• Home
  • »
  • News
  • »
  • business
  • »
  • Indian Economy: ಮನಮೋಹನ್ ಸಿಂಗ್ ಅವಧಿಯಲ್ಲೇ ಭಾರತದ ಆರ್ಥಿಕ ಸ್ಥಗಿತಗೊಂಡಿತ್ತು: ನಾರಾಯಣ ಮೂರ್ತಿ

Indian Economy: ಮನಮೋಹನ್ ಸಿಂಗ್ ಅವಧಿಯಲ್ಲೇ ಭಾರತದ ಆರ್ಥಿಕ ಸ್ಥಗಿತಗೊಂಡಿತ್ತು: ನಾರಾಯಣ ಮೂರ್ತಿ

ಎನ್‌.ಆರ್ ನಾರಾಯಣ ಮೂರ್ತಿ

ಎನ್‌.ಆರ್ ನಾರಾಯಣ ಮೂರ್ತಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಅಹಮದಾಬಾದ್ (IIMA) ನಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಶ್ರೀ ನಾರಾಯಣ ಮೂರ್ತಿಯವರು ಯುವಕರ ಮೇಲೆಯೇ ಹೆಚ್ಚಿನ ಭರವಸೆ ಇದ್ದು, ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡಬಲ್ಲ ಸಾಮರ್ಥ್ಯ ಯುವಕರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಓದಿ ...
  • Share this:

ತೆಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ (Manmohan Singh) ಸರಕಾರವು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇದ್ದುದರಿಂದ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಮನ್ನಣೆ ಪಡೆದುಕೊಳ್ಳುವ ವಿಷಯದಲ್ಲಿ ದೇಶವು ಹಿಂದೆ ಸರಿಯಿತು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್ ನಾರಾಯಣ ಮೂರ್ತಿ (NR Narayana Murthy) ವಿಷಾದ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಅಹಮದಾಬಾದ್ (IIMA) ನಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ಶ್ರೀ ನಾರಾಯಣ ಮೂರ್ತಿಯವರು ಯುವಕರ (Youths) ಮೇಲೆಯೇ ಹೆಚ್ಚಿನ ಭರವಸೆ ಇದ್ದು, ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ (Economy) ಚೀನಾದ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡಬಲ್ಲ ಸಾಮರ್ಥ್ಯ ಯುವಕರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಚೀನಾಕ್ಕೆ ಪೈಪೋಟಿ
ಲಂಡನ್‌ನ HSBC ಯ ಬೋರ್ಡ್‌ನಲ್ಲಿದ್ದಾಗ (2008 ಹಾಗೂ 2012 ರ ನಡುವೆ) ಮೊದಲ ಕೆಲವು ವರ್ಷಗಳಲ್ಲಿ ಬೋರ್ಡ್‌ರೂಮ್‌ನಲ್ಲಿ ಸಭೆಗಳ ಸಮಯದಲ್ಲಿ ಆರ್ಥಿಕ ಕ್ಷೇತ್ರದ ಹರಿಕಾನೆಂದು ಚೀನಾವನ್ನು ಎರಡರಿಂದ ಮೂರು ಬಾರಿ ಉಲ್ಲೇಖಿಸಲಾಗುತ್ತದೆ ಅದೇ ಸಂದರ್ಭದಲ್ಲಿ ಭಾರತದ ಹೆಸರನ್ನು ಒಮ್ಮೆ ಮಾತ್ರವೇ ಉಲ್ಲೇಖಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಯಾವು ಸ್ಥಾನಕ್ಕೇರಬೇಕು ಎಂಬ ಪ್ರಶ್ನೆಗೆ ಇನ್ಫಿಯ ನಾರಾಯಣ ಮೂರ್ತಿ ನೀಡಿದ ಉತ್ತರ ಇದಾಗಿತ್ತು.


