ್ರೋನಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಆದಂತಹ ಅವನೀತ್ ಸಿಂಗ್ ಮಾರ್ವಾ “ಬಹುತೇಕ ರಾಜ್ಯಗಳು ಈಗಾಗಲೇ ಕೋವಿಡ್ ನಿರ್ಬಂಧನೆಗಳನ್ನು ಬಿಗಿಗೊಳಿಸುತ್ತಿರುವ ಹಿನ್ನಲೆಯಲ್ಲಿ ತಮ್ಮ ವ್ಯಾಪಾರ ವಹಿವಾಟಿಗೆ ಯಾವುದೇ ತೊಂದರೆ ಆಗದಂತೆ ಈ ಬಾರಿ ಆನ್‌ಲೈನ್‌ನಲ್ಲಿ ‘ರಿಪಬ್ಲಿಕ್ ಡೇ’ ಸೇಲ್ ಅನ್ನು ಇ-ಕಾಮರ್ಸ್ ಕಂಪನಿಗಳು ಅವಧಿಗೆ ಮುಂಚಿತವಾಗಿಯೇ ಶುರು ಮಾಡಲಿವೆ” ಎಂದು ಹೇಳಿದ್ದರು.

ಡೆಲಿವರಿ ಬಾಯ್ಸ್
‘ರಿಪಬ್ಲಿಕ್ ಡೇ’ ಸೇಲ್ ಅನ್ನು ನಿಗದಿತ ಅವಧಿಗಿಂತಲೂ ಮುಂಚಿತವಾಗಿ ಶುರು ಮಾಡುವುದರ ಬಗ್ಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳು ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನೂ ನೀಡಿಲ್ಲ. ಈ ರೀತಿಯಾದ ನಿರ್ಧಾರವನ್ನು ತಮ್ಮ ಕಂಪನಿಯ ಡೆಲಿವರಿ ಬಾಯ್ಸ್ ಅವರಿಗೆ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಕೊನೆಯ ಕ್ಷಣದಲ್ಲಿ ಎದುರಾಗುವ ಅಪಾಯಗಳನ್ನು ತಪ್ಪಿಸಲು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರತಿ ವರ್ಷ ‘ರಿಪಬ್ಲಿಕ್ ಡೇ’ ಸೇಲ್ ಎನ್ನುವುದು ಈ ಕಂಪನಿಗಳಿಗೆ ವರ್ಷದ ಮೊದಲ ಮಹಾ ಸೇಲ್ ಇದಾಗಿದ್ದು, ಜನವರಿ 20 ಅಥವಾ 22ನೇ ತಾರೀಖಿನಂದು ಪ್ರಾರಂಭಿಸಿ 3 ಅಥವಾ 4 ದಿನಗಳವರೆಗೆ ನಡೆಯುತ್ತದೆ. ಆದರೆ ಈ ಬಾರಿ ಜನವರಿ 16 ಅಥವಾ 17ನೇ ತಾರೀಖಿನಂದು ಪ್ರಾರಂಭಿಸುವುದಾಗಿ ಹೇಳಲಾಗುತ್ತಿದೆ. ಭಾರತದಲ್ಲಿ ಜನವರಿ 10ನೇ ತಾರೀಖಿನಂದು 24 ಗಂಟೆಗಳಲ್ಲಿ ಸುಮಾರು 1,59,642 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಮತ್ತು ಈಗಾಗಲೇ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳನ್ನು ನಿಯಂತ್ರಿಸಲು ದೆಹಲಿ ಮತ್ತು ಕರ್ನಾಟಕದಲ್ಲಿ ವಿಕೇಂಡ್ ಕರ್ಫ್ಯೂ ಮತ್ತು ರಾತ್ರಿ ವೇಳೆಯಲ್ಲಿ ಕರ್ಫ್ಯೂ ಹೇರಲಾಗಿದೆ.

ಇದನ್ನೂ ಓದಿ: Flipkart Big Bachat Dhamaal Sale: ಬರೀ 24 ರೂ.ಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ F​12 ಸ್ಮಾರ್ಟ್​ಫೋನ್​ ಖರೀದಿಸಿ

ಆದಾಗ್ಯೂ ಇ-ಕಾಮರ್ಸ್ ಪೋರ್ಟಲ್‌ಗಳು ಅವುಗಳ ಕೆಲಸವನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ. ಈ ವಿಕೇಂಡ್ ಲಾಕ್‌ಡೌನ್‌ಗಳಲ್ಲಿ ತಮಿಳುನಾಡಿನಲ್ಲಿ ಮಾತ್ರ ಈ ರೀತಿಯ ಆನ್‌ಲೈನ್ ಡೆಲಿವರಿಗಳನ್ನು ನಿರ್ಬಂಧಿಸಲಾಗಿದ್ದು, ಕೇವಲ ಆಹಾರ ಪದಾರ್ಥಗಳ ಡೆಲಿವರಿ ನೀಡಲು ಮಾತ್ರವೇ ಅನುಮತಿ ನೀಡಲಾಗಿದೆ.
Published by:vanithasanjevani vanithasanjevani
First published: