ಡಿಜಿಟಲ್ ಇಂಡಿಯಾ (Digital India) ಕಾರ್ಯಕ್ರಮದಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (MeitY) ಪ್ರಮುಖ ಉಪಕ್ರಮವಾಗಿರುವ ಡಿಜಿಲಾಕರ್ ಅಧಿಕಾರಿಗಳು, ನಿಯಂತ್ರಕರು, ಬ್ಯಾಂಕ್‌ಗಳು (Bank) ಅಥವಾ ಇತರ ವ್ಯಾಪಾರ ಘಟಕಗಳು ವ್ಯವಹಾರ ನಿಮಿತ್ತವಾಗಿ ಆನ್‌ಲೈನ್‌ನಲ್ಲಿ (Online) ದಾಖಲೆಗಳನ್ನು (Documents) ಸುರಕ್ಷಿತವಾಗಿ ಸಂಗ್ರಹಿಸಲು ಹಾಗೂ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಸ್ಕ್ರೊಪೇಯ ಸಂಸ್ಥಾಪಕ ಅಶ್ವಿನ್ ಚಾವ್ಲಾ ತಿಳಿಸಿರುವಂತೆ ಡಿಜಿಲಾಕರ್ (Digilocker) ಇದುವರೆಗೆ ಪ್ಲಾಟ್‌ಫಾರ್ಮ್‌ನಲ್ಲಿ 14.6 ಕೋಟಿ ವ್ಯಕ್ತಿಗಳನ್ನು ಆನ್‌ಬೋರ್ಡ್ ಮಾಡಿದೆ ಮತ್ತು 5.6 ಬಿಲಿಯನ್ ದಾಖಲೆಗಳನ್ನು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿಕೃತ ಡಿಜಿಟಲ್ ದಾಖಲೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ನಾಗರಿಕರನ್ನು ಡಿಜಿಟಲ್ ಸಬಲೀಕರಣಗೊಳಿಸುವ ಗುರಿಯನ್ನು ಡಿಜಿಲಾಕರ್ ಹೊಂದಿದ್ದು ಇದೊಂದು ಮೂಲಭೂತ ಗುರುತಿನಂತೆ ಕೆಲಸ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.
ದಾಖಲೆಗಳ ಅಪ್‌ಡೇಟ್ ಇದೀಗ ಸುಲಭ
ಸಮಯ ಹಾಗೂ ಹಣವನ್ನು ಉಳಿಸುವ ಮೂಲಕ ಡಿಜಿಲಾಕರ್ ವಿಳಾಸ ಹಾಗೂ ಗುರುತಿನ ಬದಲಾವಣೆಯನ್ನು ಮಾಡುತ್ತದೆ ಹಾಗೂ ಇತರ ದಾಖಲೆಗಳಲ್ಲಿ ಕೂಡ ಇದು ಮಾರ್ಪಾಡಾಗುತ್ತದೆ ಎಂದು ಅಶ್ವಿನ್ ತಿಳಿಸಿದ್ದಾರೆ.
ಉದಾಹರಣೆಗೆ ಆಧಾರ್‌ನಲ್ಲಿ ಮಾಡುವ ಮಾರ್ಪಾಡುಗಳು ಆದಾಯ ತೆರಿಗೆ ಪೋರ್ಟಲ್ ನೋಂದಣಿಯಲ್ಲಿನ ವಿಳಾಸವನ್ನು ಬದಲಾಯಿಸುವುದಿಲ್ಲ ಆದರೆ ಡಿಜಿಲಾಕರ್‌ನಲ್ಲಿ ಸಮನಾಗಿ ಎಲ್ಲಾ ದಾಖಲೆಗಳನ್ನು ಅಪ್‌ಡೇಟ್ ಮಾಡಬಹುದು ಎಂದು ತಿಳಿಸಿದ್ದಾರೆ.
ಶಾಶ್ವತ ಖಾತೆ ಸಂಖ್ಯೆ (PAN) ಮತ್ತು ಆಧಾರ್ ಅನ್ನು ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುತ್ತದೆ ಹಾಗಾಗಿ ಇದು ರಾಷ್ಟ್ರೀಯ ಡೇಟಾ ಆಡಳಿತ ನೀತಿಯ ಅಡಿಯಲ್ಲಿ ತುಂಬಾ ಸಮಯವನ್ನು ಉಳಿಸುತ್ತದೆ ಮತ್ತು ಎಲ್ಲರಿಗೂ ಸುಲಭ ಎಂದೆನಿಸಿದೆ.