ಯುಪಿಎಯ ಅವಧಿಯಲ್ಲಿ ಕಳೆಗುಂದಿದ ಭಾರತ
ದುರಾದೃಷ್ಟಕರವಾಗಿ ನಂತರ ಭಾರತದ ಸ್ಥಿತಿ ಏನಾಯಿತು ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ ಹಾಗೂ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಾಗ್ಯೂ ಭಾರತ ಯುಪಿಎ ಅವಧಿಯಲ್ಲಿ ಸ್ಥಗಿತಗೊಂಡಿತ್ತು ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲಗೊಂಡಿತು ಎಂಬುದು ನಾರಾಯಣ ಮೂರ್ತಿಯವರು ತಿಳಿಸಿದ್ದಾರೆ.


ಇದನ್ನೂ ಓದಿ: Cryptocurrency: ಅಬ್ಬಬ್ಬಾ ಕ್ರಿಪ್ಟೋಕರೆನ್ಸಿಯಿಂದ ಭಾರತೀಯರಿಗೆ ಈ ಲಾಭವೂ ಇದ್ಯಾ?


HSBC ಯನ್ನು ಮೂರ್ತಿಯವರು 2012 ರಲ್ಲಿ ತೊರೆದಾಗ ಸಭೆಗಳಲ್ಲಿ ಭಾರತದ ಹೆಸರನ್ನು ಅಪರೂಪವಾಗಿ ಮಾತ್ರವೇ ಉಲ್ಲೇಖಿಸಲಾಗುತ್ತಿತ್ತು ಆದರೆ ಚೀನಾದ ಹೆಸರನ್ನು ಸುಮಾರಿ ಮೂವತ್ತು ಬಾರಿ ಉಲ್ಲೇಖಿಸಿರುವುದು ನನಗೆ ನೆನಪಿದೆ ಎಂದು ತಿಳಿಸಿದ್ದಾರೆ.


ಆರ್ಥಿಕತೆಯ ಹರಿಕಾರ
ಹಾಗಾಗಿ ಜನರು ಯಾವುದೇ ಇತರ ದೇಶದ ಹೆಸರನ್ನು ಹೇಳುವಾಗ ಅದರಲ್ಲೂ ವಿಶೇಷವಾಗಿ ಚೀನಾದ ಬಗ್ಗೆ ಹೇಳುವಾಗ ಅಲ್ಲಿ ಭಾರತದ ಹೆಸರೂ ಉಲ್ಲೇಖಗೊಳ್ಳುವಂತೆ ಮಾಡುವುದು ಇಂದಿನ ಯುವಪೀಳಿಗೆಯ ಮೇಲೆ ಆಧಾರಿತವಾಗಿದೆ ಎಂದು ತಿಳಿಸಿದ್ದಾರೆ. ಇಂದಿನ ಯುವಕರಲ್ಲಿ ಭಾರತವನ್ನು ಆರ್ಥಿಕತೆಯ ಹರಿಕಾರನನ್ನಾಗಿ ಮಾಡುವ ಸಾಮರ್ಥ್ಯವಿದೆ ಎಂದು ನನ್ನ ಭಾವನೆಯಾಗಿದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.


ಹಿಂದೆ ಪಾಶ್ಚಿಮಾತ್ಯರು ಭಾರತವನ್ನು ಹಾಗೂ ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದರು ಆ ಕಾಲವೇ ಬೇರೆಯಾಗಿತ್ತು. ಇಂದು ದೇಶ ತನ್ನದೇ ಆದ ಮಾನ್ಯತೆಯನ್ನು ಪಡೆದುಕೊಂಡಿದೆ ಹಾಗೂ ವಿಶ್ವದಲ್ಲಿ ಗೌರವವನ್ನು ಸಂಪಾದಿಸಿಕೊಂಡಿದೆ. ಇದೀಗ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ನವಚೇತನ ಎಂದೆನಿಸಿದೆ ಎಂದು ಇನ್ಫಿಯ ಮಾಜಿ ಅಧ್ಯಕ್ಷರ ಮಾತಾಗಿದೆ.


