ಮರ್ಸಿಡೀಸ್ ಬೆಂಜ್ (Mercedes-Benz) ಭಾರತದಲ್ಲಿನ ಅತಿ ದೊಡ್ಡ ಐಷಾರಾಮಿ ಕಾರು (Luxury Car) ತಯಾರಕ ಕಂಪನಿಗಳಲ್ಲಿ ಒಂದು. ಭಾರತೀಯ ಮಾರುಕಟ್ಟೆಗೆ (Indian Market) ಉತ್ತಮ ಶ್ರೇಣಿಯ ಕಾರುಗಳನ್ನು ಪರಿಚಯಿಸುವ ಈ ಕಂಪನಿ ಈಗಾಗ್ಲೇ ಅನೇಕ ಅತ್ಯಂತ ಐಷಾರಾಮಿ ಕಾರುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರು ಎಂದರೆ ಅದು ಮೇಬ್ಯಾಕ್ ಎಸ್-ಕ್ಲಾಸ್ (Maybach S680). ಇದು ಸಾಮಾನ್ಯ ಎಸ್-ಕ್ಲಾಸ್‌ಗಿಂತ ಹೆಚ್ಚು ಪ್ರೀಮಿಯಂ ಆಗಿದ್ದು, ಅತ್ಯಂತ ದುಬಾರಿ ಕಾರು ಕೂಡ ಹೌದು.
ಮರ್ಸಿಡೀಸ್-ಮೇಬ್ಯಾಕ್ ಎಸ್- 680 ಕಾರಿನ ಅತ್ಯಂತ ಕಿರಿಯ ಮಾಲೀಕ
ಈ ಮರ್ಸಿಡೀಸ್ ಬೆಂಜ್ ಅನ್ನು ಭಾರತದಲ್ಲಿ ಹಲವು ಸೆಲೆಬ್ರಿಟಿಗಳು ಹೊಂದಿದ್ದಾರೆ. ಆದರೆ ಇಲ್ಲೊಬ್ಬ 33 ವರ್ಷದ ವ್ಯಕ್ತಿಯೊಬ್ಬರು ಈ ಕಾರನ್ನು ಖರೀದಿಸಿದ್ದು, ಮರ್ಸಿಡೀಸ್-ಮೇಬ್ಯಾಕ್ ಎಸ್-ಕ್ಲಾಸ್‌ನ ಅತ್ಯಂತ ಕಿರಿಯ ಮಾಲೀಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: E-Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಮಾರುಕಟ್ಟೆಯಲ್ಲಿದೆ ಭರ್ಜರಿ ಆಫರ್ಸ್! ಕೆಲವು ದಿನಗಳವರೆಗೆ ಮಾತ್ರ
ಇತ್ತೀಚೆಗೆ 33 ವರ್ಷ ವಯಸ್ಸಿನ ಅಭಿಷೇಕ್ 'ಮಾಂಟಿ' ಅಗರ್ವಾಲ್ ಅವರು ಹೊಚ್ಚ ಹೊಸ Mercedes-Maybach S 680 ಐಷಾರಾಮಿ ಸೆಡಾನ್ ಅನ್ನು 4 ಕೋಟಿ ರೂಪಾಯಿಗೆ ಖರೀದಿಸಿದ್ದು, ಅಭಿಷೇಕ್ ಈಗ ದೇಶದಲ್ಲಿ ಮೇಬ್ಯಾಕ್ ಸೆಡಾನ್ ಹೊಂದಿರುವ ದೇಶದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.
ಅಭಿಷೇಕ್ ಭಾರತದಲ್ಲಿ ಪರ್ಪಲ್ ಸ್ಟೈಲ್ ಎಂಬ ಫ್ಯಾಷನ್ ಕಂಪನಿ ಹೊಂದಿದ್ದು, ಸದ್ಯ ಫ್ಯಾ಼ಷನ್ ಜಗತ್ತಿನಲ್ಲಿ ಇವರ ಕಂಪನಿ ಮನೆಮಾತಾಗಿದೆ. ಮುಂಬೈನಲ್ಲಿ ಅಭಿಷೇಕ್ ಈ ಕಾರು ಖರೀದಿಸಿದ್ದು, ತನ್ನ ಹೊಚ್ಚ ಹೊಸ ಐಷಾರಾಮಿ ಸೆಡಾನ್ ಅನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೇಗಿದೆ Mercedes-Maybach S 680?
* ಮೇಬ್ಯಾಕ್ S680 ಸೆಡಾನ್ ಸ್ಟ್ಯಾಂಡರ್ಡ್ S-ಕ್ಲಾಸ್ ಸೆಡಾನ್ ಅನ್ನು ಹೋಲುತ್ತದೆಯಾದರೂ ಈ ಕಾರು ಸ್ವಲ್ಪ ಉದ್ದವಾಗಿದ್ದು, 180 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.
ಇದು ಹಿಂದಿನ ಸೀಟ್‌ನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಕ್ಯಾಬಿನ್ ಅನ್ನು ಅತ್ಯಂತ ವಿಶಾಲವಾಗಿ ಮಾಡುತ್ತದೆ. ಮೇಬ್ಯಾಕ್ ಎಸ್ 680 ಸುಮಾರು 5.5 ಮೀಟರ್ ಉದ್ದವಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಲಭ್ಯವಿರುವ ಉದ್ದವಾದ ಕಾರುಗಳಲ್ಲಿ ಒಂದಾಗಿದೆ.
* ಮೇಲೆ ಹೇಳಿದಂತೆ, ಇದು ಮಾರುಕಟ್ಟೆಯಲ್ಲಿ ಅತ್ಯಂತ ಐಷಾರಾಮಿ ಸೆಡಾನ್‌ಗಳಲ್ಲಿ ಒಂದಾಗಿದೆ ಮತ್ತು ಇದು ಮರ್ಸಿಡಿಸ್-ಬೆನ್ಜ್ "ಡೋರ್‌ಮೆನ್" ಎಂದು ಕರೆಯುವ ಅತ್ಯಂತ ವಿಶಿಷ್ಟವಾದ ಸೆಡಾನ್‌ಗಳೊಂದಿಗೆ ಲಭ್ಯವಿದೆ.
ಈ ವೈಶಿಷ್ಟ್ಯವು ಪ್ರಯಾಣಿಕರಿಗೆ ಕೈ ಸನ್ನೆ ಮಾಡಲು ಮತ್ತು ಸ್ವಯಂಚಾಲಿತವಾಗಿ ಬಾಗಿಲು ಮುಚ್ಚಲು ಅನುಮತಿಸುತ್ತದೆ. ಚಾಲಕ ಕೂಡ ಹಿಂದಿನ ಬಾಗಿಲುಗಳನ್ನು ನಿರ್ವಹಿಸಲು ಮೀಸಲಾದ ಬಟನ್ ಅನ್ನು ಪಡೆಯುತ್ತಾನೆ.
* ಮೇಬ್ಯಾಕ್ S680 ನಲ್ಲಿನ ಹೆಚ್ಚಿನ ವೈಶಿಷ್ಟ್ಯಗಳನ್ನು ಹಿಂದಿನ ಸೀಟಿನಿಂದ ನಿಯಂತ್ರಿಸಬಹುದು. Mercedes-Maybach S 680 6.0-ಲೀಟರ್ ಟರ್ಬೋಚಾರ್ಜ್ಡ್ V12 ಎಂಜಿನ್‌ನಿಂದ ಚಾಲಿತವಾಗಿದೆ.
ಇದು ಪ್ರಸ್ತುತ ಭಾರತದಲ್ಲಿ Mercedes-Benz ನೀಡುವ ಅತಿದೊಡ್ಡ ಎಂಜಿನ್ ಆಗಿದೆ. ಈ ಎಂಜಿನ್ ಗರಿಷ್ಠ 610 Ps ಮತ್ತು 900 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೆಡಾನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
* Mercedes-Benz ನ 4MATIC+ ಆಲ್-ವೀಲ್-ಡ್ರೈವ್ ಮತ್ತು 19-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.
ಬೆಲೆ
Mercedes-Maybach S-ಕ್ಲಾಸ್‌ನ ಬೆಲೆಗಳು ರೂ 3.80 ಕೋಟಿಯಿಂದ ಪ್ರಾರಂಭವಾಗುತ್ತದೆ ಮತ್ತು ಇದು ಕಸ್ಟಮೈಸ್ಡ್ ಫೀಚರ್‌ಗಳ ಆಧಾರದ ಮೇಲೆ ಹೆಚ್ಚಾಗುತ್ತದೆ.
ಇದನ್ನೂ ಓದಿ: Saffron Farming: ದುಬಾರಿ ಬೆಲೆಯ ಕೇಸರಿಯನ್ನು ಕಂಟೈನರ್‌ನಲ್ಲಿ ಬೆಳೆದ ಶೈಲೇಶ್!
ಕಾರಿನ ನಂಬರ್ ಪ್ಲೇಟ್ ವಿಶೇಷತೆ
ಅಭಿಷೇಕ್ ಖರೀದಿಸಿರುವ ಮೇಬ್ಯಾಕ್‌ನಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ನೋಂದಣಿ ಫಲಕ. ಇದು ಭಾರತದ ನೋಂದಣಿ ಫಲಕವನ್ನು ಪಡೆಯುತ್ತದೆ, ಇದು ಯಾವುದೇ ಸಮಸ್ಯೆಯಿಲ್ಲದೆ ಯಾವುದೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಲು ಅಥವಾ ಓಡಿಸಲು ಅನುವು ಮಾಡಿಕೊಡುತ್ತದೆ.
ಸಾಮಾನ್ಯವಾಗಿ ಸಾಮಾನ್ಯ ನೋಂದಣಿ ಸಂಖ್ಯೆಯನ್ನು ಹೊಂದಿರುವ ಜನರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆಯಾದಾಗ ನೋಂದಣಿ ಸಂಖ್ಯೆಯನ್ನು ಬದಲಾಯಿಸಬೇಕು ಅಥವಾ ವರ್ಗಾಯಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