ಡಿಜಿಲಾಕರ್ ವಿವಿಧ ಅಧಿಕಾರಿಗಳು, ನಿಯಂತ್ರಕರು, ಬ್ಯಾಂಕ್‌ಗಳು ಮತ್ತು ಇತರ ವ್ಯಾಪಾರ ಘಟಕಗಳೊಂದಿಗೆ ಅಗತ್ಯವಿದ್ದಾಗ ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಚಾವ್ಲಾ ತಿಳಿಸಿದ್ದಾರೆ.
ಫಿನ್‌ಟೆಕ್ ಉದ್ಯಮದಲ್ಲಿ ಡಿಜಿಲಾಕರ್ ಸಕಾರಾತ್ಮಕ ಪರಿಣಾಮ
ಆಧಾರ್, ಪಿಎಂ ಜನ್ ಧನ್ ಯೋಜನೆ, ವಿಡಿಯೋ ಕೆವೈಸಿ, ಇಂಡಿಯಾ ಸ್ಟಾಕ್ ಮತ್ತು ಯುಪಿಐ ಸೇರಿದಂತೆ ಸರ್ಕಾರದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಿಂದ ಫಿನ್‌ಟೆಕ್ ವ್ಯವಹಾರಗಳನ್ನು ಈಗಾಗಲೇ ಸುಗಮಗೊಳಿಸಲಾಗಿದೆ ಇನ್ನು ಡಿಜಿಲಾಕರ್ ವ್ಯವಸ್ಥೆ ಕೂಡ ಸಕಾರಾತ್ಮಕವಾಗಿ ಪರಿಣಾಮ ಬೀರಲಿದೆ.
ಭಾರತದ ಫಿನ್‌ಟೆಕ್ ಐದು ವಿಭಾಗಗಳನ್ನು ಒಳಗೊಂಡಿದ್ದು QR ಪಾವತಿ, ಬಿಲ್ ಪಾವತಿ ಮತ್ತು ಇತರ ಸಂಗ್ರಾಹಕ ಸೇವೆಗಳನ್ನು ಒಳಗೊಂಡಿರುವ ಪಾವತಿಗಳು, ಸಾಲ ಖರೀದಿ ಹಾಗೂ ಪಾವತಿಯನ್ನು ಒಳಗೊಂಡಿದೆ. ಎಂದು ಏಂಜೆಲ್ ಒನ್‌ನ ಮುಖ್ಯಸ್ಥ (ಸಲಹೆ) ಅಮರ್ ಡಿಯೋ ಸಿಂಗ್ ತಿಳಿಸಿದ್ದಾರೆ.
KYC ಪ್ರಕ್ರಿಯೆ ಸರಳಗೊಂಡಿದೆ
ಈ ಯಾವುದೇ ಹಣಕಾಸು ಸೇವೆಗಳ ಸೌಲಭ್ಯ ಪಡೆಯಲು, ಜನರು ಗುರುತಿನ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿದೆ ಮತ್ತು ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಸಲ್ಲಿಸಿದ ಗುರುತಿನ ವಿವರಗಳನ್ನು ಪರಿಶೀಲಿಸುವುದು ಈ ವೇದಿಕೆಗಳಿಗೆ ಅತ್ಯಗತ್ಯವಾಗಿರುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಫಿನ್‌ಟೆಕ್ ಸೇವೆಯನ್ನು ಸುಗಮಗೊಳಿಸಲು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು KYC ಪ್ರಕ್ರಿಯೆಯನ್ನು ಸರಳಗೊಳಿಸಿವೆ ಎಂದು ಸಿಂಗ್ ತಿಳಿಸಿದ್ದಾರೆ.
ಫಿನ್‌ಟೆಕ್ ಉದ್ಯಮದ ಸಾಧನೆ
ಡಿಜಿಟಲ್ ಇಂಡಿಯಾ ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿರುವ, ಭಾರತ ಸರ್ಕಾರವು ಆಧಾರ್, ಪ್ರಧಾನಮಂತ್ರಿ ಜನ್ ಧನ್ ಯೋಜನೆ, ವೀಡಿಯೊ KYC, UPI, ಇತ್ಯಾದಿಗಳಂತಹ ಇತರ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳಿಗೆ ಸೌಲಭ್ಯ ಒದಗಿಸುವ ಮೂಲಕ ದೇಶದಲ್ಲಿ ಫಿನ್‌ಟೆಕ್‌ನ ಬೆಳವಣಿಗೆಯನ್ನು ಸುಲಭಗೊಳಿಸಿದೆ.
ಹೀಗಾಗಿ ಭಾರತದ ಫಿನ್‌ಟೆಕ್ ಉದ್ಯಮವು 2025 ರ ವೇಳೆಗೆ $ 1.3 ಟ್ರಿಲಿಯನ್‌ಗೆ ಬೆಳೆಯುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