ಭಾರತದ ಪ್ರಸ್ತುತ ಯೋಜನೆಗಳು
ಅವರ ಪ್ರಕಾರ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ 1991 ರ ಆರ್ಥಿಕ ಸುಧಾರಣೆಗಳು ಹಾಗೂ ಪ್ರಸ್ತುತ ಬಿಜೆಪಿ ಸರಕಾರದ ಮೇಕ್ ಇನ್ ಇಂಡಿಯಾ ಹಾಗೂ ಸ್ಟಾರ್ಟಪ್ ಇಂಡಿಯಾ ಯೋಜನೆಗಳು ದೇಶವನ್ನು ಆರ್ಥಿಕತೆಯ ಕ್ಷೇತ್ರದಲ್ಲಿ ಸ್ಥಾನವನ್ನು ಗಳಿಸಲು ಸಹಾಯ ಮಾಡಿವೆ ಎಂದಾಗಿದೆ.


ಇದನ್ನೂ ಓದಿ:  Neha Narkhede: ಭಾರತದ ಅತ್ಯಂತ ಕಿರಿಯ 'ಸೆಲ್ಪ್‌ ಮೇಡ್‌' ಶ್ರೀಮಂತ ಮಹಿಳೆ ನೇಹಾ ನಾರ್ಖೆಡೆ!


ನಿಮ್ಮ ವಯಸ್ಸಿನಲ್ಲಿ ನನಗೆ ಹೆಚ್ಚಿನ ಜವಬ್ದಾರಿಗಳಿರಲಿಲ್ಲ ಏಕೆಂದರೆ ಆ ಸಮಯದಲ್ಲಿ ನನ್ನಿಂದ ಹಾಗೂ ಭಾರತದಿಂದ ಏನೂ ನಿರೀಕ್ಷಿಸಿರಲಿಲ್ಲ. ಆದರೆ ಇಂದು ದೇಶವನ್ನು ಇಂದಿನ ಯುವ ಜನಾಂಗ ಮುನ್ನಡೆಸುತ್ತದೆ ಎಂಬ ಆಶಯವಿದೆ. ಭಾರತವನ್ನು ಚೀನಾದ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡುವ ಛಾತಿ ಇಂದಿನ ಯುವ ಜನರಲ್ಲಿದೆ ಎಂದು ಮೂರ್ತಿ ತಿಳಿಸಿದ್ದಾರೆ. ಕೇವಲ 44 ವರ್ಷಗಳಲ್ಲಿ ಚೀನಾ ಭಾರತವನ್ನು ಭಾರಿ ಅಂತರದಿಂದ ಹಿಂದೆ ಸರಿಸಿದೆ ಎಂದು ಸಾಫ್ಟ್‌ವೇರ್ ಉದ್ಯಮದ ಅನುಭವಿ ಉದ್ಯಮಿ ಹೇಳಿದ್ದಾರೆ.


ಚೀನಾದ ಆರ್ಥಿಕತೆ ಆರು ಪಟ್ಟು ದೊಡ್ಡದು
ಚೀನಾದ ಬೆಳವಣಿಗೆ ನಿಜಕ್ಕೂ ನಂಬಲಾಗದೇ ಇರುವಂತಹದ್ದು. ಚೀನಾದ ಆರ್ಥಿಕತೆ ಭಾರತದ ಆರ್ಥಿಕತೆಯ ಆರು ಪಟ್ಟು ದೊಡ್ಡದಾಗಿದೆ. 1978 ಹಾಗೂ 2022 ರ ನಡುವೆ ಅಂದರೆ 44 ವರ್ಷಗಳಲ್ಲಿ ಚೀನಾ ಭಾರತವನ್ನು ತುಂಬಾ ಹಿಂದೆ ಸರಿಸಿದೆ. ಆರು ಪಟ್ಟು ಎಂಬುದು ಹಾಸ್ಯದ ವಿಷಯವಲ್ಲ. ನೀವು ಮನಸ್ಸು ಮಾಡಿದರೆ ಹಾಗೂ ಏನನ್ನಾದರೂ ಸಾಧಿಸಿದರೆ ಚೀನಾ ಇಂದು ವಿಶ್ವದಲ್ಲಿ ಪಡೆಯುತ್ತಿರುವ ಅದೇ ಹೆಗ್ಗಳಿಕೆಯನ್ನು ಭಾರತ ಕೂಡ ಪಡೆಯುತ್ತದೆ ಎಂಬುದು ಶ್ರೀ ಮೂರ್ತಿಯವರ ಅಭಿಪ್ರಾಯವಾಗಿದೆ.

Published by:Ashwini Prabhu
First published: